ವೆಂಗುರ್ಲಾ ಭಾರತದ ಮಹಾರಾಷ್ಟ್ರ ರಾಜ್ಯದ ಸಿಂಧುದುರ್ಗ್ ಜಿಲ್ಲೆಯಲ್ಲಿರುವ ಒಂದು ಪಟ್ಟಣ. ಇದು ಗೋವಾ ರಾಜ್ಯದಿಂದ ಸ್ವಲ್ಪವೇ ಉತ್ತರದಲ್ಲಿದೆ. ಇದು ಮುಖ್ಯವಾಗಿ ಗೋಡಂಬಿ, ಮಾವು, ತೆಂಗು ಮತ್ತು ವಿವಿಧ ರೀತಿಯ ಬೆರಿ ಮರಗಳ ಸಮೃದ್ಧ ಹಸಿರು ಎಲೆಗಳಿರುವ ಅರ್ಧವೃತ್ತಾಕಾರದ ಗುಡ್ಡಗಳಿಂದ ಆವೃತವಾಗಿದೆ.ಅರೇಬಿಯನ್ ಸಮುದ್ರವು ವೆಂಗುರ್ಲಾದ ಪಶ್ಚಿಮದಲ್ಲಿದೆ.
ಈ ಪಟ್ಟಣವು ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದೆ. ವೆಂಗುರ್ಲಾ ತಾಲೂಕು ದೇವಿ ಸಾತೇರಿ, ಶ್ರೀ ರಾಮೇಶ್ವರ, ಕನ್ಯಾಲೆ ರೇಡಿಯಲ್ಲಿ ಶ್ರೀ ನವದುರ್ಗಾ, ರೇಡಿ ಹಾಗೂ ಶಿರೋಡಾದಲ್ಲಿ ಶ್ರೀ ಮೌಳಿ, ಆರಾವಳಿಯಲ್ಲಿ ಶ್ರೀ ವೆಟೋಬ, ಕನ್ಯಾಲೆ ರೇಡಿಯಲ್ಲಿ ಶ್ರೀ ರಾಮಪುರುಷ ದೇವಾಲಯ, ರೇಡಿಯಲ್ಲಿ ಶ್ರೀ ಗಣೇಶ ಮತ್ತು ಶ್ರೀ ರಾವಲ್‍ನಾಥ್ ಸೇರಿದಂತೆ ಕೆಲವು ದೇವಾಲಯಗಳನ್ನು ಹೊಂದಿದೆ.