ವೈಯುಕ್ತಿಕ ಮಾಹಿತಿ | |||||||||||||||||||||||||||||||||||||||||||||||||||||
---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|
ಪುರ್ಣ ಹೆಸರು | ಶೈನಿ ಕುರಿಸಿಂಗಲ್ ಅಬ್ರಹಾಂ-ವಿಲ್ಸನ್ | ||||||||||||||||||||||||||||||||||||||||||||||||||||
ರಾಷ್ರೀಯತೆ | ಭಾರತೀಯರು | ||||||||||||||||||||||||||||||||||||||||||||||||||||
ಜನನ | ತೊಡುಪುಳ, ಇಡುಕ್ಕಿ, ಕೇರಳ, ಭಾರತ | ೮ ಮೇ ೧೯೬೫||||||||||||||||||||||||||||||||||||||||||||||||||||
Sport | |||||||||||||||||||||||||||||||||||||||||||||||||||||
ದೇಶ | ಭಾರತ | ||||||||||||||||||||||||||||||||||||||||||||||||||||
ಕ್ರೀಡೆ | ಟ್ರ್ಯಾಕ್ ಮತ್ತು ಫೀಲ್ಡ್ | ||||||||||||||||||||||||||||||||||||||||||||||||||||
ಸ್ಪರ್ಧೆಗಳು(ಗಳು) | ೪೦೦ ಮೀಟರ್ ೮೦೦ ಮೀಟರ್ | ||||||||||||||||||||||||||||||||||||||||||||||||||||
Achievements and titles | |||||||||||||||||||||||||||||||||||||||||||||||||||||
ವೈಯಕ್ತಿಕ ಪರಮಶ್ರೇಷ್ಠ | ೪೦೦ ಮೀಟರ್: ೫೨.೧೨ (೧೯೯೫) ೮೦೦ ಮೀಟರ್: ೧:೫೯.೮೫ (೧೯೯೫) | ||||||||||||||||||||||||||||||||||||||||||||||||||||
ಪದಕ ದಾಖಲೆ
|
ಶೈನಿ ಕುರಿಸಿಂಗಲ್ ವಿಲ್ಸನ್ (ನೀ ಅಬ್ರಹಾಂ, ಜನನ ೮ ಮೇ ೧೯೬೫) ಅವರು ನಿವೃತ್ತ ಭಾರತೀಯ ಅಥ್ಲೀಟ್. ಅವರು ೧೪ ವರ್ಷಗಳಿಂದ ೮೦೦ ಮೀಟರ್ ಓಟದಲ್ಲಿ ರಾಷ್ಟ್ರೀಯ ಚಾಂಪಿಯನ್ ಆಗಿದ್ದರು.