ರುತ್ವಿಕಾ ಶಿವಾನಿ ಗಾಡೆ | |
---|---|
— ಬ್ಯಾಡ್ಮಿಂಟನ್ ಆಟಗಾರ್ತಿ — | |
ವೈಯುಕ್ತಿಕ ಮಾಹಿತಿ | |
ಹುಟ್ಟು | ಮಾರ್ಚ್ ೨೬, ೧೯೯೭, ೨೨ ವರ್ಷ ವಿಜಯವಾಡ,ಆಂಧ್ರಪ್ರದೇಶ, ಭಾರತ |
ತೂಕ | ೬೦ ಕೆ ಜಿ |
ದೇಶ | ಭಾರತ |
ಆಡುವ ಕೈ | ಬಲಗೈ |
ಮಹಿಳೆಯರ ಸಿಂಗಲ್ಸ್ | |
ಅತಿಹೆಚ್ಚಿನ ಸ್ಥಾನ | ೪೯(೦೧ ಡಿಸೆಂಬರ್ ೨೦೧೬) |
ಗಾಡೆ ರುತ್ವಿಕಾ ಶಿವಾನಿ (ಜನನ ೨೬ ಮಾರ್ಚ್ ೧೯೯೭) ಒಬ್ಬ ಭಾರತೀಯ ಬ್ಯಾಡ್ಮಿಂಟನ್ ಆಟಗಾರ್ತಿ, ಅವರು ಪ್ರಸ್ತುತ ಸಿಂಗಲ್ಸ್ ಆಡುತ್ತಾರೆ.[೧] ಅವರು ಗೋಪಿಚಂದ್ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ತರಬೇತಿ ನೀಡುತ್ತಾರೆ.[೨]
ಇವರ ತಂದೆ ಜಿ.ಭವಾನಿ ಪ್ರಸಾದ್,ತಾಯಿ ಜಿ. ಪ್ರಮೀಳಾ ರಾಣಿ ಮತ್ತು ಸಹೋದರ ಜಿ ಎಸ್ ಚೈತನ್ಯ ಪ್ರಸಾದ್. ಇವರು ೨೬ ಮಾರ್ಚ್ ೧೯೯೭ ರಂದು ತೆಲುಗು ಕುಟುಂಬದಲ್ಲಿ ಜನಿಸಿದರು. ಇವರ ತಾಯಿ ಗೃಹಿಣಿ ಮತ್ತು ತಂದೆ ಸಣ್ಣ ಉದ್ಯಮಿ. ಇವರು ಐದು ವರ್ಷ ಇದ್ದಾಗ ಬ್ಯಾಡ್ಮಿಂಟನ್ ಆಟದಲ್ಲಿ ಆಸಕ್ತಿವುಳ್ಳವರಾಗಿದ್ದರು. ತಮ್ಮ ತಂದೆಯೊಡನೆ ಆಟವಾಡಲು ಪ್ರಾರಂಭಿಸಿದ್ದರು. ಇವರ ತಂದೆ ಕಮ್ಮಾಮ್ ಸೀಕ್ವೆಲ್ ರೆಸಾರ್ಟ್‌ನ ಸದಸ್ಯರಾಗಿದ್ದರು. ೨೦೦೨ರಲ್ಲಿ ಪ್ರೇಮ್ ಸಿಂಗ್ ರವರಲ್ಲಿ ತರಬೇತಿಯನ್ನು ಆರಂಭಿಸಿದರು. ನಂತರ ೨೦೦೪ರಿಂದ ೨೦೧೧ರವರೆಗೆ ಜಿ.ಸುಧಾಕರ ರೆಡ್ಡಿಯವರಲ್ಲಿ ತರಬೇತಿಯನ್ನು ಪಡೆದರು. ತರಬೇತಿ ಹಂತದಲ್ಲಿರುವಾಗಲೇ, ನಿಪುಣತೆಯನ್ನು ಸಾಧಿಸಿ ಸಿಂಗಲ್ಸ್ ಮತ್ತು ಡಬಲ್ಸ್ ಆಟವನ್ನು ಹುಡುಗರೊಂದಿಗೆ ಆಡುತ್ತಿದರು. ಇದು ಅವರ ದೈಹಿಕ ಶಕ್ತಿಯನ್ನು ಹೆಚ್ಚಿಸಿತು.
