Y. S. Jaganmohan Reddy | |
---|---|
![]() | |
ಆಂಧ್ರ ಪ್ರದೇಶದ 17 ನೇ ಮುಖ್ಯಮಂತ್ರಿ | |
Assumed office 30 May 2019 | |
Governor | ಇ. ಎಸ್. ಎಲ್. ನರಸಿಂಹನ್ |
Preceded by | ಎನ್. ಚಂದ್ರಬಾಬು ನಾಯ್ಡು |
Constituency | ಪುಲಿವೆಂಡಲ |
ಆಂಧ್ರಪ್ರದೇಶ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ | |
In office 26 May 2014 – 30 May 2019 | |
Preceded by | ಎನ್. ಚಂದ್ರಬಾಬು ನಾಯ್ಡು |
Succeeded by | ಎನ್. ಚಂದ್ರಬಾಬು ನಾಯ್ಡು |
Member of the ಆಂಧ್ರ ಪ್ರದೇಶ ವಿಧಾನಸಭೆಯ ಸದಸ್ಯರು Assembly for ಪುಲಿವೆಂಡಲ | |
Assumed office 26 May 2014 | |
Preceded by | ವೈ ಎಸ್. ವಿಜಯಮ್ಮ |
Member of the India Parliament for Kadapa | |
In office 26 May 2009 – 26 May 2014 | |
Preceded by | ವೈ ಎಸ್. ವಿವೇಕಾನಂದ ರೆಡ್ಡಿ |
Succeeded by | ವೈ ಎಸ್. ಅವಿನಾಶ್ ರೆಡ್ಡಿ |
Personal details | |
Born | ಪುಲಿವೆಂಡುಲ, ಆಂಧ್ರಪ್ರದೇಶ, ಭಾರತ | 21 December 1972
Political party | ವೈಎಸ್ಆರ್ ಕಾಂಗ್ರೆಸ್ ಪಕ್ಷ (2011-ಇಂದಿನವರೆಗೆ) |
Other political affiliations | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಮೊದಲು 2011) |
Spouse | ವೈ. ಎಸ್. ಭಾರತಿ |
Children | 2 daughters |
Parent(s) | ವೈ. ಎಸ್. ರಾಜಶೇಖರ ರೆಡ್ಡಿ (ತಂದೆ) ವೈ ಎಸ್. ವಿಜಯಮ್ಮ (ತಾಯಿ) |
Relatives | Y. S. Sharmila (sister) |
Residence(s) | ಅಮರಾವತಿ, ಆಂಧ್ರ ಪ್ರದೇಶ, ಭಾರತ |
ಯದುಗುರಿ ಸ್ಯಾಂಡಿಂತಿ ಜಗದನ್ ಮೋಹನ್ ರೆಡ್ಡಿ (ಜನನ 21 ಡಿಸೆಂಬರ್ 1972), ಭಾರತೀಯ ರಾಜಕಾರಣಿ ಮತ್ತು ಪ್ರಸ್ತುತ ಆಂಧ್ರಪ್ರದೇಶದ ಮುಖ್ಯಮಂತ್ರಿ.