ವೈಮಾನಿಕ ಶಾಸ್ತ್ರ

"ವೈಮಾನಿಕ ಶಾಸ್ತ್ರ" ( ವಿಮಾನಗಳಿಗೆ ಸಂಬಂಧಿಸಿದ ಎಂದರ್ಥ ; ಕೆಲವೊಮ್ಮೆ ವಿಮಾನಿಕ ಎಂದೂ ಬರೆಯುವುದುಂಟು ) ವು ೨೦ ನೇ ಶತಮಾನದ ಆರಂಭ ಕಾಲದ ಒಂದು ಸಂಸ್ಕೃತ  ಗ್ರಂಥವಾಗಿದ್ದು ವಿಮಾನ ತಂತ್ರಜ್ಞಾನದ ಕುರಿತಾಗಿದೆ. ಅದರಲ್ಲಿ ಹಳೆಯ ಸಂಸ್ಕೃತ ಕಾವ್ಯಗಳಲ್ಲಿ ಉಲ್ಲೇಖವಾಗಿರುವ ವಿಮಾನಗಳು ನಿಜಕ್ಕೂ ರಾಕೆಟ್ನಂತಹ ತುಂಬ ಮುಂದುವರೆದ ಹಾರುವ ಯಂತ್ರಗಳು ಎಂದು ಹೇಳಿಕೊಳ್ಳಲಾಗಿದೆ. 

ಇತಿವೃತ್ತ

[ಬದಲಾಯಿಸಿ]
  • ಈ ಗ್ರಂಥದ ಇರುವಿಕೆಯನ್ನು ೧೯೫೨ರಲ್ಲಿ ಜಿ.ಆರ್. ಜೋಯ್ಸರ್ ಅವರು ತಿಳಿಸಿ ಅದನ್ನು ಪಂಡಿತ ಸುಬ್ಬರಾಯ ಶಾಸ್ತ್ರಿ( ೧೮೬೬-೧೯೪೦)ಗಳು ೧೯೧೮-೧೯೨೩ ಅವಧಿಯಲ್ಲಿ ಹೇಳಿ ಬರೆಸಿದ್ದಾ ರೆ ಎಂದು ಖಚಿತ ಪಡಿಸಿದರು. ೧೯೫೯ ರಲ್ಲಿ ಇದರ ಹಿಂದಿ ಅನುವಾದವೂ  ೧೯೭೩ ರಲ್ಲಿ ಸಂಸ್ಕೃತ ಪಠ್ಯದೊಡನೆ ಇಂಗ್ಲೀಷ್ ಅನುವಾದವೂ  ಪ್ರಕಟಗೊಂಡವು ಅದರಲ್ಲಿ ೩೦೦೦ ಶ್ಲೋಕಗಳ ೮ ಅಧ್ಯಾಯಗಳು ಇದ್ದು ಸ್ವತಃ ಭಾರದ್ವಾಜ ಮುನಿಗಳು ತಮಗೆ ತಿಳಿಸಿದ್ದಾಗಿ ಶಾಸ್ತ್ರಿಗಳು ಹೇಳಿಕೊಂಡಿದ್ದಾರೆ.[]  
  • ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ವೈಮಾನಿಕ ಮತ್ತು ಯಾಂತ್ರಿಕ  ಇಂಜಿನೀಯರಿಂಗ್ ವಿಭಾಗದ ೧೯೭೪ ರ ಅಧ್ಯಯನವೊಂದು ಈ ಪಠ್ಯದಲ್ಲಿ ವರ್ಣಿಸಿದ ವಿಮಾನವು ಕಟ್ಟುಕತೆಯಾಗಿದ್ದು, ಇದರ ಲೇಖಕನು ವಿಮಾನ ತಂತ್ರಜ್ಞಾನದ ತಿಳುವಳಿಕೆಯ ಸಂಪೂರ್ಣ ಕೊರತೆ ಇದೆ ಎಂಬ ತೀರ್ಮಾನಕ್ಕೆ ಬಂದಿತು. "ರುಕ್ಮವಿಮಾನ"ಕ್ಕೆ  ಸಂಬಂಧಿಸಿದಂತೆ, " ಅದರ ವಿವರಣೆ ಮತ್ತು  ಚಿತ್ರವನ್ನು ಗಮನಿಸುವುದಾದರೆ ಅದು ಖಂಡಿತವಾಗಿಯೂ ಅಸಾಧ್ಯವೇ ಆಗಿದೆ" ಎಂದು ಹೇಳಿದೆ. "[]

