ರೇಮಂಡ್‌ ಸಮೂಹ

Raymond Limited
ಸಂಸ್ಥೆಯ ಪ್ರಕಾರPublic (ಬಿಎಸ್‌ಇ: 500330)
ಸ್ಥಾಪನೆ1925
ಮುಖ್ಯ ಕಾರ್ಯಾಲಯಮುಂಬೈ, India
ಪ್ರಮುಖ ವ್ಯಕ್ತಿ(ಗಳು)Gautam Singhania - Chairman & Managing Director [][]
ಉದ್ಯಮTextiles,Engineering and Aviation
ಉತ್ಪನ್ನfabrics, garments, designer wear, denim, cosmetics & toiletries, engineering files & tools, prophylactics and air charter services
ಜಾಲತಾಣwww.raymond.in

1925ರಲ್ಲಿ ಸಂಘಟಿಸಲ್ಪಟ್ಟ ರೇಮಂಡ್‌ ಸಮೂಹ ವು (ಬಿಎಸ್‌ಇ: 500330) ಭಾರತದ ಬ್ರಾಂಡ್‌ ಮಾಡಲಾದ ನೆಯ್ದ ಬಟ್ಟೆ ಮತ್ತು ವಿನೂತನ-ವಿಶಿಷ್ಟ ಶೈಲಿಯ (ಫ್ಯಾಷನ್‌) ಉಡುಪುಗಳ ಅತಿದೊಡ್ಡ ಚಿಲ್ಲರೆ ಮಾರಾಟಗಾರರ ಪೈಕಿ ಒಂದೆನಿಸಿದೆ. ಮೃದುವಾದ ಎಳೆಯನ್ನು ಹೊಂದಿರುವ ಸೂಟಿನ ಬಟ್ಟೆಯ ತಯಾರಿಕೆಗೆ ಸಂಬಂಧಿಸಿದ ಪ್ರಪಂಚದಲ್ಲಿನ ಅಗ್ರಗಣ್ಯ, ಸಂಘಟಿತ ತಯಾರಕರ ಪೈಕಿ ಇದು ಒಂದೆನಿಸಿಕೊಂಡಿದ್ದು, ಉಣ್ಣೆಯ ಮತ್ತು ಉಣ್ಣೆಯನ್ನು-ಹದವಾಗಿ ಬೆರೆಸಿದ ಬಟ್ಟೆಗಳನ್ನು 31 ದಶಲಕ್ಷ ಮೀಟರುಗಳಷ್ಟು ಪ್ರಮಾಣದಲ್ಲಿ ಉತ್ಪಾದಿಸುವ ಒಂದು ಸಾಮರ್ಥ್ಯವನ್ನು ಇದು ಹೊಂದಿದೆ.

ಈ ಸಮೂಹದ ಸ್ವಾಮ್ಯದಲ್ಲಿ ರೇಮಂಡ್‌, ರೇಮಂಡ್‌ ಪ್ರೀಮಿಯಂ ಅಪ್ಯಾರಲ್‌, ಮನ್‌ಜೋನಿ, ಪಾರ್ಕ್‌ ಅವೆನ್ಯೂ, ಕಲರ್‌ ಪ್ಲಸ್‌, ಪಾರ್ಕ್ಸ್‌ & ನಾಟಿಂಗ್‌ ಹಿಲ್‌ನಂಥ ಉಡುಗೆ-ತೊಡುಗೆಯ ಬ್ರಾಂಡ್‌ಗಳಿವೆ. ಈ ಎಲ್ಲಾ ಬ್ರಾಂಡ್‌ಗಳನ್ನೂ 'ದಿ ರೇಮಂಡ್‌ ಷಾಪ್‌' (TRS) ಎಂಬ ಹಣೆಪಟ್ಟಿಯ ಮಳಿಗೆಗಳ ಮೂಲಕ ಚಿಲ್ಲರೆ-ಮಾರಾಟ ಮಾಡಲಾಗುತ್ತದೆ. 'ದಿ ರೇಮಂಡ್‌ ಷಾಪ್‌' ಎಂಬುದು ಭಾರತದ ಮತ್ತು ಸಾಗರೋತ್ತರ ವಲಯಗಳಲ್ಲಿನ 200ಕ್ಕೂ ಹೆಚ್ಚಿನ ನಗರಗಳಾದ್ಯಂತ ಹಬ್ಬಿರುವ 550ಕ್ಕೂ ಹೆಚ್ಚಿನ ಚಿಲ್ಲರೆ ಮಾರಾಟ-ಮಳಿಗೆಗಳ ಅತಿದೊಡ್ಡ ಜಾಲದ ಪೈಕಿ ಒಂದಾಗಿದೆ.

