ಸಂಗೀತ-ರತ್ನಾಕರ, सङ्गीतरत्नाकर, ( IAST : Saīgīta ratnākara), ಅಕ್ಷರಶಃ "ಸಂಗೀತ ಮತ್ತು ನೃತ್ಯದ ಸಾಗರ", ಇದು ಭಾರತದ ಪ್ರಮುಖ ಸಂಸ್ಕೃತ ಸಂಗೀತ ಗ್ರಂಥಗಳಲ್ಲಿ ಒಂದಾಗಿದೆ.[೧][೨] 13 ನೇ ಶತಮಾನದಲ್ಲಿ ಸಾರಂಗದೇವ (शार्ङ्गदेव) ರವರು ರಚಿಸಿದ್ದಾರೆ,ಭಾರತೀಯ ಶಾಸ್ತ್ರೀಯ ಸಂಗೀತದ ಹಿಂದೂಸ್ತಾನಿ ಸಂಗೀತ ಮತ್ತು ಕರ್ನಾಟಕ ಸಂಗೀತ ಸಂಪ್ರದಾಯಗಳು ಇದನ್ನು ನಿರ್ಣಾಯಕ ಪಠ್ಯವೆಂದು ಪರಿಗಣಿಸುತ್ತವೆ.[೩][೪] ಲೇಖಕ ಯಾದವ ರಾಜವಂಶದ ರಾಜ ಸಿಂಘನ II (1210–1247) ದ ಆಸ್ಥಾನದ ಒಬ್ಬ ಪ್ರಮುಖನಾಗಿದ್ದು, ಇದರ ರಾಜಧಾನಿ ಮಹಾರಾಷ್ಟ್ರದ ದೇವಗಿರಿ.
ಈ ಗ್ರಂಥದ ಪಠ್ಯವನ್ನು ಏಳು ಅಧ್ಯಾಯಗಳಾಗಿ ವಿಂಗಡಿಸಲಾಗಿದೆ. ಮೊದಲ ಆರು ಅಧ್ಯಾಯಗಳನ್ನು, ಸ್ವರಗತಾಧ್ಯಾಯ, ರಾಗವಿವೇಕಾಧ್ಯಾಯ, ಪ್ರಕೀರ್ಣಕಾಧ್ಯಾಯ, ಪ್ರಬಂಧಧ್ಯಾಯ,ತಾಳಾಧ್ಯಾಯ ಮತ್ತು ಸಂಗೀತ ಮತ್ತು ಸಂಗೀತ ವಾದ್ಯಗಳ ಬೇರೆ ಬೇರೆ ಅಂಶಗಳನ್ನು ವಿವರಿಸುವ ವಾದ್ಯಾಧ್ಯಾಯ, ಕೊನೆಯ ಅಧ್ಯಾಯದಲ್ಲಿ ನರ್ತನಾಧ್ಯಾಯ ನೃತ್ಯದ ಬಗ್ಗೆ ವ್ಯವಹರಿಸುತ್ತದೆ. ಆಧುನಿಕ ಯುಗದಲ್ಲಿ ಉಳಿದುಕೊಂಡಿರುವ ಸಂಗೀತ ಸಿದ್ಧಾಂತದ ರಚನೆ, ತಂತ್ರ ಮತ್ತು ತಾರ್ಕಿಕತೆಯ ಕುರಿತಾದ ಮಧ್ಯಕಾಲೀನ ಯುಗದ ಪಠ್ಯವು ಅತ್ಯಂತ ಸಂಪೂರ್ಣ ಐತಿಹಾಸಿಕ ಭಾರತೀಯ ಗ್ರಂಥವಾಗಿದೆ, ಮತ್ತು ಇದು ರಾಗಗಳು (ಅಧ್ಯಾಯ 2) ಮತ್ತು ತಾಳಗಳ (ಅಧ್ಯಾಯ 5) ಕುರಿತು ಸಮಗ್ರವಾದ ಪಠ್ಯವಾಗಿದೆ. .[೫][೬]
