ವೀರ ಕನ್ನಡಿಗ (ಚಲನಚಿತ್ರ)

ವೀರ ಕನ್ನಡಿಗ
ನಿರ್ದೇಶನಮೆಹೆರ್ ರಮೇಶ್
ನಿರ್ಮಾಪಕಕೆ.ಎಸ್‌. ರಾಮ ರಾವ್‌
ಕೆ.ಎ. ವಲ್ಲಭ
ಲೇಖಕಪುರಿ ಜಗನ್ನಾಥ್‌
ಪಾತ್ರವರ್ಗಪುನೀತ್ ರಾಜ್‌ಕುಮಾರ್
ಅನಿತಾ ಹಾಸನಂದನಿ
ಸಂಗೀತಚಕ್ರಿ
ಬಿಡುಗಡೆಯಾಗಿದ್ದು೦೧ ಜನವರಿ ೨೦೦೪
ದೇಶಭಾರತ
ಭಾಷೆಕನ್ನಡ

"ವೀರ ಕನ್ನಡಿಗ" ೨೦೦೪ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರವಾಗಿದೆ. ಮೆಹೆರ್ ರಮೇಶ್ ನಿರ್ದೇಶನದ ಈ ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಮತ್ತು ಅನಿತಾ ಹಸನಂದಾನಿ, ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವು "ಆಂದ್ರವಾಲ" ಎಂಬ ಹೆಸರಿನಲ್ಲಿ ಕನ್ನಡದೊಂದಿಗೆ ಏಕಕಾಲದಲ್ಲಿ ಚಿತ್ರೀಕೃತಗೊಂಡಿತು. ಕನ್ನಡದಲ್ಲಿ ಪುನೀತ್ ರಾಜ್‌ಕುಮಾರ್‌ ಅಭಿನಯಿಸಿದ ಪಾತ್ರವನ್ನು ಜೂನಿಯರ್ ಎನ್ಟಿಆರ್ ತೆಲುಗಿನಲ್ಲಿ ನಿಭಾಯಿಸಿದ್ದಾರೆ."ವೀರ ಕನ್ನಡಿಗ" ಚಲನಚಿತ್ರವು ವಾಣಿಜ್ಯಿಕವಾಗಿ ಯಶಸ್ವಿಯಾಯಿತು.[][]

ಕಥಾ ಸಾರಾಂಶ

[ಬದಲಾಯಿಸಿ]

ಮುಂಬೈ ಕೊಳೆಗೇರಿಯ ನಿವಾಸಿಗಳನ್ನು ಸದಾ ಸುರಕ್ಷಿತವಾಗಿ ಇಡುವ ಧ್ಯೇಯ ಹೊಂದಿರುವ ನಾಯಕ. ಅಲ್ಲಿನ ನಿವಾಸಿಗಳಿಗಾಗಿ ಶ್ರೇಯಕ್ಕಾಗಿ ಸದಾ ಶ್ರಮಿಸುತ್ತ ಇರುತ್ತಾನೆ. ಜೊತೆಗೆ ಆತ ತನ್ನ ತಂದೆಯ ಸಾವಿಗೆ ಕಾರಣರಾದವರನ್ನು ಸೇಡು ತೀರಿಸಿಕೊಳ್ಳುವ ಗುರಿಯನ್ನೂ ಹೊಂದಿದ್ದಾನೆ. ಆ ಗುರಿಯನ್ನು ತಲುಪುದರಲ್ಲಿ ನಾಯಕನು ಅಂತಿಮವಾಗಿ ಯಶಸ್ವಿಯಾಗುವನು.

ಪಾತ್ರವರ್ಗ

[ಬದಲಾಯಿಸಿ]

ನಿರ್ಮಾಣ ಮತ್ತು ಬಿಡುಗಡೆ

[ಬದಲಾಯಿಸಿ]

ನಿರ್ದೇಶಕ ಪುರಿ ಜಗನ್ನಾಥ್‌ಗೆ ಸಹಾಯಕ ನಿರ್ದೇಶಕರಾಗಿದ್ದ ಮೆಹರ್ ರಮೇಶ್ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದರು.[] ವೀರ ಕನ್ನಡಿಗ ಚಲನಚಿತ್ರದ ಚಿತ್ರಿಕರಣವು ೨೨ ಆಗಸ್ಟ್ ೨೦೦೩ರಂದು ಪ್ರಾರಂಭವಾಯಿತು ಮತ್ತು ಡಿಸೆಂಬರ್ ೨೫ ಕ್ಕೆ ಪೂರ್ಣಗೊಂಡಿತು. ಜನವರಿ ೨ ೨೦೦೪ರಂದು ಚಿತ್ರ ಚಲನಚಿತ್ರ ಮಂದಿರಗಳಲ್ಲಿ ಬಿಡುಗಡೆಗೊಂಡಿತು.[] The movie completed 100 days.[]


ಹಾಡುಗಳು

[ಬದಲಾಯಿಸಿ]

ಈ ಚಿತ್ರದ ಸಂಗೀತ ಸಂಯೋಜನೆಯು ಚಕ್ರಿಯವರದ್ದಾಗಿದೆ.

ಸಂ.ಹಾಡುSinger(s)ಸಮಯ
1."ಅಡ್ಡದಲ್ಲಿ ಕಿಂಗು ನಾನು"ಶಂಕರ್‌ ಮಹಾದೇವನ್, ಕೌಸಲ್ಯ 
2."ಜೀವ ಕನ್ನಡ ದೇಹ ಕನ್ನಡ"ಶಂಕರ್‌ ಮಹಾದೇವನ್ 
3."ಮಸ್ತು ಹುಡುಗಿಯೆ"ಚಕ್ರಿ, ಕೌಸಲ್ಯ 
4."ನೈರೆ ನೈರೆ"ಪುನೀತ್ ರಾಜ್‌ಕುಮಾರ್ 
5."ಸೈ ಸೈ ಮೊನಾಲಿಸಾ"ರವಿ ವರ್ಮ, ಕೌಸಲ್ಯ 
6."ಸಿಕ್ಕು ಸಿಕ್ಕು ಸುಂದರಿ"ಚಕ್ರಿ,ಕೌಸಲ್ಯ 

ಉಲ್ಲೇಖಗಳು

[ಬದಲಾಯಿಸಿ]
  1. "Veera Kannadiga (2004) | Veera Kannadiga Movie | Veera Kannadiga Kannada Movie Cast & Crew, Release Date, Review, Photos, Videos". FilmiBeat (in ಇಂಗ್ಲಿಷ್). Retrieved 2019-03-10.
  2. ೨.೦ ೨.೧ "Meticulous planning in Sandalwood amazes Anita Hassanandani". The Times of India (in ಇಂಗ್ಲಿಷ್). Retrieved 2019-03-10.
  3. "Meher Ramesh - Telugu Cinema interview - Telugu film director".
  4. Prasad, Sujyothi N. (4 January 2004). "Veera Kannadiga - Kannada (Nanda, Nartaki, Balaji)". Deccan Herald. Archived from the original on 29 June 2004. Retrieved 23 November 2021.
  5. "ಆರ್ಕೈವ್ ನಕಲು". Archived from the original on 2022-04-09. Retrieved 2022-07-01.