ವಿಕಾಸ್‍ಪೀಡಿಯ

ವಿಕಾಸ್‍ಪೀಡಿಯ
ವಿಕಾಸ್‍ಪೀಡಿಯ ಲಾಂಛನ
ಜಾಲತಾಣದ ವಿಳಾಸvikaspedia.gov.in
ತಾಣದ ಪ್ರಕಾರಮಾಹಿತಿ ಮತ್ತು ಜ್ಞಾನ ಪೋರ್ಟಲ್
ಒಡೆಯಭಾರತ ಸರ್ಕಾರ
ಪ್ರಾರಂಭಿಸಿದ್ದು18 ಫೆಬ್ರವರಿ 2014; 3986 ದಿನ ಗಳ ಹಿಂದೆ (2014-೦೨-18)[]

ವಿಕಾಸ್‍ಪೀಡಿಯ ಎನ್ನುವುದು ಭಾರತ ಸರ್ಕಾರದಿಂದ ಪ್ರಾರಂಭಿಸಲ್ಪಟ್ಟ ಒಂದು ಆನ್‍ಲೈನ್ ಮಾಹಿತಿ ಮಾರ್ಗದರ್ಶಕ ತಾಣ.[][] ಹೈದರಾಬಾದ್ ಸಿ-ಡ್ಯಾಕ್ ಸಂಸ್ಥೆಯಿಂದ ಕಾರ್ಯಗತಗೊಳಿಸಲ್ಪಟ್ಟಿರುವ ಇದು ಭಾರತ ಕೇಂದ್ರ ಸರ್ಕಾರದ 'ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ'ದ, ಎಲೆಕ್ಟ್ರಾನಿಕ್ಸ್ ಮತ್ತು ಇನ್ಫರ್ಮೇಶನ್ ಟೆಕ್ನಾಲಜಿ ಇಲಾಖೆಯಿಂದ ನಡೆಸಲ್ಪಡುತ್ತಿದೆ. ಈ ಜಾಲತಾಣವು ೨೩ ಭಾಷೆಗಳಲ್ಲಿ ಇದೆ. ಆ ಭಾಷೆಗಳೆಂದರೆ: ಅಸ್ಸಾಮಿ, ಬಂಗಾಳಿ, ಗುಜರಾತಿ, ಬೋಡೋ, ಡೋಂಗ್ರಿ, ಕನ್ನಡ, ತಮಿಳು, ತೆಲುಗು, ಇಂಗ್ಲೀಷ್, ಸಂಸ್ಕೃತ, ಕಾಶ್ಮೀರಿ, ಹಿಂದಿ, ಕೊಂಕಣಿ, ನೇಪಾಳಿ, ಒಡಿಯಾ, ಉರ್ದು, ಮೈಥಿಲಿ, ಮಣಿಪುರಿ, ಸಂತಲಿ, ಸಿಂಧಿ, ಮಲಯಾಳಂ, ಪಂಜಾಬಿ ಮತ್ತು ಮರಾಠಿ.[]

೧೮ಫೆಬ್ರವರಿ೨೦೧೪ರಂದು ಇದು ಪ್ರಾರಂಭವಾಯಿತು.[] ಇದರಲ್ಲಿ ಕೃಷಿ, ಆರೋಗ್ಯ, ಶಿಕ್ಷಣ, ಸಮಾಜಕಲ್ಯಾಣ, ಇಂಧನ, ಇ-ಆಡಳಿತ ಕ್ಷೇತ್ರಗಳಿಗೆ ಸಂಬಂಧಿಸಿದ ಮಾಹಿತಿಗಳಿವೆ.[] ಈ ವಿಕಾಸ್‍ಪೀಡಿಯ ಎನ್ನುವ ಹೆಸರು 'ವಿಕಾಸ್' (ಬೆಳವಣಿಗೆ, ಅಭಿವೃದ್ಧಿ) ಮತ್ತು ಎನ್‍ಸೈಕ್ಲೋಪೀಡಿಯ (ವಿಶ್ವಕೋಶ)ದ 'ಪೀಡಿಯ' ಎಂಬ ಪದಗಳನ್ನು ಕೂಡಿಸಿದ್ದಾಗಿದೆ.

ಉಲ್ಲೇಖಗಳು

[ಬದಲಾಯಿಸಿ]
  1. "Indian government launches Vikaspedia". Techinasia. 19 February 2014. Retrieved 20 February 2014.
  2. "Government launches Vikaspedia as online information guide". DNA. 18 February 2014. Retrieved 19 February 2014.
  3. "Government launches Vikaspedia, website for local content development tools". NDTV. 18 February 2014. Retrieved 19 February 2014.
  4. "Govt launches Vikaspedia as online information guide". Livemint. 18 February 2014. Retrieved 19 February 2014.
  5. ಪ್ರಾದೇಶಿಕ ಭಾಷೆಗಳಲ್ಲಿ ‘ವಿಕಾಸ್‌ಪೀಡಿಯ’ , ಪ್ರಜಾವಾಣಿ ವಾರ್ತೆ, 02/19/2014
  6. "Government launches online information guide Vikaspedia". Times of India. 18 February 2014. Retrieved 19 February 2014.


ಹೊರಕೊಂಡಿಗಳು

[ಬದಲಾಯಿಸಿ]