ಶ್ರೀ ಕೃಷ್ಣದೇವರಾಯ |
---|
ಶ್ರೀ ಕೃಷ್ಣದೇವರಾಯ 1970ರ ಒಂದು ಕನ್ನಡ ಐತಿಹಾಸಿಕ ನಾಟಕೀಯ ಚಲನಚಿತ್ರ. ಇದನ್ನು ಬಿ.ಆರ್.ಪಂತುಲು ನಿರ್ಮಾಣ ಮಾಡಿ ನಿರ್ದೇಶಿಸಿದರು. ವಿಜಯನಗರ ಸಾಮ್ರಾಜ್ಯದಲ್ಲಿನ ೧೬ನೇ ಶತಮಾನದ ಸಾಮ್ರಾಟನಾಗಿದ್ದ ಕೃಷ್ಣದೇವರಾಯನಾಗಿ ರಾಜ್‌ಕುಮಾರ್ ನಟಿಸಿದ್ದಾರೆ. ಆರ್.ನಾಗೇಂದ್ರರಾವ್, ಬಿ. ಆರ್. ಪಂತುಲು, ನರಸಿಂಹರಾಜು ಮತ್ತು ಭಾರತಿ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದು ರಾಜ್‍ಕುಮಾರ್‌ರ ಮೊದಲ ಸರ್ವವರ್ಣಕ ಚಲನಚಿತ್ರ.[೧]
1969–70 ಸಾಲಿನ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಈ ಚಲನಚಿತ್ರವು ಮೂರು ಪ್ರಶಸ್ತಿಗಳನ್ನು ಗೆದ್ದಿತು - ಅತ್ಯುತ್ತಮ ನಟ (ಬಿ. ಆರ್. ಪಂತುಲು), ಅತ್ಯುತ್ತಮ ನಟಿ (ಎನ್. ಭಾರತಿ) ಮತ್ತು ಅತ್ಯುತ್ತಮ ಸಂಗೀತ ನಿರ್ದೇಶಕ (ಟಿ.ಜಿ.ಲಿಂಗಪ್ಪ). ಚಿತ್ರಮಂದಿರಗಳಲ್ಲಿ ಈ ಚಿತ್ರವು 28 ವಾರ ಓಡಿತು.[೨]
ಆದರೆ, ಬಿ. ಆರ್. ಪಂತುಲು ಪ್ರಶಸ್ತಿಯನ್ನು ಸ್ವೀಕರಿಸಲು ನಿರಾಕರಿಸಿದರು. ೨೩ ಸೆಪ್ಟೆಂಬರ್ ೧೯೭೦ರ ಒಂದು ಪತ್ರದಲ್ಲಿ, ಕೃಷ್ಣದೇವರಾಯನ ಪಾತ್ರವಹಿಸಿದ ರಾಜ್‍ಕುಮಾರ್ ಈ ಪ್ರಶಸ್ತಿಗೆ ಹೆಚ್ಚು ಅರ್ಹರಾಗಿದ್ದಾರೆ ಎಂದು ಅವರು ಬರೆದಿದ್ದರು. ಈ ಘಟನೆಯ ನಂತರ, ಕರ್ನಾಟಕ ಸರ್ಕಾರವು ಪ್ರಶಸ್ತಿಗಳ ಎರಡು ಪ್ರತ್ಯೇಕ ವಿಭಾಗಗಳನ್ನು ಆರಂಭಿಸಿತು - ಒಂದು ಮುಖ್ಯ ಪಾತ್ರಗಳಿಗೆ ಮತ್ತು ಇನ್ನೊಂದು ಪೋಷಕ ಪಾತ್ರಗಳಿಗೆ. ಈ ಚಲನಚಿತ್ರವನ್ನು ೧೯೭೧ರಲ್ಲಿ ತೆಲುಗಿನಲ್ಲಿ ಶ್ರೀ ಕೃಷ್ಣದೇವರಾಯಲು ಎಂದು ಡಬ್ ಮಾಡಲಾಯಿತು.[೩][೪]
