ವಿಲಾಸ್‍ರಾವ್ ದಗಡೋಜಿರಾವ್ ದೇಶ್‍ಮುಖ್ विलासराव दगडोजीराव देशमुख | |
---|---|
![]() | |
ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ | |
Assumed office ೧೨ ಜುಲೈ ೨೦೧೧ | |
President | ಪ್ರತಿಭಾ ಪಾಟೀಲ್ |
Prime Minister | ಮನಮೋಹನ್ ಸಿಂಗ್ |
Preceded by | ಪವನ್ ಕುಮಾರ್ ಬನ್ಸಲ್ |
ಭೂವಿಜ್ಞಾನ ಸಚಿವ | |
Assumed office ೧೨ ಜುಲೈ ೨೦೧೧ | |
Preceded by | ಪವನ್ ಕುಮಾರ್ ಬನ್ಸಲ್ |
ಮುಂಬಯಿ ಕ್ರಿಕೆಟ್ ಸಂಘ | |
Assumed office ೧೫ ಜುಲೈ ೨೦೧೧ | |
Preceded by | ಶರದ್ ಪವಾರ್ |
ಗ್ರಾಮೀಣ ಅಭಿವೃದ್ಧಿ ಸಚಿವ | |
In office ೧೯ ಜನವರಿ ೨೦೧೧ – ೧೨ ಜುಲೈ ೨೦೧೧ | |
Preceded by | ಸಿ. ಪಿ. ಜೋಷಿ |
Succeeded by | ಜೈರಾಮ್ ರಮೇಶ್ |
ಪಂಚಾಯತಿ ರಾಜ್ ಸಚಿವ | |
In office ೧೯ ಜನವರಿ ೨೦೧೧ – ೧೨ ಜುಲೈ ೨೦೧೧ | |
Preceded by | ಸಿ. ಪಿ. ಜೋಷಿ |
Succeeded by | ಕಿಶೋರ್ ಚಂದ್ರ ದಿಯೊ |
ಬೃಹತ್ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ ಸಚಿವ | |
In office ೨೮ ಮೇ ೨೦೦೯ – ೧೯ ಜನವರಿ ೨೦೧೧ | |
Preceded by | ಸಂತೋಷ್ ಮೋಹನ್ ದೇವ್ |
Succeeded by | ಪ್ರಫ಼ುಲ್ ಪಟೇಲ್ |
ಮಹಾರಾಷ್ಟ್ರದ ಮುಖ್ಯಮಂತ್ರಿ | |
In office ೭ ಸೆಪ್ಟೆಂಬರ್ ೨೦೦೪ – ೫ ಡಿಸೆಂಬರ್ ೨೦೦೮ | |
Preceded by | ಸುಶೀಲ್ ಕುಮಾರ್ ಶಿಂದೆ |
Succeeded by | ಅಶೋಕ್ ಚವಾಣ್ |
ಮಹಾರಾಷ್ಟ್ರದ ಮುಖ್ಯಮಂತ್ರಿ | |
In office ೧೮ ಅಕ್ಟೋಬರ್ ೧೯೯೯ – ೧೬ ಜನವರಿ ೨೦೦೩ | |
Preceded by | ನಾರಾಯಣ್ ರಾಣೆ |
Succeeded by | ಸುಶೀಲ್ ಕುಮಾರ್ ಶಿಂದೆ |
Personal details | |
Born | ಭಾರತ | 26 May 1945
Political party | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ |
Spouse | ವೈಶಾಲಿ ದೇಶ್‍ಮುಖ್ |
Children | ೩ |
Occupation | ವಕೀಲ |
ವಿಲಾಸ್‍ರಾವ್ ದಗಡೋಜೀರಾವ್ ದೇಶ್‍ಮುಖ್ ( ಮರಾಠಿ:विलासराव दगडोजीराव देशमुख ಜನನ ಮೇ ೨೬, ೧೯೪೫) ಭಾರತ ಸರ್ಕಾರದ ಈಗಿನ ಬೃಹತ್ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವರಾಗಿದ್ದಾರೆ.[೧] ಅವರು ಮಹಾರಾಷ್ಟ್ರವನ್ನು ಪ್ರತಿನಿಧಿಸುವ ರಾಜ್ಯಸಭಾ ಸದಸ್ಯರಾಗಿದ್ದಾರೆ. ಅವರು ಎರಡು ಬಾರಿ ಮಹಾರಾಷ್ಟ್ರದ ಮುಖ್ಯಮಂತ್ರಿಗಳಾಗಿದ್ದರು - ೧೯೯೯ರಿಂದ ೨೦೦೩ರವರೆಗೆ ಮತ್ತು ೨೦೦೪ರಿಂದ ೨೦೦೮ರವರೆಗೆ. ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಸದಸ್ಯರಾಗಿದ್ದು ಮೂಲತಃ ಮಹಾರಾಷ್ಟ್ರ ರಾಜ್ಯದ ದಮರಾಠ್‍ವಾಡಾ ಪ್ರದೇಶದ ಲಾತೂರ್ ಜಿಲ್ಲೆಯವರು.