ಈ ಪಠ್ಯವು ಭಾರತದ ಪ್ರಾಚೀನ ಮತ್ತು ಮಧ್ಯಕಾಲೀನ ಸಂಗೀತ ಜ್ಞಾನದ ಸಮಗ್ರ ಸಂಶ್ಲೇಷಣೆಯಾಗಿದೆ.[೭] ಈ ಪಠ್ಯವನ್ನು ನಂತರದ ಭಾರತೀಯ ಸಂಗೀತಶಾಸ್ತ್ರಜ್ಞರು ತಮ್ಮ ಸಂಗೀತ ಮತ್ತು ನೃತ್ಯ-ಸಂಬಂಧಿತ ಸಾಹಿತ್ಯದಲ್ಲಿ ಉಲ್ಲೇಖಿಸಿದ್ದಾರೆ. ಪಠ್ಯದ ಮಹತ್ವದ ವ್ಯಾಖ್ಯಾನಗಳಲ್ಲಿ ಸಿಂಹಭೂಪಾಲನ ಸಂಗಿತಾಸುಧಾಕರ ( c. 1330 ) ಮತ್ತು ಕಲ್ಲಿನಾಥನ ಕಲಾನಿಧಿ c. 1430 ).[೮]
ಸಂಗಿತ ರತ್ನಾಕರವನ್ನು ಶಾರ್ಗದೇವ ಬರೆದಿದ್ದು, ಸಾರಂಗದೇವ ಅಥವಾ ಶಾರಂಗದೇವ ಎಂದೂ ಉಚ್ಚರಿಸಿದ್ದಾರೆ. ಸಾರಂಗದೇವ ಕಾಶ್ಮೀರದ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಭಾರತೀಯ ಉಪಖಂಡದ ವಾಯುವ್ಯ ಪ್ರದೇಶಗಳಲ್ಲಿ ಇಸ್ಲಾಮಿಕ್ ಆಕ್ರಮಣ ಮತ್ತು ದೆಹಲಿ ಸುಲ್ತಾನರ ಪ್ರಾರಂಭದ ಯುಗದಲ್ಲಿ, ಅವರ ಕುಟುಂಬ ದಕ್ಷಿಣಕ್ಕೆ ವಲಸೆ ಬಂದು ಎಲ್ಲೋರಾ ಗುಹೆಗಳ (ಮಹಾರಾಷ್ಟ್ರ) ಬಳಿಯ ಡೆಕ್ಕನ್ ಪ್ರದೇಶದಲ್ಲಿ ಹಿಂದೂ ಸಾಮ್ರಾಜ್ಯದಲ್ಲಿ ನೆಲೆಸಿತು. ಸಾರಂಗದೇವ ಯಾದವ ರಾಜವಂಶದ ರಾಜ ಸಿಂಘನ II (1210–1247) ಆಸ್ಥಾನದಲ್ಲಿ ತನ್ನ ಸಂಗೀತ ಆಸಕ್ತಿಗಳನ್ನು ಮುಂದುವಸುವ ಸ್ವಾತಂತ್ರ್ಯದೊಂದಿಗೆ ಲೆಕ್ಕಿಗನಾಗಿ ಕೆಲಸ ಮಾಡಿದ.[೯][೧೦][೧೧]
ಈ ಪುಸ್ತಕದ ಪಠ್ಯ ಸಂಗೀತದ ಬಗ್ಗೆ ಅಥವಾ ಸಂಗೀತ ಸಂಬಂಧಿತ ಕಲೆಗಳ ಸಂಪ್ರದಾಯದ ಒಂದು ಸಂಸ್ಕೃತ ಮೀಮಾಂಸೆ .[೧೨] ಸಂಗೀತ(ಸುಮಧುರ ರೂಪಗಳು, ಹಾಡು), ವಾದ್ಯ (ವಾದ್ಯ ಸಂಗೀತ) ಮತ್ತು ನೃತ್ಯ (ನೃತ್ಯ, ಚಲನೆ) ಗಳನ್ನು ಒಳಗೊಂಡಿರುವ ಸಂಯೋಜಿತ ಪ್ರದರ್ಶನ ಕಲೆ ಎಂದು ಸಂಗಿತವನ್ನು ಕುರಿತು ಈ ಪಠ್ಯದಲ್ಲಿ ಹೇಳಲಾಗಿದೆ. [೧೩][೧೪]
