ಡಾ. ರೋಹನ್ ಮೂರ್ತಿಯವರು, 'ಅಮೆರಿಕದ ಸೊಸೈಟಿ ಆಫ್ ಫೆಲೋಸ್ ಅಟ್ ಹಾರ್ವರ್ಡ್ ಯುನಿವರ್ಸಿಟಿ' ಯ, 'ಜೂನಿಯರ್ ಫೆಲೊ', ಆಗಿದ್ದಾರೆ. ಪ್ರತಿಷ್ಠಿತ ಹಾರ್ವರ್ಡ್ ವಿಶ್ವವಿದ್ಯಾಲಯದ (ಕ್ಯಾಲ್ಟೆಕ್)ಪಿ.ಎಚ್.ಡಿ.(ಕಂಪ್ಯೂಟರ್ ಸೈನ್ಸ್) ನಲ್ಲಿ ಕಾರ್ನೆಲ್ ವಿಶ್ವ ವಿದ್ಯಾಲಯದಿಂದ 'ಕಂಪ್ಯೂಟರ್ ಸೈನ್ಸ್' ವಿಷಯದಲ್ಲಿ ಪದವಿಗಳಿಸಿದ್ದಾರೆ. 'ಎಮ್.ಐ.ಟಿ'ಯಲ್ಲಿ ಫೆಲೋಶಿಪ್ ಮತ್ತು 'ಮೈಕ್ರೋಸಾಫ್ಟ್ ರಿಸರ್ಚ್' ನಲ್ಲಿಯೂ ಸಹಭಾಗಿಯಾಗಿ ಕೆಲಸಮಾಡಿದ್ದರು.
ಭಾರತದ ಹೆಸರಾಂತ ಎರಡನೆಯ ಸಾಫ್ಟ್ ವೇರ್ ಎಕ್ಸ್ ಪೋರ್ಟ್ ಕಂಪೆನಿ, ಇನ್ಫೋಸಿಸ್ ನ. ಮಾಲೀಕರಾಗಿರುವ ಎನ್ ಆರ್ ನಾರಾಯಣಮೂರ್ತಿ, ಹಾಗೂ ಸುಧಾ ಮೂರ್ತಿಯವರ ಮಗನಾಗಿ ಜನಿಸಿದರು. 'ರೋಹನ್,' ಗೆ 'ಅಕ್ಷತಾ,' ಎಂಬ ಒಬ್ಬ ಅಕ್ಕ ಇದ್ದಾರೆ. ನಿವೃತ್ತರಾಗಿದ್ದ ಮೂರ್ತಿಯವರಿಗೆ ಅನಿರೀಕ್ಷಿತವಾಗಿ ಮತ್ತೆ ಕಂಪೆನಿಗೆ ಮರಳಿ ಬಂದು ಕಾರ್ಯ ನಿರ್ವಹಿಸುವ ಕರೆ ಬಂದದ್ದು ಹೂಡಿಕೆದಾರರ ಒತ್ತಡದಿಂದಾಗಿ. ಆಸಮಯದಲ್ಲಿ ಮೂರ್ತಿಯವರು ತಮಗೆ ನೆರವಾಗುವ ತಂಡವನ್ನು ಅಪೇಕ್ಷಿಸಿ, ರೋಹನ್ ಮೂರ್ತಿಯವರನ್ನು[೧] ಎಕ್ಸಿಕ್ಯುಟಿವ್ ಸಹಾಯಕರನ್ನಾಗಿ ನೇಮಕಮಾಡಲು ಅಪೇಕ್ಷೆಯನ್ನು ಸಲ್ಲಿಸಿದ್ದರು. ಜಾಗತಿಕ ಆರ್ಥಿಕತೆಯಲ್ಲಿ ಹಿಂಜರಿಕೆ ಉಂಟಾಗಿರುವ ಪ್ರಯುಕ್ತ ಇನ್‌ಫೋಸಿಸ್ ಸಹಿತ ಭಾರತೀಯ ದಿಗ್ಗಜ ಐಟಿ ಕಂಪೆನಿಗಳ ಏಳಿಗೆಗೆ ತೊಡಕುಂಟಾಗಿದೆ. ಈ ಹಿನ್ನೆಲೆಯಲ್ಲಿ ಇನ್‌ಫೋಸಿಸ್ ಅನ್ನು ಮತ್ತಷ್ಟು ಸದೃಢಗೊಳಿಸಲು ಕಂಪೆನಿಗೆ ನಾರಾಯಣ ಮೂರ್ತಿಯವರ ಪುನರ್ ಪ್ರವೇಶವಾಗಿದೆ.ನಾರಾಯಣ ಮೂರ್ತಿ ಅವರ ಪುತ್ರ ರೋಹನ್ ಮೂರ್ತಿ, ತಮ್ಮ ತಂದೆಗೆ ಅವರ ಹೊಸ ಹೊಣೆಗಾರಿಕೆಯ ನಿರ್ವಹಣೆಗೆ ನೆರವಾಗಲಿದ್ದಾರೆ.