ದೇಶ್ ಮುಖ್ ಮೇ ೨೬, ೧೯೪೫ರಂದು ಲಾತೂರ್ ಜಿಲ್ಲೆಯ ಬಭಲ್ ಗಾವ್ ನಲ್ಲಿ ಜನಿಸಿದರು. ಅವರು ಪೂನಾ ವಿಶ್ವವಿದ್ಯಾಲಯದ ಎಂ.ಇ.ಎಸ್. ಆಬಾಸಾಹೇಬ್ ಗರ್ವಾರೇ ಕಾಲೇಜಿನಿಂದ ವಿಜ್ಞಾನದ ಪದವಿಯಾದ ಬಿಎಸ್ಸಿಯನ್ನೂ, ಕಲೆಯ ಪದವಿಯಾದ ಬಿಎ ಅನ್ನೂ ಪಡೆದು, ನಂತರ (ಪೂನಾ ವಿಶ್ವವಿದ್ಯಾಲಯದ) ಐಎಲ್ಎಸ್ ಕಾನೂನು ಕಾಲೇಜ್‌ನಲ್ಲಿ ಓದು ಮುಂದುವರೆಸಿ ಎಲ್.ಎಲ್.ಬಿ ಪದವಿಯನ್ನೂ ಪಡೆದರು.[೨] ತಮ್ಮ ಚಿಗುರುಯೌವನದ ದಿನಗಳಲ್ಲೇ ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಇವರು ಬರ ಪರಿಹಾರಕ್ಕಾಗಿ ವಿಶೇಷ ಶ್ರಮ ವಹಿಸಿದರು. ೧೯೭೯ರಲ್ಲಿ ಅವರನ್ನು ಒಸಾಮಾಬಾದ್ ಜಿಲ್ಲೆಯ ಕೇಂದ್ರ ಸಹಕಾರಿ ಬ್ಯಾಂಕ್ ಹಾಗೂ ಮಹಾರಾಷ್ಟ್ರ ರಾಜ್ಯ ಸಹಕಾತಿ ಬ್ಯಾಂಕ್ ಗಳ ನಿರ್ದೇಶಕರನ್ನಾಗಿ ಚುನಾಯಿಸಲಾಯಿತು.[೨]
ವಿವಾಹಿತರಾದ ಇವರಿಗೆ ಹಾಗೂ ಇವರ ಪತ್ನಿಯಾದ ವೈಶಾಲಿ ದೇಶ್ ಮುಖ್ ರವರಿಗೆ ಲಾತೂರ್ ನಗರದ ಶಾಸಕರಾದ ಅಮಿತ್ ದೇಶ್ ಮುಖ್, ರಿತೇಶ್ ಮತ್ತು ಧೀರಜ್ ಎಂಬ ಮೂವರು ಪುತ್ರರಿದ್ದಾರೆ.[೨] ಮಗ ರಿತೇಶ್ ದೇಶ್ ಮುಖ್ ಬಾಲಿವುಡ್ ಚಿತ್ರರಂಗದ ಜನಪ್ರಿಯ ನಟರಾಗಿದ್ದಾರೆ.[೩]
ಇವರ ತಮ್ಮ ದಿಲೀಪ್ ರಾವ್ ದೇಶ್ ಮುಖ್ ಲೆಜಿಸ್ಲೇಟಿವ್ ಕೌನ್ಸಿಲ್ ನ ಸದಸ್ಯರಾಗಿ ಪರಿಹಾರ, ಪುನರ್ವಸತಿ, ಕ್ರೀಡೆ, ಯುವಕಲ್ಯಾಣ ಮತ್ತು ರಾಯಭಾರ ನಿಯಮ ಇಲಾಖೆಗಳ ಸಚಿವರಾಗಿ ಮಹಾರಾಷ್ಟ್ರ ಸರ್ಕಾರದ ಸೇವೆಗೈದಿದ್ದಾರೆ.[೪]