13 ನೆಯ ಶತಮಾನದ ಸಂಗೀತ ರತ್ನಾಕರ ದಲ್ಲಿ ಸಂಗೀತವನ್ನು ಮಾರ್ಗ-ಸಂಗೀತ ಮತ್ತು ದೇಸಿ-ಸಂಗೀತ ಎಂದು ಎರಡು ರೀತಿಯಲ್ಲಿ ವಿಂಗಡಿಸಲಾಗಿದೆ ಮಾರ್ಗಾ ಎಂಬುದು ನಾಟ್ಯಶಾಸ್ತ್ರದಲ್ಲಿ ಭರತರು ಕಲಿಸಿದ ಶಾಸ್ತ್ರೀಯ ತಂತ್ರಗಳನ್ನು ಸೂಚಿಸುತ್ತದೆ. ದೇಸಿ ಸಂಗೀತ ಎಂಬುದು ಸಂಗೀತ ಮತ್ತು ಪ್ರದರ್ಶನ ಕಲೆಗಳಿಗೆ ಶಾಸ್ತ್ರೀಯ ನಿಯಮಗಳು ಮತ್ತು ರಚನೆಯನ್ನು ಅನುಸರಿಸದ ಪ್ರಾದೇಶಿಕ ಸುಧಾರಣೆಗಳನ್ನು ಉಲ್ಲೇಖಿಸುತ್ತದೆ.[೧೫][೧೬]
ಪಠ್ಯವು ಏಳು ಅಧ್ಯಾಯಗಳನ್ನು ಹೊಂದಿದೆ:[೧೭]
ಮೊದಲ ಅಧ್ಯಾಯದಲ್ಲಿ ಎಂಟು ವಿಭಾಗಗಳಿವೆ. ಇದು ಹಿಂದೂ ದೇವರು ಶಿವನ ಕುರಿತು ಪೂಜ್ಯ ಶ್ಲೋಕಗಳೊಂದಿಗೆ ತೆರೆಯುತ್ತದೆ. ವೇದಗಳ ಪ್ರಕಾರ ಶಿವನು " ಇಡೀ ಪ್ರಪಂಚವು ಹಾಡಿದ ದ್ವನಿಯ ಸಾಕಾರ" ಮತ್ತು ಸಂತೋಷಕರ. ಲೇಖಕನು ತನ್ನ ಪೂರ್ವಜರಿಗೆ, ನಂತರ ಪ್ರಾಚೀನ ವಿದ್ವಾಂಸರಾದ ಭರತ, ಮಾತಂಗ, ದತ್ತಿಲಾ ಮತ್ತು ನಾರದರಿಗೆ ಹಾಗೂ ಮೊದಲ ಅಧ್ಯಾಯದ ಮೊದಲ ವಿಭಾಗದಲ್ಲಿ ಹಿಂದೂ ಧರ್ಮದ ಪ್ರಮುಖ ದೇವರುಗಳು ಮತ್ತು ದೇವತೆಗಳಿಗೆ ಗೌರವ ಸಲ್ಲಿಸುತ್ತಾನೆ. ಎರಡನೆಯ ವಿಭಾಗದಲ್ಲಿ, ಸಂಗೀತ ಅಥವಾ ನೃತ್ಯದ ಬಗ್ಗೆ ಯಾವುದೇ ಉಲ್ಲೇಖವಿಲ್ಲ, ಬದಲಿಗೆ ಸಾರಂಗದೇವ ತನ್ನ ಆಧ್ಯಾತ್ಮಿಕ ಮತ್ತು ಶಾರೀರಿಕ ನಂಬಿಕೆಗಳನ್ನು ಪ್ರಸ್ತುತಪಡಿಸುತ್ತಾನೆ, ಜೊತೆಗೆ ಸಂಗೀತದ ಮೂಲವು ಸಾಮವೇದಕ್ಕೆ ಸಲ್ಲುತ್ತದೆ ಎಂದು ಹೇಳುತ್ತಾನೆ.[೧೮] ಮೊದಲ ಅಧ್ಯಾಯದ ಮೂರನೆಯ ವಿಭಾಗದಿಂದ ಪ್ರಾರಂಭವಾಗುವ ಸಂಗೀತ ವಿಷಯಗಳು ಮತ್ತು ಸಂಗೀತ ಪರಿಕಲ್ಪನೆಗಳ ವ್ಯಾಖ್ಯಾನಗಳನ್ನು ಅವರು ಪ್ರಸ್ತುತಪಡಿಸುತ್ತಾರೆ, ಶಿವ ಮತ್ತು ಹಿಂದೂ ದೇವತೆ ಸರಸ್ವತಿಯ ಬಗ್ಗೆ ಆಗಾಗ್ಗೆ ಉಲ್ಲೇಖಿಸುತ್ತಾರೆ.
