ವಿಶ್ಲೇಷಣಾತ್ಮಕ ಪತ್ರಿಕೋದ್ಯಮ ಅಥವಾ ವಿಶ್ಲೇಷಣಾತ್ಮಕ ವರದಿಗಾರಿಕೆಗೆ ಪತ್ರಕರ್ತ ಸುದ್ದಿಗೆ ಸಂಬಂಧಿಸಿದ ಮೂಲ ಸಂಗತಿಗಳನ್ನು ಮೀರಿ ಹೆಚ್ಚು ಆಳವಾದ ಸುದ್ದಿ ಪ್ರಸಾರವನ್ನು ಒದಗಿಸುವ ಅಗತ್ಯವಿದೆ. ಆಧುನಿಕ ಜಗತ್ತಿನಲ್ಲಿ, ವಿಶ್ಲೇಷಣಾತ್ಮಕ ಪತ್ರಿಕೋದ್ಯಮವು ಪತ್ರಿಕೋದ್ಯಮದ ಇತರ ಪ್ರಕಾರಗಳಿಗೆ ಹೋಲುವುದರಿಂದ ನಿಜವಾದ ವಿವರಣಾತ್ಮಕ ಪತ್ರಿಕೋದ್ಯಮದ ಕಾರ್ಯಾಚರಣೆಯು ಹೆಚ್ಚಾಗಿ ಮಸುಕಾಗುತ್ತದೆ.[೧] ವಿಶ್ಲೇಷಣಾತ್ಮಕ ಪತ್ರಕರ್ತರು ಅವರು ಏನನ್ನು ವರದಿ ಮಾಡುತ್ತಿದ್ದಾರೆ ಎಂಬುದನ್ನು ವಿವರಿಸುವ ವ್ಯವಸ್ಥೆಗಳು, ತಾರ್ಕಿಕತೆ ಮತ್ತು ಅದರ ಪ್ರಭಾವವನ್ನು ಅರಿತಿರಬೇಕು. ಅವರು ತಮ್ಮ ವರದಿಯ ವಿಷಯದ ಬಗ್ಗೆ ಸೂಕ್ಷ್ಮವಾದ ಅರಿವು ಮತ್ತು ಗ್ರಹಿಕೆಯನ್ನು ಹೊಂದಿರಬೇಕು. [೨]
ಉತ್ತಮ ವರದಿಗಾರಿಕೆ ಅಗತ್ಯವಿರುವ ಲೇಖನಗಳು, ಪ್ರಬಲ ಚಿಂತನೆಯ ತುಣುಕುಗಳು ಮತ್ತು ಉತ್ತಮ ತನಿಖಾ ವರದಿಗಾರಿಕೆಯ ಕ್ಷೇತ್ರಕ್ಕೆ ವಿಶ್ಲೇಷಣಾತ್ಮಕ ಪತ್ರಿಕೋದ್ಯಮದ ಅತ್ಯಗತ್ಯ ಕಂಡುಬರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ, ಪತ್ರಕರ್ತರು ಬ್ರೇಕಿಂಗ್ ನ್ಯೂಸ್ ಮತ್ತು ವೀಕ್ಷಕರನ್ನು ವೇಗವಾಗಿ ಪಡೆಯುವ ಮಾರ್ಗಗಳನ್ನು ತಿಳಿದುಕೊಂಡಿರುವುದರಿಂದ, ಪತ್ರಕರ್ತರು ಮತ್ತು ಓದುಗರು ಸಾಂಪ್ರದಾಯಿಕ ದೀರ್ಘ-ರೂಪದ ವಿವರಣಾತ್ಮಕ ವರದಿಗಾಗಿ ಸಮಯವನ್ನು ಕೊಡುವುದಿಲ್ಲ.[೩]
ಕರ್ಟಿಸ್ ಡಿ. ಮ್ಯಾಕ್‌ಡೊಂಗಲ್ ಅವರು ತಮ್ಮಇಂಟಪ್ರಿಟೀಟೆವ್ ರಿಪೋರ್ಟಿಂಗ್ ಎನ್ನುವ ಪುಸ್ತಕದಲ್ಲಿ(೧೯೩೮), ಮೊದಲನೆಯ ಮಹಾಯುದ್ಧದ ಆರಂಭದಲ್ಲಿ ಹೆಚ್ಚಿನ ಅಮೆರಿಕನ್ನರು ಯುದ್ಧದ ಕುರಿತು ಆಶ್ಚರ್ಯಚಕಿತರಾದರು ಮತ್ತು ಅದು ಏಕೆ ಪ್ರಾರಂಭವಾಯಿತು ಎಂಬುದನ್ನು ಅರ್ಥಮಾಡಿಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ. ನಂತರ ಇದು ವರದಿ ಮಾಡುವ ಶೈಲಿಯಲ್ಲಿ ಬದಲಾವಣೆಗೆ ಕಾರಣವಾಯಿತು ಎಂದು ಬರೆದಿದ್ದಾರೆ..
೧೯೨೦ರ ದಶಕದಲ್ಲಿ ಮಹಾ ಆರ್ಥಿಕ ಕುಸಿತ ಮತ್ತು ಜಾಗತಿಕ ಸ್ಥಿರತೆಗೆ ನಾಜಿ ಪಕ್ಷದಿಂದ ಇದ್ದ ಬೆದರಿಕೆಯಂತಹ ಘಟನೆಗಳು, ಪ್ರೇಕ್ಷಕರು ಇನ್ನು ಮುಂದೆ ಪತ್ರಿಕೋದ್ಯಮದ ಐದು ಡಬ್ಲ್ಯು ಗಳೊಂದಿಗೆ ತೃಪ್ತರಾಗದಿರಲು ಕಾರಣವಾಯಿತು. ೧೯೨೩ರಲ್ಲಿ, ಸುದ್ದಿಗಳ ಬಗ್ಗೆ ಹೆಚ್ಚು ವಿಶ್ಲೇಷಣಾತ್ಮಕ ವ್ಯಾಖ್ಯಾನವನ್ನು ಓದುಗರಿಗೆ ಒದಗಿಸುವ ಮೊದಲ ಪ್ರಮುಖ ಪ್ರಕಟಣೆಯಾಗಿ ಟೈಮ್ ನಿಯತಕಾಲಿಕವು ಪ್ರಾರಂಭವಾಯಿತು. ಅನೇಕ ಪತ್ರಿಕೆಗಳು ಹೊಸ ರೀತಿಯ ವರದಿಗಾರಿಕೆಯೊಂದಿಗೆ ಪ್ರತಿಕ್ರಿಯಿಸಿದವು ಅದು ವಿವರಣಾತ್ಮಕ ಪತ್ರಿಕೋದ್ಯಮ ಎಂದು ಹೆಸರಾಯಿತು.[೫]
ವಿಶ್ಲೇಷಣಾತ್ಮಕ ವರದಿಗಾರಿಕೆಯ, ಹೊಸ ಪತ್ರಿಕೋದ್ಯಮ, ಕ್ರಿಯಾವಾದ ಮತ್ತು ವಕಾಲತ್ತು ಪತ್ರಿಕೋದ್ಯಮ ಮತ್ತು ಪ್ರತಿಕೂಲ ಪತ್ರಿಕೋದ್ಯಮ ಹಾಗೂ ತನಿಖಾ ಪತ್ರಿಕೋದ್ಯಮ ಎಂಬ ಇತರ ವಿಭಾಗಗಳು ಪತ್ರಿಕೋದ್ಯಮದಲ್ಲಿ ಹಲವಾರು ಬದಲಾವಣೆಗಳನ್ನು ತಂದಿತು.