[೩] ಶೈನಿ ಅಬ್ರಹಾಂ ವಿಲ್ಸನ್ (ಶೈನಿ ಅಬ್ರಹಾಂ) ಅವರು ಅಂತರರಾಷ್ಟ್ರೀಯ ಸ್ಪರ್ಧೆಯಲ್ಲಿ ೭೫ ಕ್ಕೂ ಹೆಚ್ಚು ಬಾರಿ ಭಾರತವನ್ನು ಪ್ರತಿನಿಧಿಸಿದ್ದಾರೆ. ನಾಲ್ಕು ವಿಶ್ವಕಪ್‌ಗಳಲ್ಲಿ ಏಷ್ಯಾವನ್ನು ಪ್ರತಿನಿಧಿಸಿದ ಹೆಚ್ಚುವರಿ ಹಿರಿಮೆಯನ್ನು ಅವರು ಹೊಂದಿದ್ದಾರೆ. ೧೯೮೫ ರಿಂದ ಜಕಾರ್ತಾದಲ್ಲಿ ಸತತವಾಗಿ ಆರು ಏಷ್ಯನ್ ಟ್ರ್ಯಾಕ್ ಮತ್ತು ಫೀಲ್ಡ್ ಮೀಟ್‌ಗಳಲ್ಲಿ ಭಾಗವಹಿಸಿದ ಏಕೈಕ ಕ್ರೀಡಾಪಟು ಇವರು. ಈ ಅವಧಿಯಲ್ಲಿ ಅವರು ಏಷ್ಯನ್ ಸ್ಪರ್ಧೆಗಳಲ್ಲಿ ಏಳು ಚಿನ್ನ, ಐದು ಬೆಳ್ಳಿ ಮತ್ತು ಎರಡು ಕಂಚಿನ ಪದಕಗಳನ್ನು ಗೆದ್ದರು. ಅವರು ಸೆವೆನ್ ಸೌತ್ ಏಷ್ಯನ್ ಫೆಡರೇಶನ್ (ಎಸ್‌ಎಎಫ್) ಮೀಟ್‌ಗಳಲ್ಲಿ ಸ್ಪರ್ಧಿಸಿ ಒಟ್ಟು ೧೮ ಚಿನ್ನ ಮತ್ತು ಎರಡು ಬೆಳ್ಳಿ ಪದಕಗಳನ್ನು ತಮ್ಮದಾಗಿಸಿಕೊಂಡರು.[೩][೪]
ಶೈನಿ ೮ ಮೇ ೧೯೬೫ ರಂದು ಕೇರಳದ ಇಡುಕ್ಕಿ ಜಿಲ್ಲೆಯ ತೊಡುಪುಳದಲ್ಲಿ ಜನಿಸಿದರು. ಶೈನಿ ಬಾಲ್ಯದಿಂದಲೇ ಅಥ್ಲೆಟಿಕ್ಸ್‌ನಲ್ಲಿ ಆಸಕ್ತಿ ಹೊಂದಿದ್ದರು. ಕೊಟ್ಟಾಯಂನಲ್ಲಿ ಕ್ರೀಡಾ ವಿಭಾಗಕ್ಕೆ ಸೇರಿದ ನಂತರ ತಮ್ಮ ಕೌಶಲ್ಯವನ್ನು ಇನ್ನೂ ಬೆಳೆಸಿಕೊಂಡರು.
ವಾಸ್ತವವಾಗಿ ಶೈನಿ, ಪಿ. ಟಿ ಉಷಾ ಮತ್ತು ಎಂ. ಡಿ. ವಲ್ಸಮ್ಮರು ಕೇರಳದ ವಿವಿಧ ಭಾಗಗಳಲ್ಲಿ ಒಂದೇ ಕ್ರೀಡಾ ವಿಭಾಗದಲ್ಲಿ ಅಧ್ಯಯನ ಮಾಡಿದ್ದರು. ನಂತರ ಅವರಿಗೆ ಎನ್‌ಐಎಸ್ ತರಬೇತುದಾರ ಪಿ.ಜೆ ದೇವಾಸಿಯಾ ಅವರಿಂದ ತರಬೇತಿ ನೀಡಲಾಯಿತು.
ಪಲೈನಲ್ಲಿರುವ ಅಲ್ಫೋನ್ಸಾ ಕಾಲೇಜಿಗೆ ತೆರಳುವ ಮುನ್ನ ಶೈನಿ ತಿರುವನಂತಪುರದ ಜಿ.ವಿ. ರಾಜಾ ಕ್ರೀಡಾ ಶಾಲೆಯಲ್ಲಿ ತರಬೇತಿ ಪಡೆದರು.
ಅವರು ಪ್ರಸ್ತುತ ಭಾರತೀಯ ತಂಡದ ಆಯ್ಕೆಗಾರ್ತಿ ಮತ್ತು ಆಯ್ಕೆ ಸಮಿತಿ ಮಂಡಳಿಗೆ ಸರ್ಕಾರದ ನಾಮಿನಿಯಾಗಿದ್ದಾರೆ.