ಮೂಲ ಮತ್ತು ಪ್ರಕಟಣೆ

[ಬದಲಾಯಿಸಿ]
  • ಸುಬ್ಬರಾಯ ಶಾಸ್ತ್ರಿಗಳು ಆನೇಕಲ್  ನವರು . ಅವರು ಹೊಸೂರು ತಾಲೂಕಿನ ಹಳ್ಳಿಯೊಂದರಲ್ಲಿ ಹುಟ್ಟಿದರು []  ತಾಯಿತಂದೆಗಳು ಎಳೆತನದಲ್ಲಿಯೇ ತೀರಿಹೋದರು.  ತುಂಬ ಬಡತನ . ಆರೋಗ್ಯವೂ ಚೆನ್ನಾಗಿರಲಿಲ್ಲ.  
  • ಅಲೆದಾಡಿಕೊಂಡು ಇದ್ದ ಇವರಿಗೆ ಕೋಲಾರ ದಲ್ಲಿ ಒಬ್ಬ ಸಂತರನ್ನು ಭೆಟ್ಟಿಯಾದರು. ಅವರು ಇವರಿಗೆ ವೈಮಾನಿಕ ಶಾಸ್ತ್ರವನ್ನು ಒಳಗೊಂಡಂತೆ ಅನೇಕ ಶಾಸ್ತ್ರಗಳನ್ನು ಇವರಿಗೆ ತಿಳಿಸಿದರು. ನಂತರ ಶಾಸ್ತ್ರಿಗಳು ಸಾಮಾನ್ಯ  ಬದುಕಿನಲ್ಲಿ ನೆಲೆನಿಂತರು. ಶಾಸ್ತ್ರಿಗಳಿಗೆ ಶಾಲಾ ವಿದ್ಯಾಭ್ಯಾಸ ಆಗಿರಲಿಲ್ಲ. ಸಂತರೊಂದಿಗಿನ ಭೆಟ್ಟಿಯ ನಂತರವೇ ಅವರು ಓದು ಬರಹ ಕಲಿತರು. ಈ ಪಠ್ಯವು ಅವರದೇ ಸಂಶೋಧನೆ ಇರುವ ಸಾಧ್ಯತೆಯಿಲ್ಲ.  [original research?]    ಈ ಗ್ರಂಥವನ್ನು ಜಿ. ವೆಂಕಟಾಚಲ ಶರ್ಮರವರಿಗೆ ಹೇಳಿ ಬರೆಸಿದರು. ಇದು ೧೯೨೩ರಲ್ಲಿ ಪೂರ್ತಿ ಆಯಿತು.   
  •  ಅದರಲ್ಲಿನ ಪರಿಕಲ್ಪನೆಗಳ ವ್ಯಾವಹಾರಿಕತೆಯ ಬಗ್ಗೆ ಅವರು ಖಚಿತವಾಗಿರಲಿಲ್ಲ. ಮುಂಬಯಿಯ ಡಾ. ಶಿವಕರ ಬಾಪೂಜಿ ತಲಪಡೆ ಅವರು ಶಾಸ್ತ್ರಿಗಳ ಮಾರ್ಗದರ್ಶನದಲ್ಲಿ ಮಾದರಿಗಳನ್ನು ತಯಾರಿಸಲು ಪ್ರಯತ್ನಿಸಿದಾಗ ಅದರಲ್ಲಿ ಯಾವುದೊಂದೂ ಹಾರಲು ಸಮರ್ಥವಾಗಲಿಲ್ಲ.  

ಸುಬ್ಬರಾಯ ಶಾಸ್ತ್ರಿಗಳು  ೧೯೪೧ ರಲ್ಲಿ ತೀರಿಕೊಂಡರು. ಮತ್ತು ವೆಂಕಟಾಚಲ ಅವರ ಕೃತಿಗಳ ಹಸ್ತಪ್ರತಿಗಳನ್ನು ತಮ್ಮ ಬಳಿ ಇಟ್ಟುಕೊಂಡರು.  

