ಶ್ರಾವಣಿ ಸುಬ್ರಮಣ್ಯ (ಚಲನಚಿತ್ರ) | |
---|---|
ಶ್ರಾವಣಿ ಸುಬ್ರಮಣ್ಯ | |
ನಿರ್ದೇಶನ | ಮಂಜು ಸ್ವರಾಜ್ |
ನಿರ್ಮಾಪಕ | ಕೆ.ಎ. ಸುರೇಶ್ |
ಪಾತ್ರವರ್ಗ | ಗಣೇಶ್ ಅನಂತ್‌ನಾಗ್, ತಾರಾ, ಅವಿನಾಶ್, ವಿನಯ್ ಪ್ರಸಾದ್, ಸಾಧು ಕೋಕಿಲ |
ಸಂಗೀತ | ವಿ. ಹರಿಕೃಷ್ಣ. |
ಬಿಡುಗಡೆಯಾಗಿದ್ದು | ೨೦೧೩ |
ಗಣೇಶ್ ಮುಖ್ಯ ಭೂಮಿಕೆಯಲ್ಲಿರುವ ಚಿತ್ರ ' ಶ್ರಾವಣಿ ಸುಬ್ರಮಣ್ಯ' . ಮಂಜು ಸ್ವರಾಜ್ ಚಿತ್ರ ನಿರ್ದೇಶಕ. ಅಮೂಲ್ಯ ನಾಯಕಿ. ಅನಂತ್‌ನಾಗ್, ತಾರಾ, ಅವಿನಾಶ್, ವಿನಯ್ ಪ್ರಸಾದ್, ಸಾಧು ಕೋಕಿಲ ಸೇರಿದಂತೆ ಸಾಕಷ್ಟು ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ.
ಸುಬ್ರಮಣ್ಯನಾಗಿ ಗಣೇಶ್ ಹಾಗೂ ಶ್ರಾವಣಿಯಾಗಿ ಅಮೂಲ್ಯ ಕಾಣಿಸಿಕೊಂಡಿದ್ದಾರೆ. ನಾಯಕ ಇಲ್ಲಿ ಅನಾಥ. ಸಂಗೀತಗಾರ ಆಗಬೇಕು ಅಂತ ಆಕಾಂಕ್ಷೆ ಇರುವ ಹುಡುಗ. ತುಂಬ ಜವಾಬ್ದಾರಿ ಇರುವ ಪೋರನಾಗಿ, ಗಣೇಶ್ ಪ್ರಬುದ್ಧ ಅಭಿನಯ ನೀಡಿದ್ದಾರೆ. ಆದರೆ ಮತ್ತೊಂದೆಡೆ ನಾಯಕಿ ತುಂಬ ಮುಗ್ಧ ಹುಡುಗಿ. ಅದರೊಂದಿಗೆ ಮಕ್ಕಳಲ್ಲಿ ಇರುವ ತುಂಟತನವೂ ಇರುತ್ತೆ. ತುಂಬು ಕುಟುಂಬದಲ್ಲಿ ಬೆಳೆದವಳು. ಆ ಕುಟುಂಬದ ಏಕೈಕ ಹೆಣ್ಣುಮಗು ಈಕೆ. ಕಾಲೇಜಿಗೆ ಹೋಗುವ ಹುಡುಗಿಯಾದರೂ, ಜೀವನದಲ್ಲಿ ಯಾವುದೇ ನಿರ್ದಿಷ್ಟ ಗುರಿ ಇರುವುದಿಲ್ಲ.
ಇಂಥ ಪರಸ್ಪರ ತದ್ವಿರುದ್ಧ ಸ್ವಭಾವದ ಯುವಜೋಡಿ ಭೇಟಿಯಾದರೆ ಹೇಗಿರುತ್ತೆ ಎಂಬುದು ಚಿತ್ರಕತೆಯಲ್ಲಿ ಮುಂದುವರಿಯುತ್ತದೆ. ಇಲ್ಲಿನ ಕತೆಯ ವಿಶೇಷತೆಯೆಂದರೆ, ಇಲ್ಲಿ ಯಾರೂ ಯಾರ ಹಿಂದೆಯೂ ಬೀಳುವುದಿಲ್ಲ. ಪ್ರೀತಿಗಾಗಿ ಅಂಗಲಾಚುವುದಿಲ್ಲ. ಆದರೆ ಪ್ರೀತಿ ಮಾತ್ರ ತುಂಬ ಗಾಢವಾಗಿರುತ್ತದೆ. ಮಧುರ ತುಡಿತಗಳು ಮರ್ಯಾದೆಯ ಚೌಕಟ್ಟಿನಲ್ಲಿಯೇ ಇರುತ್ತವೆ. ಅದಕ್ಕೇ 'ಮ್ಯಾಡ್ ಫಾರ್ ಈಚ್ ಅದರ್' ಎಂಬ ಅಡಿ ಶೀರ್ಷಿಕೆ ಕೊಡಲಾಗಿದೆ
ಚಿತ್ರವು ಡಿಸೆಂಬರ್೨೦೧೩ ರಲ್ಲಿ ಬಿಡುಗಡೆ ಆಗಿದೆ.
ವಿ. ಹರಿಕೃಷ್ಣ ಚಿತ್ರಕ್ಕೆ ಸಂಗೀತ ವನ್ನು ಸಂಯೋಜಿಸಿದ್ದಾರೆ. ಧ್ವನಿಮುದ್ರಿಕೆಯಲ್ಲಿ ಹಿರಿಯ ಹಿನ್ನೆಲೆ ಗಾಯಕಿ ಮಂಜುಳಾ ಗುರುರಾಜ್ ಹತ್ತು ವರ್ಷಗಳ ನಂತರ ಹಾಡಿರುವ ಹಾಡಿದೆ..[೧]ಇದರಲ್ಲಿ ನಾಲ್ಕು ಹಾಡುಗಳಿವೆ.[೨]
ಸಂ. | ಹಾಡು | ಸಾಹಿತ್ಯ | ಹಾಡುಗಾರರು | ಸಮಯ |
---|---|---|---|---|
1. | "ಆಕಳ ಬೆಣ್ಣೆ" | ಪ್ರೊ. ಕೃಷ್ಣೇಗೌಡ | ಮಂಜುಳಾ ಗುರುರಾಜ್ | 3:45 |
2. | "ಕಣ್ಣಲ್ಲೇ ಕಣ್ಣಿಟ್ಟು" | ವಿ. ನಾಗೇಂದ್ರ ಪ್ರಸಾದ್ | ಶಾನ್ | 4:22 |
3. | "ನಗುವ ಮೊಗವ" | ಕವಿರಾಜ್ | ಸೋನು ನಿಗಮ್, ನಂದಿತಾ | 4:15 |
4. | "ನಿನ್ನ ನೋಡೋ" | ಕವಿರಾಜ್ | ಸೋನು ನಿಗಮ್ | 4:30 |
ಒಟ್ಟು ಸಮಯ: | 16:52 |