ವೇಸರ ಪದವು ಭಾರತೀಯ ಹಿಂದೂ ದೇವಾಲಯ ವಾಸ್ತುಶಿಲ್ಪದ ಒಂದು ವಿಶಿಷ್ಟ ಶೈಲಿಯ ಸಂಪ್ರದಾಯವನ್ನು ವರ್ಣಿಸಲು ಬಳಸಲಾದ ಅನೇಕ ಪದಗಳಲ್ಲಿ ಒಂದು. ಈ ಶೈಲಿಯನ್ನು ಮುಖ್ಯವಾಗಿ ದಖ್ಖನ್ ಪೀಠಭೂಮಿ, ವಿಂಧ್ಯ ಪರ್ವತಗಳು ಮತ್ತು ಕೃಷ್ಣಾ ನದಿಯ ನಡುವೆ ಉತ್ತರ ಭಾರತ ಮತ್ತು ಮಧ್ಯ ಭಾರತದ ಭಾಗಗಳಲ್ಲಿ ಬಳಸಲಾಗಿತ್ತು (VK Agnihotri, Indian History, p. B-34). ಇತರ ಎರಡು ಪ್ರಮುಖ ಮಾದರಿಗಳು ಅಥವಾ ಶೈಲಿಗಳೆಂದರೆ ದಕ್ಷಿಣ ಭಾರತದ ದ್ರಾವಿಡ ಶೈಲಿ ಮತ್ತು ಉತ್ತರ ಭಾರತದ ನಾಗರ ಶೈಲಿಗಳು. ವೇಸರ ಶೈಲಿಯು ಮೇಲಿನ ಎರಡು ದೇವಸ್ಥಾನ ಶೈಲಿಗಳ ಲಕ್ಷಣಗಳು, ಮತ್ತು ತನ್ನ ಸ್ವಂತದ ಮೂಲ ಲಕ್ಷಣಗಳ ಸಂಯೋಜನೆಯಾಗಿದೆ.
ವಿವರಣೆ ವಿಶೇಷವಾಗಿ, ವೇಸರ ಶೈಲಿಯಲ್ಲಿ ಗರ್ಭಗುಡಿಯ ಮೇಲಿನ ಅಧಿರಚನೆಯ ಆಕಾರವು ಸಾಮಾನ್ಯವಾಗಿ ಪಾರ್ಶ್ವ ನೋಟದಲ್ಲಿ ಪಿರಮಿಡ್‍ನಂತೆ ಇರುತ್ತದೆ, ಮತ್ತು ಉತ್ತರದ ಶಿಖರ ಗೋಪುರಕ್ಕಿಂತ ಗಿಡ್ಡವಾಗಿರುತ್ತದೆ. ಯೋಜನೆಯಲ್ಲಿ ಗೋಡೆಗಳು ಮತ್ತು ಅಧಿರಚನೆಯು ಸಾಮಾನ್ಯವಾಗಿ ವೃತ್ತಾಕಾರ, ಅಥವಾ ನೇರ ಪಾರ್ಶ್ವದ ಶಂಕುವಿನಾಕಾರದ್ದಾಗಿರುತ್ತವೆ. ಆದರೆ ಅದರ ಜ್ಯಾಮಿತಿಯು ಒಂದು ವೃತ್ತದ ಮೇಲಿಡಲಾದ ಚೌಕವು ಪರಿಭ್ರಮಿಸುವುದನ್ನು ಆಧರಿಸಿದೆ.