  •  ವೈಮಾನಿಕ ಶಾಸ್ತ್ರದ  ಹಸ್ತಪ್ತತಿಯು ಬಡೋದೆಯ ರಾಜಕೀಯ ಸಂಸ್ಕೃತ ಗ್ರಂಥಾಲಯದಲ್ಲಿ ೧೯೪೪ರಲ್ಲಿ ಕಂಡು ಬಂದಿತು [] ಅದರ ಪಠ್ಯವು ೧೯೫೯ರಲ್ಲಿ  ಹಿಂದಿಯಲ್ಲಿ  ಪ್ರಕಟವಾಯಿತು[]  ನಂತರ ಇಂಗ್ಲೀಶಿನಲ್ಲಿ  ಜಿ. ಆರ್.  ಜೋಸ್ಯರ್  ಅವರಿಂದ  Vymanika Shastra[]    ಎಂಬ ಹೆಸರಿನಲ್ಲಿ ಪ್ರಕಟವಾಯಿತು.   ಅದರಲ್ಲಿ  ಟಿ. ಕೆ. ಎಲ್ಲಪ್ಪ ಎಂಬ ಡ್ರಾಫ್ಟ್ಸ್ ಮನ್ನರ   ಚಿತ್ರಗಳು ಇದ್ದವು .[]

ಗ್ರಂಥದ  ರೂಪ ಮತ್ತು  ಒಳಹೂರಣ

[ಬದಲಾಯಿಸಿ]
ರೆಕ್ಕೆ ಮತ್ತು ಬಾಲ ಹೊಂದಿದ್ದು ಹಕ್ಕಿಯಂತೆ ಹಾರುವುದೆಂದು ಹೇಳಲಾದ  ಶಕುನವಿಮಾನದ ಒಂದು ಚಿತ್ರ []

ವಿಮಾನವಿನ್ಯಾಸದ ಕಲ್ಪನೆಗಳನ್ನು ವಿವರಿಸುವ ಮೊದಲು ವಿಮಾನ ಹಾರಾಟದ ಸಾಮಾನ್ಯ ತತ್ವಗಳನ್ನು ಚರ್ಚಿಸುವುದರೊಂದಿಗೆ ಮೊದಲಾಗುವ ಆಧುನಿಕ ವಿಮಾನಶಾಸ್ತ್ರದ ಗ್ರಂಥಗಳಂತಲ್ಲದೆ,  ವೈಮಾನಿಕಶಾಸ್ತ್ರವು  ನೇರವಾಗಿ, ಒಂದು ವಿಮಾನದ ಬಗೆ ವಿವರಿಸುವಂ ತೆ ವಿವರಣೆಗಳೊಂದಿಗೆ ಆರಂಭವಾಗುತ್ತದೆ. ಅಲ್ಲಿರುವ ಸಂಗತಿಗಳೆಂದರೆ - ವಿಮಾನದ ವ್ಯಾಖ್ಯೆ, ಚಾಲಕ , ಆಕಾಶಮಾರ್ಗ, ಆಹಾರ, ಉಡುಪು, ಲೋಹಗಳು, ಲೋಹ ತಯಾರಿಕೆ, ಕನ್ನಡಿಗಳು, ಯುದ್ಧದಲ್ಲಿ ವಿಮಾನಗಳ ಬಳಕೆ, ಯಂತ್ರ ಮತ್ತು ಉಪಕರಣಗಳ ವಿಧಗಳು,  'ಮಾಂತ್ರಿಕ', 'ತಾಂತ್ರಿಕ', ' ಕೃತಕ' ದಂತಹ ವಿಮಾನಗಳು ಮತ್ತು ಶಕುನ, ಸುಂದರ, ರುಕ್ಮ ಮತ್ತು ತ್ರಿಪುರ ಎಂಬ ನಾಲ್ಕು ವಿಮಾನಗಳ ವಿಸ್ತೃತ ವಿವರಣೆ.  ಈ ಗ್ರಂಥವು ಯಂತ್ರಸರ್ವಸ್ವ  ಎಂಬ ಮಹಾನ್ ಗ್ರಂಥದ  ನಲವತ್ತನೇ ಕೇವಲ  ಒಂದು ಭಾಗದಷ್ಟಿದೆ ಎಂದೂ    ಆ ಯಂತ್ರಸರ್ವಸ್ವ "[] ವನ್ನು  ಭಾರದ್ವಾಜಮಹರ್ಷಿ  ಮತ್ತು  ಇತರ ಋಷಿಗಳು "ಇಡೀ ಮಾನವಕುಲದ ಲಾಭಕ್ಕಾಗಿ" ರಚಿಸಿದ್ದಾರೆ ಎಂದೂ ಹೇಳಲಾಗಿದೆ .[] ೧೯೯೧ ರಲ್ಲಿ  ಇಂಗ್ಲೀಷ್ ಭಾಗವು Vimana Aircraft of Ancient India & Atlantis  ಎಂಬ ಹೆಸರಿನಲ್ಲಿ  Lost Science Series []   ದ ಭಾಗವಾಗಿ ಪ್ರಕಟವಾಯಿತು .

