ಹಿಂದೂ ಪುರಾಣದ ವಿಷಯದಲ್ಲಿ, ಲಾಸ್ಯ ಪದವು ಪಾರ್ವತಿ ದೇವಿಯು ಮಾಡಿದ ನೃತ್ಯವನ್ನು ವರ್ಣಿಸುತ್ತದೆ. ಇದು ಸಂತೋಷವನ್ನು ವ್ಯಕ್ತಪಡಿಸುತ್ತದೆ ಮತ್ತು ಲಾವಣ್ಯ ಹಾಗೂ ಸೌಂದರ್ಯದಿಂದ ತುಂಬಿದೆ. ಶಿವನು ಮಾಡಿದ ವಿಶ್ವನೃತ್ಯವಾದ ತಾಂಡವದ ಪುರುಷ ಶಕ್ತಿಗೆ ಪ್ರತಿಕ್ರಿಯೆಯಾಗಿ ಪಾರ್ವತಿಯು ಲಾಸ್ಯ ನಾಟ್ಯವನ್ನು ಮಾಡಿದಳು ಎಂದು ನಂಬಲಾಗಿದೆ. ಅಕ್ಷರಶಃ ಅರ್ಥದಲ್ಲಿ, ಲಾಸ್ಯ ಎಂದರೆ ಸೌಂದರ್ಯ, ಸಂತೋಷ, ಸಮ್ಮೋಹನ, ಮತ್ತು ಲಾವಣ್ಯ.
ತಮ್ಮ ಪುಸ್ತಕ "ಮುಂಕರ್ ಮ್ಯೂಸಿಕರ್"ನಲ್ಲಿ ಪ್ರಾಧ್ಯಾಪಕ ಇನಾಯತ್ ಖಾನ್ ಹೀಗೆ ಬರೆದರು: "ಈ ನೃತ್ಯವನ್ನು ಮಹಿಳೆಯರು ಮತ್ತು ಪುರುಷರು ಇಬ್ಬರು ಮಾಡುತ್ತಾರೆ ಮತ್ತು ಭಾರತದಲ್ಲಿ ಇದರ ಅನೇಕ ಗುರುತಿಸಲ್ಪಟ್ಟ ನಿಪುಣರು (ಉಸ್ತಾದ್) ಇದ್ದಾರೆ. ಲಾಸ್ಯ ನೃತ್ಯದ ಜೊತೆಗೆ ಇಬ್ಬರು ಸಾರಂಗಿ ವಾದಕರು ಮತ್ತು ಒಬ್ಬ ತಬ್ಲಾ ವಾದಕನಿರುತ್ತಾನೆ, ಮತ್ತು ಕೆಲವೊಮ್ಮೆ ಒಂದು ಮಂಜೀರಾ ಇರುತ್ತದೆ. ಇದನ್ನು ಒಬ್ಬ ಮಹಿಳೆ, ಅಥವಾ ಇಬ್ಬರು ಮಹಿಳೆಯರು ಒಟ್ಟಾಗಿ ಮಾಡುತ್ತಾರೆ."[೧]