ವಾಣಿ ಹರಿಕೃಷ್ಣ

ವಾಣಿ ಹರಿಕೃಷ್ಣ
ಜನನ
ವೃತ್ತಿ(ಗಳು)ಗಾಯಕಿ, ಸಂಯೋಜಕಿ
ಸಕ್ರಿಯ ವರ್ಷಗಳು೨೦೦೮– ಪ್ರಸ್ತುತ

ವಾಣಿ ಹರಿಕೃಷ್ಣ ರವರು ಭಾರತೀಯ ಚಲನಚಿತ್ರ ಹಿನ್ನೆಲೆ ಗಾಯಕಿ ಮತ್ತು ಸಂಗೀತ ನಿರ್ದೇಶಕಿಯಾಗಿದ್ದು, ದಕ್ಷಿಣ ಭಾರತೀಯ ಚಲನಚಿತ್ರಗಳಲ್ಲಿ ಪ್ರಮುಖವಾಗಿ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ.ಅವರು ಚಿತ್ರ ಹಿನ್ನೆಲೆ ಗಾಯನಕ್ಕೆ ಪ್ರವೇಶಿಸುವ ಮೊದಲು ಹಲವಾರು ಭಕ್ತಿ ಗೀತೆಗಳನ್ನು ರಚಿಸಿ, ಬರೆದು, ಹಾಡಿದ್ದಾರೆ.'ಇಂತಿ ನಿನ್ನ ಪ್ರೀತಿಯ' ಚಿತ್ರದ "ಮಧುವನ ಕರೆದರೆ" ಗೀತೆಗಾಗಿ ಅವರಿಗೆ ಕರ್ನಾಟಕ ರಾಜ್ಯ ಪ್ರಶಸ್ತಿ ದೊರಕಿದೆ.೨೦೧೩ ರಲ್ಲಿ 'ಲೂಸ್ಗಳು' ಚಿತ್ರದಲ್ಲಿ ಮೊದಲ ಬಾರಿಗೆ ಸಂಗೀತ ಸಂಯೋಜಕಿಯಾಗಿ ಕೆಲಸ ಮಾಡಿದರು.‌[]

ಕುಟುಂಬ

[ಬದಲಾಯಿಸಿ]

ವಾಣಿಯವರು ಸಂಗೀತಗಾರರ ಕುಟುಂಬದಲ್ಲಿ ಜನಿಸಿದವರು.ಅವರ ಅಜ್ಜ, ಜಿ.ಕೆ.ವೆಂಕಟೇಶ್, ಕನ್ನಡ ಚಿತ್ರರಂಗದಲ್ಲಿ ಸಂಗೀತ ಸಂಯೋಜಕರಾಗಿದ್ದರು.ವಾಣಿಯವರು ಸಂಗೀತ ನಿರ್ದೇಶಕರಾದ ವಿ‌.ಹರಿಕೃಷ್ಣ ಅವರನ್ನು ಮದುವೆಯಾಗಿದ್ದಾರೆ ಹಾಗೂ ಅವರಿಬ್ಬರಿಗೆ ಆದಿತ್ಯ ಎಂಬ ಮಗನಿದ್ದಾನೆ.[][]

ಚಲನಚಿತ್ರಗಳ ಪಟ್ಟಿ

[ಬದಲಾಯಿಸಿ]

ಸಂಗೀತ ನಿರ್ದೇಶಕಿಯಾಗಿ

[ಬದಲಾಯಿಸಿ]
ವರ್ಷ ಚಲನಚಿತ್ರ ಭಾಷೆ ಟಿಪ್ಪಣಿ
೨೦೧೩ ಲೂಸ್ಗಳು ಕನ್ನಡ ಸಂಯೋಜಕಿಯಾಗಿ ಮೊದಲ ಬಾರಿಗೆ
೨೦೧೩ ಮೀನಾಕ್ಷೀ ಕನ್ನಡ
೨೦೧೫ ರಿಂಗ್ ರೋಡ್[] ಕನ್ನಡ