ಮೌಲ್ಯಮಾಪನ

[ಬದಲಾಯಿಸಿ]

"ಇಂಟರ್ನೆಟ್ ಸೇಕ್ರೆಡ್ ಟೆಕ್ಸ್ಟ್ ಆರ್ಕೈವ್" ನ  ಜೆ. ಬಿ. ಹೇರ್  ಅವರು ೨೦೦೫ ರಲ್ಲಿ ಜೋಸ್ಯರ್ ಅವರ್ ೧೯೭೩ರ ಪುಸ್ತಕದ ಆನ್-ಲೈನ್ ಆವೃತ್ತಿಯನ್ನು  ಆ ತಾಣದ  "UFOs"  ವಿಭಾಗದಲ್ಲಿ    ಸಂಪಾದಿಸಿದರು.   ತಮ್ಮ ಮುನ್ನುಡಿಯಲ್ಲಿ ಅವರು ಹೀಗೆ ಬರೆಯುತ್ತಾರೆ

  ವೈಮಾನಿಕ ಶಾಸ್ತ್ರವು   ೧೯೧೮-೧೯೨೩ರ ಅವಧಿಯಲ್ಲಿ ಬರಹ ರೂಪಕ್ಕೆ ಬಂದಿದ್ದು  ಯಾರೂ ಅದನ್ನು ಪುರಾತನ ಹಸ್ತಪ್ರತಿಯಿಂದ ಬಂದದ್ದು ಎಂದು ಹೇಳಿಕೊಳ್ಳುತ್ತಿಲ್ಲ.  ಇದರ ಪ್ರತಿಗಳು ೧೯೧೮ ಕ್ಕಿಂತ ಮುಂಚೆಯೇ  ಇದ್ದವು ಎಂದೂ ಯಾರೂ ವಾದಿಸುತ್ತಿಲ್ಲ.  ಆ ಕಾರಣ  ಇದನ್ನು ಒಂದು ಮೋಸ ಎಂದು ಹೇಳಲಾಗದು. ..... ಸರಳ ಶಬ್ದಗಳಲ್ಲಿ ಹೇಳಬೇಕೆಂದರೆ  ವೈಮಾನಿಕ ಶಾಸ್ತ್ರವು    ವಿಮಾನವು ಹೇಗೆ  ಗಾಳಿಯಲ್ಲಿ ಮೇಲಕ್ಕೇರುವದು   ಎಂಬುದನ್ನು ನೇರವಾಗಿ ವಿವರಿಸುವದಿಲ್ಲ. . .. ವಿವಿಧ ಘಟಕವ್ಯವಸ್ಥೆಗಳ ತಯಾರಿಕೆಯಲ್ಲಿ  ಬಳಸಬೇಕಾದ ಅತಿವಿಚಿತ್ರ ವಸ್ತುಗಳ ಯನ್ನು ಪಟ್ಟಿ ಅನೇಕ ಬಾರಿ ಕೊಡಲಾಗಿದೆ. ೧೯೨೩ರ ತಾಂತ್ರಿಕ ಚಿತ್ರವು  ....ಹಾಸ್ಯಾಸ್ಪದವೂ ಅತಾರ್ಕಿಕವೂ ಅಸಂಬದ್ಧವೂ ಆಗಿದೆ.  ಅವುಗಳ  ರೂಪಗಳನ್ನು ನೋಡಿದರೆ,  ಅವು  ಹಾರುವ ಯಂತ್ರಗಳನ್ನು  ಕುರಿತಾದ ೨೦ ನೇ ಶತಮಾನದ ಆರಂಭದ  ಅದ್ಭುತ ಕಲ್ಪನೆಗಳ ಭಾರತೀಯ ರೂಪಾಂತರಗಳಂತೆ ತೋರುತ್ತವೆ.

