ಇದು ಪುರಾತನ ವಿಷ್ಣು ದೇಗುಲವಾಗಿದ್ದು, ಸುಮಾರು ೬೦೦ ವರ್ಷಗಳಷ್ಟು ಹಳೆಯದಾದ ಪ್ರತಿಮೆಯನ್ನು ಹೊಂದಿದೆ. ವಿಷ್ಣುವಿನ ಇನ್ನೊಂದು ರೂಪವಾದ ಶ್ರೀ ವಿಷ್ಣುಮೂರ್ತಿ ದೇವಾಲಯದ ಪ್ರಧಾನ ದೇವರು.
ಆರಂಭದಲ್ಲಿ ಯಾವುದೇ ದೇವಾಲಯದ ಸಂಕೀರ್ಣವು ಸ್ಪಷ್ಟವಾಗಿಲ್ಲ ಆದರೆ ಸ್ಥಳೀಯ ಪುರಾತತ್ವಶಾಸ್ತ್ರಜ್ಞ ಮತ್ತು ಇತಿಹಾಸಕಾರರಾದ ವೆಂಕಟ್ರಮಣ ಹೆಬ್ಬಾರ್ ಅವರು ೧೯೧೧ ರ ಸುಮಾರಿಗೆ ಕಾಡಿನಲ್ಲಿ ಪಾಳುಬಿದ್ದ ಸ್ಥಿತಿಯಲ್ಲಿ ಒಂದು ಸಣ್ಣ ದೇವಾಲಯವನ್ನು ಕಂಡುಕೊಂಡರು. ದೇವಾಲಯವು ಪುನರಾವರ್ತಿತವಾಗಿ ನವೀಕರಿಸಲ್ಪಟ್ಟಿದೆ. ಪೂಜೆ ಮತ್ತು ಹಬ್ಬ ಆಚರಣೆಗಳ ಸಕ್ರಿಯ ವೇಳಾಪಟ್ಟಿಯೊಂದಿಗೆ ಇಂದು ಬಳಕೆಯಲ್ಲಿದೆ. [೧] [೨]
ಹಿಂದೆ ಮೀನಾ ಸಂಕ್ರಮಣದಲ್ಲಿ ಒಂದು ದಿನದ ವಾರ್ಷಿಕ ಉತ್ಸವ ಮತ್ತು ನೇಮೋಸ್ತವ ನಡೆಸಲಾಗುತ್ತಿತ್ತು. ಶಿಮಾ ಮಾಸದಲ್ಲಿ ಒಂದು ದಿನದ ಹೂವಿನ ಅಲಂಕಾರ ಪೂಜೆ ಮತ್ತು ತೆಂಗಿನಕಾಯಿಯಿಂದ ಅಭಿಷೇಕ, ಮಹಾಗಣಪತಿ ಅಪ್ಪದ ಪೂಜೆ ನಡೆಸಲಾಗುತ್ತಿದೆ. ೧೯೬೮ ರಲ್ಲಿ ಒಂದು ದಿನದ ವಾರ್ಷಿಕ ಉತ್ಸವವನ್ನು ವಿವಿಧ ಸೇವಾ ಕಾರ್ಯಕ್ರಮಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ೫ ದಿನಗಳ ಉತ್ಸವವಾಗಿ ಆಚರಿಸಲು ಪ್ರಾರಂಭಿಸಲಾಯಿತು. ಪ್ರಸ್ತುತ ಹಬ್ಬವು ಮೀನಾ ಮಾಸದ ಚತುರ್ದಶಿಯಂದು ಪ್ರಾರಂಭವಾಗುತ್ತದೆ. ಉತ್ಸವವು ಧ್ವಜಾರೋಹಣದೊಂದಿಗೆ ಪ್ರಾರಂಭವಾಗಿ ೪ ನೇ ದಿನದಂದು ರಥೋತ್ಸವ, ೫ ನೇ ದಿನ ಮಧ್ಯಾಹ್ನ ಚೂರ್ಣೋಸ್ತವ ಮತ್ತು ಮಹಾ ಅನ್ನಸಂತರ್ಪಣೆ ನಡೆಯಲಿದೆ ಮತ್ತು ಅದೇ ದಿನ ರಾತ್ರಿ ನಾಗ ದರ್ಶನ, ಶ್ರೀ ಅಣ್ಣಪ್ಪ ಪಂಜುರ್ಲಿ ನೇಮೋತ್ಸವ ಮತ್ತು ಅವಬ್ರತೊಸ್ತವದೊಂದಿಗೆ ಕೊನೆಗೊಳ್ಳುತ್ತದೆ. [೩]