ಗಾಯಕಿಯಾಗಿ

[ಬದಲಾಯಿಸಿ]
ವರ್ಷ ಚಲನಚಿತ್ರ ಹಾಡು ಸಂಗೀತ ನಿರ್ದೇಶಕರು
೨೦೦೮ ಇಂತಿ ನಿನ್ನ ಪ್ರೀತಿಯ ಮಧುವನ ಕರೆದರೆ ಸಾಧು ಕೋಕಿಲ
೨೦೦೮ ಮೇಘವೇ ಮೇಘವೇ ಹೇ ನೀಲಿ ಗಗನ ವಿ.ಹರಿಕೃಷ್ಣ
೨೦೦೮ ಪಯಣ ಜಾರೆ ವಿ.ಹರಿಕೃಷ್ಣ
೨೦೦೯ ಮಳೆಯಲಿ ಜೊತೆಯಲಿ ಮಳೆಯಲಿ ಜೊತೆಯಲಿ ವಿ.ಹರಿಕೃಷ್ಣ
೨೦೦೯ ಚೆಲುವೆಯೇ ನಿನ್ನೇ ನೋಡಲು ಒಲವೇ ನಿನ್ನೆ ವಿ.ಹರಿಕೃಷ್ಣ
೨೦೧೧ ಪರಮಾತ್ಮ ಹೆಸರು ಪೂರ್ತಿ ವಿ.ಹರಿಕೃಷ್ಣ
೨೦೧೧ ಸಾರಥಿ ಹಾಗೋ ಹೀಗೋ ವಿ.ಹರಿಕೃಷ್ಣ
೨೦೧೧ ಪೋಲಿಸ್ ಸ್ಟೋರಿ ೩ ಬಣ್ಣ ಬಣ್ಣ ಸಾಗರ್ ಎಸ್
೨೦೧೧ ದುಷ್ಟ ಜಿಂಕೆ ಓ ಜಿಂಕೆ ಎಸ್.ನಾರಾಯಣ್
೨೦೧೨ ಅದ್ದೂರಿ ಮುಸ್ಸಂಜೆ ವೇಳೇಲಿ ವಿ.ಹರಿಕೃಷ್ಣ
೨೦೧೨ ಶಿಕಾರಿ ಕನ್ನಡಿಯೇ ವಿ.ಹರಿಕೃಷ್ಣ
೨೦೧೨ ಸ್ನೇಹಿತರು ಬದುಕೋದು ಹೇಗೆ ವಿ.ಹರಿಕೃಷ್ಣ
೨೦೧೩ ಲೂಸ್ಗಳು ಬೇಲಿ ಹಾರಿ ವಾಣಿ ಹರಿಕೃಷ್ಣ
೨೦೧೩ ಕಡ್ಡಿಪುಡಿ ಬೇರೆ ಯಾರೊ ವಿ.ಹರಿಕೃಷ್ಣ
೨೦೧೪ ಉಳಿದವರು ಕಂಡಂತೆ ಕಣ್ಣಾ ಮುಚ್ಚೆ ಅಜನೀಶ್ ಲೋಕನಾಥ್
೨೦೧೪ ಡವ್ ಹೀಗೂ ಇರಬಹುದೇ ಅರ್ಜುನ್ ಜನ್ಯ
೨೦೧೭ ಹೊಂಬಣ್ಣ ಅಂಭಿಗನಿರದೆ ವಿನು ಮನಸು

ಪ್ರಶಸ್ತಿಗಳು

[ಬದಲಾಯಿಸಿ]
  • 'ಇಂತಿ ನಿನ್ನ ಪ್ರೀತಿಯ' ಚಿತ್ರದ "ಮಧುವನ ಕರೆದರೆ" ಹಾಡಿಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ.
  • 'ಸಾರಥಿ' ಚಿತ್ರದ "ಹಾಗೋ ಹೀಗೋ" ಹಾಡಿಗೆ ಸುವರ್ಣ ಚಲನಚಿತ್ರ ಪ್ರಶಸ್ತಿ(೨೦೧೧).
  • 'ಅದ್ದೂರಿ' ಚಿತ್ರದ "ಮುಸ್ಸಂಜೆ ವೇಳೇಲಿ" ಹಾಡಿಗೆ ಸುವರ್ಣ ಚಲನಚಿತ್ರ ಪ್ರಶಸ್ತಿ(೨೦೧೨), ಮಿರ್ಚಿ ಮ್ಯೂಸಿಕ್ ಪ್ರಶಸ್ತಿ (ಸೌತ್-೨೦೧೨), ಸೌತ್ ಇಂಡಿಯನ್ ಇಂಟರ್ನ್ಯಾಷನಲ್ ಮೂವಿ ಪ್ರಶಸ್ತಿ.
  • 'ಕಡ್ಡಿಪುಡಿ' ಚಿತ್ರದ "ಬೇರೆ ಯಾರೊ" ಹಾಡಿಗೆ ಸೌತ್ ಇಂಡಿಯನ್ ಇಂಟರ್ನ್ಯಾಷನಲ್ ಮೂವಿ ಪ್ರಶಸ್ತಿ. ‌‌‌‌‌‌‌‌[]

ಉಲ್ಲೇಖಗಳು

[ಬದಲಾಯಿಸಿ]
  1. Vaani turns music director Archived 2012-08-28 ವೇಬ್ಯಾಕ್ ಮೆಷಿನ್ ನಲ್ಲಿ. IndiaGlitz, 24 August 2012. Retrieved 25 May 2013.
  2. V Harikrishna's wife turns composer[ಶಾಶ್ವತವಾಗಿ ಮಡಿದ ಕೊಂಡಿ] 24 August 2012. Retrieved 25 May 2013.
  3. https://www.veethi.com/india-people/vani_harikrishna-profile-6037-24.htm
  4. "Archived copy". Archived from the original on 2015-04-02. Retrieved 2013-08-19. {{cite web}}: Unknown parameter |dead-url= ignored (help)CS1 maint: archived copy as title (link)
  5. https://www.nettv4u.com/celebrity/kannada/playback-singer/vani-harikrishna