ವೈಎಸ್ಆರ್ ಕಾಂಗ್ರೆಸ್ ಪಕ್ಷದ ಸ್ಥಾಪಕ ಮತ್ತು ಮತ್ತು ಆಂಧ್ರಪ್ರದೇಶದ ವಿಧಾನಸಭೆಯಲ್ಲಿ 16 ಮೇ 2014 ರಿಂದ 23 ಮೇ 2019 ರವರೆಗೆ ವಿಪಕ್ಷ ನಾಯಕರಾಗಿದ್ದು. ಇವರು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈ. ಎಸ್. ರಾಜಶೇಖರ ರೆಡ್ಡಿ ಅವರ ಪುತ್ರ.2004 ರ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪರ ಪ್ರಚಾರ ಮಾಡುವ ಮೂಲಕ ಅವರು ತಮ್ಮ ರಾಜಕೀಯ ವೃತ್ತಿಜೀವನವನ್ನು ಆರಂಭಿಸಿದರು. ಮತ್ತು 2009 ರ ಚುನಾವಣೆಯಲ್ಲಿ ಅವರು ಕಡಪ ಕ್ಷೇತ್ರದಿಂದ ಸಂಸತ್ ಸದಸ್ಯರಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಿಂದ ಆಯ್ಕೆಯಾದರು.[೧][೨]
ಜಗನ್ ಮೋಹನ್ ರೆಡ್ಡಿ 21 ಡಿಸೆಂಬರ್ 1972 ರಂದು ಆಂಧ್ರಪ್ರದೇಶದ ಕಡಪ ಜಿಲ್ಲೆಯ ಪುಲಿವೆಂಡುಲಾ ಗ್ರಾಮದಲ್ಲಿ ಜನಿಸಿದರು. ಅವರು ಪುಲಿವೆಂಡುಲ ಮತ್ತು ಹೈದರಾಬಾದ್ ಪಬ್ಲಿಕ್ ಸ್ಕೂಲ್ನಿಂದ ತಮ್ಮ ಆರಂಭಿಕ ಶಿಕ್ಷಣವನ್ನು ಪಡೆದರು.[೩][೪]
ಜಗನ್ ಮೋಹನ್ ರೆಡ್ಡಿ ತಂದೆಯ ತಂದೆ ವೈಎಸ್ ರಾಜಶೇಖರ ರೆಡ್ಡಿ ವೈಎಸ್ಆರ್ ಎಂದು ಜನಪ್ರಿಯರಾಗಿದ್ದರು. ಆಂಧ್ರಪ್ರದೇಶದ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಅವರು 2004 ರಿಂದ 2009 ರವರೆಗೆ ಸೇವೆ ಸಲ್ಲಿಸುತ್ತಿದ್ದರು.ಜಗದಮೋಹನ್ 2004 ರ ಚುನಾವಣೆಯಲ್ಲಿ ಕಡಪ ಜಿಲ್ಲೆಯ ಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪರ ತಮ್ಮ ರಾಜಕೀಯ ವೃತ್ತಿಜೀವನವನ್ನು ಪ್ರಾರಂಭಿಸಿದರು.2009 ರಲ್ಲಿ ಜಗದಮೋಹನ್ ಅವರು ಕಡಪ ಕ್ಷೇತ್ರದಿಂದ ಸಂಸತ್ ಸದಸ್ಯರಾಗಿ ಆಯ್ಕೆಯಾದರು.[೫]
ಸೆಪ್ಟಂಬರ್ 2009 ರಲ್ಲಿ ಅವರ ತಂದೆಯ ಮರಣದ ನಂತರ, ಜಗನ್ಮೋಹನ್ ತನ್ನ ತಂದೆಯಿಂದ ರಾಜಕೀಯ ಪರಂಪರೆಯನ್ನು ತೆಗೆದುಕೊಳ್ಳಲು ಪ್ರಯತ್ನಗಳನ್ನು ಪ್ರಾರಂಭಿಸಿದರು. ವೈಎಸ್ಆರ್ ಮರಣದ ನಂತರ, ಬಹುತೇಕ ಶಾಸಕರು ಮುಖ್ಯಮಂತ್ರಿಯಾಗಿ ಜಗನ್ಮೋಹನ್ ಅವರನ್ನು ನೇಮಕ ಮಾಡಲು ಒಲವು ತೋರಿದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಮುಖ್ಯಸ್ಥೆ ಇದನ್ನು ಒಪ್ಪಿಕೊಳ್ಳಲಿಲ್ಲ.ತನ್ನ ತಂದೆಯ ಮರಣದ ಆರು ತಿಂಗಳ ನಂತರ, ಅವರು ತಮ್ಮ ತಂದೆಯ ಮರಣದ ಸುದ್ದಿಯಿಂದ ಆತ್ಮಹತ್ಯೆ ಮಾಡಿಕೊಂಡ ಅಥವಾ ಅನಾರೋಗ್ಯಕ್ಕೆ ಒಳಗಾದವರ ಕುಟುಂಬಗಳಿಗೆ ಸಾಂತ್ವಾನ ಹೇಳಲು ಓದಾರ್ಪು ಯಾತ್ರೆ ಪ್ರಾರಂಭಿಸಿದರು.ಕಾಂಗ್ರೆಸ್ ಪಕ್ಷದ ಕೇಂದ್ರ ನಾಯಕತ್ವವು ಯಾತ್ರೆಯನ್ನು ನಿಲ್ಲಿಸುವಂತೆ ನಿರ್ದೇಶಿಸಿತ್ತು, ಇದನ್ನು ನಿರಾಕರಿಸಿದ ಕಾರಣ, ಜಗನ್ಮೋಹನ್ ಮತ್ತು ಪಕ್ಷದ ಮಧ್ಯೆ ಬಿರುಕು ಮುಡಿತು.[೬]
