ರುದ್ರ ಭಟ್ಟ | |
---|---|
ಜನನ | 12ನೇ ಶತಮಾನ CE |
ಮರಣ | 12 ಅಥವಾ 13ನೇ ಶತಮಾನ CE |
ವೃತ್ತಿ(ಗಳು) | ಕವಿ, ಬರಹಗಾರ |
ಗಮನಾರ್ಹ ಕೆಲಸಗಳು | ಜಗನ್ನಾಥ ವಿಜಯ |
ರುದ್ರಭಟ್ಟ:- (೧೧೮೫) ೧೨ನೇ ಶತಮಾನದ ಕವಿ. ಈತ ಹೊಯ್ಸಳ ಸಾಮ್ರಾಜ್ಯದ ರಾಜನಾದ ವೀರ ಬಲ್ಲಾಳ ಮಂತ್ರಿ ಚಂದ್ರಮೌಳಯನ ಆಸ್ಥಾನ ಕವಿಯಾಗಿದ್ದನು. ರುದ್ರ ಭಟ್ಟ ಒಬ್ಬ ವೈದಿಕ ಸ್ಮಾರ್ಥ ಬ್ರಾಹ್ಮಣನು. ಸಂಸೃತದ ವಿಷ್ಣು ಪುರಾಣವನ್ನು ಆಧಾರವಾಗಿಟ್ಟುಕೊಂಡು ಆತ ಜಗನ್ನಾಥ ವಿಜಯ ಎಂಬ ಚಂಪೂ ಕಾವ್ಯ ಮತ್ತು ರಸಕಲಿಕೆ ಲಕ್ಷಣ ಗ್ರಂಥವನ್ನು ಬರೆದಿದ್ದಾನೆ. ಕೃಷ್ಣ ರಾಕ್ಷಸನಾದ ಬಾಣಾಸುರನನ್ನು ಕೊಂದ ಕಥೆಯನ್ನು "ಜಗನ್ನಾಥ ವಿಜಯಂ" ಚಂಪು ಕಾವ್ಯದಲ್ಲಿ ಬಣ್ಣಿಸಿದ್ದಾನೆ.ಈತನ ನಂತರ ಬಂದ ಕನ್ನಡದ ಪ್ರಮುಖ ಕವಿಗಳಾದ ಕುಮಾರವ್ಯಾಸ, ಲಕ್ಷ್ಮೀಶ, ಹರಿದಾಸ, ಕನಕದಾಸ ಹಾಗೂ ಪುರಂದರದಾಸರು ಈತನನ್ನೇ ಮಾದರಿಯನ್ನಾಗಿ ತೆಗೆದುಕೊಂಡರು ಎಂದು ಪುರಾಣದಿಂದ ಕಂಡು ಬಂದ ವಿಷಯವಾಗಿದೆ.ಕನ್ನಡ ಭಾಷೆಯ ಪಂಡಿತರಾದ ನರಸಿಂಹಾಚಾರ್ಯರ ಪ್ರಕಾರ ರಾಜ ವೀರ ಬಲ್ಲಾಳ 2 ಈತನ ಮಂತ್ರಿ ರುದ್ರ ಭಟ್ಟನನ್ನು ವಿಷೇಷವಾಗಿ ಸನ್ಮಾನಿಸಿದ್ದಾರೆ. ರುದ್ರ ಭಟ್ಟ ತನ್ನ ರಚನೆಗಳ್ಳಿ ಹಿಂದೂ ದೇವರುಗಳಾದ ವಿಷ್ಣು, ಶಿವ ಹಾಗೂ ಬ್ರಹ್ಮ ಇವರನ್ನು ಒಂದೇ ದೇವರನ್ನಾಗಿ ಪರಿಗಣಿಸಿದ್ದಾನೆ.ಅವರೆಲ್ಲರನ್ನು ಪರಬ್ಭ್ರಹ್ಮ ರಂದು ಕರೆದಿದ್ದಾನೆ.ಈತನ ರಚನೆಗಳು ಮಾರ್ಗ ಹಾಗೂ ದೇಶಿ ಶೈಲಿಗಳಲ್ಲಿ ರಚಿತಗೊಂಡಿವೆ.
Citations
ಗ್ರಂಥಸೂಚಿ