Sidlaghatta | |
ರಾಜ್ಯ - ಜಿಲ್ಲೆ |
ಕರ್ನಾಟಕ - Chikkaballapur |
ನಿರ್ದೇಶಾಂಕಗಳು | |
ವಿಸ್ತಾರ - ಎತ್ತರ |
km² - 878 ಮೀ. |
ಸಮಯ ವಲಯ | IST (UTC+5:30) |
ಜನಸಂಖ್ಯೆ (2001) - ಸಾಂದ್ರತೆ |
41105 - {{{population_density}}}/ಚದರ ಕಿ.ಮಿ. |
ಶಿಡ್ಲಘಟ್ಟ | |
---|---|
ಶಿಡ್ಲಘಟ್ಟ ಕರ್ನಾಟಕ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯ ಒಂದು ತಾಲೂಕು. ಪಿನ್ ಕೋಡ್ 562105
ಶಿಡ್ಲಘಟ್ಟ ೧೩.೩೯° ಎನ್ , ೭೭.೮೬° ಇ ನಲ್ಲಿದೆ. ಇದು ೮೭೮ ಮೀಟರ್ ರಷ್ಟು (೨೮೮೦ ಅಡಿ) ಸರಾಸರಿ ಎತ್ತರದಲ್ಲಿದೆ. ಇದು ಕರ್ನಾಟಕ ರಾಜ್ಯದ ರೇಷ್ಮೆ ನಗರ.
ವಿ ಮುನಿಯಪ್ಪ (ಕಾಂಗ್ರೆಸ್) ಪ್ರಸ್ತುತ ಎಂಎಲ್ಎ (15 ನೇ ಕರ್ನಾಟಕ ಅಸೆಂಬ್ಲಿ) ಆಗಿದ್ದಾರೆ.
೨೦೦೧ ರ ಭಾರತದ ಜನಗಣತಿಯ ಪ್ರಕಾರ, ಶಿಡ್ಲಘಟ್ಟ ೪೧.೧೦೫ ಜನಸಂಖ್ಯೆಯನ್ನು ಹೊಂದಿತ್ತು. ಒಟ್ಟು ಜನಸಂಖ್ಯೆಯಲ್ಲಿ ಶೇಕಡ ೪೮% ಮಹಿಳೆಯರು ಮತ್ತು ೫೨% ಪುರುಷರು ಇದ್ದಾರು.ರಾಷ್ಟ್ರೀಯ ಸಾಕ್ಷರತೆ(೫೯.೫%) ಸರಾಸರಿಗಿಂತ ಶಿಡ್ಲಘಟ್ಟ(೬೨%) ಹೆಚ್ಚಿನ ಸರಾಸರಿ ಸಾಕ್ಷರತೆ ಪ್ರಮಾಣವನ್ನು ಹೊoದಿತ್ತು. ಶಿಡ್ಲಘಟ್ಟ ತಾಲೂಕು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದಲ್ಲಿದೆ. ಯಾವುದೇ ಕುಡಿಯುವ ನೀರಿನ ಸೌಕರ್ಯ ಲಭ್ಯವವಿಲ್ಲ .ಶಿಡ್ಲಘಟ್ಟ ರೇಷ್ಮೆ ಮತ್ತು ರೇಷ್ಮೆ ಮಾರುಕಟ್ಟೆ ಗೆ (cacoon ಮಾರುಕಟ್ಟೆ) ಪ್ರಸಿದ್ಧ. ಈ ಮಾರುಕಟ್ಟೆ ಏಷ್ಯಾ ದ ಎರಡನೇ ಅತಿ ದೊಡ್ಡ cacoon ಮಾರುಕಟ್ಟೆ. ಈ ಸ್ಥಳದಲ್ಲಿ ಉತ್ತಮ ಗುಣಮಟ್ಟದ ರಾ ಮತ್ತು ತಿರುಚಿದ ರೇಷ್ಮೆ ಉತ್ಪಾದಿಸುವ ಹಲವು ಸಣ್ಣ ಪ್ರಮಾಣದ ಕೈಗಾರಿಕೆಗಳಿವೆ ಮತ್ತು ತಮಿಳು ನಾಡು, ಆಂಧ್ರ ಪ್ರದೇಶ, ಗುಜರಾತ್ ಇತ್ಯಾದಿ ಸ್ಥಳಗಳಿಗೆ ರಫ್ತು ಮಾಡುತ್ತ್ತಾರೆ.