ಟಿ. ಜಿ. ಲಿಂಗಪ್ಪ ಈ ಚಿತ್ರದ ಸಂಗೀತವನ್ನು ಸಂಯೋಜಿಸಿದರು ಮತ್ತು ಧ್ವನಿವಾಹಿನಿಗೆ ಸಾಹಿತ್ಯವನ್ನು ಕೆ. ಪ್ರಭಾಕರ ಶಾಸ್ತ್ರಿ ಮತ್ತು ವಿಜಯ ನಾರಸಿಂಹ ಬರೆದರು. ಈ ಧ್ವನಿಸಂಪುಟದಲ್ಲಿ ಒಂಬತ್ತು ಹಾಡುಗಳಿವೆ.[೫]
ಹಾಡುಗಳ ಪಟ್ಟಿ | ||||
---|---|---|---|---|
ಸಂ. | ಹಾಡು | ಸಾಹಿತ್ಯ | ಗಾಯಕ(ರು) | ಸಮಯ |
1. | "ಶರಣು ವಿರೂಪಾಕ್ಷ ಶಶಿಶೇಖರ" | ಕೆ. ಪ್ರಭಾಕರ ಶಾಸ್ತ್ರಿ | ಎಸ್. ಜಾನಕಿ | 4:12 |
2. | "ಖಾನಾ ಪೀನಾ" | ಪಂಡಿತ್ ದೀಪಕ್ ಚಕ್ರವರ್ತಿ | ಎಸ್. ಜಾನಕಿ | 3:25 |
3. | "ಬಹುಜನ್ಮದ ಪೂಜಾಫಲ" | ಕೆ. ಪ್ರಭಾಕರ ಶಾಸ್ತ್ರಿ | ಪಿ. ಬಿ. ಶ್ರೀನಿವಾಸ್, ಎಸ್. ಜಾನಕಿ | 2:59 |
4. | "ಶ್ರೀ ಚಾಮುಂಡೇಶ್ವರಿ" | ಕೆ. ಪ್ರಭಾಕರ ಶಾಸ್ತ್ರಿ | ಪಿ. ಲೀಲಾ, ಸಿರ್ಕಾಳಿ ಗೋವಿಂದರಾಜನ್ | 3:18 |
5. | "ಚೆನ್ನರಸಿ ಚೆಲುವರಸಿ" | ಕೆ. ಪ್ರಭಾಕರ ಶಾಸ್ತ್ರಿ | ಎಸ್. ಜಾನಕಿ, ಪಿ. ಲೀಲಾ | |
6. | "ಬಾ ವೀರ ಕನ್ನಡಿಗ" | ವಿಜಯ ನಾರಸಿಂಹ | ಪೀಠಾಪುರಂ ನಾಗೇಶ್ವರ ರಾವ್ | 1:55 |
7. | "ಕಲ್ಯಾಣಾದ್ಭುತ + ತಿರುಪತಿಗಿರಿವಾಸ" | ಕೆ. ಪ್ರಭಾಕರ ಶಾಸ್ತ್ರಿ | ಪಿ. ಸುಶೀಲಾ, ಪಿ. ಬಿ. ಶ್ರೀನಿವಾಸ್, ಎಸ್. ಜಾನಕಿ | 3:14 |
8. | "ಕೃಷ್ಣನ ಹೆಸರೇ ಲೋಕಪ್ರಿಯ" | ವಿಜಯ ನಾರಸಿಂಹ | ಸೂಲಮಂಗಲಂ ರಾಜಲಕ್ಷ್ಮಿ, ಪಿ. ಬಿ. ಶ್ರೀನಿವಾಸ್, ಎಸ್. ಜಾನಕಿ | 4:17 |
9. | "ಮಕ್ಕಲ್ ನಕ್ಕರೆ" | ಸಿರ್ಕಾಳಿ ಗೋವಿಂದರಾಜನ್ | 2:42 | |
ಒಟ್ಟು ಸಮಯ: | 29:20 |