ಸಾರಂಗದೇವ ಈ ಕೃತಿಯ ವಿಭಾಗ 1.1 ರ 27-30 ವಚನಗಳ ಪ್ರಕಾರ, ಮಗುವಿನ ಕೂಗು, ಪ್ರಕೃತಿಯ ಬಡಿತಗಳಲ್ಲಿ, ಜೀವನದ ನಾಡಿಮಿಡಿತದಲ್ಲಿ, ಧರ್ಮ, ಅರ್ಥ, ಕಾಮ ಮತ್ತು ಮೋಕ್ಷದ ಪ್ರತಿಯೊಂದು ಮಾನವ ಕ್ರಿಯೆಯಲ್ಲೂ ಸಂಗೀತ ಎಲ್ಲೆಡೆ ಇದೆ.[೧೯] ಮೊದಲ ಅಧ್ಯಾಯದ 8 ನೆಯ ವಿಭಾಗಗಳು 3 ಈ ಕೆಳಗಿನ ವಿಷಯಗಳನ್ನು ವಿವರಿಸುತ್ತದೆ. ನಾದ (ಧ್ವನಿ), ಶೃತಿ ,ಮೂರ್ಚನಗಳು (ಉತ್ಪನ್ನ ಮಾಪಕಗಳು), ವರ್ಣ (ಬಣ್ಣ), ಜತಿ (ಮೋಡ್), ಅಲಂಕಾರ (ಅಲಂಕರಣ ), ಗೀತಿ (ಹಾಡುವ ಶೈಲಿಗಳು), ಮತ್ತು ಇತರ ಮೂಲ ಸಂಗೀತ ಪರಿಕಲ್ಪನೆಗಳು.[೧೮][೨೦]
ಶುದ್ಧ (ಮೂಲರೂಪ) ಸ್ವರಗಳುಸಾಮವೇದದಲ್ಲಿರುವವು ಎಂದು ಪಠ್ಯ ಹೇಳುತ್ತದೆ.[೨೧]
ಸ್ವರ </br> (ದೀರ್ಘ) |
ಷಡ್ಜ </br> () |
ಋಷಭ | ಗಾಂಧಾರ </br> () |
ಮಧ್ಯಮ </br> () |
ಪಂಚಮ </br> () |
ಧೈವತ </br> () |
ನಿಷಾಧ </br> () |
ಸ್ವರ </br> (ಹೃಸ್ವ) |
ಸ </br> () |
ರಿ </br> () |
ಗ </br> () |
ಮ </br> () |
ಪ </br> () |
ಧ </br> () |
ನಿ </br> () |
ಸಂಗೀತಾ ರತ್ನಾಕರ ರಲ್ಲಿ ಶೃತಿಗಳು [೩] | ತೀವ್ರ, ಕುಮದ್ವಂತಿ, ಮಂದ, ಚಂಗೋವಟಿ | ದಯಾವತಿ, ರಂಜಿನಿ, ರಕ್ತಿಕ | ರುದ್ರಿ, ಕ್ರೋಧಿ | ವಜ್ರಿಕಾ, ಪ್ರಸಾರಿಣಿ, ಪ್ರೀತಿ, ಮಾರ್ಜನಿ | ಕ್ಷಿತಿ, ರಕ್ತ, ಸಂದೀಪಿನಿ, ಅಲಾಪಿನಿ | ಮದಂತಿ, ರೋಹಿಣಿ, ರಮ್ಯಾ | ಉಗ್ರಾ, ಕ್ಷೋಬಿನಿ |
ಬೃಹತ್ ಪಠ್ಯವು ಅಧ್ಯಾಯ 2,[೨೩] ರಲ್ಲಿ 253 ರಾಗಗಳನ್ನು ವಿವರಿಸುತ್ತದೆ ಮತ್ತು 5 ನೇ ಅಧ್ಯಾಯವು ಎಲ್ಲಾ ಶಾಸ್ತ್ರೀಯ (ಮಾರ್ಗ) ಮತ್ತು 120 ಪ್ರಾದೇಶಿಕ ತಾಳಗಳನ್ನು ಪ್ರಸ್ತುತಪಡಿಸುತ್ತದೆ .