೨೯ ವರ್ಷ ಪ್ರಾಯದ ರೋಹನ್ ಮೂರ್ತಿಯವರ ಅಕ್ಕ, 'ಅಕ್ಷತಾ'ರವರ[೨] ಮದುವೆ, 'ಸ್ಟ್ಯಾನ್ ಫೋರ್ಡ್ ಎಂಬಿಎ ಪದವೀಧರ', 'ರಿಷಿ ಸುನಾಕ್' ಜೊತೆ, ಆಗಸ್ಟ್ ೩೦ ರಂದು ಬೆಂಗಳೂರಿನಲ್ಲಿ ಜರುಗಿತು. ಭಾರತೀಯ ಮೂಲದ 'ರಿಷಿ ಸುನಾಕ್', ಮತ್ತು ಅಕ್ಷತಾ, 'ಅಮೆರಿಕದ ಸ್ಟ್ಯಾನ್ ಫೊರ್ಡ್ ಬಿಜಿನೆಸ್ ಸ್ಕೂಲಿ'ನಲ್ಲಿ ಸಹಪಾಠಿಗಳಾಗಿದ್ದರು. ಸುನಾಕ್, 'ಮೈಕ್ರೋ ಸಾಫ್ಟ್ ವೇರ್ ಇಂಜಿನಿಯರ್' ಆಗಿದ್ದು, 'ಹಾರ್ವರ್ಡ್ ವಿಶ್ವವಿದ್ಯಾಲಯ'ದಲ್ಲಿ ಸಂಶೋಧನೆ ನಡೆಸುತ್ತಿದ್ದಾರೆ. ಅಕ್ಷತಾ ತಮ್ಮ ಪ್ರಾಥಮಿಕ ಶಿಕ್ಷಣವನ್ನುಪಡೆದು ನಂತರ, 'ಸ್ಟಾನ್ ಫರ್ಡ್ ವಿಶ್ವವಿದ್ಯಾಲಯ'ದಲ್ಲಿ 'ಎಂಬಿಎ' ಪದವಿ ಗಳಿಸಿದ್ದಾರೆ. ಪ್ರಸಕ್ತದಲ್ಲಿ ಅಕ್ಷತಾ 'ಸ್ಯಾನ್ ಫ್ರಾನ್ಸಿಸ್ಕೋ' ನಗರದಲ್ಲಿ 'ಮಾರ್ಕೆಟಿಂಗ್ ಡೈರೆಕ್ಟರ್' ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದಿಗ್ಗಜ, ಎನ್.ಆರ್.ನಾರಾಯಣ ಮೂರ್ತಿಯವರ ೨೮ ವರ್ಷದ ಮಗ, ಡಾ. ರೋಹನ್, ದೇಶದ ದ್ವಿಚಕ್ರ ವಾಹನ ತಯಾರಿಕೆಯಲ್ಲಿ ಎರಡನೇ ಸ್ಥಾನದಲ್ಲಿರುವ 'ಟಿ.ವಿ.ಎಸ್ ಮೋಟಾರ್ ಕಂಪೆನಿ'ಯ ಮುಖ್ಯಸ್ಥ,ವೇಣು ಶ್ರೀನಿವಾಸನ್, ಹಾಗೂ ಮಲ್ಲಿಕಾ ಶ್ರೀನಿವಾಸನ್ ದಂಪತಿಗಳ ಪುತ್ರಿ,ಲಕ್ಷ್ಮಿ[೩] ಯನ್ನು ವಿವಾಹವಾದರು. ಲಕ್ಷ್ಮಿ, ಅಮೆರಿಕದ 'ಯೇಲ್ ವಿಶ್ವವಿದ್ಯಾಲಯ'ದ ಪದವೀಧರೆ. ಲಕ್ಷ್ಮಿ, ಟಿ.ವಿ.ಎಸ್ ಸಂಸ್ಥೆಯ ವಿಭಾಗಗಳಲ್ಲೊಂದಾದ, ಸುಂದರಮ್ ಕ್ಲೇಟನ್ ಲಿಮಿಟೆಡ್ ನ ಗ್ಲೋಬಲ್ ಬಿಸಿನೆಸ್ ಡೆವೆಲಪ್ಮೆಂಟ್ ಅಂಡ್ ಸ್ಟ್ರಾಟೆಜಿ ವಿಭಾಗದ, ವೈಸ್ ಪ್ರೆಸಿಡೆಂಟ್, ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರೋಹನ್ ಮೂರ್ತಿ ಮತ್ತು ಲಕ್ಷ್ಮಿ ದಂಪತಿಗಳು ವಿವಾಹ ವಿಚ್ಛೇದನ ಪಡೆದರು.[೪]