ವಿಜಯ್ ಪ್ರಕಾಶ್ | |
---|---|
ವಿಜಯ್ ಪ್ರಕಾಶ್ | |
ಜನನ | 21 February 1976 |
ರಾಷ್ಟ್ರೀಯತೆ | ಭಾರತೀಯ |
ಶಿಕ್ಷಣ(s) | Singer, voice-over artist |
Years active | 1997–present |
Spouse |
ಮಹಾತಿ ವಿಜಯ್ ಪ್ರಕಾಶ್ (ವಿವಾಹ:2001) |
ಮಕ್ಕಳು | ಕಾವ್ಯ ಪ್ರಕಾಶ್ |
ವಿಜಯ್ ಪ್ರಕಾಶ್ ಭಾರತೀಯ ಹಿನ್ನೆಲೆ ಗಾಯಕರು. ವಿಜಯ್ ಪ್ರಕಾಶ್ ಅವರು ಮೈಸೂರಿನಲ್ಲಿ ಹುಟ್ಟಿ ಬೆಳೆದವರು.[೧] ಅವರ ತಂದೆಯವರೂ ಸಹ ಸಂಗೀತ ಪಂಡಿತರು. ತಂದೆಯ ಮಾರ್ಗದರ್ಶನದಲ್ಲಿ ಶಾಸ್ತ್ರೀಯ ಸಂಗೀತವನ್ನು ಮೈಗೂಡಿಸಿಕೊಂಡ ವಿಜಯಪ್ರಕಾಶ್, ಮುಂದೆ ಪಾಶ್ಯಾತ್ಯ ಸಂಗೀತವನ್ನೂ ಕಲಿತರು. ವಿದೇಶದಲ್ಲೂ ಕನ್ನಡ ಸಂಗೀತದ ಕಂಪನ್ನು ಪಸರಿಸಿದರು.[೧]
ವಿಜಯ್ ಪ್ರಕಾಶ್ ಹುಟ್ಟಿದ ಊರು - ಮೈಸೂರು, ಜನನ- ಫೆಬ್ರವರಿ 21 , 1976, ತಂದೆ -ಎಲ್.ರಾಮಶೇಷು ತಾಯಿ - ಆರ್.ಲೋಪಮುದ್ರಾ, ತಾತ -ಕರ್ನಾಟಕದ ಕಲಾತಿಲಕ ಲಕ್ಷ್ಮಿಪತಿ ಭಾಗವತರ್, ಅಣ್ಣ-ಫಣೇಂದ್ರ ಕುಮಾರ್ ಪತ್ನಿ-ಮಹತಿ, ಮಗಳು- ಕಾವ್ಯ.[೨] ಚಿಕ್ಕವಯಸ್ಸಿಂದ ಸಂಗೀತ ಅಂದ್ರೆ ಪ್ರಾಣ. ಅವರ ಸ್ನೇಹಿತರೊಬ್ಬರು ಲಂಡನ್ ಗೆ ಹೋಗಿದ್ದಾಗ ವಾದ್ಯವೊಂದನ್ನು ಖರೀದಿಸಿದ್ದರು. ಅದನ್ನ ನೋಡಿ ನನಗೂ ತೆಗೆದುಕೊಡಮ್ಮ ಅಂತ ಕೇಳಿದ್ದರು. ನಾವು ಆಗಿದ್ದ ಪರಿಸ್ಥಿತಿಯಲ್ಲಿ ಬರೀ ಸಂಗೀತದಲ್ಲಿ ಮಕ್ಕಳನ್ನ ಸಾಕ್ತಾಯಿದ್ದದ್ದು. ಆಗ ತೆಗೆದುಕೊಡೋಕೆ ಆಗ್ಲಿಲ್ಲ. ಇವತ್ತಿಗೂ ನನ್ನ ಮನಸ್ಸಲ್ಲಿ ಅದು ಕೊರೆಯುತ್ತಿದೆ. ಕ್ಷಮಿಸು ಮಗನೇ ಎಂದಿದ್ದರು ಅವರ ತಾಯಿ ಲೋಪಮುದ್ರ.