ಸಕ್ರಿಯ ರಾಜಕೀಯಕ್ಕೆ ಧುಮುಕಿದ ದೇಶ್ ಮುಖ್ ಬಭಲ್ ಗಾವ್ ಗ್ರಾಮ ಪಂಚಾಯತಿಯ ಸದಸ್ಯರಾಗಿ ೧೯೭೪ರಿಂದ ೧೯೭೯ರವರೆಗೂ ಸೇವೆ ಸಲ್ಲಿಸಿ, ೧೯೭೪ರಿಂದ ೧೯೭೬ರವರೆಗೂ ಅದರ ಸರಪಂಚ(ಗ್ರಾಮದ ಮುಖಂಡ)ರಾದರು. ೧೯೭೪ರಿಂದ ೧೯೮೦ರವರೆಗೂ ಅವರು ಒಸಾಮಾಬಾದ್ ಜಿಲ್ಲಾ ಪರಿಷದ್ ನ ಸದಸ್ಯರಾಗಿದ್ದರು ಮತ್ತು ಲಾತೂರ್ ತಾಲೂಕಾ ಪಂಚಾಯತ್ ಸಮಿತಿಯ ಉಪಾಧ್ಯಕ್ಷರಾಗಿದ್ದರು.[೨]
೧೯೭೫ರಿಂದ ೧೯೭೮ರವರೆಗೂ ಒಸಾಮಾದಾದ್ ಜಿಲ್ಲಾ ಯುವಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದ ಇವರು ಆ ಪಕ್ಷದ ಐದು ಅಂಶದ ಕಾರ್ಯಕ್ರಮವನ್ನು ಜಾರಿಗೆ ತರುವಲ್ಲಿ ಪ್ರವೃತ್ತರಾದರು. ಒಸಾಮಾಬಾದ್ ಜಿಲ್ಲೆಯ ಯುವಕರನ್ನು ಒಂದುಗೂಡಿಸಿದ ಇವರು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ನ ಆ ಜಿಲ್ಲೆಯ ವಿಭಾಗದ ಅಧ್ಯಕ್ಷರಾದರು.[೨]
೧೯೮೦, ೧೯೮೫ ಹಾಗೂ ೧೯೯೦ರ ಚುನಾವಣೆಗಳಲ್ಲಿ ಜಯಗಳಿಸಿದ ದೇಶ್ ಮುಖ್ ೧೯೮೦ರಿಂದ ೧೯೯೫ರವರೆಗೂ ಮಹಾರಾಷ್ಟ್ರ ಶಾಸನ ಸಭೆಯ ಸದಸ್ಯರಾಗಿದ್ದರು.[೫] ರಾಜ್ಯಸಚಿವ ಹಾಗೂ ಕ್ಯಾನಿನೆಟ್ ಸಚಿವರಾಗಿದ್ದ ಕಾಲದಲ್ಲಿ ಇವರು ಗೃಹಖಾತೆ, ಸಾಮಾನ್ಯ ಆಡಳಿತ, ಸಹಕಾರ, ಕಾಮಗಾರಿ, ಪ್ರವಾಸೋದ್ಯಮ, ಶಾಸನಸಭಾ ವಿಷಯಗಳು, ಸಾರಿಗೆ, ಕೃಷಿ, ಹೈನುಗಾರಿಕೆ, ಡೈರಿ ಅಭಿವೃದ್ಧಿ, ಮೀನುಗಾರಿಕೆ, ಕೈಗಾರಿಕೆ, ಗ್ರಾಮೀಣಾಭಿವೃದ್ಧಿ, ಶಿಕ್ಷಣ, ತಾಂತ್ರಿಕ ಶಿಕ್ಷಣ, ಕ್ರೀಡೆ ಮತ್ತು ಯುವಕಲ್ಯಾಣ ಇಲಾಖೆಗಳನ್ನು ನಿಭಾಯಿಸಿದರು.
