ಶಾನ್ ಮಾರ್ಷ್, ಓರ್ವ ಆಸ್ಟ್ರೇಲಿಯಾದ ಕ್ರಿಕೆಟ್ ಆಟಗಾರ. ಆಸ್ಟ್ರೇಲಿಯಾದ ಅಗ್ರ ಕ್ರಮಾಂಕದ ಎಡಗೈ ಆಟಗಾರ. ಇವರು ಎಡಗೈ ಲೆಗ್ ಸ್ಪಿನ್ ಬಾಲರ್. ದೇಶೀಯ ಕ್ರಿಕೆಟ್ನಲ್ಲಿ ಪರ್ತ್ ಸ್ಕೊಚೆರ್ಸ್ ಹಾಗೂ ವೆಸ್ಟರ್ನ್ ಆಸ್ಟ್ರೇಲಿಯಾ ತಂಡಗಳಿಗೆ ಆಡುತ್ತಾರೆ. ೨೦೦೮ರಿಂದ ೨೦೧೭ರ ವರೆಗೆ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಆಡಿದ್ದರು, ೨೦೧೭ರ ನಂತರ ಐಪಿಎಲ್ ಸರಣಿಯಲ್ಲಿ ಪಾಲ್ಗೊಳ್ಳಲಿಲ್ಲ.[೧][೨][೩]
ಶಾನ್ ರವರು ಜುಲೈ ೦೯, ೧೯೮೩ರಲ್ಲಿ ವೆಸ್ಟರ್ನ್ ಆಸ್ಟ್ರೇಲಿಯಾದ ನೈರೊಗ್ಗಿನಲ್ಲಿ ಜನಿಸಿದರು. ಶಾನ್ ಹಾಗೂ ಇವರ ಸಹೋದರ ಮಿಚ್ಚೆಲ್ ಮಾರ್ಶ್ ಇಬ್ಬರೂ ತಮ್ಮ ಬಾಲ್ಯದಲ್ಲಿ ಪರ್ತ್ ನ ವೀಸ್ಲಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದರು. ಈ ಸಮಯದಲ್ಲಿ ಇವರಿಗೆ ಕ್ರಿಕೆಟ್ ನಲ್ಲಿ ಆಸಕ್ತಿ ಮೂಡಿತು. ೧೯೯೮ ಶಾನ್ ೨೧೦ ಸರಾಸರಿಯಲ್ಲಿ ರನ್ ಗಳಿಸುವ ಮೂಲಕ ಪರಾಲ್ಟ್ ಸ್ಕೂಲ್ಸ್ ಅಸ್ಸೋಸಿಯೇಶನನ ಡಾರ್ಲೊಟ್ ಕಪ್ನಲ್ಲಿ ಅತೀ ಹೆಚ್ಚು ಸರಾಸರಿ ಹೊಂದಿದ ದಾಖಲೆ ನಿರ್ಮಿಸಿದ್ದರು.[೪][೫][೬]
ಶಾನ್ ಮಾರ್ಶ್ ರವರು, ೨೦೦೧-೨೦೦೨ರ ಅವಧಿಯಲ್ಲಿ ತಮ್ಮ ಪ್ರಥಮ ದರ್ಜೆ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದರು.[೭]
ಜೂನ್ ೨೦, ೨೦೦೮ರಲ್ಲಿ ಬ್ರಿಡ್ಜ್ಟೌನಲ್ಲಿ ವೆಸ್ಟ್ ಇಂಡೀಸ್ ವಿರುಧ್ಧ ನಡೆದ ಏಕೈಕ ಟಿ-೨೦ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು.[೮] ಜೂನ್ ೨೪, ೨೦೦೮ರಲ್ಲಿ ಕಿಂಗ್ಸ್ಟೌನಲ್ಲಿ ವೆಸ್ಟ್ ಇಂಡೀಸ್ ವಿರುಧ್ಧ ನಡೆದ ಮೊದಲ ಏಕದಿನ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು.[೯] ಸೆಪ್ಟೆಂಬರ್ ೦೮, ೨೦೧೧ರಂದು ಪಲ್ಲೆಕಲ್ಲೆಯಲ್ಲಿ ಶ್ರೀಲಂಕಾದ ವಿರುದ್ಧ ನಡೆದ ಮೊದಲನೇ ಟೆಸ್ಟ್ ಕ್ರಿಕೆಟ್ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ನಲ್ಲಿ ಪಾದಾರ್ಪಣೆ ಮಾಡಿದರು.[೧೦]