ಮೊದಲ ಬಹುಮಾನ ಪಡೆದದ್ದು-ಕನ್ನಡ ರಾಜ್ಯೋತ್ಸವ ಮಾಡುವಾಗ ಸ್ಪರ್ಧೆ ಮಾಡಿದ್ರು. ಆಗ ಹೋಗಿ ನಾನು ಹಾಡಿದ್ದು. ಮೊದಲನೇ ಬಾರಿ ಸ್ಟೇಜ್ ಪರ್ಫಾಮೆನ್ಸ್. ಲಂಬೋಧರ...ಹಾಡು ಹಾಡಿದ್ದೆ. ಸಿಕ್ಕಿದ ಮೊದಲ ಬಹುಮಾನ ಗ್ಲಾಸ್. ಓದಿದ ಶಾಲೆ-ಸೇಂಟ್ ಥಾಮಸ್ ಕಾನ್ವೆಂಟ್.ಆ ಶಾಲೆಗೆ ಮೋರಿ ಮೇಲೆ ನಡೆದುಕೊಂಡು ಹೋದರೇನೇ ಒಂದು ಸಾಧನೆ ಮಾಡಿದ ಅನುಭವವಾಗುತ್ತಿತ್ತು. ಒಂದೆರಡು ಬಾರಿ ಚರಂಡಿ ಒಳಗೂ ಬಿದ್ದಿದ್ದರು
ಇಂಜಿನೀಯರಿಂಗ್ ಸೇರಿದೆ. ಸೇರಿದ್ಮೇಲೆ ಅದರಲ್ಲಿ ಅವರಿಗೆ ಗಮನ ಇರ್ಲಿಲ್ಲ. ಏನಾದರೂ ಮಾಡ್ಬೇಕು ಅಂತಿದ್ದರು. ಬಹಳ ದೊಡ್ಡ ತೀರ್ಮಾನ ತೆಗೆದುಕೊಂಡಿದ್ದು ಅವಾಗಲೇ. ಅಪ್ಪ-ಅಮ್ಮಗೆ ಹೇಳದೆ ಕೈಯಲ್ಲಿ 700 ರೂಪಾಯಿ ಇಟ್ಕೊಂಡು, ಚೀಲದಲ್ಲಿ ಒಂದು ಪ್ಯಾಂಟ್-ಶರ್ಟ್ ಹಾಕೊಂಡು ಮನೆಯಿಂದ ಹೊರಟರು. ಯಾಕೆ ಹೊರಟೆ? ಎಲ್ಲಿಗೆ ಹೊರಟೆ? ಗೊತ್ತಿಲ್ಲ. ಆದ್ರೆ ಏನಾದರೂ ಸಾಧಿಸುವ ಛಲ ಅವರಿಗೆ ಇತ್ತು ಮನೆಯಿಂದ ಹೊರಡುವಾಗ ಹೆತ್ತವರಿಗೆ ಒಂದು ಪತ್ರ ಬರೆದು ಇಟ್ಟಿದ್ದರು. ಮನೆಯಿಂದ ಮೊದಲು ಬೆಂಗಳೂರಿಗೆ ಹೋದರು. ಅಲ್ಲಿ ತಿರುಪತಿಗೆ ಹೋಗಿ ದೇವರ ದರ್ಶನ ಮಾಡಿದರು. ಅಲ್ಲಿಂದ ಇವತ್ತಿನವರೆಗೂ ಅವರು ಪ್ರತಿ ವರ್ಷ ತಿರುಪತಿಗೆ ಹೋಗಿ ಬಾಲಾಜಿ ದರ್ಶನ ಮಾಡಿ ಬರುತ್ತಾರೆ.
ತಿರುಪತಿಯಿಂದ ಬಾಂಬೆಗೆ ಹೋದರು. ಅಲ್ಲಿ ಯಾರೂ ಗೊತ್ತಿಲ್ಲ. ತುಂಬಾ ಟೈಯರ್ಡ್ ಆಗಿದ್ದರು. ಉಡುಪಿ ರೆಸ್ಟೋರೆಂಟ್‍ನಲ್ಲಿ ಪುಲಾವ್ ತಿಂದು ಮತ್ತೆ ಹೋಟೆಲ್ ಕಡೆ ಹೋಗಲೇ ಇಲ್ಲ. ಯಾಕಂದ್ರೆ ಅವರ ಹತ್ರ ಆಗ ಯಾವುದೇ ದುಡ್ಡು ಇರ್ಲಿಲ್ಲ. ರೇಲ್ವೆ ಸ್ಟೇಷನ್ ನಲ್ಲೇ ಮಲಗುತ್ತಿದ್ದರು. ರಾತ್ರಿ ಹೊತ್ತು ಪೊಲೀಸ್‍ನವರು ಬಂದು ಅಲ್ಲಿ ಮಲಗಿದವರಿಗೆ ಬೂಟುಗಾಲಿನಿಂದ ಒದಿಯುತ್ತಿದ್ದರು.