೨೦೧೨ರಲ್ಲಿ ಶಿವಾನಿಯವರು ಪುಲ್ಲೇಲ ಗೋಪಿಚಂದ್ ಬ್ಯಾಡ್ಮಿಂಟನ್ ಅಕಾದೆಮಿಯನ್ನು ಸೇರಿದರು. ಇಲ್ಲಿ ತರಬೇತಿಯನ್ನು ಪಡೆಯುತ್ತಿರುವಾಗ ರಷ್ಯಾದಲ್ಲಿ ನೆಡೆದ ರಷ್ಯಿಯನ್ ಗ್ರಾಂಡ್ ಪ್ರಿಕ್ಸ್ ನಲ್ಲಿ ಸ್ವರ್ಣ ಪದಕವನ್ನು ಮಹಿಳಾ ಸಿಂಗಲ್ಸ್ ವಿಭಾದದಲ್ಲಿ ಗೆದ್ದರು.[೩] ಶಿವಾನಿಯವರು ರಾಷ್ಟ್ರ ಮಟ್ಟದಲ್ಲಿ ೧೧೫ಕ್ಕೂ ಹೆಚ್ಚಿನ ಪದಕಗಳನ್ನು ಬ್ಯಾಡ್ಮಿಂಟನ್ ಕಿರಿಯ ಮತ್ತು ಹಿರಿಯ ವಿಭಾಗದಲ್ಲಿ ಪಡೆದಿದ್ದಾರೆ. ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ೨೦ ಪದಕಗಳನ್ನು ಪಡೆದಿದ್ದಾರೆ.
ಇವರು ತಮ್ಮ ಶಿಕ್ಷಣವನ್ನು ಕಮ್ಮಾಮ್ ನ ಹಾರ್ವೆಸ್ಟ್ ಪಬ್ಲಿಕ್ ಸ್ಕೂಲ್ನಲ್ಲಿ ಪ್ರಾರಂಭಿಸಿದ್ದರು. ಪದವಿಪೂರ್ವ ಶಿಕ್ಷಣವನ್ನು ಜುಬ್ಲೀ ಹಿಲ್ಸ್ ಪಬ್ಲಿಕ್ ಸ್ಕೂಲ್ ನಲ್ಲಿ ಪಡೆದರು. ಬಿ.ಕಾಂ ಪದವಿಯನ್ನು ಸಂತ.ಆನ್ಸ್ ಮಹಿಳಾ ಕಾಲೇಜ್, ಹೈದರಬಾದ್ ನಲ್ಲಿ ಮುಗಿಸಿದರು. ಇದೇ ಕಾಲೇಜಿನಲ್ಲಿ ತಮ್ಮ ಎಂ.ಬಿ.ಎ ಪದವಿಯನ್ನು ಪಡೆದಿದ್ದಾರೆ.
೨೦೧೦ರಲ್ಲಿ ಕಿರಿಯರ ವಿಭಾಗದಲ್ಲಿ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿದ್ದರು. ಇದು ಅವರ ಮೊದಲ ಅಂತರ್ ರಾಷ್ಟ್ರೀಯ ಪಂದ್ಯ. ನಂತರ ಜಪಾನ್ ನಲ್ಲಿ ನೆಡೆದ ಯುವ ಏಷ್ಯಿಯಾ ಯು೧೭ ಮತ್ತು ಯು೧೫ ಬ್ಯಾಡ್ಮಿಂಟನ್ ಪಂದ್ಯದಲ್ಲಿ ಕಂಚಿನ ಪದಕ ಪಡೆದರು.[೪] ಇದು ಇವರು ಮೊದಲ ಅಂತರ್ ರಾಷ್ಟ್ರೀಯ ಮಟ್ಟದ ಪದಕ.
೨೦೧೧ರಲ್ಲಿ ರಷ್ಯಾದ ರಾಮೆನ್ಸ್ಕೊನಲ್ಲಿ ನೆಡೆದ ಕಿರಿಯರ ಅಂತರ್ ರಾಷ್ಟ್ರೀಯ ಮಟ್ಟದ ಪಂದ್ಯವು ಇವರ ಮೊದಲ ಪಂದ್ಯ. ಈ ಪಂದ್ಯದಲ್ಲಿ ವಿಜೇತರಾದರು ಮತ್ತು ಮಹಿಳಾ ಡಬಲ್ಸ್ ನಲ್ಲಿ ಕಂಚಿನ ಪದಕ ಪಡೆದಿದ್ದಾರೆ. ಏಷ್ಯಿಯನ್ ಜೂನಿಯರ್ ಕ್ರೀಡಾಕೂಟದಲ್ಲಿ ಮಿಕ್ಸ್ ಡಬಲ್ಸ್ ನಲ್ಲಿ ಕಂಚಿನ ಪದಕ ಪದೆದಿದ್ದಾರೆ.
