ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ವಿಜಯಕರ್ನಾಟಕ (ದಿನಪತ್ರಿಕೆ) | |
---|---|
ಪ್ರಕಟಣೆ: | 74/2, ಸಂಜನಾ ಪ್ಲಾಜಾ, 4 ನೇ ಮತ್ತು 5 ನೇ ಮಹಡಿ, ಎಲಿಫೆಂಟ್ ರಾಕ್ ರಸ್ತೆ, ಜಯನಗರ 3 ನೇ ಬ್ಲಾಕ್, ಬೆಂಗಳೂರು-560011 |
ಈಗಿನ ಸಂಪಾದಕರು: | ಸುದರ್ಶನ ಚನ್ನಂಗಿಹಳ್ಳಿ |
ಜಾಲತಾಣ: | http://vijaykarnataka.com/ - http://vijaykarnatakaepaper.com/ |
ಇವನ್ನೂ ನೋಡಿ ವರ್ಗ:ಕನ್ನಡ ಪತ್ರಿಕೆಗಳು |
ವಿಜಯ ಕರ್ನಾಟಕ ಕನ್ನಡದ ಒಂದು ದಿನಪತ್ರಿಕೆ. ಸಮಸ್ತ ಕನ್ನಡಿಗರ ಹೆಮ್ಮೆ ಎಂಬ ಧ್ಯೇಯ ವಾಕ್ಯದೊಂದಿಗೆ, ಹುಬ್ಬಳ್ಳಿಯ ವಿಜಯಾನಂದ ರೋಡ್ ಲೈನ್ಸ್ ಬಳಗದ ಪತ್ರಿಕೆಯಾಗಿದ್ದ ವಿಜಯ ಕರ್ನಾಟಕವನ್ನು 2006ರಲ್ಲಿ ಟೈಂಸ್ ಆಫ್ ಇಂಡಿಯಾ ಪತ್ರಿಕೆ ಸಮೂಹದ, ಬೆನ್ನೆಟ್,ಕೊಲ್ಮನ್ ಅಂಡ್ ಸನ್ಸ್ ಸಂಸ್ಥೆಯವರು, ತಮ್ಮ ಸ್ವಾಮ್ಯಕ್ಕೆ ಸೇರಿಸಿಕೊಂಡಿದ್ದಾರೆ.
2000ರಲ್ಲಿ ವಿಜಯಾನಂದ ಪ್ರಿಂಟರ್ಸ್ ಮೂಲಕ ಆರಂಭಗೊಂಡ ವಿಜಯ ಕರ್ನಾಟಕ (ವಿಕ), ಒಮ್ಮೆ ನಂ.1 ಪಟ್ಟಕ್ಕೇರಿತ್ತು. ಬಳಿಕ 2006ರಲ್ಲಿ ಈ ಪತ್ರಿಕೆಯನ್ನು ಬೆನೆಟ್, ಕೋಲ್ಮನ್ ಆಂಡ್ ಕಂಪನಿ ಲಿ. (ಬಿಸಿಸಿಎಲ್) ಸ್ವಾಧೀನಕ್ಕೆ ಪಡೆದುಕೊಂಡಿತು.
ವಿಜಯ ಕರ್ನಾಟಕದ ಸಂಪಾದಕರಾಗಿದ್ದವರು - ಈಶ್ವರ ದೈತೋಟ, ಮಹಾದೇವಪ್ಪ, ವಿಶ್ವೇಶ್ವರ ಭಟ್, ಇ. ರಾಘವನ್, ಸುಗತ ಶ್ರೀನಿವಾಸ ರಾಜು,ತಿಮ್ಮಪ್ಪ ಭಟ್,ಹರಿಪ್ರಕಾಶ ಕೋಣೆಮನೆ.
2012ರ ಏಪ್ರಿಲ್ 1ರಂದು ವಿಜಯ ಕರ್ನಾಟಕದ ವೆಬ್ ಸೈಟ್ ಆವೃತ್ತಿ vijaykarnataka.com ಆರಂಭವಾಯಿತು. ನಂತರ ಅದರ ಮೊಬೈಲ್ ಆವೃತ್ತಿ ಆರಂಭವಾಯಿತು.