ಶನಿವಾರಸಂತೆ
ಶನಿವಾರಸಂತೆ | |
---|---|
Town | |
Website | karnataka.gov.in |
ಶನಿವಾರಸಂತೆ ಕರ್ನಾಟಕ ರಾಜ್ಯದ ಕೊಡಗು ಜಿಲ್ಲೆಯಲ್ಲಿರುವ ಒಂದು ಪುಟ್ಟ ಪಟ್ಟಣ. ಇದು ಸೋಮವಾರಪೇಟೆ ತಾಲೂಕಿನಲ್ಲಿರುವ ಪಟ್ಟಣಗಳಲ್ಲಿ ಒಂದು, ಜಿಲ್ಲೆಯ ಈಶಾನ್ಯ ಭಾಗದಲ್ಲಿ ಈ ಪಟ್ಟಣವು ಇದೆ.
ಈ ಪ್ರದೇಶದಲ್ಲಿ ಬೆಳೆಯುವ ಮುಖ್ಯ ಬೆಳೆಗಳೆಂದರೆ ಕಾಫಿ, ಭತ್ತ ಮತ್ತು ಮಸಾಲೆಗಳು.
ಕನ್ನಡ, ಕೊಡವ ತಕ್ಕ್, ತುಳು, ಬ್ಯಾರಿ ಭಾಷೆ ಮತ್ತು ಇಂಗ್ಲಿಷ್ ಇಲ್ಲಿನ ಜನರು ಮಾತನಾಡುವ ಭಾಷೆಗಳು.ಶನಿವಾರಸಂತೆಯಲಿ ಎಲ್ಲ ಧರ್ಮದವರು ಪರಸ್ಪರ ಸೌಹಾರ್ದತೆಯಿಂದ ಜೀವನವನ್ನು ಸಾಗಿಸುತ್ತಿದ್ದಾರೆ. ಶನಿವಾರಸಂತೆಯ ಸಮೀಪ ಗುಡುಗಳಲೆ ಮೈದಾನವಿದ್ದು ಅಲ್ಲಿ ಪ್ರತಿ ವರ್ಷ ಜಾನುವಾರು ಜಾತ್ರೆ ನಡೆಯುತ್ತದೆ. ಇದು ಹೋಬಳಿಯಾಗಿದ್ದು ಇದರ ವ್ಯಾಪ್ತಿಗೆ ಬರುವ ಮುಳ್ಳೂರು ಗ್ರಾಮವೊಂದು ಇದ್ದು ಇಲ್ಲಿ ಕೊಂಗಳ್ವಾರು ಆಳ್ವಿಕೆ ಮಾಡಿದ ನಿದರ್ಶನ ಉಂಟು. ಇಲ್ಲಿಯ ಜೈನ ಬಸದಿಯು ಪ್ರಸಿದ್ಧವಾಗಿದೆ.
ಕಾಫಿ ಮತ್ತು ಭತ್ತ ಈ ಪ್ರದೇಶದ ಪ್ರಮುಖ ಬೆಳೆ. ಮೆಣಸು, ಏಲಕ್ಕಿ, ಶುಂಠಿ ಮತ್ತು ಇತರ ತರಕಾರಿಗಳಂತಹ ಇತರ ಬೆಳೆಗಳನ್ನು ಸಹ ಬೆಳೆಯಲಾಗುತ್ತದೆ. ಸಿಲ್ವರ್ ಓಕ್ ಮರವನ್ನು ಬೆಳೆಸಲು ಈ ಪ್ರದೇಶ ಪ್ರಸಿದ್ಧವಾಗಿದೆ.
ಈ ಪಟ್ಟಣದಲ್ಲಿ ಹಿಂದೂಗಳು, ಮುಸ್ಲಿಮರು ಮತ್ತು ಕೆಲವು ಕ್ರೈಸ್ತರು ಇದ್ದಾರೆ, ಹಿಂದೂಗಳಲ್ಲಿ ಮುಖ್ಯ ಜಾತಿಗಳು ಬಿಲ್ಲವರು, ಶೆಟ್ಟರು, ಒಕ್ಕಲಿಗರು, ಲಿಂಗಾಯಿತರು ಮತ್ತು ಕೊಡವರು. ಮುಸ್ಲಿಮರಲ್ಲಿ ಉರ್ದು ಮತ್ತು ಮುಸ್ಲಿಂ ಮಲಯಾಳಂ (ಬ್ಯಾರಿ ಭಾಷೆ) ಎರಡನ್ನೂ ಮಾತಾಡುವವರು ಇದ್ದಾರೆ.