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ೧೯೭೪ ರಲ್ಲಿನ  ಅಧ್ಯಯನವೊಂದು    ಈ ಗ್ರಂಥವು ವಿವರಿಸಿದ ವಿಮಾನವು ವೈಮಾನಿಕ ತಂತ್ರದ ಪ್ರಕಾರ  ಅಸಾಧ್ಯವಾಗಿದೆ.   ವಿಮಾನಹಾರಾಟದ ತತ್ವಗಳ ವಿವೇಚನೆಯು  ಬಹುಮಟ್ಟಿಗೆ  ಸರಿಯಲ್ಲದೆ ಇದ್ದು  ಅವಸರದಲ್ಲಿಯೂ ಕಾಳಜಿರಹಿತವಾಗಿಯೂ , ಯಾವುದೇ ಆಸಕ್ತಿ ಇಲ್ಲದೆಯೂ  ಮಾಡಿದುದಾಗಿದೆ , ಕೆಲವೆಡೆಯಂತೂ  ನ್ಯೂಟನ್ನನ ಚಲನೆಯ ನಿಯಮಗಳ ಉಲ್ಲಂಘಿಸುವಂತೆಯೂ ಇವೆ  ಎಂದು   ಅಧ್ಯಯನಕಾರರು   ಸೂಚಿಸಿದ್ದಾರೆ .   ಈ ಅಧ್ಯಯನದ ಅಂತಿಮವಾಗಿ ಈ  ತೀರ್ಮಾನಕ್ಕೆ  ಬಂದಿತು []

ಯಾವುದೇ ಓದುಗನು  ಇಷ್ಟು ಹೊತ್ತಿಗೆ - ಈ ವಿಮಾನಗಳು  ಕಟ್ಟುಕತೆ  ಎಂಬ ಸ್ಪಷ್ಟ ತೀರ್ಮಾನಕ್ಕೆ ಬಂದಿರಬಹುದು. ಈ ವಿಮಾನಗಳಲ್ಲಿ ಯಾವುದೂ ಹಾರುವ ಗುಣವನ್ನಾಗಲಿ ಯೋಗ್ಯತೆಗಳನ್ನಾಗಲೀ ಹೊಂದಿಲ್ಲ.   ಅವುಗಳ  ಚಾಲಕಶಕ್ತಿಯ ತತ್ವಗಳು  ಅವನ್ನು ಹಾರುವಂತೆ ಮಾಡುವ ಬದಲು  ಹಾರುವುದನ್ನು ತಡೆಯುವಂಥವು.  ಪಠ್ಯ ಮತ್ತು ಚಿತ್ರಗಳು ಒಂದಕ್ಕೊಂದು ತಾಳೆಯಾಗುವುದಿಲ್ಲ. ಇಲ್ಲಿನ ಪಠ್ಯವು ಪುರಾತನವೆಂದೇನೂ ಸೂಚನೆಗಳಿಲ್ಲ.... ಒಟ್ಟಿನಲ್ಲಿ ಹೇಳಬಹುದಾದುದು ಇಷ್ಟು- ಇಲ್ಲಿನ ಚಿತ್ರಗಳನ್ನು ಚರ್ಚಿಸಲಾಗದು.  ಮತ್ತು ಪಠ್ಯವು ಅಪೂರ್ಣವೂ , ಅಸ್ಪಷ್ಟವೂ ಮತ್ತು ಹಲವೆಡೆ ತಪ್ಪಾಗಿಯೂ ಇದೆ.

ವಿವಾದ

[ಬದಲಾಯಿಸಿ]