ನನ್ನ ಗುರು ಸುರೇಶ್ ವಾಡ್ಕರ್. ಇವತ್ತಿಗೂ ನಾನು ಅವರನ್ನ ನೆನಪಿಸಿಕೊಳ್ತೀನಿ. ಮೊದಲು ನಾನು ಮುಂಬೈಗೆ ಹೋದಾಗ ಆನಂದ್ ಮಿಲಿಂದ್ ಅಂತ ಮ್ಯೂಸಿಕ್ ಡೈರೆಕ್ಟರ್‍ರವರ ಮನೆ ಗೊತ್ತಾಯ್ತು. ಅಲ್ಲಿ ಹೋದಾಗ ಅವರು ಸುರೇಶ್ ವಾಡ್ಕರ್ ಹತ್ರ ಕಳುಹಿಸಿದ್ರು. ಅವರ ಹತ್ರ ಹೋಗಿ ಹಾಡಿದ್ಮೇಲೆ ನನ್ನ ವಾಯ್ಸ್ ಇಷ್ಟ ಪಟ್ಟರು. ನಂತರ ರಾಧಾ ಕೃಷ್ಣ ದೇವಸ್ಥಾನದಲ್ಲಿ ಉಳಿದುಕೊಳ್ಳುವುದಕ್ಕೆ ವ್ಯವಸ್ಥೆ ಮಾಡಿದ್ರು. ಇದ್ದ ಒಂದು ಬಟ್ಟೆಯನ್ನು ಸಮುದ್ರದ ನೀರಲ್ಲಿ ಒಗೆದು ಒಣಗಿಸಿ ಹಾಕೊಳ್ತಿದ್ದೆ. ತಿನ್ನೋಕೆ ದುಡ್ಡು ಇರ್ಲಿಲ್ಲ. ನಾನು ಇದ್ದ ಸ್ಥಿತಿ ನೋಡಿ ಅವರು ನನಗೆ 100 ರೂಪಾಯಿ ಕೊಟ್ಟು ಊಟ ಮಾಡಿ ಬಾ ಅಂತ ಹೇಳಿದ್ರು.
ಜೀವನದಲ್ಲಿ ಎರಡು ತರಹ ಹಸಿವು ಇರುತ್ತದೆ. ದೇವರ ದಯೆಯಿಂದ ಎಲ್ಲಾ ಇದ್ದರೂ ತಿನ್ನುವುದಕ್ಕೆ ಟೈಮ್ ಇರಲ್ಲ. ಅದೊಂಥರಾ ದರ್ಪದ ಹಸಿವು. ಆದರೆ ಎದುರುಗಡೆ ಊಟ ಇದ್ದರೂ, ಕೊಂಡುಕೊಳ್ಳುವುದಕ್ಕೆ ದುಡ್ಡಿರಲ್ಲ. ಆ ಹಸಿವು ಬಹಳ ಕಷ್ಟ. ಅವತ್ತು ಅವರು ದುಡ್ಡು ತಗೊಂಡು ಹೊಟ್ಟೆ ತುಂಬಾ ತಿಂದರು.
