ಶಿಖರ ಶಬ್ದವು ಉತ್ತರ ಭಾರತದ ಹಿಂದೂ ದೇವಾಲಯ ವಾಸ್ತುಶಿಲ್ಪದಲ್ಲಿ ಮೇಲೇರುವ ರಚನೆಯನ್ನು ಸೂಚಿಸುತ್ತದೆ. ಹಲವುವೇಳೆ ಇದನ್ನು ಜೈನ ದೇವಸ್ಥಾನಗಳಲ್ಲೂ ಬಳಸಲಾಗುತ್ತದೆ. ಪ್ರಧಾನ ದೇವರನ್ನು ಸ್ಥಾಪಿಸಲಾದ ಗರ್ಭಗೃಹ ಕೋಣೆಯ ಮೇಲಿನ ಶಿಖರವು ಉತ್ತರ ಭಾರತದ ಹಿಂದೂ ದೇವಸ್ಥಾನದ ಅತ್ಯಂತ ಎದ್ದುಕಾಣುವ ಭಾಗವಾಗಿರುತ್ತದೆ.[೧]
ದಕ್ಷಿಣ ಭಾರತದಲ್ಲಿ, ಇದರ ಸಮಾನಾರ್ಥಕ ಪದವೆಂದರೆ ವಿಮಾನ. ಶಿಖರ ಪದದಿಂದ ಭಿನ್ನವಾಗಿ ಇದು ಕೆಳಗಿನ ಗರ್ಭಗೃಹ ಸೇರಿದಂತೆ ಇಡೀ ಕಟ್ಟಡವನ್ನು ಸೂಚಿಸುತ್ತದೆ.
ಶಿಖರವನ್ನು ಮೂರು ಮುಖ್ಯ ರೂಪಗಳಾಗಿ ವರ್ಗೀಕರಿಸಬಹುದು: