ವಿದ್ಯಾ ವೋಕ್ಸ್ | |||||||||
---|---|---|---|---|---|---|---|---|---|
ವೈಯಕ್ತಿಕ ಮಾಹಿತಿ | |||||||||
ಜನನ | ವಿದ್ಯಾ ಅಯ್ಯರ್ ೨೬ ಸೆಪ್ಟೆಂಬರ್ ೧೯೯೦ ಮದ್ರಾಸ್, ತಮಿಳುನಾಡು, ಭಾರತ[೧][೨] | ||||||||
ರಾಷ್ಟ್ರೀಯತೆ | ಅಮೇರಿಕನ್[೧] | ||||||||
ವೃತ್ತಿಜೀವನ |
| ||||||||
ವೆಬ್ಸೈಟ್ | www | ||||||||
ಯುಟ್ಯೂಬ್ ಮಾಹಿತಿ | |||||||||
ಗುಪ್ತನಾಮ | ವಿದ್ಯಾ ವೋಕ್ಸ್ | ||||||||
ಚಾನಲ್ | ವಿದ್ಯಾವೋಕ್ಸ್ | ||||||||
ಸಕ್ರಿಯ ಅವಧಿ | ೨೦೧೫ – ಪ್ರಸ್ತುತ | ||||||||
ಲೇಖನ |
| ||||||||
ಚಂದಾದಾರರು | ೭.೬೩ ಮಿಲಿಯನ್ | ||||||||
ಒಟ್ಟು ವೀಕ್ಷಿಸಿ | ೧,೧೭ ಬಿಲಿಯನ್ | ||||||||
ನೆಟ್ವರ್ಕ್ | ಸ್ಟುಡಿಯೋ೭೧ | ||||||||
ಸಹಾಯಕ ಕಲಾವಿದ | ಶಂಕರ್ ಟಕ್ಕರ್, ಅರ್ಜುನ್ | ||||||||
ಪ್ಲೇ ಬಟನ್
| |||||||||
ಚಂದಾದಾರರು ಮತ್ತು ಒಟ್ಟು ವೀಕ್ಷಣೆ ಎಣಿಕೆ ಫೆಬ್ರವರಿ ೨೫, ೨೦೨೪ ರ ವರೆಗೆ ಟಿಲ್। |
ವಿದ್ಯಾ ಅಯ್ಯರ್ (ಜನನ ಸೆಪ್ಟೆಂಬರ್ ೨೬, ೧೯೯೦), ಇವರು ವಿದ್ಯಾ ವೋಕ್ಸ್ ಹೆಸರಿನಿಂದ ಹೆಚ್ಚು ಪರಿಚಿತರು. ಇವರು ಒಬ್ಬ ಅಮೇರಿಕನ್ ಯೂಟ್ಯೂಬರ್ ಮತ್ತು ಗಾಯಕಿ.[೨] ಅವರು ಭಾರತದ ತಮಿಳುನಾಡಿನ ಚೆನ್ನೈನಲ್ಲಿ ಜನಿಸಿದರು. ಎಂಟನೇ ವಯಸ್ಸಿನಲ್ಲಿ ತಮ್ಮ ಕುಟುಂಬದೊಂದಿಗೆ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾಕ್ಕೆ ವಲಸೆ ಬಂದರು. ಎನ್‍ಬಿಸಿ ನ್ಯೂಸ್ ಪ್ರಕಾರ, ಆಕೆಯ ಸಂಗೀತವು "ಪಾಶ್ಚಿಮಾತ್ಯ ಪಾಪ್, ಎಲೆಕ್ಟ್ರಾನಿಕ್ ನೃತ್ಯ ಸಂಗೀತ, ಇವು ಬಾಲಿವುಡ್ ಹಿಟ್‌ಗಳು ಮತ್ತು ಭಾರತೀಯ ಶಾಸ್ತ್ರೀಯ ಸಂಗೀತದ ಮಿಶ್ರಣವಾಗಿದೆ. ಇವರು ಏಪ್ರಿಲ್ ೨೦೧೫ ರಲ್ಲಿ ತಮ ಚಾನಲ್ ಅನ್ನು ಪ್ರಾರಂಭಿಸಿದ ನಂತರ, ಅವರ ವೀಡಿಯೊಗಳು ೯೦೬ ಮಿಲಿಯನ್ ವೀಕ್ಷಣೆಗಳನ್ನು ಪಡೆದಿವೆ ಮತ್ತು ಅವರ ಚಾನಲ್ ೭ ಮಿಲಿಯನ್ ಚಂದಾದಾರರನ್ನು ಸಂಗ್ರಹಿಸಿದೆ.[೨][೩]