ಜನವರಿ ೨೦೧೫ ರಲ್ಲಿ ಮುಂಬಯಿ ವಿಶ್ವವಿದ್ಯಾನಿಲಯದಲ್ಲಿ ನಡೆದ ೧೦೨ ನೇ  ಇಂಡಿಯನ್ ಸೈನ್ಸ್ ಕಾಂಗ್ರೆಸ್  ಸಮ್ಮೇಳನವು "ಸಂಸ್ಕೃತದ ಮೂಲಕ ಪುರಾತನ ವಿಜ್ಞಾನಗಳು" ಎಂಬ  ಅಧಿವೇಶನವನ್ನು ಏರ್ಪಡಿಸಿತ್ತು. ಅದರಲ್ಲಿ  ಒಂದು ಪ್ರಸ್ತುತೀಕರಣವು   ವೈಮಾನಿಕ ಶಾಸ್ತ್ರವನ್ನು ಒಳಗೊಂಡಿತ್ತು.    ಅದನ್ನು ಪ್ರಸ್ತುತಿಪಡಿಸಿದವರಲ್ಲೊಬ್ಬರು , ಮಾಧ್ಯಮಗಳೊಂದಿಗೆ ಮಾತನಾಡುತ್ತ - ವೇದಕಾಲದಲ್ಲಿನ ವಿಮಾನಗಳು ಒಂದು ದೇಶದಿಂದ ಇನ್ನೊಂದು ದೇಶಕ್ಕಷ್ಟೇ ಅಲ್ಲದೇ , ಗ್ರಹಗಳ ನಡುವೆಯೂ ಹಾರಬಹುದಾಗಿದ್ದವು, ಅಂದಿನ ವಿಮಾನಗಳು ಭಾರೀ ಗಾತ್ರ ಹೊಂದಿದ್ದು  ಕೇವಲ ಮುಂದಕ್ಕೆ ಹಾರಬಲ್ಲ  ಇಂದಿನ ಆಧುನಿಕ ವಿಮಾನಗಳಂತಲ್ಲದೆ  ಎಡಕ್ಕೆ,  ಬಲಕ್ಕೆ, ಹಿಂದಕ್ಕೆ ಕೂಡ ಚಲಿಸಬಲ್ಲವಾಗಿದ್ದವು - ಎಂದು ಹೇಳಿದರು.    ರಾಮಪ್ರಸಾದ ಗಾಂಧಿರಮಣ ಎಂಬ ನಾಸಾ  ವಿಜ್ಞಾನಿ ಈ ಭಾಷಣವು ಹುಸಿವಿಜ್ಞಾನವನ್ನು ಪ್ರತಿನಿಧಿಸುವುದರಿಂದ   ಅದನ್ನು ರದ್ದುಗೊಳಿಸಬೇಕೆಂದು ಆನ್-ಲೈನ್ ಮನವಿಯೊಂದನ್ನು ಆರಂಭಿಸಿದರು.[][೧೦]

ಜನಪ್ರಿಯ ಸಂಸ್ಕೃತಿಯಲ್ಲಿ

[ಬದಲಾಯಿಸಿ]
  • ಆನೇಕಲ್ ಸುಬ್ರಾಯ ಶಾಸ್ತ್ರಿಗಳ ಜೀವನಗಾಥೆಯ ಕಥಾಹಂದರವನ್ನಿಟ್ಟುಕೊಂಡು ಸುಚೇಂದ್ರ ಪ್ರಸಾದ್ ಅವರು ನಿರ್ದೇಶಿಸಿದ ’ಪ್ರಪಾತ’ ಎಂಬ ಕನ್ನಡ ಸಿನೆಮಾ ೨೦೧೦ರಲ್ಲಿ ಬಿಡುಗಡೆಯಾಗಿದೆ.[೧೧]
  • ೨೦೧೫ ರ ಹಿಂದಿ ಚಲನಚಿತ್ರ ಹವಾಯಿಝಾದಾದಲ್ಲಿ  ವೈಮಾನಿಕ ಶಾಸ್ತ್ರವನ್ನು "ಭಾರತದ ಮೊದಲ ಮಾನವರಹಿತ ವಿಮಾನ" ನಿರ್ಮಾಣದ ಹಿಂದಿನ ತತ್ವದ ಗ್ರಂಥವೆಂಬಂತೆ ತೋರಿಸಲಾಗಿದೆ    ಪಂಡಿತ ಸುಬ್ಬರಾಯ ಶಾಸ್ತ್ರಿ (ಈ ಪಾತ್ರದಲ್ಲಿ ಮಿಥುನ್ ಚಕ್ರವರ್ತಿ ನಟಿಸಿದ್ದಾರೆ) ಈ ಗ್ರಂಥವನ್ನು ಚಿತ್ರದಲ್ಲಿ ತೋರಿಸುತ್ತಾರೆ .   

ಇವನ್ನೂ ನೋಡಿ

[ಬದಲಾಯಿಸಿ]
  1. Childress 1991, p. 109
  2. Mukunda 1974, p. 12
  3. ೩.೦ ೩.೧ ೩.೨ ೩.೩ Mukunda 1974
  4. Mukunda 1974, p. 2.
  5. Parivrajaka 1959
  6. ೬.೦ ೬.೧ Shastry & Josyer 1973
  7. Childress 1991
  8. Mukunda 1974, p. 11
  9. Pseudo-science must not figure in Indian Science Congress, Mumbai Mirror, 31 December 2014
  10. Indian Science Congress: Vedic myth must not be masqueraded as science, says Nasa scientist, Firstpost, 31 December 2014
  11. "ವಿಮಾನ ಕಂಡು ಹಿಡಿದ ಕನ್ನಡಿಗನ ಚಲನಚಿತ್ರ". ಒನ್ ಇಂಡಿಯಾ ಕನ್ನಡ. July 28, 2010.