ಸಂಚಾರಿ ವಿಜಯ್ | |
---|---|
ಜನನ | ವಿಜಯ್ ಜುಲೈ ೧೭, ೧೯೮೩ |
ಮರಣ | ೧೫ ಜೂನ್ ೨೦೨೧ ಬೆಂಗಳೂರು |
ರಾಷ್ಟ್ರೀಯತೆ | ಭಾರತೀಯ |
ವೃತ್ತಿ | ನಟ |
ಸಕ್ರಿಯ ವರ್ಷಗಳು | ೨೦೦೭ – u |
'ಸಂಚಾರಿ ವಿಜಯ್' ಹೆಸರಿನಿಂದ ಪರಿಚಿತರಾಗಿರುವ ಬಿ. ವಿಜಯ್ ಕುಮಾರ್ (೧೫ ಜುಲೈ ೧೯೮೩ - ೧೫ ಜೂನ್ ೨೦೨೧) ಒಬ್ಬ ಚಲನಚಿತ್ರ ಮತ್ತು ರಂಗಭೂಮಿ ನಟ. ಸಂಚಾರಿ ಹೆಸರಿನ ನಾಟಕತಂಡದಲ್ಲಿ ಇವರು ಒಬ್ಬರಾಗಿದ್ದರಿಂದ ಇವರಿಗೆ ಸಂಚಾರಿ ವಿಜಯ್ ಎಂಬ ಹೆಸರು ಬಂತು. ೨೦೧೪ರ ಸಾಲಿನ ೬೨ನೇ ರಾಷ್ಟ್ರ ಚಲನಚಿತ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ[೨],[೩].
ಇವರು ಜುಲೈ ೧೭, ೧೯೮೩ರಂದು ಚಿಕ್ಕಮಗಳೂರು ಜಿಲ್ಲೆಯ, ಕಡೂರು ತಾಲ್ಲೂಕಿನ ಸಿಂಗಟಗೆರೆ ಹೋಬಳಿಯ ರಂಗಾಪುರ ಗ್ರಾಮದಲ್ಲಿ ಹುಟ್ಟಿದರು, ಪಂಚನಹಳ್ಳಿ ಗ್ರಾಮದಲ್ಲಿ ಬೆಳೆದರು. ಇವರ ತಂದೆ ಬಸವರಾಜಯ್ಯನವರು ಚಿತ್ರಕಲಾವಿದರು, ಸಂಗೀತ ವಾದ್ಯಗಳನ್ನು ನುಡಿಸುತ್ತಿದ್ದರು. ತಾಯಿ ಗೌರಮ್ಮನವರು ಜಾನಪದ ಕಲಾವಿದರಾಗಿದ್ದು, ಭದ್ರಾವತಿಯ ಆಕಾಶವಾಣಿಯಲ್ಲಿ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದರು. ಇಂತಹ ಕುಟುಂಬದಲ್ಲಿ ಜನಿಸಿದ ಇವರು ಬಾಲ್ಯದಿಂದಲೇ ರಂಗಭೂಮಿ ಹಾಗೂ ಚಿತ್ರಕಲೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಬೆಂಗಳೂರಿನ ಬಿಎಂಎಸ್ ಶಿಕ್ಷಣ ಸಂಸ್ಥೆಯಲ್ಲಿ ಇಂಜಿನಿಯರಿಂಗ್ ಪದವಿಯನ್ನು ಪೂರೈಸಿದ್ದಾರೆ.
ಕೆಲಕಾಲ ಕೆಐಇಟಿ ಶಿಕ್ಷಣ ಸಂಸ್ಥೆಯಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಇವರು ತಮ್ಮ ಕನಸನ್ನು ಈಡೇರಿಸಿಕೊಳ್ಳಲು ಕೆಲಸಕ್ಕೆ ವಿದಾಯ ಹೇಳಿ ಪೂರ್ಣಪ್ರಮಾಣವಾಗಿ ರಂಗಭೂಮಿಯಲ್ಲಿ ತೊಡಗಿಸಿಕೊಂಡರು. ಹತ್ತು ವರ್ಷಗಳಿಂದ ಸಂಚಾರಿ ಥಿಯೇಟರ್ ರಂಗತಂಡದ ಹಲವಾರು ನಾಟಕಗಳಲ್ಲಿ ಅಭಿನಯಿಸುವುದರ ಜೊತೆಗೆ ಕನ್ನಡದ ಹಲವಾರು ರಂಗತಂಡಗಳಲ್ಲಿ ನಟಿಸಿದ್ದಾರೆ. ರಂಗಭೂಮಿಯಲ್ಲಿ ನಟನೆ ಮಾತ್ರವಲ್ಲದೇ ಎರಡು ನಾಟಕಗಳನ್ನು ಸಹ ನಿರ್ದೇಶಿಸಿದ್ದಾರೆ.
ಒಬ್ಬ ಭಾರತೀಯ ರಂಗಭೂಮಿ ಮತ್ತು ಸಿನೆಮಾ ಕಲಾವಿದರಾಗಿದ್ದು ಪ್ರಮುಖವಾಗಿ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡಿದ್ದಾರೆ. ಜೊತೆಗೆ ತಮಿಳು, ತೆಲುಗು ಮತ್ತು ಹಿಂದಿ ಸಿನೆಮದಲ್ಲಿಯೂ ಕೆಲಸ ಮಾಡಿದ್ದಾರೆ.[೪]
ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಗೂ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತವನ್ನೂ ಅಭ್ಯಸಿಸಿರುವ ಇವರು, ಹಲವಾರು ನಾಟಕಗಳಲ್ಲಿ ಹಾಡಿದ್ದು, ರಿಯಾಲಿಟಿ ಶೋಗಳಲ್ಲಿಯೂ ಸಹ ಭಾಗವಹಿಸಿದ್ದಾರೆ.