೧೯೯೫ರ ಚುನಾವಣೆಗಳಲ್ಲಿ ಅವರು ೩೫,೦೦೦ ಮತಗಳಿಂದ ಪರಾಭವಗೊಂಡರು. ಸೆಪ್ಟೆಂಬರ್ ೧೯೯೯ರಲ್ಲಿ ನಡೆದ ಎರಡು ಸತತ ಚುನಾವಣೆಗಳಲ್ಲಿ ಮಹಾರಾಷ್ಟ್ರದ ಇತಿಹಾಸದಲ್ಲೇ ಅತಿ ಹೆಚ್ಚು ಮತಗಳ ಅಂತರವಾದ ೯೧,೦೦೦ ಮತಗಳ ಅಂತರದಿಂದ ಜಯಗಳಿಸಿದ ಇವರು ಮತ್ತೆ ಲಾತೂರ್ ಕ್ಷೇತ್ರದಿಂದ ರಾಜ್ಯಸಚಿವರಾಗಿ ಚುನಾಯಿತರಾದರು. ಅಕ್ಟೋಬರ್ ೧೮, ೧೯೯೯ರಂದು ದೇಶ್ ಮುಕ್ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಪ್ರಮಾಣವಚಮ ಸ್ವೀಕರಿಸಿದರು. ಜನವರಿ ೧೭, ೨೦೦೩ರವರೆಗೂ ಮುಖ್ಯಮಂತ್ರಿಯಾಗಿದ್ದ ಇವರು ರಾಜ್ಯದ ಕಾಂಗ್ರೆಸ್ ಪಕ್ಷದಲ್ಲಿನ ಭಿನ್ನಮತಕ್ಕೆ ಮಣಿದು ಕಾಂಗ್ರೆಸ್ ನ ಪ್ರಮುಖ ದಲಿತ ಸದಸ್ಯರಾದ ಸುಶೀಲ್ ಕುಮಾರ್ ಶಿಂಧೆಯವರಿಗೆ ಜನವರಿ 2003ರಲ್ಲಿ ತಮ್ಮ ಮುಖ್ಯಮಂತ್ರಿಪದವನ್ನು ಬಿಟ್ಟುಕೊಡಬೇಕಾಯಿತು.
ಅಕ್ಟೋಬರ್ ೨೦೦೪ರಲ್ಲಿ ನಡೆದ ಚುನಾವಣೆಗಳಲ್ಲಿ ಲಾತೂರ್ ಕ್ಷೇತ್ರದಿಂದ ಅವರು ಮತ್ತೆ ರಾಜ್ಯ ಶಾಸಕಾಂಗ ಸಭೆಗೆ ಆರಿಸಲ್ಪಟ್ಟರು.[೫]
1982ರಿಂದ 1995ರವರೆಗಿನ ಅವಧಿಯಲ್ಲಿ ಮಹಾರಾಷ್ಟ್ರದ ವಿವಿಧ ಮಂತ್ರಿಮಂಡಲಗಳಲ್ಲಿ ಮಂತ್ರಿಯಾಗಿ ಇವರು ಹಣಕಾಸು, ಸಹಕಾರ, ಕೃಷಿ, ಗೃಹ, ಕೈಗಾರಿಕೆ ಮತ್ತು ಶಿಕ್ಷಣ ಖಾತೆಗಳಲ್ಲಿ ಸಚಿವರಾಗಿದ್ದರು.[೨]
ನವೆಂಬರ್ ೧, ೨೦೦೪ರಂದು ಅವರು ಎರಡನೆಯ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚಚನ ಸ್ವೀಕರಿಸಿದರು.[೬][೭] ನವೆಂಬರ್ 2008ರಲ್ಲಿ ಮುಂಬಯಿ ಮೇಲೆ ನಡೆದ ಉಗ್ರರ ಧಾಳಿಯ ಪರಿಣಾಮವಾಗಿ ದೇಶ್ ಮುಖ್ ಡಿಸೆಂಬರ್ ೨, ೨೦೦೮ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು.[೮]
ನಂತರ ರಾಜ್ಯಸಭೆಯನ್ನು ಸೇರಿದ ಇವರನ್ನು ಸಚಿವಸಂಪುಟದಲ್ಲಿ ಬೃಹತ್ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವರಾಗಿ ಪ್ರಧಾನಿ ಮನಮೋಹನ್ ಸಿಂಗ್ ಮೇ ೨೮, ೨೦೦೯ರಂದು ನಿಯಮಿಸಿದರು.[೯]
ಸಹಕಾರ ಯೋಜನೆಗಳನ್ನು ಮತ್ತು ಕೃಷಿ ಅಭಿವೃದ್ಧಿ ವಿಧಾನಗಳನ್ನು ಅಧ್ಯಯನ ಮಾಡುವ ಸಲುವಾಗಿ ದೇಶ್ ಮುಖ್ ರಿಗೆ ೧೯೮೦ರಲ್ಲಿ ಆಮ್ಸ್ಟರ್ ಡ್ಯಾಮ್, ನೆದರ್ ಲ್ಯಾಂಡ್, ಜಪಾನ್, ಥೈಲ್ಯಾಂಡ್, ಫಿಲಿಫೈನ್ಸ್, ತೈವಾನ್ ಮತ್ತು ಹಾಂಗ್ ಕಾಂಗ್ ಗಳಿಗೆ ಭೇಟಿ ನೀಡುವ ಅವಕಾಶ ದೊರಕಿತು. ೧೯೮೧ರಲ್ಲಿ ಅವರು ಜರ್ಮನಿ, ಫ್ರಾನ್ಸ್, ಇಂಗ್ಲೆಂಡ್, ಯುನೈಟೆಡ್ ಸ್ಟೇಟ್ಸ್ ಮತ್ತು ಜಪಾನ್ ಗಳ ಪ್ರವಾಸ ಕೈಗೊಂಡರು.[೨] ೨೦೦೦ದಲ್ಲಿ ಮುಖ್ಯಮಂತ್ರಿಯಾಗಿದ್ದ ಇವರು ಬಂಡವಾಳ ಹೂಡಿಕೆದಾರರೊಡನೆ ಚರ್ಚಿಸಿ, ಮಹಾರಾಷ್ಟ್ರದ ವಿವಿಧ ಯೋಜನೆಗಳಿಗೆ ಬಂಡವಾಳ ಹೂಡುವವರನ್ನು ಆಕರ್ಷಿಸುವ ಸಲುವಾಗಿ ಒಂದು ಅಧಿಕೃತ ಪ್ರತಿನಿಧಿಗಳ ತಂಡದ ಮುಖಂಡರಾಗಿ ಅಮೆರಿಕ, ಯು.ಕೆ.ಗಳಿಗೆ ಪ್ರಯಾಣ ಮಾಡಿ ನ್ಯೂ ಯಾರ್ಕ್, ಲಾಸ್ ಏಂಜಲೀಸ್, ಸ್ಯಾನ್ ಜೋಸ್, ವಾಷಿಂಗ್ಟನ್ ಮತ್ತು ಲಂಡನ್ ನಗರಗಳಿಗೆ ಭೇಟಿಯಿತ್ತರು.
