![]() | |
ಸ್ಥಾಪನೆ | ೧೯೫೨ |
---|---|
ಸಂಸ್ಥಾಪಕ(ರು) | ಯಾಗ್ಯಾ ಆರ್ಯ |
ಮುಖ್ಯ ಕಾರ್ಯಾಲಯ | , ಭಾರತ |
ಪ್ರಮುಖ ವ್ಯಕ್ತಿ(ಗಳು) | ಪುಶ್ಕರಾಜ್ ಶೆನೋಯ್(CEO ಲಕ್ಮೆ) ಪೂರ್ಣಿಮಾ ಲಂಬಾ (Head Innovations) ಯಾಗ್ಯಾ ಆರ್ಯ (ambassador)[೧] |
ಉದ್ಯಮ | Personal care |
ಉತ್ಪನ್ನ | ಸೌಂದರ್ಯವರ್ಧಕಗಳು, ಮತ್ತು ಬ್ಯೂಟಿ ಸಲೂನ್ ಸೇವೆಗಳು |
ಜಾಲತಾಣ | lakmeindia.com |
ಲಕ್ಮೆ ಸೌಂದರ್ಯವರ್ಧಕಗಳ ಒಂದು ಭಾರತೀಯ ಬ್ರಾಂಡ್. ಇದು ಹಿಂದೂಸ್ತಾನ್ ಯೂನಿಲಿವರ್ ಅವರ ಒಡೆತನದಲ್ಲಿದೆ. ಕರೀನಾ ಕಪೂರ್ ಅವರು ಈ ಬ್ರಾಂಡ್‌ನ ರಾಯಭಾರಿ. ಇದು ಭಾರತದ ಶೃಂಗಾರ ಬ್ರಾಂಡ್‍ಗಳಲ್ಲಿ ಮೊದಲನೆ ಸ್ಥಾನದಲ್ಲಿದೆ.[೨][೩] ಟಾಟಾ ಆಯಿಲ್ ಮಿಲ್ಸ್‍ನ ೧೦೦% ಅಂಗಸಂಸ್ಥೆಯಾಗಿ ಲಕ್ಮೆಯು ಪ್ರಾರಂಭವಾಯಿತು. ಇದು ನಂತರ ಸ್ವತಂತ್ರ ಕಂಪೆನಿಯಾಯಿತು. ಲಕ್ಮೆ ಎಂಬುದು ಫ್ರೆಂಚ್ ಒಪೆರಾ ಒಂದರ ಹೆಸರು. ಇದು ಸ್ವತಃ ತನ್ನ ಸೌಂದರ್ಯಕ್ಕೆ ಹೆಸರುವಾಸಿಯಾದ ಲಕ್ಷ್ಮಿಯ (ಸಂಪತ್ತಿನ ದೇವತೆ) ಫ್ರೆಂಚ್ ರೂಪವಾಗಿದೆ. ಇದು ೧೯೫೨ರಲ್ಲಿ ಪ್ರಾರಂಭವಾಗಿ, ಪ್ರಸಿದ್ಧಿಯಾಯಿತು. ಏಕೆಂದರೆ, ಪ್ರಧಾನಿ ಜವಾಹರಲಾಲ್ ನೆಹರೂ ಭಾರತೀಯ ಮಹಿಳೆ ಸೌಂದರ್ಯ ಉತ್ಪನ್ನಗಳ ಮೇಲೆ ಅಮೂಲ್ಯವಾದ ವಿದೇಶಿ ವಿನಿಮಯವನ್ನು ಖರ್ಚು ಮಾಡುತ್ತಿರುವುದನ್ನು ಕಂಡು, ವೈಯಕ್ತಿಕವಾಗಿ ಭಾರತದಲ್ಲಿ ತಯಾರಿಸಲು ಜೆ.ಆರ್.ಡಿ ಟಾಟಾ ಅವರನ್ನು ವಿನಂತಿಸಿಕೊಂಡರು.[೪] ಸಿಮೋನೆ ಟಾಟಾ ನಿರ್ದೇಶಕರಾಗಿ ಕಂಪನಿ ಸೇರಿದರು, ನಂತರ ಅದ್ಯಕ್ಷೆಯಾದರು.[೫] ೧೯೯೬ ರಲ್ಲಿ, ಟಾಟಾ ಅವರು ಲಕ್ಮೆಯನ್ನು ಹಿಂದೂಸ್ತಾನ್ ಯೂನಿಲಿವರ್‍ಗೆ ೨೦೦ ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಿದರು[೬](೪೫ ದಶಲಕ್ಷ US$).