ವೀರೇಂದ್ರ ಪಾಟೀಲ್

ವೀರೇಂದ್ರ ಪಾಟೀಲ್
ಕರ್ನಾಟಕದ ಏಳನೆಯ ಮುಖ್ಯಮಂತ್ರಿ
In office
29 May 1968 – 18 March 1971
Governorಧರ್ಮ ವೀರ
Preceded byಎಸ್.ನಿಜಲಿಂಗಪ್ಪ
Succeeded byಡಿ.ದೇವರಾಜ ಆರಸ್
In office
30 November 1989 – 10 October 1990
Governorಪಿ.ವೆಂಕಟಸುಬ್ಬಯ್ಯ
ಭಾನು ಪ್ರತಾಮ್ ಸಿಂಗ್
Preceded byಎಸ್.ಆರ್.ಬೊಮ್ಮಾಯಿ
Succeeded byಎಸ್.ಬಂಗಾರಪ್ಪ
Member of the ಭಾರತೀಯ Parliament
for ಗುಲ್ಪರ್ಗ
In office
1984–1989
Preceded byಎನ್.ಧರಮ್ ಸಿಂಗ್
Succeeded byಬಿ.ಜಿ.ಜವಳಿ
Personal details
Born1924
ಚಿಂಚೋಳಿ, ಗುಲ್ಬರ್ಗ
Diedಮಾರ್ಚ್ 14, 1997(1997-03-14)
Political partyINC
Childrenಕೈಲಾಶನಾಥ್ ಪಾಟೀಲ್[]

ವೀರೇಂದ್ರ ಪಾಟೀಲ್ (1924-1997) ಹಿರಿಯ ಭಾರತೀಯ ರಾಜಕಾರಣಿ ಮತ್ತು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು.ಅವರು (1968-1971) ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದರು.18 ವರ್ಷಗಳ ನಂತರ ಎರಡನೇ ಬಾರಿಗೆ (1989-1990) ರವರೆಗೆ ಮುಖ್ಯಮಂತ್ರಿಯಾಗಿದ್ದರು.

ಬಾಲ್ಯ

[ಬದಲಾಯಿಸಿ]

ಗುಲ್ಬರ್ಗ ಜಿಲ್ಲೆಯ ಚಿಂಚೋಳಿ ತಾಲೂಕಿನ ಒಂದು ಮಧ್ಯಮ ವರ್ಗದ ಕುಟುಂಬದಲ್ಲಿ ಫೆಬ್ರವರಿ 28, 1924 ರಲ್ಲಿ ಜನಿಸಿದರು.ಗುಲ್ಬರ್ಗ ಸರ್ಕಾರಿ ಪ್ರೌಢಶಾಲೆ,ವಿವೇಕ್-ವರ್ಧಿನೀ ಸ್ಕೂಲ್ ಹೈದರಾಬಾದ್ ಮತ್ತು ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಬಿಎ ಎಲ್ಎಲ್ ಬಿ ಶಿಕ್ಷಣ ಪಡೆದಿದ್ದಾರೆ.[]

ರಾಜಕೀಯ

[ಬದಲಾಯಿಸಿ]

ಅವರು 1957 ರಲ್ಲಿ ಎಸ್ ನಿಜಲಿಂಗಪ್ಪ ಸರ್ಕಾರದಲ್ಲಿ ಮಂತ್ರಿಯಾಗಿ ಕೆಲಸ ಮಾಡಿದರು ಚಿಂಚೋಳಿ[] ವಿಧಾನ ಸಭಾ ಕ್ಷೇತ್ರದಿಂದ ೩ ಸಲ ಆಯ್ಕೆಯಾಗಿದ್ದರು,ಒಂದೊಂದು ಬಾರಿ ಗುಲ್ಬರ್ಗಾ ಮತ್ತು ಬಾಗಲಕೋಟೆ ಸಂಸದರಾಗಿ ಆಯ್ಕೆಯಾಗಿದ್ದರು.[]

