ವಯಕ್ತಿಕ ಮಾಹಿತಿ | |||||||||||||||||||||||||||||||||||||||||||||||||||||
---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|
ಪೂರ್ಣ ಹೆಸರು | ಶಿಖಾ ಸುಬಾಸ್ ಪಾಂಡೆ | ||||||||||||||||||||||||||||||||||||||||||||||||||||
ಹುಟ್ಟು | ಕರೀಂನಗರ್, ಭಾರತ | ೧೨ ಮೇ ೧೯೮೯||||||||||||||||||||||||||||||||||||||||||||||||||||
ಬ್ಯಾಟಿಂಗ್ | ಬಲಗೈ | ||||||||||||||||||||||||||||||||||||||||||||||||||||
ಬೌಲಿಂಗ್ | ಬಲಗೈ | ||||||||||||||||||||||||||||||||||||||||||||||||||||
ಪಾತ್ರ | ಆಲ್ ರೌಂಡರ್ | ||||||||||||||||||||||||||||||||||||||||||||||||||||
ಅಂತಾರಾಷ್ಟ್ರೀಯ ಮಾಹಿತಿ | |||||||||||||||||||||||||||||||||||||||||||||||||||||
ರಾಷ್ಟೀಯ ತಂಡ | |||||||||||||||||||||||||||||||||||||||||||||||||||||
ಟೆಸ್ಟ್ ಚೊಚ್ಚಲ (ಕ್ಯಾಪ್ ೭೭) | ೧೩ ಆಗಸ್ಟ್ ೨೦೧೪ v ಇಂಗ್ಲೆಂಡ್ | ||||||||||||||||||||||||||||||||||||||||||||||||||||
ಕೊನೆಯ ಟೆಸ್ಟ್ | ೧೬ ನವೆಂಬರ್ ೨೦೧೪ v ದಕ್ಷಿಣ ಆಫ್ರಿಕಾ | ||||||||||||||||||||||||||||||||||||||||||||||||||||
ಅಂ. ಏಕದಿನ ಚೊಚ್ಚಲ (ಕ್ಯಾಪ್ ೧೧೨) | ೨೧ ಆಗಸ್ಟ್ ೨೦೧೪ v ಇಂಗ್ಲೆಂಡ್ | ||||||||||||||||||||||||||||||||||||||||||||||||||||
ಕೊನೆಯ ಅಂ. ಏಕದಿನ | ೬ ನವೆಂಬರ್ ೨೦೧೯ v ವೆಸ್ಟ್ ಇಂಡೀಸ್ | ||||||||||||||||||||||||||||||||||||||||||||||||||||
ಟಿ೨೦ಐ ಚೊಚ್ಚಲ (ಕ್ಯಾಪ್ ೪೮) | ೯ ಮಾರ್ಚ್ ೨೦೧೪ v ಬಾಂಗ್ಲಾದೇಶ | ||||||||||||||||||||||||||||||||||||||||||||||||||||
ಕೊನೆಯ ಟಿ೨೦ಐ | ೮ ಮಾರ್ಚ್ ೨೦೨೦ v ಆಸ್ಟ್ರೇಲಿಯಾ | ||||||||||||||||||||||||||||||||||||||||||||||||||||
ವೃತ್ತಿ ಅಂಕಿಅಂಶಗಳು | |||||||||||||||||||||||||||||||||||||||||||||||||||||