ಅಯ್ಯರ್ ಅವರು ಮದ್ರಾಸ್ (ಈಗಿನ ಚೆನ್ನೈ), ಭಾರತದ ತಮಿಳುನಾಡಿನ ತಮಿಳು ಕುಟುಂಬದಲ್ಲಿ ಜನಿಸಿದರಾದರೂ, ಇವರು ಬೆಳೆದಿದ್ದು ಎಲ್ಲಾ ಯುನೈಟೆಡ್ ಸ್ಟೇಟ್ಸ್‌ನ ವರ್ಜೀನಿಯಾದಲ್ಲಿಯೇ.[೪] ಅವರ ಕುಟುಂಬವು ಕೇರಳದ ಪಾಲಕ್ಕಾಡ್‌ನಿಂದ ಬಂದಿದೆ ಮತ್ತು ಅವರ ತಾಯಿ ಮತ್ತು ಅಜ್ಜಿ ಕೇರಳದಲ್ಲಿ ಬೆಳೆದವರು.[೫] ಅವರು ಮನೆಯಲ್ಲಿ ತಮಿಳು ಮಾತನಾಡುತ್ತಾರೆ, ೫ ನೇ ವಯಸ್ಸಿನಿಂದ ಕರ್ನಾಟಕ ಸಂಗೀತವನ್ನು ಕಲಿತರು ಮತ್ತು ಇಂಗ್ಲಿಷ್ ಸಂಗೀತವನ್ನು ಕೇಳಲು ಸಹ ಪ್ರಾರಂಭಿಸಿದರು. ಅವರು ಗುರುತಿನ ಬಿಕ್ಕಟ್ಟನ್ನು ಹೊಂದಿದ್ದಾಗಿ ಒಪ್ಪಿಕೊಂಡಳು, ಅವರವನ್ನು ಭಾರತೀಯ ಎಂದು ಬೆದರಿಸಲಾಯಿತು ಮತ್ತು ಇದರಿಂದಾಗಿ ತನ್ನ ಸಂಸ್ಕೃತಿಯನ್ನು ಮರೆಮಾಚಿದಳು, ಆದರೆ ತನ್ನ ಸಂಸ್ಕೃತಿಯ ಬಗ್ಗೆ "ಈಗ ಹೆಮ್ಮೆಪಡುತ್ತೇನೆ" ಎಂದು ಹೇಳಿದ್ದಾರೆ.[೪]
ಭಾರತೀಯ ಶಾಸ್ತ್ರೀಯ ಸಂಗೀತವನ್ನು ಮುಂದುವರಿಸಲು ಅವರು ತನ್ನ ಅಜ್ಜಿಯಿಂದ ಸ್ಫೂರ್ತಿ ಪಡೆದಳು. ಅವರು ಕಾಲೇಜಿನಲ್ಲಿ ತನ್ನ ಭಾರತೀಯ ಮೂಲದ ಬಗ್ಗೆ ವಿಶ್ವಾಸ ಹೊಂದಿದ್ದಳು. ಭಾರತೀಯ ವಿದ್ಯಾರ್ಥಿ ಸಂಘವನ್ನು ಮತ್ತು ಭಾರತೀಯ ಜಾನಪದ ನೃತ್ಯ ತಂಡಗಳಿಗೆ ಸೇರಿದಳು. ಅವರು ಜಾರ್ಜ್ ವಾಷಿಂಗ್ಟನ್ ವಿಶ್ವವಿದ್ಯಾನಿಲಯದಲ್ಲಿ ಮನೋವಿಜ್ಞಾನ ಮತ್ತು ಬಯೋಮೆಡಿಕಲ್ ವಿಜ್ಞಾನಗಳನ್ನು ಅಧ್ಯಯನ ಮಾಡಿದರು ಮತ್ತು ಜೈವಿಕ ವಿಜ್ಞಾನದಲ್ಲಿ ಬ್ಯಾಚುಲರ್ ಆಫ್ ಸೈನ್ಸ್ ಪದವಿಯನ್ನು ಪಡೆದರು. ಅವರು ಸಂಗೀತ ಕಲಿಯಲು ಎರಡು ವರ್ಷಗಳ ಕಾಲ ಭಾರತಕ್ಕೆ ತೆರಳಿದರು.[೨]
ಇವರೂಂದಿಗೆ ಸಹೋದರಿ ವಂದನಾ ಅಯ್ಯರ್ ಮತ್ತು ಅವರ ಗೆಳೆಯ ಶಂಕರ್ ಟಕ್ಕರ್ ಸಂಗೀತದಲ್ಲಿ ಸಹಕರಿಸಿದರು.[೨] ಅವರು ಭಾಂಗ್ರಾ ಮತ್ತು ಹಿಪ್ ಹಾಪ್ ನೃತ್ಯದಲ್ಲಿ ಭಾಗವಹಿಸಿದರು.[೨]