ಏಪ್ರಿಲ್ ೧೯೯೫ರಿಂದ ಅಕ್ಟೋಬರ್ ೧೭, ೧೯೯೯ರವರೆಗೂ ವಿಲಾಸ್ ರಾವ್ ಮಾಂಜ್ರಾ ಸಹಕಾರಿ ಸಕ್ಕರೆ ಕಾರ್ಖಾನೆಯ ವಿಸ್ತರಣಾಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ೧೯೯೪-೯೫ ಮತ್ತು ೧೯೯೭-೯೮ರಲ್ಲಿ ಬೃಹತ್ ಪ್ರಮಾಣದಲ್ಲಿ ಕಬ್ಬನ್ನು ಹಿಂಡುವುದರ ಮೂಲಕ ಈ ಕಾರ್ಖಾನೆಯು ವಿಶ್ವ ದಾಖಲೆಯನ್ನೇ ನಿರ್ಮಿಸಿತು.[ಸೂಕ್ತ ಉಲ್ಲೇಖನ ಬೇಕು] ಉತ್ಪಾದನೆ ಮತ್ತು ಆಡಳಿತ ಕ್ಷೇತ್ರಗಳಲ್ಲಿ ಉತ್ಕೃಷ್ಟತೆಯನ್ನು ಹೊಂದಿರುವ ಕಾರಣಕ್ಕಾಗಿ ಈ ಕಾರ್ಖಾನೆಯು ರಾಷ್ಟ್ರೀಯ ಮತ್ತು ಅಂತರರಾಷ್ಟರೀಯ ಮಟ್ಟದಲ್ಲಿ ೩೪ ಪ್ರಶಸ್ತಿಗಳನ್ನು ಪಡೆದಿದೆ.[ಸೂಕ್ತ ಉಲ್ಲೇಖನ ಬೇಕು]
ದೇಶ್ ಮುಖ್ ಮುಂಬಯಿ ಮತ್ತು ಲಾತೂರ್ ಗಳಲ್ಲಿ ಹಲವಾರು ಕಾಲೇಜುಗಳನ್ನು ನಡೆಸುವಂತಹ ಮಾಂಜ್ರಾ ಚಾರಿಟೆಬಲ್ ಟ್ರಸ್ಟ್ ಅನ್ನು ಸ್ಥಾಪಿಸಿದರು. ಆ ಸಂಸ್ಥೆ ನಡೆಸುವ ಕೆಲವು ಶಿಕ್ಷಣ ಸಂಸ್ಥೆಗಳೆಂದರೆ ಲಾತೂರ್ ನ ಮಾಂಜ್ರಾ ಆಯುರ್ವೇದಿಕ್ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ, ಮುಂಬಯಿ[೧೦] ನಲ್ಲಿರುವ ವೆರ್ಸೋವಾ ಮತ್ತು ಅಂಧೇರಿಗಳಲ್ಲಿನ ರಾಜೀವ್ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ನವೀ ಮುಂಬಯಿನ ಐರೋಲಿಯಲ್ಲಿರುವ ಸುಶೀಲಾದೇವಿ ದೇಶ್ ಮುಖ್ ವಿದ್ಯಾಲಯ.
ಅವರ ದೂರದೃಷ್ಟಿಯ ಪರಿಣಾಮವಾಗಿ ಮಾಂಜ್ರಾ ಪ್ರಾಂತ್ಯದಲ್ಲಿ ವಾಸಿಸುತ್ತಿರುವ ಪ್ರತಿ ರೈತನೂ "ಸಮೃದ್ಧ"ನಾದನು. ಲಾತೂರ್ ಜಿಲ್ಲೆಯಲ್ಲಿ ಸಂದ ಸಕಲ ಅಭಿವೃದ್ಧಿಯ ಶ್ರೇಯವೂ ದೇಶ್ ಮುಖ್ ರಿಗೇ ಸಲ್ಲುತ್ತದೆ.
ಓದು, ಶಾಸ್ತ್ರೀಯ ಸಂಗೀತ, ವಾಲಿಬಾಲ್ ಮತ್ತು ಟೆನಿಸ್ ಇವರಿಗೆ ಪ್ರಿಯವಾದ ವಿಷಯಗಳು.[೨]
ದೇಶ್ ಮುಖ್ ರು ಮುಂಬಯಿ ಕ್ರಿಕೆಟ್ ಅಸೋಸಿಯೇಷನ್ನಿನ (೨೦೦೯-೨೦೧೧)ಉಪಾಧ್ಯಕ್ಷರ ಹುದ್ದೆಗಾಗಿ ಜುಲೈ ೧೦, ೨೦೦೯ರಂದು ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು.[೧೧]
{{cite web}}
: Check date values in: |accessdate=
(help)