ಇದರ ಜೊತೆಗೆ, ಸಿದ್ಧ ಉಡುಪುಗಳು, ವಿನ್ಯಾಸಕ ವಸ್ತ್ರ, ಪ್ರಸಾಧನ ವಸ್ತುಗಳು ಹಾಗೂ ಸುಗಂಧ ದ್ರವ್ಯಗಳು, ಎಂಜಿನಿಯರಿಂಗ್‌ ಅರ್ನಗಳು ಮತ್ತು ಸಾಧನಗಳು, ರೋಗನಿರೋಧಕಗಳು ಮತ್ತು ವಿಮಾನ ಬಾಡಿಗೆ ಕಾರ್ಯಾಚರಣೆಗಳಲ್ಲಿಯೂ ಸಮೂಹವು ವ್ಯವಹಾರದ ಹಿತಾಸಕ್ತಿಗಳನ್ನು ಹೊಂದಿದೆ.

ಇತಿಹಾಸ

[ಬದಲಾಯಿಸಿ]

ಸಾಕಷ್ಟು ವರ್ಷಗಳ ಹಿಂದೆ[when?], ಕಾನ್‌ಪುರದಲ್ಲಿ (ಭಾರತ) ತನ್ನ ಹಲವಾರು ವ್ಯವಹಾರ-ಅಸ್ತಿತ್ವಗಳ ನಿರ್ಮಿಸುವಿಕೆ, ಕ್ರೋಡೀಕರಿಸುವಿಕೆ ಮತ್ತು ವಿಸ್ತರಿಸುವಿಕೆಯಲ್ಲಿ ಸಿಂಘಾನಿಯಾ ಕುಟುಂಬವು ತೊಡಗಿಸಿಕೊಂಡಿದ್ದಾಗ, ಶ್ರೀಮಾನ್‌ ವಾಡಿಯಾ ಎಂಬ ಓರ್ವ ವ್ಯಕ್ತಿಯು ಇದೇ ರೀತಿಯ ಕಾರ್ಯಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು; ಭಾರತದ ಬಾಂಬೆಯಿಂದ (ಈಗ ಮುಂಬಯಿ ಎಂದು ಹೆಸರಾಗಿದೆ) 40 ಕಿ.ಮೀ.ಗಳಷ್ಟು ದೂರವಿರುವ ಥಾನೆ ಕೊಲ್ಲಿಯ ಆಸುಪಾಸಿನಲ್ಲಿನ ಪ್ರದೇಶದಲ್ಲಿ ಒಂದು ಸಣ್ಣದಾದ ಉಣ್ಣೆಯ ಗಿರಣಿಯನ್ನು ಸ್ಥಾಪಿಸುವ ನಿಟ್ಟಿನಲ್ಲಿ ಅವರು ಕಾರ್ಯತತ್ಪರರಾಗಿದ್ದರು. ಬಾಂಬೆಯ (ಈಗ ಮುಂಬಯಿ ಎಂದು ಹೆಸರಾಗಿದೆ) ಸ್ಯಾಸನ್ಸ್ ಎಂಬ ಒಂದು ಸುಪರಿಚಿತ ಕೈಗಾರಿಕೋದ್ಯಮಿ ಕುಟುಂಬವು ಈ ಗಿರಣಿಯನ್ನು ಕೆಲವೇ ದಿನಗಳಲ್ಲಿ ತನ್ನ ಸ್ವಾಧೀನಕ್ಕೆ ತೆಗೆದುಕೊಂಡಿತು ಮತ್ತು ದಿ ರೇಮಂಡ್‌ ವುಲನ್‌ ಮಿಲ್ಸ್‌ ಎಂಬುದಾಗಿ ಅದಕ್ಕೆ ಮರುನಾಮಕರಣ ಮಾಡಿತು.

ಸರಿಸುಮಾರು ಇದೇ ಸಮಯಕ್ಕೆ, ಸಿಂಘಾನಿಯಾ ಕುಟುಂಬವೂ ತನ್ನ ವ್ಯವಹಾರ ಪರಿಧಿಗಳನ್ನು ವಿಸ್ತರಿಸುವ ಗುರಿಯಿಟ್ಟುಕೊಂಡಿತು. ಈ ಕುಟುಂಬದ ತೀಕ್ಷ್ಣ ಸ್ವರೂಪದ ವ್ಯವಹಾರದ ದೂರದೃಷ್ಟಿಯಿಂದಾಗಿ 1925ರ ವರ್ಷದಲ್ಲಿ ದಿ ರೇಮಂಡ್‌ ವುಲನ್‌ ಮಿಲ್ಸ್‌ ಸ್ವಾಧೀನಕ್ಕೊಳಪಟ್ಟಿತು.