ತಾಳವಾದ್ಯ ವಾದಕ ಜೋಮಿ ಜಾರ್ಜ್ ಅವರೊಂದಿಗೆ ವಿದ್ಯಾ ಅಯ್ಯರ್ ಅವರು ಟಕ್ಕರ್ ಆಯೋಜಿಸಿದ ಬ್ಯಾಂಡ್‌ನಲ್ಲಿ ನಿರಂತರವಾಗಿ ಹಾಡಿದ್ದಾರೆ.[೬][೭] ಸೆಂಟರ್ ಫಾರ್ ದಿ ಪರ್ಫಾರ್ಮಿಂಗ್ ಆರ್ಟ್ಸ್ (ಭಾರತ) ಮತ್ತು ವೆಬ್‌ಸ್ಟರ್ ಹಾಲ್ ಸೇರಿದಂತೆ ಪ್ರಪಂಚದಾದ್ಯಂತದ ವಿವಿಧ ಸ್ಥಳಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಅವರು ಫೆಸ್ಟಿವಲ್ ಡೆಸ್ ಆರ್ಟೆಸ್‌ನ ರಿಯೂನಿಯನ್‌ನಲ್ಲಿ; ಐಎನಕೆ ಮಹಿಳೆಯರಿಗಾಗಿ; ಸುರಿನಾಮ್ ನಲ್ಲಿ; ದುಬೈ, ಯುಎಇನಲ್ಲಿ; ಮತ್ತು ನೆದರ್ನಲ್ಯಾಂಡ್ ನ ಮೇರು ಕನ್ಸರ್ಟ್ ಸರಣಿಯಲ್ಲಿ ಪ್ರದರ್ಶನ ನೀಡಿದ್ದಾರೆ[೮]
ಆಕೆಯ ಅತ್ಯಂತ ಜನಪ್ರಿಯ ಮ್ಯಾಶಪ್ "ಕ್ಲೋಸರ್ / ಕಬೀರಾ", ಚೈನ್ಸ್ಮೋಕರ್ಸ್ ಮತ್ತು ಕಬೀರಾ ಅವರ ಕ್ಲೋಸರ್ ಮ್ಯಾಶ್ ಅಪ್ ಬಾಲಿವುಡ್ ಚಲನಚಿತ್ರ ಯೇ ಜವಾನಿ ಹೈ ದೀವಾನಿಯಿಂದ ೭ ತಿಂಗಳುಗಳಲ್ಲಿ ೫೫ ಮಿಲಿಯನ್ ವೀಕ್ಷಣೆಗಳನ್ನು ಗಳಿಸಿತು. ಅವರ ಮ್ಯಾಶಪ್‌ಗಳಲ್ಲಿ ಒಂದಾದ "ಲೀನ್ ಆನ್" ಮತ್ತು "ಜಿಂದ್ ಮಾಹಿ", ಇದಕ್ಕಾಗಿ ಅವರು ರಿಕಿ ಜಟ್, ರಾಶಿ ಕುಲಕರ್ಣಿ ಮತ್ತು ರೋಗಿಂದರ್ "ವೈಲಿಂಡರ್" ಮೋಮಿ ಸೇರಿದಂತೆ ಹಲವಾರು ಇತರ ಸಂಗೀತಗಾರರ ಸಹಯೋಗವನ್ನು ಹೊಂದಿದ್ದರು.[೯] ಟಕ್ಕರ್ ಮತ್ತು ಸ್ವತಃ ಬರೆದ ಇಂಗ್ಲಿಷ್ ಹಾಡಿನ ಸಮ್ಮಿಲನದಿಂದ ಅವರು ಕೇರಳದ ಪ್ರಸಿದ್ಧ ದೋಣಿ ಗೀತೆ "ಕುಟ್ಟನಾದನ್ ಪುಂಜಾಯಿಲೆ" ಅನ್ನು ಬಿಡುಗಡೆ ಮಾಡಿದರು. ಈ ಹಾಡು ಶ್ರೀನಿಧಿ ಮತ್ತು ಶ್ರೀದೇವಿ ಅಭಿನಯದ ಮೋಹಿನಿಯಾಟ್ಟಂನೊಂದಿಗೆ ಕೇರಳದಲ್ಲಿ ಚಿತ್ರೀಕರಣಗೊಂಡಿದೆ. ೨೦೧೬ ರಲ್ಲಿ, ಶಂಕರ್ ಟಕ್ಕರ್ ಮತ್ತು ಅವರು ಬರೆದ ಇಪಿ, ಕುತು ಫೈರ್ ಅನ್ನು ಬಿಡುಗಡೆ ಮಾಡಿದರು. ಇದನ್ನು ಶಂಕರ್ ಟಕ್ಕರ್ ನಿರ್ಮಿಸಿದರು.[೧೦][೧೧][೧೨]