ಕೊನೆ | Arkavati River |
ಉದ್ದ | 52 km (32 mi)approx. |
ಕೊನೆಯ ಎತ್ತರ | 638 m (2,093 ft) |
ವೃಷಭಾವತಿ ನದಿಯು ಅರ್ಕಾವತಿ ನದಿಯ ಉಪನದಿಯಾಗಿದೆ. ಇದು ಬೆಂಗಳೂರು ನಗರದ ದಕ್ಷಿಣ ಭಾಗದಲ್ಲಿ ಹರಿಯುತ್ತದೆ.[೧] ಪ್ರಾಚೀನ ಕಾಲದಲ್ಲಿ ನದಿಯ ನೀರನ್ನು ಕುಡಿಯಲು ಬಳಸುತ್ತಿದ್ದರು ಮತ್ತು ಗಾಲಿ ಆಂಜನೇಯ ದೇವಸ್ಥಾನಕ್ಕೆ ಬಳಸಲಾಗುತ್ತಿದ್ದರು. ಕೈಗಾರಿಕೆ, ಕೃಷಿ ಮತ್ತು ದೇಶೀಯ ಮೂಲಗಳ ಮಾಲಿನ್ಯಕಾರಕಗಳಿಂದ ನದಿಯು ಕಲುಷಿತಗೊಂಡಿದೆ..[೨]
ವೃಷಭಾವತಿ ಎಂಬ ಪದವು ವೃಷಭ ಎಂಬ ಸಂಸ್ಕೃತ ಪದದಿಂದ ಬಂದಿದೆ. ಇದು ಬಸವನಗುಡಿಯ ಬಿಗ್ ಬುಲ್ ಟೆಂಪಲ್‌ನಲ್ಲಿರುವ ಏಕಶಿಲೆಯ ನಂದಿ ಪ್ರತಿಮೆಯ ಅಡಿಯಿಂದ ಈ ನದಿಯು ಹುಟ್ಟುತ್ತದೆ. ಆದ್ದರಿಂದ ಇದಕ್ಕೆ ವೃಷಭಾವತಿ ಎಂಬ ಹೆಸರು ಬಂದಿದೆ.[೩]
ನದಿಯ ಮೂಲವು ನಂದಿ ತೀರ್ಥ ಅಥವಾ ಮಲ್ಲೇಶ್ವರಂನ ಕಾಡು ಮಲ್ಲೇಶ್ವರ ದೇವಸ್ಥಾನದ ಸಮೀಪದಲ್ಲಿದೆ. ಈನದಿಯು ನಾಯಂಡಹಳ್ಳಿ, ರಾಜರಾಜೇಶ್ವರಿ ನಗರ ಮತ್ತು ಕೆಂಗೇರಿಯಂತಹ ಪ್ರಮುಖ ಪ್ರದೇಶಗಳ ಮೂಲಕ ಹರಿಯುತ್ತದೆ. ಮಂತ್ರಿ ಮಾಲ್ ಮಲ್ಲೇಶ್ವರಂ, ಮಾಗಡಿ ರಸ್ತೆ ಮತ್ತು ಮೈಸೂರು ರಸ್ತೆ ಮೆಟ್ರೋ ನಿಲ್ದಾಣಗಳ ಬಳಿ ಹರಿದು ಈ ನದಿಯು ಬಿಡದಿ ಬಳಿಯ ವೃಷಭಾವತಿ ಜಲಾಶಯದಲ್ಲಿ ಕೊನೆಗೊಳ್ಳುತ್ತದೆ.[೪] ಇದು ಉಪನದಿಯಾಗಿ ಕನಕಪುರದ ಬಳಿಯ ಅರ್ಕಾವತಿ ನದಿಯನ್ನು ಸೇರುತ್ತದೆ. ಈ ನದಿಯು ೩೮೩ ಚದರ ಕಿ.ಮೀ ಜಲಾಶಯದ ಪ್ರದೇಶವನ್ನು ಹೊಂದಿದೆ ಮತ್ತು ಬೆಂಗಳೂರಿನ ೧೯೮ ವಾರ್ಡ್‌ಗಳಲ್ಲಿ ೯೬ ವಾರ್ಡುಗಳ ಮೂಲಕ ಹಾದುಹೋಗುತ್ತದೆ.[೫]