ಬಿಡುಗಡೆ ವರ್ಷ | ಸಿನೆಮಾ | ಭಾಷೆ |
---|---|---|
೨೦೧೧ | ರಂಗಪ್ಪ ಹೋಗ್ಬಿಟ್ನ | ಕನ್ನಡ |
೨೦೧೩ | ದಾಸವಾಳ | ಕನ್ನಡ |
೨೦೧೪ | ಹರಿವು | ಕನ್ನಡ |
೨೦೧೪ | ಒಗ್ಗರಣೆ | ಕನ್ನಡ |
೨೦೧೪ | ವುನ್ ಸಮಯಲ್ ಅರಯಿಲ್ | ತಮಿಳು |
೨೦೧೪ | ಉಲವಚಾರು ಬಿರಿಯಾನಿ | ತೆಲುಗು |
೨೦೧೫ | ನಾನು ಅವನಲ್ಲ... ಅವಳು | ಕನ್ನಡ |
೨೦೧೮ | ನಾತಿಚರಾಮಿ | ಕನ್ನಡ |
೨೦೨೦ | ಆ್ಯಕ್ಟ್ ೧೯೭೮ | ಕನ್ನಡ |
ವರ್ತಮಾನ | ಕನ್ನಡ | |
ರಿಕ್ತ | ಕನ್ನಡ | |
ಆರ್ಯ ಮೌರ್ಯ | ಕನ್ನಡ | |
ಕೃಷ್ಣ ತುಳಸಿ | ಕನ್ನಡ | |
ಪಿರಂಗಿಪುರ | ಕನ್ನಡ | |
ಪಾದರಸ | ಕನ್ನಡ | |
ಹತ್ಯಾರ | ಕನ್ನಡ |
೬೨ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಇವರಿಗೆ ಕನ್ನಡದ ನಾನು ಅವನಲ್ಲ...ಅವಳು ಚಿತ್ರಕ್ಕೆ ಅತ್ಯುತ್ತಮ ನಟ ಪ್ರಶಸ್ತಿ ನೀಡಲಾಗಿದ್ದು, ಈ ಚಿತ್ರದಲ್ಲಿ ತೃತೀಯ ಲಿಂಗಿಯ ಪಾತ್ರ ನಿರ್ವಹಿಸಿದ್ದಾರೆ.[೫][೬][೭] ಇದೇ ಪಟ್ಟಿಯಲ್ಲಿ, ಮುಖ್ಯ ಪಾತ್ರ ನಿರ್ವಹಿಸಿದ್ದ ಮತ್ತೊಂದು ಸಿನೆಮಾ ಹರಿವು, ಅತ್ಯುತ್ತಮ ಕನ್ನಡ ಪ್ರಾದೇಶಿಕ ಚಲನಚಿತ್ರ ಪ್ರಶಸ್ತಿ ಪಡೆಯಿತು.
ಸಂಚಾರಿ ವಿಜಯ್ ಅವರು ಬೆಂಗಳೂರಿನಲ್ಲಿ ಸ್ನೇಹಿತನ ಜೊತೆ ದ್ವಿಚಕ್ರವಾಹನದಲ್ಲಿ ಹೋಗುತ್ತಿದ್ದಾಗ ಅಪಘಾತವಾಗಿ ಬಿದ್ದು ತೀವ್ರವಾಗಿ ಗಾಯಗೊಂಡರು.[೮] ಅವರ ಮೆದುಳಿಗೆ ಪೆಟ್ಟಾಗಿ ಕೋಮಾ ಸ್ಥಿತಿಗೆ ಹೋಗಿದ್ದರು. ಅಪೊಲೊ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆದು ಸುಧಾರಣೆ ಕಾಣದೆ ಅವರ ಮೆದುಳು ನಿಷ್ಕ್ರಿಯವಾಗಿತ್ತು. (ಬ್ರೇನ್ ಡೆಡ್) .[೯]. ಅವರ ಕುಟುಂಬದವರ ಇಚ್ಛೆಯಂತೆ ಆಸ್ಪತ್ರೆಯಲ್ಲಿ ವಿಜಯ್ ಅವರ ಅಂಗಾಂಗದಾನ ಪ್ರಕ್ರಿಯೆಗಳನ್ನು ಕೈಗೊಂಡು ೧೫ ಜೂನ್ ೨೦೨೧ರ ಬೆಳಗಿನ ಜಾವ ಅವರು ಮರಣಹೊಂದಿದರೆಂದು ಘೋಷಿಸಲಾಯಿತು.[೧೦]
{{cite web}}
: Italic or bold markup not allowed in: |publisher=
(help)
{{cite web}}
: Italic or bold markup not allowed in: |publisher=
(help); Missing or empty |url=
(help); Unknown parameter |urliry7hi77=
ignored (help)
{{cite web}}
: Italic or bold markup not allowed in: |publisher=
(help)