೨೦೧೨ರಲ್ಲಿ ಮಹಾರಾಷ್ಟ್ರದ ಪುಣೆಯಲ್ಲಿ ನೆಡೆದ ಕಿರಿಯರ ಅಂತರ್ ರಾಷ್ಟ್ರೀಯ ಪಂದ್ಯ ಸುಶಾಂತ್ ಚಿಪಲ್ಕಟಿ ಮೆಮೊರಿಯ ಕ್ರೀಡಾಕೂಟ ೨೦೧೨ ರಲ್ಲಿ ರಿತುಪರ್ಣಾ ದಾಸ್ ರವರನ್ನು ಎದುರಿಸಿ, ಮಹಿಳಾ ಸಿಂಗಲ್ಸ್ ಪಂದ್ಯವನ್ನು ಗೆದ್ದರು. ಜೊತೆಗೆ ಮಹಿಳಾ ಡಬಲ್ಸ್ ನಲ್ಲಿ ಜಯವನ್ನು ಸಾಧಿಸಿದ್ದಾರೆ.
೨೦೧೩ರಲ್ಲಿ ಇಂಡಿಯನ್ ಬ್ಯಾಡ್ಮಿಂಟನ್ ಲೀಗ್ ಅವಾಡೆ ವಾರಿಯರ್ಸ್ ತಂಡದ ಪರ ಆಟವಾಡಿದ್ದರು. ಇವರ ತಂಡ ದ್ವಿತೀಯ ಸ್ಥಾನವನ್ನು ಪಡೆದಿತ್ತು. ವಂಕಿನ ಅಂಜನಾ ದೇವಿ ಮೆಮೊರಿಯಲ್ ಕ್ರೀಡೆಯಲ್ಲಿ ಜಯವನ್ನು ಸಾಧಿಸಿದ್ದಾರೆ. ಸುಶಾಂತ್ ಚಿಪಲ್ಕಟಿ ಮೆಮೊರಿಯ ಕ್ರೀಡಾಕೂಟ ೨೦೧೩ ರಲ್ಲಿ ಮಹಿಳಾ ಸಿಂಗಲ್ಸ್ ನಲಿ ಜಯಗಳಿಸಿದ್ದಾರೆ.
೨೦೧೪ರ ಡಿಸೆಂಬರ್ ನಲ್ಲಿ ಅಂತರ್ ರಾಷ್ಟ್ರೀಯ ಟಾಟಾ ಓಪನ್ ಇಂಡಿಯ ಕ್ರೀಡಾಕೂಟದಲ್ಲಿ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಅರುಂಧತಿ ಪಂತವಾನ್ ರವರ ವಿರುದ್ದದಲ್ಲಿ ಅಂತಿಮ ಪಂದ್ಯವನ್ನು ಗೆದ್ದರು.[೫] ಇದು ಮಹಾರಾಷ್ಟ್ರದಲ್ಲಿ ನೆಡೆದ ಪಂದ್ಯ. ಇದು ಶಿವಾನಿಯವರು ಮೊದಲು ಭಾರತದಲ್ಲಿ ಜಯಗಳಿಸಿದ ಅಂತರ್ ರಾಷ್ಟ್ರೀಯ ಪಂದ್ಯವಾಗಿತ್ತು. ಸೆಪ್ಟೆಂಬರ್ ನಲ್ಲಿ ನೆಡೆದ ಸುಶಾಂತ್ ಚಿಪಲ್ಕಟಿ ಮೆಮೊರಿಯ ಕ್ರೀಡಾಕೂಟದಲ್ಲಿ ಕಾರ್ತೀಕಾ ರೇಷ್ಮಾ ರವರನ್ನು ಅಂತಿಮ ಪಂದ್ಯದಲ್ಲಿ ಗೆದ್ದರು. ಇವರು ಗುಜರಾತ್ ನಲ್ಲಿ ನೆಡೆದ ಅಖಿಲ ಭಾರತೀಯ ಹಿರಿಯರ ಬ್ಯಾಡ್ಮಿಂಟನ್ ರ‍್ಯಾಂಕ್ ಕ್ರೀಡಾಕೂಟದ ವಿಜೇತೆ.