ಲಾಲಾ ಜಗ್ಗಿಲಾಲ್‌ರವರ ಮೊಮ್ಮಗನಾದ ಲಾಲಾ ಕೈಲಾಶ್‌ಪತ್‌ ಸಿಂಘಾನಿಯಾ 1944ರಲ್ಲಿ ರೇಮಂಡ್‌ನ್ನು ಸ್ವಾಧೀನಪಡಿಸಿಕೊಂಡಾಗ, ಈ ಗಿರಣಿಯು ಅಗ್ಗದ ಮತ್ತು ನಯವಾಗಿಲ್ಲದ ಉಣ್ಣೆಯ ಕಂಬಳಿಗಳನ್ನು ಹಾಗೂ ಮಿತವಾದ ಪ್ರಮಾಣಗಳಲ್ಲಿ ಕಡಿಮೆ ಬೆಲೆಯ ಉಣ್ಣೆಯ ಬಟ್ಟೆಗಳನ್ನು ಪ್ರಧಾನವಾಗಿ ತಯಾರಿಸಿತು. ಪಾಶ್ಚಿಮಾತ್ಯ ವಲಯದಲ್ಲಿ J.K. ಸಮೂಹದ ಅಸ್ತಿತ್ವವನ್ನು ಸ್ಥಾಪಿಸುವಲ್ಲಿ ಶ್ರೀಮಾನ್‌ ಕೈಲಾಶ್‌ಪತ್‌ ಸಿಂಘಾನಿಯಾರ ಅಂತರ್ದೃಷ್ಟಿ ಮತ್ತು ದೂರದೃಷ್ಟಿಯು ಮಹತ್ತರವಾಗಿ ನೆರವಾಯಿತು. ಅವರ ಸಮರ್ಥ ವ್ಯವಸ್ಥಾಪಕತ್ವದ ಅಡಿಯಲ್ಲಿ, ಒಂದು ಅನುಕ್ರಮಿಕ ಹಂತದಲ್ಲಿ ತಾಂತ್ರಿಕ ಉನ್ನತೀಕರಣ ಮತ್ತು ಆಧುನೀಕೀಕರಣದೆಡೆಗೆ ರೇಮಂಡ್‌ ತೊಡಗಿಸಿಕೊಂಡಿತು.[ಸೂಕ್ತ ಉಲ್ಲೇಖನ ಬೇಕು]

1980ರಲ್ಲಿ ಕಂಪನಿಯ ಹತೋಟಿಯ ಲಗಾಮುಗಳನ್ನು ಡಾ. ವಿಜಯ್‌ಪತ್‌ ಸಿಂಘಾನಿಯಾರವರು ತಮ್ಮ ವಶಕ್ಕೆ ತೆಗೆದುಕೊಂಡಾಗ, ರೇಮಂಡ್‌ನೊಳಗೆ ತಾಜಾ ಹುರುಪನ್ನು ಅವರು ಒಳಹೊಗಿಸಿದರು ಮತ್ತು ಅದನ್ನು ಒಂದು ಆಧುನಿಕವಾದ, ಸಂಘಟಿತವಾದ ಕೈಗಾರಿಕಾ ವ್ಯಾಪಾರಿ ಸಂಸ್ಥೆಯಾಗಿ ಮಾರ್ಪಡಿಸಿದರು.[ಸೂಕ್ತ ಉಲ್ಲೇಖನ ಬೇಕು]

ಸಮೂಹವನ್ನು ಮರುರೂಪಿಸುವಲ್ಲಿ ಈಗಿನ ಸಭಾಪತಿ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಗೌತಮ್‌ ಸಿಂಘಾನಿಯಾ ಕಾರಣೀಭೂತರಾಗಿದ್ದಾರೆ.

