ಲಕ್ಷ್ಮೀ ಎನ್. ಮೆನನ್ | |
---|---|
ಜನನ | ೨೯ ಮಾರ್ಚ್ ೧೮೯೯ |
ಮರಣ | ೩೦ ನವೆಂಬರ್ ೧೯೯೪ |
ರಾಷ್ಟ್ರೀಯತೆ | ಭಾರತೀಯ |
ಲಕ್ಷ್ಮೀ ಎನ್. ಮೆನನ್ (೨೯ ಮಾರ್ಚ್ ೧೮೯೯ [೧] – ೩೦ ನವೆಂಬರ್ ೧೯೯೪ [೨] ) ಒಬ್ಬ ಭಾರತೀಯ ಸ್ವಾತಂತ್ರ್ಯ ಹೋರಾಟಗಾರ್ತಿ [೩] ಮತ್ತು ರಾಜಕಾರಣಿ. ಅವರು ೧೯೬೨ ರಿಂದ ೧೯೬೬ ರವರೆಗೆ ರಾಜ್ಯ ಸಚಿವರಾಗಿದ್ದರು. [೪]
ತಿರುವನಂತಪುರದಲ್ಲಿ ಜನಿಸಿದ ಅವರು ರಾಮವರ್ಮ ಥಂಪನ್ ಮತ್ತು ಮಾಧವಿಕುಟ್ಟಿ ಅಮ್ಮನವರ ಮಗಳು. ೧೯೩೦ ರಲ್ಲಿ, ಅವರು ಪ್ರೊಫೆಸರ್ ವಿ.ಕೆ. ನಂದನ್ ಮೆನನ್ ಅವರನ್ನು ವಿವಾಹವಾದರು. ಅವರು ನಂತರ ತಿರುವಾಂಕೂರ್ ವಿಶ್ವವಿದ್ಯಾಲಯದ (೧೯೫೦-1೧೯೫೧) [೫] ಮತ್ತು ಪಾಟ್ನಾ ವಿಶ್ವವಿದ್ಯಾಲಯದ ಉಪಕುಲಪತಿಯಾದರು. ಜೊತೆಗೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಡ್ಮಿನಿಸ್ಟ್ರೇಷನ್‌ನ ನಿರ್ದೇಶಕಿಯಾಗಿದ್ದರು.
ಅವರು ೧೯೫೨ ರಿಂದ ೧೯೬೬ ರವರೆಗೆ ರಾಜ್ಯಸಭಾ ಸದಸ್ಯರಾಗಿದ್ದರು. [೬] ಅವರು ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ೧೯೫೨ ರಿಂದ ೧೯೫೭ ರವರೆಗೆ ಸಂಸದೀಯ ಕಾರ್ಯದರ್ಶಿಯಾಗಿ, ೧೯೫೭ ರಿಂದ ೧೯೬೨ ರವರೆಗೆ ಉಪ ಮಂತ್ರಿಯಾಗಿ ಮತ್ತು ೧೯೬೬ ರವರೆಗೆ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದರು.[೪] ೧೯೬೭ ರಲ್ಲಿ ರಾಜಕೀಯ ಸೇವೆಯಿಂದ ನಿವೃತ್ತರಾದ ಅವರು, ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಮುದ್ರಣಾಲಯ ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್ ಪ್ರಕಟಿಸಿದ ಆಕ್ಸ್‌ಫರ್ಡ್ ಪಾಂಪ್ಲೆಟ್ಸ್ ಆನ್ ಇಂಡಿಯನ್ ಅಫೇರ್ಸ್ ಸರಣಿಗಾಗಿ ಭಾರತೀಯ ಮಹಿಳೆಯರ ಕುರಿತಾದ ಇತರ ವಿಷಯಗಳ ಜೊತೆಗೆ ಬರೆಯುವ, ಸಾಮಾಜಿಕ ಕಾರ್ಯಗಳತ್ತ ಮುಖಮಾಡಿದರು. ಅವರು ಭಾರತದಲ್ಲಿ ವಿಶ್ವವಿದ್ಯಾನಿಲಯ ಮಹಿಳಾ ಒಕ್ಕೂಟವನ್ನು ಸ್ಥಾಪಿಸಲು ಸಹಾಯ ಮಾಡಿದರು. [೭] ಅವರ ಸೇವೆಯನ್ನು ಗುರುತಿಸಿ, ಅವರಿಗೆ ೧೯೫೭ ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ನೀಡಲಾಯಿತು. ಇವರು ಈ ಪ್ರಶಸ್ತಿಯನ್ನು ಪಡೆದ ಎರಡನೇ ಮಲಯಾಳಿ ಮಹಿಳೆಯಾಗಿದ್ದರು . [೮]
ಮೆನನ್ ರಾಜಕೀಯದ ನಂತರ ತನ್ನ ಸಕ್ರಿಯ ಜೀವನವನ್ನು ರಾಷ್ಟ್ರದ ಉದ್ದೇಶಕ್ಕಾಗಿ ಮುಡಿಪಾಗಿಟ್ಟರು. ಅವರು ಅಖಿಲ ಭಾರತ ಮಹಿಳಾ ಸಮ್ಮೇಳನದ ಅಧ್ಯಕ್ಷರಾಗಿ ಮತ್ತು ಪೋಷಕರಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಅವರು ಮೊರಾರ್ಜಿ ದೇಸಾಯಿ ಅವರೊಂದಿಗೆ ಅಖಿಲ ಭಾರತ ನಿಷೇಧ ಮಂಡಳಿಯ ಉಪಾಧ್ಯಕ್ಷರಾಗಿದ್ದರು. ೧೯೮೮ ರಲ್ಲಿ, ಅವರು ಎಪಿ ಉದಯಭಾನು ಮತ್ತು ಜಾನ್ಸನ್ ಜೆ. ಎಡಯರನ್ಮುಲ ಅವರೊಂದಿಗೆ ಆಲ್ಕೋಹಾಲ್ ಮತ್ತು ಡ್ರಗ್ ಇನ್ಫರ್ಮೇಷನ್ ಸೆಂಟರ್ (ಎಡಿಐಸಿ)-ಭಾರತವನ್ನು ಸ್ಥಾಪಿಸಿದರು ಮತ್ತು ಅವರು ಸಾಯುವವರೆಗೂ ಅದರ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಅವರು ಮಹಿಳೆಯರಲ್ಲಿ ಅನಕ್ಷರತೆ ನಿರ್ಮೂಲನೆಗಾಗಿ ಅಖಿಲ ಭಾರತ ಸಮಿತಿಯ ಅಧ್ಯಕ್ಷರಾಗಿ ಮತ್ತು ೧೯೭೨ ರಿಂದ ೧೯೮೫ ರವರೆಗೆ ಕಸ್ತೂರ್ಬಾ ಗಾಂಧಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. [೯]
ಲಕ್ಷ್ಮಿ ಮೆನನ್ ಅವರು ನೆಹರೂ ಸರ್ಕಾರದಲ್ಲಿ ರಾಜ್ಯ ಸಚಿವರಾಗಿದ್ದಾಗ ತಿರುವನಂತಪುರದಲ್ಲಿ ತುಂಬ ಈಕ್ವಟೋರಿಯಲ್ ರಾಕೆಟ್ ಉಡಾವಣಾ ಕೇಂದ್ರದ ಸ್ಥಾಪನೆಯನ್ನು ಒಳಗೊಂಡಿರುವ ಅಧಿಕಾರಶಾಹಿ ಕಾರ್ಯವಿಧಾನವನ್ನು ಸುಗಮಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. [೧೦]
She was the Founder – member of the All – India Women ' s Conference, and of the Federation of University Women .