೨೦೧೫ರಲ್ಲಿ ಅಂತರ್ ರಾಷ್ಟ್ರೀಯ ಮಟ್ಟದ ಯೋನೆಕ್ಸ್ ಸಂರೈಸ್ ಬಾಂಗ್ಲಾ ಓಪನ್ ಪಂದ್ಯದಲ್ಲಿ ಮಹಿಳಾ ಸಿಂಗಲ್ಸ್ ನಲ್ಲಿ ಆಟವನ್ನು ಗೆದ್ದರು. ಗಾಡೆಯವರು ಅಕ್ಟೋಬರ್ ನಲ್ಲಿ ಕಂಚಿನ ಪದಕವನ್ನು ಅಂತರ್ ರಾಷ್ಟ್ರೀಯ ಬಾಬೋಲಾಟ್ ಬಲ್ಗೇರಿಯನ್ ಪಂದ್ಯದಲ್ಲಿ ಪಡೆದರು. ಸೆಪ್ಟೆಂಬರ್ ನಲ್ಲಿ ನೆಡೆದ ಸುಶಾಂತ್ ಚಿಪಲ್ಕಟಿ ಮೆಮೊರಿಯ ಕ್ರೀಡಾಕೂಟ ೨೦೧೫ ರಲ್ಲಿ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಜಯ ಸಾಧಿಸಿದರು. ಈ ಕ್ರೀಡಾಕೂಟವನ್ನು ನಿರಂತರ ನಾಲ್ಕು ವರ್ಷದಿಂದ ಜಯಿಸಿದ್ದರು. ಇವರು ಉತ್ತರ ಪ್ರದೇಶದಲ್ಲಿ ನೆಡೆದ ರಾಡೆಯ್ ಶ್ಯಾಮ್ ಗುಪ್ತಾ ಮೆಮೊರಿಯಲ್ ಅಖಿಲ ಭಾರತೀಯ ಹಿರಿಯರ ಬ್ಯಾಡ್ಮಿಂಡನ್ ಕ್ರೀಡಾಕೂಟದ ವಿಜೇತೆ.
೨೦೧೬ರಲ್ಲಿ ಗುವಾಹಾಟಿಯಲ್ಲಿ ನೆಡೆದ ದಕ್ಷಿಣ ಏಷ್ಯಿಯಾ ಕ್ರೀಡಾಕೂಟ ೨೦೧೬ ರಲ್ಲಿ ಎರಡು ಸ್ವರ್ಣ ಪದಕವನ್ನು, ಮಹಿಳಾ ತಂಡ ಮತ್ತು ಮಹಿಳಾ ಸಿಂಗಲ್ಸ್ ನಲ್ಲಿ ಪಡೆದಿದ್ದಾರೆ. ಪಿ.ವಿ. ಸಿಂಧು ರವರನ್ನು ಅಂತಿಮ ಸುತ್ತಿನಲ್ಲಿ ಎದುರಿಸಿ ಪಂದ್ಯವನ್ನು ಶಿವಾನಿಯವರು ಗೆದ್ದರು.[೬] ೨೦೧೬ರ ಭಾರತೀಯ ಮಹಿಳಾ ಬ್ಯಾಡ್ಮಿಂಟನ್ ತಂಡದಲ್ಲಿ ಶಿವಾನಿ ಇದ್ದರು. ಚೀನಾದಲ್ಲಿ ನೆಡೆದ ಥಾಮಸ್ ಮತ್ತು ಉಬರ್ ಕಪ್ ಅಂತರ್ ರಾಷ್ಟ್ರೀಯ ಚಾಂಪಿಯನ್ ಶಿಪ್ ೨೦೧೬ ರಲ್ಲಿ ಭಾರತೀಯ ಮಹಿಳಾ ತಂಡವು ಕಂಚಿನ ಪದಕವನ್ನು ಜಯಿಸಿತ್ತು. ೨೦೧೬ರಲಿ ಶಿವಾನಿಯವರು ಭಾತೀಯ ಪ್ರೀಮಿಯಮ್ ಬ್ಯಾಡ್ಮಿಂಡನ್ ಕ್ರೀಡಾಕೂಟದಲ್ಲಿ, ಮುಂಬೈ ರಾಕರ್ಸ್ ತಂಡದ ಆಟಗಾರ್ತಿಯಾಗಿದ್ದರು. ಮಹಾರಾಷ್ಟ್ರದ ಪುಣೆಯಲ್ಲಿ ನೆಡೆದ ವಿ.ವಿ. ನಟು ಮೆಮೊರಿಯಲ್ ಅಖಿಲ ಭಾರತೀಯ ರ‍್ಯಾಂಕ್ ಕ್ರೀಡಾಕೂಟದಲ್ಲಿ ಜಯಗಳಿಸಿದ್ದಾರೆ.
ರುತ್ವಿಕಾರವರು ಭಾರತ್ ಪೆಟ್ರೋಲಿಯಮ್ ಕಾರ್ಪೋರೆಶನ್ ಲಿಮಿಟೆನಲ್ಲಿ ನವೆಂಬರ್ ೨೩ ೨೦೧೫ರಿಂದ ಕಾರ್ಯನಿರ್ವಹಿಸುತ್ತಿದ್ದರು. ಪ್ರಸ್ತುತ ಕ್ರೀಡಾ ಇಲಾಕೆಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಹೈದರಾಬಾದ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.