![]() | ಈ ಲೇಖನ ಯಾವುದೇ ವಿಕಿಪೀಡಿಯ ಲೇಖನಕ್ಕೆ ಕೊಂಡಿಗಳನ್ನು (Interwiki links) ಹೊಂದಿಲ್ಲ. (ಡಿಸೆಂಬರ್ ೨೦೧೫) |
ವಜುಭಾಯಿ ರುದಭಾಯಿ ವಾಲಾ ಗುಜರಾತಿನ ಹಿರಿಯ ರಾಜಕಾರಣಿ. ಗುಜರಾತ್ ರಾಜ್ಯದಲ್ಲಿ ಶಾಸಕ, ಮಂತ್ರಿ, ಸಭಾಪತಿಯಾಗಿ ಸೇವೆ ಸಲ್ಲಿಸಿದ ವಜುಭಾಯಿ ಸೆಪ್ಟೆಂಬರ್ ೨೦೧೪ರಲ್ಲಿ ಕರ್ನಾಟಕದ ರಾಜ್ಯಪಾಲರಾಗಿ ನೇಮಕಗೊಂಡರು.[೧]
೨೩ ಜನವರಿ ೧೯೩೮ರಲ್ಲಿ ಜನಿಸಿದ ವಜುಭಾಯಿ, ಬಾಲ್ಯದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯರಾದರು. ೧೯೭೧ರಲ್ಲಿ ಜನಸಂಘ ಸೇರಿದ ವಜುಭಾಯಿ ರಾಜ್ ಕೋಟ್ ನಗರದ ಮೇಯರ್ ಆಗಿ ಆಯ್ಕೆಯಾದರು. ವಿಧಾನಸಭೆ ಚುನಾವಣೆಯಲ್ಲಿ ರಾಜ್ ಕೋಟ್ ಕ್ಷೇತ್ರದಿಂದ ಆಯ್ಕೆಯಾದ ವಜುಭಾಯಿ, ಕೇಶುಭಾಯಿ ಪಟೇಲ್ ಸಚಿವ ಸಂಪುಟದಲ್ಲಿ ಮಂತ್ರಿಯಾದರು.