ವಾರುಣಿ ಎಂಬುದು ಹಿಂದೂ ದೇವರು ವರುಣನಿಗೆ ಸಂಬಂಧಿಸಿದ ಹಲವು ದೇವತೆಗಳ ಹೆಸರು . ಈ ಹೆಸರನ್ನು ಅವನ ಹೆಂಡತಿ (ಆಕೆಯನ್ನು ವರುಣಾನಿ ಎಂದೂ ಕರೆಯುತ್ತಾರೆ), ಅವನ ಮಗಳು (ವೈನ್ ದೇವತೆ), ಮತ್ತು ಅವನ ಶಕ್ತಿಯ ವ್ಯಕ್ತಿಯ ರೂಪದಲ್ಲಿ ನೋಡುವ ಮಾತೃಕಾ ದೇವತೆಯರನ್ನು ಸಂಬೋಧಿಸಲು ಬಳಸಲಾಗುತ್ತದೆ. [೧] ಕೆಲವೊಮ್ಮೆ, ಈ ದೇವತೆಗಳನ್ನು ಒಂದೇ ದೇವತೆ ಎಂದು ಗುರುತಿಸಲಾಗುತ್ತದೆ. ಅವಳು ದ್ರಾಕ್ಷಾರಸದ ದೇವತೆಯಾಗಿದ್ದು ಸಮುದ್ರ ಮಂಥನ (ಸಾಗರದ ಮಂಥನ) ಸಮಯದಲ್ಲಿ ಹೊರಹೊಮ್ಮಿದಳು ಮತ್ತು ವರುಣನನ್ನು ತನ್ನ ಸಂಗಾತಿಯಾಗಿ ಆರಿಸಿಕೊಂಡಳು ಎಂಬ ವಾದವೂ ಇದೆ. ವಾರುಣಿ ಎಂಬ ಪದವು ಆಲ್ಕೊಹಾಲ್ ಇರುವಂತಹ ಪಾನೀಯವನ್ನು ಸಹ ಸೂಚಿಸುತ್ತದೆ. [೨] [೩]ನಲ್ಲಿನ ಉಲ್ಲೇಖದ ಪ್ರಕಾರ ಭೃಗು ಮಹರ್ಷಿಗೂ ವಾರುಣಿ ಅಥವಾ ವರುಣಿಭೃಗು ಎಂಬ ಹೆಸರಿದೆ.
ಮೊದಲ ವಾರುಣಿಯನ್ನು ವರುಣಾನಿ ಮತ್ತು ಜಲದೇವಿ ಎಂದೂ ಕರೆಯುತ್ತಾರೆ. ಅವಳು ವರುಣನ ಇಬ್ಬರು ಮುಖ್ಯ ಪತ್ನಿಯರಲ್ಲಿ ಒಬ್ಬಳು, ಇನ್ನೊಬ್ಬಳು ಗೌರಿ ದೇವತೆ. ಕೆಲವು ಗ್ರಂಥಗಳಲ್ಲಿ ಗೌರಿ ಎಂಬುದು ವರುಣಾನಿಗೆ ಇನ್ನೊಂದು ಹೆಸರಾಗಿದೆ. ಆಕೆಯನ್ನು ಸಾಮಾನ್ಯವಾಗಿ ತನ್ನ ಗಂಡನ ಜೊತೆಯಲ್ಲಿ ಚಿತ್ರಿಸಲಾಗಿದೆ. ಪದ್ಮಪುರಾಣದ ಭೂಮಿ ಕಾಂಡದ ೧೧೯ನೇ ಅಧ್ಯಾಯದಲ್ಲಿ ವರುಣಾನಿಯ ಪ್ರಸ್ಥಾಪವಿದೆ. ಸಮುದ್ರಮಥನದ ಸಂದರ್ಭದಲ್ಲಿ ಸುಲಕ್ಷ್ಮಿ, ವಾರುಣಿ, ಕಾಮೋದ ಮತ್ತು ಶ್ರೇಷ್ಟ ಎಂಬ ನಾಲ್ಕು ಕನ್ಯೆಯರು ಪ್ರತ್ಯಕ್ಷರಾದರು ಮತ್ತು ಇವರಲ್ಲಿ ವಾರುಣಿ ವರುಣನನ್ನು ವಿವಾಹವಾದಳು ಎಂಬ ಉಲ್ಲೇಖವಿದೆ. [೪]
ವಾರುಣಿ ಎಂಬ ಹೆಸರಿನ ಎರಡನೇ ದೇವತೆ ವರುಣನ ಮಗಳು. ಅವಳನ್ನು ದ್ರಾಕ್ಷಾರಸ ಅಥವಾ ವೈನ್ ದೇವತೆ ಎಂದು ಪರಿಗಣಿಸಲಾಗುತ್ತದೆ. ಪುರಾಣಗಳ ಪ್ರಕಾರ, ದೇವತೆಗಳು ಮತ್ತು ಅಸುರರು ಸಾಗರವನ್ನು ಮಥಿಸುತ್ತಿದ್ದಾಗ, ವಾರುಣಿಯು ಅದರಿಂದ ಹೊರಬಂದಳು. ಸಮುದ್ರಮಂಥನದ ಸಂದರ್ಭದಲ್ಲಿ ವರುಣ ಮತ್ತು ಸೋಮ ದೇವರುಗಳು ಅಂಬ್ರೋಯ್ಸ ಎಂಬ ಪವಿತ್ರ ಪಾತ್ರೆಯಿಂದ ನಾಲ್ಕು ಕನ್ಯೆಯರು ಹೊರಬರುವಂತೆ ಮಾಡಿದರು. ಅವರಲ್ಲಿ ವಾರುಣಿಯೂ ಒಬ್ಬಳು. ಹಾಗಾಗಿ ಈಕೆ ವರುಣನ ಮಗಳು ಎಂಬಂತೆ ಉಲ್ಲೇಖಿಸಲಾಗಿದೆ. ಸಮುದ್ರಮಂಥನದಲ್ಲಿ ಪ್ರತ್ಯಕ್ಷಳಾದ ಈಕೆ ತನ್ನ ಕೈಯಲ್ಲಿ ಮದ್ಯದ ಮಡಕೆಯನ್ನು ಹೊಂದಿದ್ದಳು. [೫]
ಭಾಗವತ ಪುರಾಣದ ಪ್ರಕಾರ, ವಾರುಣಿಯನ್ನು ಅಸುರನೊಬ್ಬನು ತೆಗೆದುಕೊಂಡನು. ಆದರೆ ರಾಮಾಯಣವು ವಾರುಣಿಯು ದೇವತೆಗಳೊಂದಿಗೆ ವಾಸಿಸಲು ಆಯ್ಕೆಮಾಡಿಕೊಂಡಳೆಂದು ಹೇಳುತ್ತದೆ.
ಹಿಂದೂ ಧರ್ಮದ ಮೇಲಿನ ಒಂದು ಸರಣಿಯ ಭಾಗ |
---|
ಓಂ • ಬ್ರಹ್ಮ • ಈಶ್ವರ |
ಇತರ ವಿಷಯಗಳು
|
ಮೂರನೆಯ ದೇವತೆ ವಾರುಣಿ ಮತ್ಸ್ಯ ಪುರಾಣದಲ್ಲಿ ಕಂಡುಬರುವ ಮಾತೃಕೆ . [೬] ಅವಳು ಮೊದಲ ವಾರುಣಿ ಮತ್ತು ವರುಣನ ದೈವಿಕ ಶಕ್ತಿಯ ಅಭಿವ್ಯಕ್ತಿ. ಕಥೆಯ ಪ್ರಕಾರ ಅಂಧಕ ಎಂಬ ರಾಕ್ಷಸನ ರಕ್ತವನ್ನು ಕುಡಿಯಲು ಅವಳನ್ನು ಸೃಷ್ಟಿಸಲಾಗಿದೆ. ಅವಳು 64 ಯೋಗಿನಿಯರಲ್ಲಿ ಒಬ್ಬಳು.
ಸಪ್ತರ್ಷಿಗಳಲ್ಲಿ ಒಬ್ಬರಾದ ಭೃಗು ಮಹರ್ಷಿ ಬ್ರಹ್ಮನ ಮಾನಸ ಪುತ್ರರಲ್ಲಿ ಒಬ್ಬ ಎಂಬ ನಂಬಿಕೆಯಿದೆ. ಈತ ತನ್ನ ಮಾವನಾದ ದಕ್ಷಪ್ರಜಾಪತಿಯ ಯಜ್ಞದಲ್ಲಿ ಭಾಗವಹಿಸಿರುತ್ತಾನೆ. ಶಿವನಿಲ್ಲದೇ ಯಜ್ಞ ನಡೆಸಿದರೆ ಅಲ್ಲಿರುವ ಎಲ್ಲರಿಗೂ ಆಪತ್ತು ಬರುತ್ತದೆ ಎಂಬ ಎಚ್ಚರಿಕೆಯ ಹೊರತಾಗಿಯೂ ಯಜ್ಞವನ್ನು ಮುಂದುವರಿಸುವಂತೆ ತಿಳಿಸುತ್ತಾನೆ. ಆ ಯಜ್ಞಕುಂಡದಲ್ಲಿ ಪಾರ್ವತಿಯು ಬಿದ್ದು ಸಾವನ್ನಪ್ಪಿದ ನಂತರ ಶಿವನ ಸಿಟ್ಟಿನಿಂದ ಪ್ರತ್ಯಕ್ಷನಾಗುವ ಕಾಲಭೈರವನಿಂದ ಈತ ತನ್ನ ಪ್ರಾಣವನ್ನು ಕಳೆದುಕೊಳ್ಳುತ್ತಾನೆ. ನಂತರ ವರುಣನಿಂದ ಪುನಃ ಜನ್ಮತಾಳುವ ಈತನನ್ನು ವರುಣಿ ಭೃಗು/ವಾರುಣಿ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ವರುಣನಿಂದ ಪುನಃ ಜನ್ಮ ಪಡೆದ ಕಾರಣ ಈತನನ್ನು ವರುಣನ ಮಗನಂತೆಯೂ ಸಂಭೋದಿಸಲಾಗಿದೆ.