೧೯೮೨ ರಲ್ಲಿ ನವದೆಹಲಿಯಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಶೈನಿ ಅಬ್ರಹಾಂ ಮತ್ತು ಪಿಟಿ ಉಷಾ ದೇಶವನ್ನು ಪ್ರತಿನಿಧಿಸಿದಾಗಿನಿಂದ ಶೈನಿ ಅಬ್ರಹಾಂ ಅವರ ಅಥ್ಲೆಟಿಕ್ಸ್ ವೃತ್ತಿಜೀವನವು ಪಿಟಿ ಉಷಾ ಅವರ ವೃತ್ತಿಜೀವನದ ಜೊತೆಗೆ ನಡೆಯಿತು. ದೆಹಲಿಯಲ್ಲಿ ನಡೆದ ಏಷ್ಯನ್ ಗೇಮ್ಸ್‌ಗೆ ಒಂದು ವರ್ಷದ ಮೊದಲು ಶೈನಿ ೮೦೦ ಮೀಟರ್ ಓಟದಲ್ಲಿ ರಾಷ್ಟ್ರೀಯ ಚಾಂಪಿಯನ್ ಆದರು.[೫]
೧೯೯೨ ರ ಬಾರ್ಸಿಲೋನಾ ಒಲಿಂಪಿಕ್ಸ್‌ನಲ್ಲಿ ಅವರು ಭಾರತದ ಧ್ವಜಧಾರಿಯಾದ ಮೊದಲ ಮಹಿಳೆಯಾದರು. ೧೯೮೯ ರಲ್ಲಿ ದೆಹಲಿಯಲ್ಲಿ ನಡೆದ ಏಷ್ಯನ್ ಟ್ರ್ಯಾಕ್ ಮತ್ತು ಫೀಲ್ಡ್ ಮೀಟ್ ಅವರ ಅತ್ಯಂತ ಸ್ಮರಣೀಯ ಸ್ಪರ್ಧೆ. ಅದರಲ್ಲಿ ಅವರು ೮೦೦ ಮೀಟರ್ ಓಡಿ ಚೀನಾದ ಸನ್ ಸುಮೇಯ್ ಅವರ ನಂತರ ಎರಡನೇ ಸ್ಥಾನ ಪಡೆದರು. ಆದರೆ ಸುಮೇಯ್‌ರ ಡೋಪಿಂಗ್ ಪರೀಕ್ಷೆಯಲ್ಲಿ ಧನಾತ್ಮಕ ಫಲಿತಾಂಶ ಬಂದಿದ್ದರಿಂದ ಶೈನಿಯವರನ್ನೇ ವಿಜೇತೆ ಎಂದು ಘೋಷಿಸಲಾಯಿತು. ಅವರ ಒಂದು ದೊಡ್ಡ ಸಾಧನೆಯೆಂದರೆ, ಅವರು ಮಗುವಿನ ಜನನದ ನಂತರ ಇನ್ನೂ ವೇಗವಾಗಿ ಓಡುತ್ತಿದ್ದರು. ೧೯೯೫ ರಲ್ಲಿ ಚೆನ್ನೈನಲ್ಲಿ ನಡೆದ ಸೌತ್ ಏಷ್ಯನ್ ಫೆಡರೇಶನ್ (ಎಸ್‌ಎಎಫ್) ಕ್ರೀಡಾಕೂಟದಲ್ಲಿ ೮೦೦ ಮೀ ಓಟವನ್ನು ೧:೫೯.೮೫ ರ ಅವಧಿಯಲ್ಲಿ ಮುಗಿಸಿ ಹೊಸ ದಾಖಲೆಯನ್ನು ಸ್ಥಾಪಿಸಿದರು.
ಶೈನಿ, ಡಿಸೆಂಬರ್ ೧೯೮೮ ರಲ್ಲಿ ಈಜುಗಾರ ವಿಲ್ಸನ್ ಚೆರಿಯನ್ ಅವರನ್ನು ವಿವಾಹವಾದರು.[೬]
ಶೈನಿ ಅವರಿಗೆ ೧೯೮೫ ರಲ್ಲಿ ಅರ್ಜುನ ಪ್ರಶಸ್ತಿ, ೧೯೯೬ ರಲ್ಲಿ ಬಿರ್ಲಾ ಪ್ರಶಸ್ತಿ ಮತ್ತು ೧೯೯೮ ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಯಿತು. ಅವರು ಏಷ್ಯಾದ ಟಾಪ್ ಟೆನ್ ಅಥ್ಲೀಟ್‌ಗಳಲ್ಲಿ ಒಬ್ಬರಾಗಿದ್ದಕ್ಕಾಗಿ ೧೯೯೧ ರಲ್ಲಿ ಚೀನೀ ಪತ್ರಕರ್ತರ ಪ್ರಶಸ್ತಿಗೆ ಭಾಜನರಾಗಿದ್ದಾರೆ.