[೨೪][೨೫] ಅಧ್ಯಾಯ 3 ವೈದಿಕ ಸಾಹಿತ್ಯದಲ್ಲಿ ಸಂಗೀತ ಅಭ್ಯಾಸದ ಸಾರಾಂಶದೊಂದಿಗೆ ತೆರೆಯುತ್ತದೆ, ನಂತರ ವೇದ-ನಂತರದ ಬೆಳವಣಿಗೆಗಳು ಮತ್ತು ಅಭ್ಯಾಸದ ವಿಧಾನಗಳನ್ನು ಪ್ರಸ್ತುತಪಡಿಸುತ್ತದೆ. ಇದು ರಂಗಭೂಮಿ ವಿನ್ಯಾಸ, ಕಲಾವಿದರ ಮೇಕಪ್ ಮತ್ತು ಅಲಂಕಾರ, ವಾದ್ಯಸಂಗೀತಕಾರರು ಮತ್ತು ಗಾಯಕರ ಕಾರ್ಯಕ್ಷಮತೆಯ ಮಾನದಂಡಗಳು ಮತ್ತು ಸಂಗೀತದ ವಿಷಯವನ್ನು ಸುಧಾರಿಸುವ ವಿಧಾನಗಳನ್ನು ಒಳಗೊಂಡಿದೆ.[೨೬][೨೭]
6 ನೇ ಅಧ್ಯಾಯದಲ್ಲಿ, ಸಾರಂಗದೇವ ಅವರು ಭಾರತದ ಪ್ರಾಚೀನ ಮತ್ತು 13 ನೇ ಶತಮಾನದ ಸಂಗೀತ ವಾದ್ಯಗಳನ್ನು ನಾಲ್ಕು ವರ್ಗದ ಸಂಗೀತ ವಾದ್ಯಗಳಾಗಿ ವಿವರಿಸಿದ್ದಾರೆ:ತಂತಿವಾದ್ಯಗಳು, ಏರೋಫೋನ್ಗಳು, ಮೆಂಬ್ರಾನೊಫೋನ್ಗಳು ಮತ್ತು ಐಡಿಯೊಫೋನ್ಗಳು . ಅವರು ವಾದ್ಯಗಳ ಭೌತಿಕ ವಿವರಣೆಯನ್ನು, ಅವುಗಳನ್ನು ಹೇಗೆ ನುಡಿಸಬೇಕು ಎಂಬುದನ್ನು ಉಲ್ಲೇಖಿಸುತ್ತಾರೆ.[೨೮] ಈ ಬೃಹತ್ ಪಠ್ಯದ 7 ನೇ ಅಧ್ಯಾಯದಲ್ಲಿ ಕಥಕ್ ಸೇರಿದಂತೆ ಭಾರತದ ಶಾಸ್ತ್ರೀಯ ಮತ್ತು ಪ್ರಾದೇಶಿಕ ನೃತ್ಯ ಪ್ರಕಾರಗಳ ಸಂಕ್ಷಿಪ್ತ ವಿವರಣೆಯಿದೆ.[೨೯] ಇದರ ನೃತ್ಯ ಅಧ್ಯಾಯವು ಅಭಿವ್ಯಕ್ತಿಶೀಲ ಶೈಲಿಗಳು, ಭಂಗಿ ಮತ್ತು ದೇಹ ಭಾಷೆಗಳನ್ನು ವಿಚಾರಗಳ ಮೂಕ ಸಂವಹನದ ಒಂದು ರೂಪ, ಒಂಬತ್ತು ಭಾವನೆಗಳ ಮೂಲಕ ವರ್ಗೀಕರಿಸಿದ ರಾಸ ಸಿದ್ಧಾಂತ ಮತ್ತು ನರ್ತಕಿಯ ವೈಯಕ್ತಿಕ ಚಲನೆಗಳ ಕಲೆ ಎಂದು ವಿವರಿಸುತ್ತದೆ.[೨೭]
ಪೀಟರ್ ಫ್ಲೆಚರ್ - ಸಂಗೀತ ಮತ್ತು ನಾಟಕ ಪ್ರಾಧ್ಯಾಪಕರು ಹೇಳುವಂತೆ ಸಂಗೀತ ರತ್ನಾಕರ " ಪ್ರತಿ ಸಂಯೋಜಕನೂ ಒಬ್ಬ ಸಮರ್ಥ ಪ್ರದರ್ಶಕನಾಗಿರಬೇಕು ಅಂತೆಯೇ ಅವನು ತನ್ನ ಪ್ರೇಕ್ಷಕರನ್ನು ತಿಳಿದುಕೊಂಡು ಅವರ ಮನಸ್ಸು ಹೇಗೆ ವರ್ತಿಸುತ್ತದೆ ಎಂಬುದನ್ನು, ಅವನ ಇಷ್ಟ ಮತ್ತು ಇಷ್ಟಪಡದಿರುವಿಕೆಗಿಂತ ಮೇಲಿಟ್ಟು ಎಲ್ಲರಿಗೂ ಸಂತೋಷವನ್ನು ತರುವವನಾಗಿರಬೇಕೆಂದು" ಹೇಳುತ್ತದೆ [೩೦] ಸಂಗೀತದ ಬಗ್ಗೆ ಸಾರಂಗದೇವ ಅವರ ಅಭಿಪ್ರಾಯಗಳು, ಫ್ಲೆಚರ್ ಹೇಳುವಂತೆ, ಭಗವದ್ಗೀತೆಯಲ್ಲಿ ಹೇಳಲ್ಪಡುವ "ಕರ್ಮಕ್ಕೆ ಅಂಟಿಕೊಳ್ಳದಿರುವ "ತತ್ವದ ಉದಾಹರಣೆಗಳಾಗಿವೆ.
