ರೇಡಿಯೋಭೌತಶಾಸ್ತ್ರ

ರೇಡಿಯೋಭೌತಶಾಸ್ತ್ರ ("ರೇಡಿಯೋಫಿಸಿಕ್ಸ್" [] ) ಭೌತಶಾಸ್ತ್ರದ ಒಂದು ಶಾಖೆಯಾಗಿದ್ದು, ಕೆಲವು ರೀತಿಯ ವಿಕಿರಣಗಳ ಸೈದ್ಧಾಂತಿಕ ಮತ್ತು ಪ್ರಾಯೋಗಿಕ ಅಧ್ಯಯನ, ಅದರ ಹೊರಸೂಸುವಿಕೆ, ಪ್ರಸರಣ ಮತ್ತು ವಸ್ತುವಿನೊಂದಿಗಿನ ಪರಸ್ಪರ ಕ್ರಿಯೆಯ ಮೇಲೆ ಕೇಂದ್ರೀಕೃತವಾಗಿದೆ.

ಈ ಪದವನ್ನು ಕೆಳಗಿನ ಪ್ರಮುಖ ಅರ್ಥಗಳಲ್ಲಿ ಬಳಸಲಾಗುತ್ತದೆ:

  • ರೇಡಿಯೋ ತರಂಗಗಳ ಅಧ್ಯಯನ (ಸಂಶೋಧನೆಯ ಮೂಲ ಕ್ಷೇತ್ರ)
  • ವಿಕಿರಣಶಾಸ್ತ್ರದಲ್ಲಿ ಬಳಸಲಾಗುವ ವಿಕಿರಣಗಳ ಅಧ್ಯಯನ []
  • ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ ವಿದ್ಯುತ್ಕಾಂತೀಯ ವಿಕಿರಣದ ರೋಹಿತದ ಶ್ರೇಣಿಗಳ ಅಧ್ಯಯನ

ರೇಡಿಯೊಭೌತಶಾಸ್ತ್ರದ ಮುಖ್ಯ ಉಪಯೋಗಗಳ ಪೈಕಿ ರೇಡಿಯೊ ಸಂವಹನಗಳು, ರೇಡಿಯೊಲೊಕೇಶನ್, ರೇಡಿಯೊ ಖಗೋಳವಿಜ್ಞಾನ ಮತ್ತು ವಿಕಿರಣಶಾಸ್ತ್ರಗಳು ಒಳಗೊಂಡಿವೆ.

ಶಾಖೆಗಳು

[ಬದಲಾಯಿಸಿ]
  • ಶಾಸ್ತ್ರೀಯ ರೇಡಿಯೊಭೌತಶಾಸ್ತ್ರ ರೇಡಿಯೊ ತರಂಗ ಸಂವಹನ ಮತ್ತು ಪತ್ತೆಗೆ ಸಂಬಂಧಿಸಿದೆ
  • ಕ್ವಾಂಟಮ್ ರೇಡಿಯೊಭೌತಶಾಸ್ತ್ರ (ಲೇಸರ್‌ಗಳು ಮತ್ತು ಮೇಸರ್‌ಗಳ ಭೌತಶಾಸ್ತ್ರ; ಸೋವಿಯತ್ ಒಕ್ಕೂಟದಲ್ಲಿ ಕ್ವಾಂಟಮ್ ರೇಡಿಯೊಫಿಸಿಕ್ಸ್‌ನ ಸ್ಥಾಪಕ ನಿಕೊಲಾಯ್ ಬಾಸೊವ್ ಆಗಿದ್ದಾರೆ)
  • ಸಂಖ್ಯಾಶಾಸ್ತ್ರೀಯ ರೇಡಿಯೊಭೌತಶಾಸ್ತ್ರ

ಉಲ್ಲೇಖಗಳು

[ಬದಲಾಯಿಸಿ]
  1. "Radio Physics Solutions company official web page". Archived from the original on 2022-08-15. Retrieved 2022-02-25.
  2. "Radiophysics" article in Medcyclopaedia (archived from the original), online version of the Encyclopaedia of Medical Imaging