  • ಹೈದರಾಬಾದ್ ವಿಧಾನ ಸಭೆ 1952-56
  • ಮೈಸೂರು (ಈಗಿನ ಕರ್ನಾಟಕ) ವಿಧಾನ ಸಭೆಯಲ್ಲಿ 1957-71,
  • ರಾಜ್ಯ ಸಭೆ ಸದಸ್ಯರು, 1972-78;
  • ಏಳನೆ ಲೋಕಸಭಾ ಸದಸ್ಯರು 1980-84;
  • ಯುಎಸ್ಎಸ್ಆರ್ ಭಾರತೀಯ ನಿಯೋಗ ಸದಸ್ಯರು 1965
  • ಸಂಸದೀಯ ನಿಯೋಗ ಜರ್ಮನಿ ಸದಸ್ಯರು , 1973 .
  • ಗೃಹ ಮತ್ತು ಕೈಗಾರಿಕಾ ಉಪ ಮಂತ್ರಿ,-ಮೈಸೂರು ಸರ್ಕಾರ 1961-62
  • ಲೋಕೋಪಯೋಗಿ ಮತ್ತು ಸಾರಿಗೆ ಮಂತ್ರಿ; ಮೈಸೂರು ಸರ್ಕಾರ 1962-68 .
  • ಮೈಸೂರು ರಾಜ್ಯದ ಮುಖ್ಯಮಂತ್ರಿಯಾಗಿ, 1968-ಮಾರ್ಚ್ ರಿಂದ 1971.
  • ಕೇಂದ್ರ ಪೆಟ್ರೊಲಿಯಂ ಮತ್ತು ರಾಸಾಯನಿಕ ಸಚಿವ , ಮಾರ್ಚ್ 1980-ಸೆಪ್ಟೆಂಬರ್, 1980 .
  • ಕೇಂದ್ರ ಶಿಪ್ಪಿಂಗ್ ಮತ್ತು ಸಾರಿಗೆ ಸಚಿವ ಸೆಪ್ಟೆಂಬರ್, 1980-ಸೆಪ್ಟೆಂಬರ್ 82;
  • ಕೇಂದ್ರ ಲೇಬರ್ ಮತ್ತು ಪುನರ್ವಸತಿ ಸಚಿವ 1982-1984.
  • ಕೆಮಿಕಲ್ಸ್ ಆಂಡ್ ಫರ್ಟಿಲೈಸರ್ಸ್ & ಇಂಡಸ್ಟ್ರಿ ಮತ್ತು ಕಂಪನಿ ವ್ಯವಹಾರಗಳ ಹೆಚ್ಚುವರಿ ಚಾರ್ಜ್ ಸಚಿವ 1984
  • ಕಾರ್ಯದರ್ಶಿ, ತಾಲೂಕು ಕಾಂಗ್ರೆಸ್ ಸಮಿತಿ ಚಿಂಚೋಳಿ 1950-52.
  • ಪ್ರಧಾನ ಕಾರ್ಯದರ್ಶಿ, ಹೈದರಾಬಾದ್ ಪ್ರದೇಶ ಕಾಂಗ್ರೆಸ್ 1955-56;
  • ಎಂಟನೆ ಲೋಕಸಭಾ ಸದಸ್ಯರು ಬಾಗಲಕೋಟೆ 1980-84;[]

ವಿದೇಶ ಪ್ರವಾಸ

[ಬದಲಾಯಿಸಿ]
  • ಯು.ಎಸ್.ಎಸ್.ಆರ್,
  • ಆಸ್ಟ್ರೇಲಿಯಾ,
  • ಜಪಾನ್,
  • ಸಿಂಗಾಪುರ,
  • ಜರ್ಮನಿ,
  • ಇಟಲಿ,
  • ಆಸ್ಟ್ರೇಲಿಯಾ
  • ಸ್ವಿಜರ್ಲ್ಯಾಂಡ್
  • U.S.A.
  • ಕೆನಡಾ
  • ಐರ್ಲೆಂಡ್.

ಉಲ್ಲೇಖಗಳು

[ಬದಲಾಯಿಸಿ]
  1. http://www.deccanherald.com/content/261720/ex-cms-kids-form-dynasts.html
  2. 8th Lok Sabha Members Bioprofile
  3. "Chincholi (Karnataka) Assembly Constituency Elections". Archived from the original on 2017-06-30. Retrieved 2017-03-27.
  4. MEMBERS OF EIGHTH LOK SABHA Karnataka - 29,www.indiapress.org/election
  5. 8th Lok Sabha Members Bioprofile,loksabha/writereaddata/biodata