ಸಂಗೀತ ರತ್ನಾಕರವು ಬಹಳ ಮುಖ್ಯವಾದ ಕೃತಿಯಾಗಿದೆ ಮತ್ತು ಅದರ ಮೇಲೆ ಬರೆದ ಅನೇಕ ವ್ಯಾಖ್ಯಾನಗಳಿಂದ ಇದು ಸ್ಪಷ್ಟವಾಗಿದೆ.[೨] ಇದು ಭಾರತೀಯ ಸಂಗೀತಶಾಸ್ತ್ರಜ್ಞರು ಮತ್ತು ಸಂಗೀತ ಶಾಲೆಗಳಲ್ಲಿ ಸಮಕಾಲೀನ ಕಾಲದಲ್ಲಿ ಒಂದು ಉಲ್ಲೇಖ ಪಠ್ಯವಾಗಿ ಉಳಿದಿದೆ.[೩೧]
ಈ ಪಠ್ಯವು ಭಾರತೀಯ ಸಂಪ್ರದಾಯದಲ್ಲಿ ಭಾಷ್ಯ ಎಂಬ ದ್ವಿತೀಯ ಸಾಹಿತ್ಯವನ್ನು ಆಕರ್ಷಿಸಿತು. ಪಠ್ಯದ ಅನೇಕ ವ್ಯಾಖ್ಯಾನಗಳಲ್ಲಿ ಎರಡು ಇಂಗ್ಲಿಷ್ ಭಾಷೆಗೆ ಅನುವಾದಿಸಲಾಗಿದೆ. ಅವುಗಳೆಂದರೆ ಸಿಂಹಭೂಪಾಳರ ಸಂಗೀತ ಸುಧಾಕರ ಮತ್ತು ಕಲ್ಲಿನಾಥರ ಕಲಾನಿಧಿ. ಹಿಂದಿನ ಕೃತಿಗಳಾದ ನಾಟ್ಯಶಾಸ್ತ್ರ, ದತ್ತಿಲಂ, ಬೃಹದ್ದೇಶಿ, ಸರಸ್ವತಿ-ಹೃದಯಾಲಂಕಾರ-ಹರಾ, ಅಭಿನವಗುಪ್ತನರ ನ್ಯಾಯಶಾಸ್ತ್ರದ ವಿಚಾರಗಳು ಮತ್ತು ಇತರವುಗಳಲ್ಲಿ ಕಂಡುಬರುವ ಮಾಹಿತಿಯನ್ನು ಸಂಗೀತರತ್ನಾಕರ ಸಂಗ್ರಹಿಸುತ್ತದೆ.[೩೨] ಸಾರಂಗದೇವ ಅವರು ಹೆಚ್ಚು ಪ್ರಾಚೀನ ಮತ್ತು ಮಧ್ಯಕಾಲೀನ ವಿಚಾರಗಳನ್ನು ವಿಸ್ತರಿಸಿದರು, ಉದಾಹರಣೆಗೆ ಲಾಸ್ಯದ ಕುರಿತಾದ ಅವರ ಆಲೋಚನೆಗಳು.[೩೩] ಈ ಪಠ್ಯವು ಭಾರತದ ಪ್ರಾಚೀನ, ಮಧ್ಯಕಾಲೀನ ಮತ್ತು 13 ನೇ ಶತಮಾನದ ನಂತರದ ಸಂಗೀತ ಇತಿಹಾಸದ ನಡುವೆ ಉಪಯುಕ್ತ ಸೇತುವೆಯನ್ನು ರೂಪಿಸುತ್ತದೆ.[೩೪]
<ref>
tag; name "ArnoldNettl2000p33" defined multiple times with different content
{{cite journal}}
: Cite journal requires |journal=
(help)