ಸಂಗಮೇಶ್ವರ್ ತಾಲ್ಲೂಕು ಮಹಾರಾಷ್ಟ್ರ ರಾಜ್ಯದ ರತ್ನಗಿರಿ ಜಿಲ್ಲೆಯ ರತ್ನಗಿರಿ ಉಪವಿಭಾಗದಲ್ಲಿನ ಒಂದು ತಾಲ್ಲೂಕಾಗಿದೆ. ತಾಲ್ಲೂಕಿನ ಮುಖ್ಯಸ್ಥಾನ ದೇವ್‍ರುಖ್ ಪಟ್ಟಣವಾಗಿದೆ.[೧] ಸಂಗಮೇಶ್ವರ್‌ನಲ್ಲಿ ಸೋನಾವಿ ಮತ್ತು ಶಾಸ್ತ್ರಿ ನದಿಗಳು ಒಟ್ಟಾಗಿ ಹರಿಯುತ್ತವೆ. ಹೀಗೆ ಎರಡು ನದಿಗಳು ಕೂಡುವುದರಿಂದ "ಸಂಗಮೇಶ್ವರ್" ಎಂಬ ಹೆಸರು ಬಂದಿದೆ. ಇದು ಛತ್ರಪತಿ ಶಿವಾಜಿಯ ಮಗ ಸಾಂಭಾಜಿಯನ್ನು ಮುಘಲ್ ಸಾಮ್ರಾಟ ಔರಂಗ್‍ಜ಼ೇಬ್ ಸೆರೆಹಿಡಿದ ಸ್ಥಳವೆಂದು ಐತಿಹಾಸಿಕವಾಗಿ ಮಹತ್ವದ್ದಾಗಿದೆ.[೨] ಛತ್ರಪತಿ ಸಾಂಭಾಜಿಗೆ ತುಳಾಪುರ್‌ನಲ್ಲಿ ಚಿತ್ರಹಿಂಸೆ ಕೊಟ್ಟು ಅವನನ್ನು ಗಲ್ಲಿಗೇರಿಸಲಾಯಿತು.