ನದಿಯು ಬಸವನಗುಡಿಯ ಬ್ಯೂಗಲ್ ರಾಕ್ ಬಳಿ ಹುಟ್ಟುತ್ತದೆ ಮತ್ತು ಮೈಸೂರು ರಸ್ತೆಯ ಬಳಿ ಮುಖ್ಯ ನದಿಯನ್ನು ಸೇರುತ್ತದೆ.[೬]
ನದಿಯ ಉದ್ದಕ್ಕೂ ಹಲವಾರು ದೇವಾಲಯಗಳಿವೆ ಅವು ದೊಡ್ಡ ಗಣೇಶ ಮತ್ತು ದೊಡ್ಡ ಬಸವ ದೇವಸ್ಥಾನ, ಗಾಲಿ ಹನುಮಂತ ದೇವಸ್ಥಾನ, ಗವಿ ಗಂಗಾಧರೇಶ್ವರ ದೇವಸ್ಥಾನ ಮತ್ತು ಕಾಡು ಮಲ್ಲೇಶ್ವರ ದೇವಸ್ಥಾನಗಳು. ಇವು ವೃಷಭಾವತಿ ದಡದಲ್ಲಿರುವ ಕೆಲವು ಪ್ರಸಿದ್ಧ ದೇವಾಲಯಗಳಾಗಿವೆ. ಗಾಲಿ ಹನುಮಂತ ದೇವಾಲಯವು ೬೦೦ ವರ್ಷಗಳಷ್ಟು ಹಳೆಯದಾಗಿದೆ. ಇದನ್ನು ವಿಜಯನಗರ ಸಾಮ್ರಾಜ್ಯದ ರಾಜಗುರುಗಳಾಗಿದ್ದ ಚನ್ನಪಟ್ಟಣದ ಶ್ರೀ ವ್ಯಾಸರಾಯರು ೧೪೨೫ ರಲ್ಲಿ ನಿರ್ಮಿಸಿದರು. ವೃಷಭಾವತಿ ಮತ್ತು ಪಶ್ಚಿಮವಾಹಿನಿ ಎಂಬ ಎರಡು ನದಿಗಳ ಸಂಗಮದಲ್ಲಿ ಈ ದೇವಾಲಯವನ್ನು ನಿರ್ಮಿಸಲಾಗಿದೆ. ಕೆಂಗೇರಿಯಲ್ಲಿರುವ ಈಶ್ವರ ದೇವಾಲಯವು ಕ್ರಿ.ಶ.೧೦೫೦ ರ ಹಿಂದಿನದು.[೩]
ಕೈಗಾರಿಕೆ, ಕೃಷಿ ಮತ್ತು ದೇಶೀಯ ಮೂಲಗಳ ಮಾಲಿನ್ಯಕಾರಕಗಳಿಂದಾಗಿ ನದಿಯು ಹೆಚ್ಚು ಕಲುಷಿತಗೊಂಡಿದೆ.[೧][೭] "ಸಂಸ್ಕರಣೆ ಮಾಡದೆ ಅಥವಾ ಸಂಸ್ಕರಿಸಿದ ಕೊಳಚೆನೀರು ನದಿಗೆ ಸೇರುವುದರಿಂದ" ಇದು ಗಾಢ, ವಾಸನೆ ಮತ್ತು ನೊರೆಯಿಂದ ಕೂಡಿದೆ ಎಂದು ಹೇಳಲಾಗುತ್ತದೆ.[೬]
೨೦೦೫ ರಲ್ಲಿ ಕರ್ನಾಟಕದ ಮುಖ್ಯಮಂತ್ರಿ ಧರಂ ಸಿಂಗ್ ಅವರು ನದಿಯ ಅಗಲೀಕರಣವನ್ನು ಮಾಡಲು ನದಿ ಕಣಿವೆಯನ್ನು ಮರುರೂಪಿಸಲು ಪ್ರಸ್ತಾಪಿಸಿದರು ಮತ್ತು ಪ್ರವಾಹವನ್ನು ತಡೆಗಟ್ಟಲು ಕ್ರಮಗಳನ್ನು ಅಳವಡಿಸಿಕೊಂಡರು.[೮]