ವೆಲ್ಲೂರ್ ರಾಮಭದ್ರನ್(ಆಗಸ್ಟ್ 4, 1929 - ಫೆಬ್ರವರಿ 27, 2012) ಕರ್ನಾಟಕ ಸಂಗೀತದ ಒಬ್ಬ ಹೆಸರಾಂತ ಮೃದಂಗವಾದಕರಾಗಿದ್ದರು.
ವೆಲ್ಲೂರ್ ರಾಮಭದ್ರನ್, ೧೯೨೯ ರ ಆಗಸ್ಟ್ ೪ ರಂದು ಜನಿಸಿದರು. ತಂದೆ, ಕೊಣ್ಣಕ್ಕೂಲ್ ಗೋಪಾಲಾಚಾರಿಯವರು ಮೊದಲ ಗುರುಗಳು. ಅವರಿಂದ ಮೃದಂಗಕಲಿತರು. ಅದನ್ನೇ ಮುಂದುವರಿಸಿದರು. ಅದರಲ್ಲಿ ಪ್ರಭುತ್ವವನ್ನು ಗಳಿಸಿದರು. ಸನ್ ೧೯೪೩ ರಲ್ಲಿ, ಆಗಿನ ಕಾಲದ ಸುಪ್ರಸಿದ್ಧ ಸಂಗೀತಕಾರರಾಗಿದ್ದ ಮದುರೈ ಮಣಿ ಅಯ್ಯರ್ ರವರಿಗೆ ಮೊದಲಬಾರಿಗೆ 'ಮೃದಂಗ ಸಂಗತಿ' ಕೊಡುವ ಅವಕಾಶ ಒದಗಿತು. ಸುಮಾರು ೭೦ ವರ್ಷಗಳ ಕಾಲ ಸಂಗೀತ ಕ್ಷೇತ್ರದಲ್ಲಿ ತಮ್ಮ ಅನುಪಮ ಕಾಣಿಕೆಯನ್ನು ಕೊಡುತ್ತಾ ಬಂದರು. ಅನೇಕ ಸುಪ್ರಸಿದ್ಧ ಸಂಗೀತಕಾರರಿಗೆ ಪಕ್ಕವಾದ್ಯದ ಸಹಾಯ ನೀಡಿದ್ದಾರೆ. ಮುಖ್ಯರಾದವರು :
'ವೆಲ್ಲೂರ್ ರಾಮಭದ್ರನ್',[೧] ತಮ್ಮ ೮೨ ವರ್ಷ ಪ್ರಾಯದಲ್ಲಿ ಸನ್, ೨೦೧೨, ೨೭, ರ, ಫೆಬ್ರವರಿಯ ಸೋಮವಾರದಂದು, ನಿಧನರಾದರು.