| |||||||||||||||||||||||||||||||||||||||||||||||||||||
ಮೂಲ: Cricinfo, ೮ ಮಾರ್ಚ್ ೨೦೨ |
ಶಿಖಾ ಪಾಂಡೆ ಮೇ ೧೨, ೧೯೮೯ ರಲ್ಲಿ ಜನಿಸಿದರು.[೧] ಇವರು ಭಾರತೀಯ ಕ್ರಿಕೆಟ್ ಆಟಗಾರ್ತಿ. ಬಾಂಗ್ಲಾದೇಶದ ಕಾಕ್ಸ್ನ್ ಬಜಾರ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶದ ವಿರುದ್ಧ ಮಾರ್ಚ್ ೯ ರಂದು ತಮ್ಮ ಅಂತರಾಷ್ಟ್ರೀಯ ಟ್ವೆಂಟಿ ೨೦ (ಟಿ೨೦) ಪ್ರಥಮ ಪ್ರದರ್ಶನವನ್ನು ಮಾಡಿದರು.ಹಾಗೂ ಅದೇ ವರ್ಷದ ಆಗಸ್ಟ್ ನಲ್ಲಿ ವರ್ಮ್ಸ್ಲೆ ಮತ್ತು ಸ್ಕಾರ್ಬರೊದಲ್ಲಿ ಕ್ರಮವಾಗಿ ಇಂಗ್ಲೆಂಡ್ ವಿರುದ್ಧ ಆಡುವುದರೊಂದಿಗೆ ಆಕೆಯು ಏಕದಿನ ಅಂತರಾಷ್ಟ್ರೀಯ ಕ್ರಿಕೆಟ್ ಮತ್ತು ಟೆಸ್ಟ್ ಕ್ರಿಕೆತ್ ಚೊಚ್ಚಲ ಪಂದ್ಯಗಳನ್ನು ಆಡಿದರು. ೫ ಜುಲೈ ೨೦೧೭ ರ ವೇಳೆಗೆ ಅವರು ಎರಡು ಟೆಸ್ಟ್ ಗಳು, ಇಪ್ಪತ್ತ ಏಳು ಏಕದಿನ ಪಂದ್ಯಗಳು ಮತ್ತು ಇಪ್ಪತ್ತೆರಡು ಟಿ೨೦ ಪಂದ್ಯಗಳನ್ನು ಭಾರತಕ್ಕಾಗಿ ಆಡಿದ್ದಾರೆ. ಇವರು ಬಲಗೈ ಬ್ಯಾಟಿಂಗ್ ಮತ್ತು ಬಲಗೈ ಮಧ್ಯಮ ಪಾತ್ರ ಬೌಲಿಂಗ್ ಹಾಗೂ ಆಲ್ ರೌಂಡರ್ ಆಗಿದ್ದಾರೆ.[೨]
ಪಾಂಡೆಯವರು ತನ್ನ ಶಾಲಾ-ಶಿಕ್ಷಣವನ್ನು ಭಾರತದ ಮಾಧ್ಯಮಿಕ ಶಿಕ್ಷಣ ಕೇಂದ್ರ ಮಂಡಳಿಯಡಿಯಲ್ಲಿ ಮಾಡಿದರು. ಅವರು ಗೋವಾ ಕಾಲೇಜಿನಲ್ಲಿ ಇಂಜಿನಿಯರಿಂಗ್ನಿಂದ ವಿದ್ಯುನ್ಮಾನ ಮತ್ತು ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ೨೦೧೧ರಲ್ಲಿ ಅವರು ಭಾರತೀಯ ವಾಯುಪಡೆಗೆ ಸೇರಿದರು ಮತ್ತು ವಾಯು ಸಂಚಾರ ನಿಯಂತ್ರಕರಾದರು[೩].
ತನ್ನ ಎಂಜಿನಿಯರಿಂಗ್ ಕೋರ್ಸ್ನಿಂದ ಹೊರಬಂದ ವರ್ಷದಲ್ಲಿ ಮತ್ತು ಪಾಂಡೆ ೨೦೧೦ ಮತ್ತು ಜನವರಿ ೨೦೧೧ ರಲ್ಲಿ ಭೇಟಿ ನೀಡಿದ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ತಂಡಗಳ ವಿರುದ್ಧ ಕ್ರಮವಾಗಿ ಬೋರ್ಡ್ ಪ್ರೆಸಿಡೆಂಟ್ ಇಲೆವೆನ್ನಲ್ಲಿ ಆಡಿದರು ಮತ್ತು ೨೦೧೦ ರ ಪ್ರವಾಸದ ಪಂದ್ಯದಲ್ಲಿ ಷಾರ್ಲೆಟ್ ಎಡ್ವರ್ಡ್ಸ್ ಅವರ ಮೊದಲ "ಅಂತರರಾಷ್ಟ್ರೀಯ ವಿಕೆಟ್" ಅನ್ನು ಪಡೆದರು. ಅವರು ಗೋವಾ ಪರ ಆಟವಾಡುವುದನ್ನು ಮುಂದುವರೆಸಿದರು ಮತ್ತು ೨೦೧೩-೧೪ರ ಅಂತರ-ರಾಜ್ಯ ಟಿ ೨೦ ಪಂದ್ಯಾವಳಿಯ ನಂತರ ಬಾಂಗ್ಲಾದೇಶ ಮತ್ತು ೨೦೧೪ ರ ಐಸಿಸಿ ಮಹಿಳಾ ವಿಶ್ವ ಟ್ವೆಂಟಿ -೨೦ ಜೊತೆ ೩ ಸ್ನೇಹಪರ ಪಂದ್ಯಗಳನ್ನು ಒಳಗೊಂಡ ಭಾರತದ ಬಾಂಗ್ಲಾದೇಶ ಪ್ರವಾಸಕ್ಕೆ ಆಯ್ಕೆಯಾದರು.