ಸುರೇಶ್ ವಾಡ್ಕರ್ ಅವರ ಫ್ರೆಂಡ್ ಮುಖಾಂತರ ಜಾಹೀರಾತುಗಳಿಗೆ ವಾಯ್ಸ್ ಕೊಡಬಹುದು ಅಂತ 'ವರ್ಡ್ಸ್ ಅಂಡ್ ವಾಯ್ಸಸ್' ಕಂಪನಿಗೆ ಕಳುಹಿಸಿದರು. ನನಗೆ ಕನ್ನಡ ಬಿಟ್ಟು ಬೇರೆ ಭಾಷೆ ಬರಲ್ಲ. 'ನಿರ್ಮಾ ಆಡ್' ಕೊಟ್ಟರು. ಚೆನ್ನಾಗಿ ಹೇಳ್ದೆ. ಮೊದಲ ರೆಕಾರ್ಡಿಂಗ್ ಮಾಡಿದ್ದು 'ಕೆಲ್ಲಾಗ್ಸ್ ಆಡ್'ಗಾಗಿ.
ಆಡ್ ನಂತರ ದುಡ್ಡು ಕೊಡ್ತೀವಿ ಅಂದರು. ಆಗ ಎಷ್ಟು ಖುಷಿ ಆಯ್ತು ಅಂದ್ರೆ ಫ್ರೆಂಡ್ಸ್ ಹತ್ರ ಸಮೋಸ ತಿನ್ಕೊಂಡು ಬದುಕ್ತಾಯಿದ್ದೆ. ದುಡ್ಡು ಸಿಕ್ತಲ್ಲಾ ಅಂತ ಸಖತ್ ಖುಷಿ. 2700 ರೂಪಾಯಿ ಚೆಕ್ ಕೊಟ್ಟರು. ಅವತ್ತು ರಾತ್ರಿ ನನ್ನ ಫ್ರೆಂಡ್ಸ್ ಗೆಲ್ಲಾ ಪಾರ್ಟಿ ಕೊಡಿಸಿದರು
ರೇಡಿಯೋವಾಣಿ ಅಂತ ಸ್ಟುಡಿಯೋ. ಅದರಲ್ಲಿ ರೆಕಾರ್ಡಿಂಗ್ ಗೆ ಅಂತ ಹೋಗಿದ್ದರು. ಅಲ್ಲಿ ಮಹತಿ..ಮಹತಿ ಅಂತ ಎಲ್ಲರೂ ಚರ್ಚೆ ಮಾಡುತ್ತಿದ್ದರು. ಯಾರಪ್ಪಾ ಈ ಮಹತಿ ಅಂತ ಅವರು ನೋಡ್ತಾಯಿದ್ದರು. ಅಲ್ಲಿಗೆ ಅವರಿನ್ನೂ ಹೊಸಬರು. ಆದ್ರೆ, ಮಹತಿ ಆಗಲೇ ವಾಯ್ಸ್ ಓವರ್‍ನಲ್ಲಿ ಸ್ಟಾರ್. ಆವಾಗ ಅವರಿಗೆ ಇವರು ಒಂದು ಲುಕ್ ಕೊಟ್ಟು, ಅವರ ಒಂದು ಲುಕ್ ಪಡೆದರು. ಆಮೇಲೆ ಸ್ಟುಡಿಯೋದಲ್ಲಿ ಅವರು ಅವರಿಗೆ ಸಿಗುವುದಕ್ಕೆ ಶುರು ಮಾಡಿದರು ಮಹತಿಗೆ ಅವರ ಮೇಲೆ ಕನಿಕರ ಇತ್ತು. ತೆಲುಗು ಸೀರಿಯಲ್‍ಗೆ ಹಾಡುವುದಕ್ಕೆ ಅಂತ ವಿಜಯ್ ಪ್ರಕಾಶ್‍ರನ್ನು ಕರೆಸಿದಾಗ ಜೊತೆಗೆ ಮಹತಿಯೂ ಹಾಡಿದರು. ಒಳಗೊಳಗೆ ಅವರಿಬ್ಬರಿಗೂ ಒಂಥರಾ ಫೀಲಿಂಗ್. ಒಂದಿನ ಲಂಚ್‍ಗೆ ಕರ್ಕೊಂಡು ಹೋಗಿ ಮಾತನಾಡಿದರು. ಅವಳು ಅವರನ್ನು ಆಟವಾಡಿಸುತ್ತಿದ್ದರು. ನಂತರ ವಿಜಯ್ ಪ್ರಕಾಶ್ ಅವರಿಗೆ ಪ್ರಪೋಸ್ ಮಾಡಿದ ನಂತರ ಅವರು ಒಪ್ಪಿಕೊಂಡರು.