ಸಮೂಹದ ಕಂಪನಿಗಳು

[ಬದಲಾಯಿಸಿ]
ರೇಮಂಡ್‌ ಲಿಮಿಟೆಡ್‌
ಮೃದುವಾದ ಎಳೆಯನ್ನು ಹೊಂದಿರುವ ಬಟ್ಟೆಗಳ ತಯಾರಿಕೆಗೆ ಸಂಬಂಧಿಸಿದಂತಿರುವ ಪ್ರಪಂಚದಲ್ಲಿನ ಅತಿದೊಡ್ಡ ಸಂಘಟಿತ ತಯಾರಕರ ಪೈಕಿ ರೇಮಂಡ್‌ ಲಿಮಿಟೆಡ್‌ ಒಂದೆನಿಸಿದೆ.[ಸೂಕ್ತ ಉಲ್ಲೇಖನ ಬೇಕು]
ರೇಮಂಡ್‌ ಅಪ್ಯಾರಲ್‌ ಲಿಮಿಟೆಡ್‌
ರೇಮಂಡ್‌ ಅಪ್ಯಾರಲ್‌ ಲಿಮಿಟೆಡ್‌ ಕಂಪನಿಯು ತನ್ನ ಉತ್ಪನ್ನಶ್ರೇಣಿಯಲ್ಲಿ ಭಾರತದಲ್ಲಿನ ಕೆಲವೊಂದು ಉಡುಗೆ-ತೊಡುಗೆಯ ಬ್ರಾಂಡ್‌ಗಳನ್ನು ಹೊಂದಿದ್ದು, ಅವುಗಳಲ್ಲಿ ರೇಮಂಡ್‌ ಪ್ರೀಮಿಯಂ ಅಪ್ಯಾರಲ್‌, ಮನ್‌ಜೋನಿ, ಪಾರ್ಕ್‌ ಅವೆನ್ಯೂ, ಪಾರ್ಕ್ಸ್‌ ಮತ್ತು ನಾಟಿಂಗ್‌ ಹಿಲ್‌ ಸೇರಿವೆ.
ಕಲರ್‌ ಪ್ಲಸ್‌ ಫ್ಯಾಷನ್ಸ್‌ ಲಿಮಿಟೆಡ್‌
ಭಾರತದಲ್ಲಿನ ಅಧಿಕ ಮೌಲ್ಯದ ವರ್ಗಕ್ಕೆ ಸೇರಿರುವ ಭರ್ಜರಿಯಾದ ಅನೌಪಚಾರಿಕ ಉಡುಗೆಯ ಬ್ರಾಂಡ್‌ಗಳ ಪೈಕಿ ಕಲರ್‌ ಪ್ಲಸ್‌ ತನ್ನನ್ನು ಗುರುತಿಸಿಕೊಂಡಿದೆ.
ಸಿಲ್ವರ್‌ ಸ್ಪಾರ್ಕ್‌ ಅಪ್ಯಾರಲ್‌ ಲಿಮಿಟೆಡ್‌
ಇದು ಭಾರತದಲ್ಲಿನ ಉಡುಪು ತಯಾರಿಕಾ ಸೌಕರ್ಯವಾಗಿದ್ದು, ಔಪಚಾರಿಕ ಸೂಟುಗಳು, ಷರಾಯಿ ಮತ್ತು ತೋಳುಳ್ಳ ನಡುವಂಗಿಗಳನ್ನು (ಜಾಕೆಟ್ಟುಗಳನ್ನು) ಇದು ತಯಾರಿಸುತ್ತದೆ.
ಎವರ್‌ಬ್ಲ್ಯೂ ಅಪ್ಯಾರಲ್‌ ಲಿಮಿಟೆಡ್‌
ಇದು ಬೆಂಗಳೂರಿನ (ಭಾರತ) ಸಮೀಪದ ದೊಡ್ಡಬಳ್ಳಾಪುರದಲ್ಲಿರುವ ಒಂದು ಡೆನಿಮ್‌ ಉಡುಪು ತಯಾರಿಕಾ ಸೌಕರ್ಯವಾಗಿದೆ.
J.K. ಹೆಲೀನ್‌ ಕರ್ಟಿಸ್‌ ಲಿಮಿಟೆಡ್‌
ಲಕ್ಷಣವಾಗಿ ಕಾಣುವಂತೆ ಸಿಂಗರಿಸುವ, ಉಡುಗೆಯ ಪರಿಕರಗಳು ಮತ್ತು ಸುಗಂಧ ದ್ರವ್ಯಗಳ ವರ್ಗದಲ್ಲಿ ಈ ಕಂಪನಿಯು ಓರ್ವ ವೃತ್ತಿಪರನೆನಿಸಿಕೊಂಡಿದೆ.
JK ಫೈಲ್ಸ್‌ (ಇಂಡಿಯಾ) ಲಿಮಿಟೆಡ್‌.
ಪ್ರಪಂಚದಲ್ಲಿನ ಎಂಜಿನಿಯರಿಂಗ್‌ ಅರ್ನಗಳು (ಫೈಲ್ಸ್‌) ಮತ್ತು ಸಾಧನಗಳ ವಲಯದಲ್ಲಿನ ಓರ್ವ ವೃತ್ತಿಪರನಾಗಿ ಹಾಗೂ ಉಕ್ಕಿನ ಅರ್ನಗಳ ಅತಿದೊಡ್ಡ ತಯಾರಕನಾಗಿ ಈ ಕಂಪನಿಯು ತನ್ನನ್ನು ಗುರುತಿಸಿಕೊಂಡಿದೆ.[ಸೂಕ್ತ ಉಲ್ಲೇಖನ ಬೇಕು]