ನೀರಿನ ಮೂಲಗಳು ಕಡಿಮೆ ಆಗಿರುವುದರಿಂದ ರೈತರು ಕೃಷಿಗೆ ಮಳೆಯನ್ನು ಅವಲಂಬಿಸಿರುತ್ತಾರೆ .
ಪ್ರಸಿದ್ಧರು : ಹರಿದಾಸ ಪರಂಪರೆ ಕೊಂಡಿ ಅನಿಸಿಕೊಂಡಿರೋ ಜಿ.ಎಸ್.ನರಸಿಂಹಮೂರ್ತಿ ಅವರು ಹುಟ್ಟಿ ಬೆಳೆದದ್ದು ಗಂಜಿಗುಂಟೆಯಲ್ಲಿ. ಗಂಜಿಗುಂಟೆ ಶಿಡ್ಲಘಟ್ಟ ತಾಲೂಕಿನ ಪ್ರಮುಖ ಗ್ರಾಮ. ಜಿ.ಎಸ್.ಎನ್ ಪಿಟೀಲು ವಾದಕರೂ ಹೌದು. ಗ್ರಾಮದ ತುಸು ದೂರದಲ್ಲಿರುವ ರೆಡ್ಡಿ ಕೆರೆಯ ಕೋಡಿ ನೋಡುವುದೇ ಒಂದು ವಿಶಿಷ್ಠ ಅನುಭವ.
ಗ್ರಾಮಗಳು
ಶಿಡ್ಲಘಟ್ಟ ತಾಲೂಕಿನ ಗ್ರಾಮಗಳ ಪಟ್ಟಿ.
|
|
|
handiganala
ಶಿಡ್ಲಘಟ್ಟದ ಸುತ್ತಮುತ್ತಲಿನ ಅನೇಕ ಭೇಟಿ ಸ್ಥಳಗಳು ಕೈವಾರ , ತಲಕಾಯಲಬೆಟ್ಟ. ಬ್ಯಾಟರಾಯನಸ್ವಾಮಿ. ರಾಮಲಿಂಗೇಶ್ವರಬೆಟ್ಟ. ಶ್ರೀಸಾಯಿಬಾಬ ಮಂದಿರ, ಅನಂತ ಪದ್ಬನಾಬ ದೇವಸ್ಥಾನ. ನಂದಿಬೆಟ್ಟ ಇಲ್ಲಿಂದ ೩೫-೪೦ ಕಿ. ಕೈವಾರಕ್ಕೆ ಸುಮಾರು ೩೦-೪೫ ನಿಮಿಷಗಳ ಪ್ರಯನವಿದೆ. ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ೨೫ ಕಿಮೀ ದೂರದಲ್ಲಿದೆ. ಶಿಡ್ಲಘಟ್ಟ ದಿοದ ಮೇಲೂರು ಇಲ್ಲಿಂದ ೭ ನಿಮಿಷಗಳ ಪ್ರಯಾಣ ಇಲ್ಲಿನ ಗοಗಾ ದೇವಿ ದೇವಾಲಯ ಜಗತ್ ಪ್ರಸಿದ್ದಿ ಪಡೆದಿದೆ, ಇಲ್ಲಿ ಪ್ರತಿ ವರ್ಷ ಜಾತ್ರೆ ಹಾಗೂ ರಥೋತ್ಸ್ತವ ಏಪ್ರಿಲ್ ಮಾಸ ದಲ್ಲಿ ನಡೆಯುತ್ತದೆ. ತಾಲ್ಲೂಕು ಕೇಂದ್ರದಿಂದ ಎಸ್.ದೇವಗಾನಹಳ್ಳಿ ಗ್ರಾಮ ಪಂಚಾಯಿತಿ ಇಲ್ಲಿಂದ 32 ಕಿ.ಮೀ ದೂರದಲ್ಲಿ ರಾಮಸಮುದ್ರ ಕೆರೆ ಇದ್ದು ಇದು ತಾಲ್ಲೂಕಿನ ಅತಿದೊಡ್ಡ ಕೆರೆ ಹಾಗು ಜಿಲ್ಲೆ 2ನೇ ಅತಿದೊಡ್ಡ ಕೆರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.