29 ನವೆಂಬರ್ 2010 ರಂದು, ಕಾಂಗ್ರೆಸ್ ಪಕ್ಷಕ್ಕೆ ರಾಜಿನಾಮೆ ನಿದಿದರು.2010 ರ ಡಿಸೆಂಬರ್ 7 ರಂದು ಪುಲಿವೆಂಡುಲದಿಂದ ಅವರು 45 ದಿನಗಳಲ್ಲಿ ಹೊಸ ಪಕ್ಷವನ್ನು ಪ್ರಾರಂಭಿಸುತ್ತಿರುವದಾಗಿ ಘೋಷಿಸಿದರು.ಮಾರ್ಚ್ 2011 ರಲ್ಲಿ, ಪೂರ್ವ ಗೋದಾವರಿ ಜಿಲ್ಲೆಯ ಜಗ್ಗಂಪೆಟಾದಲ್ಲಿ ತಮ್ಮ ಪಕ್ಷದ ಹೆಸರನ್ನು ಪ್ರಕಟಿಸಿದರು. ನಂತರ, ವೈಎಸ್ಆರ್ ಪಕ್ಷವು ಕಡಪ ಜಿಲ್ಲೆಯ ಚುನಾವಣೆಗೆ ಹೋಯಿತು ಮತ್ತು ಬಹುಮತದೊಂದಿಗೆ ಎಲ್ಲಾ ಸ್ಥಾನಗಳನ್ನು ಗೆದ್ದಿತು.[೭][೮][೯]
ವೈಎಸ್ಆರ್ ಕಾಂಗ್ರೆಸ್ನ ಅಧ್ಯಕ್ಷರಾಗಿ ಜಗದನ್ ಅವರು ಕಡಪ ಕ್ಷೇತ್ರದಿಂದ ಉಪಚುನಾವಣೆ ಎದುರಿಸಿದರು ಮತ್ತು ದೊಡ್ಡ ಅಂತರದಿಂದ ಗೆದ್ದರು.[೧೦]
ಜಗನ್ ರೆಡ್ಡಿಯನ್ನು ಕೇಂದ್ರೀಯ ತನಿಖಾ ದಳವು ಬಂಧಿಸಿತ್ತು. ದುರುಪಯೋಗ ಆರೋಪಗಳು ಮತ್ತು ತನಿಖೆಯನ್ನು ಮುಂದುವರೆಸಿದಾಗ ಆತನ ನ್ಯಾಯಾಂಗ ಬಂಧನವನ್ನು ಮತ್ತೆ ಮತ್ತೆ ವಿಸ್ತರಿಸಲಾಯಿತು. ಸುಪ್ರೀಂ ಕೋರ್ಟ್ 4 ಜುಲೈ 2012, 9 ಆಗಸ್ಟ್ 2012, ಮತ್ತು 13 ಮೇ 2013 ರಂದು ತನ್ನ ಅರ್ಜಿಯನ್ನು ತಿರಸ್ಕರಿಸಿತು.[೧೧][೧೨][೧೩]
2019 ರ ಏಪ್ರಿಲ್ ಮತ್ತು ಮೇ 2019 ರಲ್ಲಿ ನಡೆದ ಲೋಕಸಭೆ ಮತ್ತು ರಾಜ್ಯ ವಿಧಾನ ಸಭೆ ಚುನಾವಣೆಯಲ್ಲಿ ಆಂಧ್ರಪ್ರದೇಶದ ಒಟ್ಟು 175 ವಿಧಾನಸಭಾ ಸ್ಥಾನಗಳಲ್ಲಿ 151 ಸ್ಥಾನಗಳನ್ನು ಮತ್ತು 25 ಲೋಕಸಭಾ ಕ್ಷೇತ್ರಗಳಲ್ಲಿ 22 ಸ್ಥಾನಗಳನ್ನು ಗೆದ್ದಿತು. ಮೇ 30, 2019 ರಂದು ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು
ಜಗದನ್ ಮೋಹನ್ ತೆಲುಗು ಭಾಷೆಯ ದೈನಂದಿನ ಪತ್ರಿಕೆ ಸಾಕ್ಷಿ ಮತ್ತು ದೂರದರ್ಶನ ಚಾನೆಲ್ ಸಾಕ್ಷಿ ಟಿವಿಯನ್ನು ಸ್ಥಾಪಿಸಿದರು. ಅವರು ಭಾರತಿ ಸಿಮೆಂಟ್ಸ್ನ ಮುಖ್ಯ ಪ್ರವರ್ತಕರಾಗಿದ್ದಾರೆ.
{{cite web}}
: Unknown parameter |dead-url=
ignored (help)
{{cite web}}
: Unknown parameter |dead-url=
ignored (help)