ಜಂಟಿ ಉದ್ಯಮಗಳು

[ಬದಲಾಯಿಸಿ]
ರೇಮಂಡ್‌ UCO ಡೆನಿಮ್‌ ಪ್ರೈವೇಟ್‌ ಲಿಮಿಟೆಡ್‌
ಐರೋಪ್ಯ ಮಾರುಕಟ್ಟೆಯ ಡೆನಿಮ್‌ ವಲಯದ ಅಗ್ರಗಣ್ಯನಾದ UCO NVಯೊಂದಿಗಿನ ಒಂದು 50:50 ಅನುಪಾತದ ಜಂಟಿ ಉದ್ಯಮವಾಗಿರುವ ರೇಮಂಡ್‌ UCO ಡೆನಿಮ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯು, ನೆಯ್ದ ಡೆನಿಮ್‌ ಬಟ್ಟೆಗಳ ತಯಾರಿಕೆ ಹಾಗೂ ಮಾರುಕಟ್ಟೆ ಮಾಡುವಿಕೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದೆ.
ರೇಮಂಡ್‌ ಝಾಂಬೈಟಿ ಪ್ರೈವೇಟ್‌ ಲಿಮಿಟೆಡ್‌
ಕೊಟೋನಿಫಿಸಿಯೋ ಹೊನೆಗ್ಗರ್‌ S.P.A. (ಗ್ರುಪೋ ಝಾಂಬೈಟಿಯ ಒಂದು ಭಾಗ) ಜೊತೆಗಿನ ಒಂದು ಜಂಟಿ ಉದ್ಯಮವಾದ ರೇಮಂಡ್‌ ಝಾಂಬೈಟಿ ಲಿಮಿಟೆಡ್‌ ಕಂಪನಿಯು ಹತ್ತಿಯ ಅಂಗಿ ಬಟ್ಟೆಗಳನ್ನು ತಯಾರಿಸುತ್ತದೆ.
J.K. ಆನ್‌ಸೆಲ್‌ ಲಿಮಿಟೆಡ್‌
ಇದು ಆನ್‌ಸೆಲ್‌ ಇಂಟರ್‌ನ್ಯಾಷನಲ್‌ ಜೊತೆಗಿನ ಒಂದು ಜಂಟಿ ಉದ್ಯಮವಾಗಿದ್ದು, 'ಕಾಮಸೂತ್ರ' ಕಾಂಡಮ್‌ಗಳ ತಯಾರಿಕೆ ಮತ್ತು ಮಾರಾಟಗಾರಿಕೆಯ ವ್ಯವಹಾರದಲ್ಲಿ ತೊಡಗಿಸಿಕೊಂಡಿದೆ.
J.K. ಟಾಲಾಬೋಟ್‌ ಲಿಮಿಟೆಡ್‌
ಫ್ರಾನ್ಸ್‌ನ MOB ಔಟಿಲೇಜ್‌ S.A. ಜೊತೆಗಿನ ಒಂದು ಜಂಟಿ ಉದ್ಯಮ ಇದಾಗಿದ್ದು, ಅರ್ನಗಳು ಮತ್ತು ಒರಟು ಮೇಲ್ಮೈಯ ಅರಗಳ ತಯಾರಿಕೆಯಲ್ಲಿ ಇದು ತೊಡಗಿಸಿಕೊಂಡಿದೆ.

ಬಾಹ್ಯ ಕೊಂಡಿಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "BSE Plus". Bseindia.com. Archived from the original on 2010-08-21. Retrieved 2011-01-06.
  2. http://www.financialexpress.com/news/raymond-board-approves-foray-into-real-estate-sector/518380/0