[೪] ದಿಲೀಪ್ ಸರ್ದೇಸಾಯಿ ನಂತರ, ಗೋವಾದಿಂದ ಯಾವುದೇ ಭಾರತೀಯ ರಾಷ್ಟ್ರೀಯ ತಂಡಕ್ಕಾಗಿ ಆಡಿದ ಮೊದಲ ಆಟಗಾರ್ತಿ. ಭಾರತಕ್ಕಾಗಿ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಆಡಿದ ಮೊದಲ ಗೋವಾ ಕ್ರಿಕೆಟ್ ಅಸೋಸಿಯೇಷನ್ ಅಂಗಸಂಸ್ಥೆ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಸರದೇಶೈ ನಂತರ ಏಕದಿನ ಮತ್ತು ಅಂತರರಾಷ್ಟ್ರೀಯ ಟಿ ೨೦ ಗಳನ್ನು ಆಡಿದ ಮೊದಲ ಗೋವಾ ಮೂಲದ ಆಟಗಾರ್ತಿ ಮತ್ತು ಟೆಸ್ಟ್ ಕ್ರಿಕೆಟ್ ಆಡಿದ ೨ ನೇ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಟಿ ೨೦ ವಿಶ್ವಕಪ್ ನಂತರ, ಅವರು ಇಂಗ್ಲೆಂಡ್ ವಿರುದ್ಧ ಏಕದಿನ ಟೆಸ್ಟ್ ಪಂದ್ಯ ಮತ್ತು ೨ ಏಕದಿನ ಪಂದ್ಯಗಳನ್ನು ಆಡಿದರು.[೫] ೨೬ ನವೆಂಬರ್ ೨೦೧೪ ರಂದು ದಕ್ಷಿಣ ಆಫ್ರಿಕಾ ವಿರುದ್ಧದ ಭಾರತದ ಗೆಲುವಿನಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಅವರು ೩ ವಿಕೆಟ್ ಪಡೆದರು ಮತ್ತು ೫೯ ರನ್ ಗಳಿಸಿದರು.[೬]
೨೦೧೭ ರ ಮಹಿಳಾ ಕ್ರಿಕೆಟ್ ವಿಶ್ವಕಪ್ ಫೈನಲ್ ತಲುಪಲು ಪಾಂಡೆ ಭಾರತೀಯ ತಂಡದ ಭಾಗವಾಗಿದ್ದರು, ಅಲ್ಲಿ ತಂಡವು ಇಂಗ್ಲೆಂಡ್ ವಿರುದ್ಧ ಒಂಬತ್ತು ರನ್ಗಳಿಂದ ಸೋತಿದೆ. ಜನವರಿ ೨೦೨೦ ರಲ್ಲಿ, ಆಸ್ಟ್ರೇಲಿಯಾದಲ್ಲಿ ನಡೆದ ೨೦೨೦ ಐಸಿಸಿ ಮಹಿಳಾ ಟಿ ೨೦ ವಿಶ್ವಕಪ್ಗಾಗಿ ಭಾರತದ ತಂಡದಲ್ಲಿ ಸ್ಥಾನ ಪಡೆದರು.[೭]
ಐಸಿಸಿ ಮಹಿಳಾ ವಿಶ್ವಕಪ್ ೨೦೧೭ರ ರನ್ನರ್ ಆಫ್ ಆಗಿ ಕೊನೆಗೊಂಡ ಭಾರತ ಮಹಿಳಾ ಕ್ರಿಕೆಟ್ ತಂಡದ ಸದ್ಯಸ ಶಿಖಾ ಪಾಂಡೆ ಅವರಿಗೆ ಭಾರತೀಯ ವಾಯುಪಡೆಯಿಂದ ಸನ್ಮಾನಿಸಿದರು. ನವದೆಹಲಿಯ ವಾಯುಪಡೆ ಪ್ರಧಾನ ಕಾರ್ಯಾಲಯನ ಏರ್ ಚೀಫ್ ಮಾರ್ಷಲ್ ಬಿ.ಎಸ್.ಧನೊವಾದಿಂದ ಕ್ರಿಕೆಟರ್ ಚೆಕ್ ಮತ್ತು ಪದಕ ಪಡೆದಿದ್ದಾರೆ. ಐಸಿಸಿ ಮಾಹಿಳಾ ವಿಶ್ವಕಪ್ ೨೦೧೭ರ ಸಮಯದಲ್ಲಿ ಜೂನ್ ೨೪ ರಿಂದ ಜುಲೈ ೧೭ರ ವರೆಗೆ ನಡೆದ ಪಂದ್ಯಾವಳಿಯಲ್ಲಿ ಪಾಂಡೆಯವರು ಅದ್ಭುತ ಪ್ರದರ್ಶನ ನೀಡಿದರು.