ಶಿವ ಪುರಾಣ

The Creation of the Cosmic Ocean and the Elements, folio from the Shiva Purana, c. 1828.

ಶಿವ ಪುರಾಣ ಅಥವಾ ಶಿವ ಮಹಾಪುರಾಣ ಶಿವನಿಗೆ ಸಮರ್ಪಿತ ಪುರಾಣಗಳ ಪೈಕಿ ಒಂದು. ಈ ಪಠ್ಯದ ವಾಯವೀಯ ಸಂಹಿತಾದಲ್ಲಿ ಹೇಳಲಾಗಿರುವ ಒಂದು ಸಂಪ್ರದಾಯದ ಪ್ರಕಾರ, ಮೂಲ ಪಠ್ಯವು ಶೈವ ಪುರಾಣ ಎಂದು ಪರಿಚಿತವಾಗಿತ್ತು. ಶಿವ ಪುರಾಣವನ್ನು ವೇದವ್ಯಾಸರು ರಚಿಸಿದರು ಎಂದು ಹೇಳಲಾಗಿದೆ.[]ಶಿವ ಪುರಾಣವು ಹಿಂದುಗಳ ಹದಿನೆಂಟು ಪುರಾಣಗಳಲ್ಲಿ ಒಂದು. ಈ ಪುರಾಣವು ಶಿವ ಮತ್ತು ಪಾರ್ವತಿಯನ್ನು ಕುರಿತು ಬರೆಯಲಾಗಿದೆ. ಶಿವ ಪುರಾಣವನ್ನು ಹನ್ನೆರಡು ಸಂಹಿತಿಗಳಾಗಿ ವಿಂಗಡಿಸಲಾಗಿದೆ. ೧೯-೨೦ನೇ ಶತಮಾನಗಳಲ್ಲಿ ವಾಯು ಪುರಾಣವನ್ನು ಶಿವ ಪುರಾಣವಾಗಿ ಪರಿಗಣಿಸಲಾಗಿತ್ತು ಆನಂತರ ಈ ಪುರಾಣಗಳೆರಡು ಬೇರೆ ವಿಷಯವನ್ನು ಹೊಂದಿರುವುದರಿಂದ ಒಂದನ್ನು ಮಹಾ ಪುರಾಣ ಮತ್ತೊಂದನ್ನು ಉಪ ಪುರಾಣವೆಂದು ಪರಿಗಣಿಸಲಾಗಿತ್ತು.

ಉಲ್ಲೇಖಗಳು

[ಬದಲಾಯಿಸಿ]
  1. "Shri shiv mahapuran". Shivpuran.


ಬಾಹ್ಯ ಸಂಪರ್ಕಗಳು

[ಬದಲಾಯಿಸಿ]