ವಿಜಯ್ ಪ್ರಕಾಶ್‍ರ ಅಪ್ಪ-ಅಮ್ಮ ಕೂಡ ಮುಂಬೈಗೆ ಬಂದು ಅವಳ ಅಪ್ಪ-ಅಮ್ಮ ಜೊತೆ ಮಾತನಾಡುತ್ತಾರೆ. ಮಹತಿ ಅಪ್ಪ-ಅಮ್ಮ ಎರಡು ಕಂಡೀಷನ್ ಹಾಕುತ್ತಾರೆ. ಮುಂಬೈಗೆ ಹೋದ 4 ವರ್ಷದಲ್ಲೇ ಅಂದ್ರೆ 1999ನಲ್ಲೇ ಸ್ವಂತ ಮನೆ ತೆಗೆದುಕೊಳ್ಳುತ್ತಾರೆ. 2001 ನಲ್ಲಿ ತಿರುಪತಿಯಲ್ಲಿ ಮದುವೆ ಆಗುತ್ತಾರೆ
ಮದುವೆ ಆದ್ಮೇಲೆ ಸೆಟ್ಲ್ ಆದರು. ಸಿನಿಮಾದಲ್ಲಿ ಹಾಡಬೇಕು ಅಂತ ಆಸೆ ಅವರಿಗೆ ಬಹಳವಾಗಿತ್ತು. ಅವರ ಸ್ನೇಹಿತ ಬಾಲ್ಕಿ ಅಂತ ಇದ್ರು. 'ಚೀನಿ ಕಮ್' ಸಿನಿಮಾ ನಿರ್ದೇಶನ ಮಾಡ್ತಿದ್ರು. ಅದಕ್ಕೆ ಇಳಯರಾಜ ಸಂಗೀತ ನಿರ್ದೇಶಕ. ಇಳಯರಾಜ ಜೊತೆ ಫೋನ್‍ನಲ್ಲಿ ವಿಜಯ್ ಪ್ರಕಾಶ್ ಮಾತನಾಡಿದ ನಂತರ ಅವರು ವಿಜಯ್ ಪ್ರಕಾಶ್‍ರನ್ನು ಸ್ಟುಡಿಯೋಗೆ ಕರೆಸಿ ಹಾಡೋಕೆ ಹೇಳುತ್ತಾರೆ. ಆಗ ಅಮಿತಾಬ್ ಬಚ್ಚನ್‍ಗೆ ಅವರು ಮೊದಲು ಪ್ಲೇ ಬ್ಯಾಕ್ ಹಾಡಿದ್ದು. ಆಮೇಲೆ ಶಾರುಖ್‍ಖಾನ್ ಸಿನಿಮಾಗೆ ಹಾಡಿದರು. ನಂತರ ಎ.ಆರ್.ರೆಹಮಾನ್ ಅವರ ಆಫೀಸ್‍ನಿಂದ ಫೋನ್ ಬರುತ್ತದೆ. ಆಗ ವಿಜಯ್ ಪ್ರಕಾಶ್ ಅವರ ಸ್ಟುಡಿಯೋಗೆ ಹೋಗುತ್ತಾರೆ. ಅಲ್ಲಿ ಅವರು 'ಸ್ವದೇಸ್' ಸಿನಿಮಾಗೆ ಹಾಡಿದರು ಅದೂ ಶಾರುಖ್ ಖಾನ್ ಮುಂದೆ. ಅಲ್ಲೇ, ಎ.ಆರ್.ರೆಹಮಾನ್ ತಮಿಳು ಸಿನಿಮಾಗೆ ಒಂದು ಹಾಡನ್ನು ಹಾಡಿಸುತ್ತಾರೆ.
ಜೈ ಹೋ' ಹಾಡಿಗೆ ಆಸ್ಕರ್ ಮತ್ತು ಗ್ರ್ಯಾಮಿ ಪ್ರಶಸ್ತಿ [೨]
ಗಾಳಿಪಟ' ಚಿತ್ರದ 'ಕವಿತೆ' ಹಾಡು ವಿಜಯ್ ಪ್ರಕಾಶ್ ಮೊದಲು ಕನ್ನಡದಲ್ಲಿ ಹಾಡಿದ್ದು.