ಸಂಜೀವನಿ ಜಾಧವ್

ಸಂಜೀವನಿ ಜಾಧವ್
೨೦೧೭ ರ ಏಷಿಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ
ವೈಯುಕ್ತಿಕ ಮಾಹಿತಿ
ರಾಷ್ರೀಯತೆಭಾರತ
ಜನನ (1996-07-12) ೧೨ ಜುಲೈ ೧೯೯೬ (ವಯಸ್ಸು ೨೮)
ನಾಸಿಕ್, ಭಾರತ
ಶಿಕ್ಷಣಪುಣೆ ವಿಶ್ವವಿದ್ಯಾಲಯ[]
ಎತ್ತರ೧.೫೪ ಮೀ
ತೂಕ೩೮ ಕೆಜಿ
Sport
ಕ್ರೀಡೆಅಥ್ಲೆಟಿಕ್ಸ್
ಸ್ಪರ್ಧೆಗಳು(ಗಳು)೫೦೦೦ ಮೀ, ೧೦,೦೦೦ ಮೀ

ಸಂಜೀವನಿ ಬಾಬುರಾವ್ ಜಾಧವ್ (ಜನನ ೧೨ ಜುಲೈ ೧೯೯೬) ಓಟದಲ್ಲಿ ೫೦೦೦ ಮೀ ಮತ್ತು ೧೦,೦೦೦ ಮೀ ದೂರ ಕ್ರಮಿಸಿದ ಭಾರತೀಯ ಕ್ರೀಡಾಪಟು. [] ಅವರು ೨೦೧೭ ರ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ೫೦೦೦ ಮೀ ಓಟದಲ್ಲಿ ಕಂಚಿನ ಪದಕವನ್ನು ಗೆದ್ದಿದ್ದರು.

ಜಾಧವ್ ಮಹಾರಾಷ್ಟ್ರದ ನಾಸಿಕ್ ನಗರದಲ್ಲಿ ಜನಿಸಿದರು. [] ಅವರು ಭೋನ್ಸಾಲಾ ಮಿಲಿಟರಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿದರು. ಅಲ್ಲಿಯೇ ಅವರು ತಮ್ಮ ಕ್ರೀಡೆಯ ಜೊತೆಗೆ ನಾಗರಿಕ ಸೇವೆಗೆ ಸೇರಬೇಕೆಂಬ ಮಹತ್ವಾಕಾಂಕ್ಷೆ ಇಟ್ಟುಕೊಂಡಿದ್ದರು. [] ಇವರು ಆರಂಭದಲ್ಲಿ ಕುಸ್ತಿ ಪಟುವಾಗಿದ್ದು ರಾಷ್ಟ್ರಮಟ್ಟದ ಟೂರ್ನಿಗಳಲ್ಲಿ ಭಾಗವಹಿಸಿದ್ದರು. ಅವರ ಕೋಚ್ ವಿಜೇಂದರ್ ಸಿಂಗ್ ಅವರ ಪೋಷಕರಿಗೆ ಮನವರಿಕೆ ಮಾಡಿ ಅವರನ್ನು ಟ್ರ್ಯಾಕ್‌ನಲ್ಲಿ ಓಡುವಂತೆ ಮಾಡಿದರು. ಮುಂದೆ ಅವರು ಅತ್ಯುತ್ತಮ ಕ್ರೀಡಾಪಟು ಎಂದು ಗುರುತಿಸಲ್ಪಟ್ಟು ಕ್ರೀಡಾಪಟುಗಳನ್ನು ಪೋಷಿಸುವ ಸ್ಪೋರ್ಟ್ಸ್‌ನೆಟ್ಸ್‌ನಿಂದ ಬೆಂಬಲಿತರಾದರು. ೨೦೧೩ ರಲ್ಲಿ ಅವರು ೧ ನೇ ಏಷ್ಯನ್ ಸ್ಕೂಲ್ ಅಥ್ಲೆಟಿಕ್ಸ್ ಮೀಟ್‌ನಲ್ಲಿ ಮೂರು ಪದಕಗಳನ್ನು ಗೆದ್ದರು. ೨೦೧೬ ರ ದೆಹಲಿ ಮ್ಯಾರಥಾನ್‌ನಲ್ಲಿ ಎರಡನೇ ಸ್ಥಾನ ಗಳಿಸಿದ್ದರು. []

ಕವಿತಾ ರಾವುತ್‌ಗೆ ತರಬೇತಿ ನೀಡಿದ ವಿಜೇಂದರ್ ಸಿಂಗ್ ಅವರಿಂದ ಸಂಜೀವನಿ ಬಾಬುರಾವ್ ತರಬೇತಿ ಪಡೆದಿದ್ದಾರೆ. ೨೦೧೭ ರಲ್ಲಿ ಅವರು ಒಡಿಶಾದಲ್ಲಿ ನಡೆದ ಏಷ್ಯನ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ೨೦೧೭ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌- ಮಹಿಳೆಯರ ೫೦೦೦ ಮೀ ಓಟದಲ್ಲಿ ಕಂಚಿನ ಪದಕವನ್ನು ಪಡೆದರು. [] ಅದೇ ಸ್ಪರ್ಧೆಯಲ್ಲಿ ಅವರು ಗುಯಾಂಗ್ ನಲ್ಲಿ ನಡೆದ ಏಷ್ಯನ್ ಕ್ರಾಸ್ ಕಂಟ್ರಿ ಚಾಂಪಿಯನ್ಶಿಪ್ ನ ಭಾಗವಾಗಿ ನಡೆದ ೮ಕಿಮೀ ಸ್ಫರ್ಧೆಯಲ್ಲಿ ಕಂಚಿನ ಪದಕವನ್ನು ಪಡೆದರು.ಚಿನ್ನ ಮತ್ತು ಬೆಳ್ಳಿಯನ್ನು ಚೀನಾದ ಲಿ ಡಾನ್ ಮತ್ತು ಜಪಾನಿನ ಅಬೆ ಯುಕಾರಿ ಪಡೆದರು. []

೨೦೧೮ ರಲ್ಲಿ ಅವರು ಮಹಾರಾಷ್ಟ್ರ ಸರ್ಕಾರದಿಂದ ಶಿವ ಛತ್ರಪತಿ ಪ್ರಶಸ್ತಿಯನ್ನು ಪಡೆದಿದ್ದಾರೆ.

ಉಲ್ಲೇಖಗಳು

[ಬದಲಾಯಿಸಿ]
  1. 2017 Universiade bio[ಶಾಶ್ವತವಾಗಿ ಮಡಿದ ಕೊಂಡಿ]
  2. Y.B.Sarangi. "Sanjivani gets two-year doping ban, to lose her Asian medal". Sportstar (in ಇಂಗ್ಲಿಷ್). Retrieved 2020-01-08.
  3. ೩.೦ ೩.೧ "Athletes". sportsnest.org (in ಅಮೆರಿಕನ್ ಇಂಗ್ಲಿಷ್). Archived from the original on 2017-04-15. Retrieved 2017-07-13.
  4. "Silver-winning Sanjeevani Jadhav from Maharashtra at Olympiad wants to become civil servant". dna (in ಅಮೆರಿಕನ್ ಇಂಗ್ಲಿಷ್). 2013-12-08. Retrieved 2017-07-13.
  5. "Sanjivani Jadhav: Another middle-distance star emerges from Nashik". The Indian Express (in ಅಮೆರಿಕನ್ ಇಂಗ್ಲಿಷ್). 2017-07-07. Retrieved 2017-07-13.
  6. "Sanjeevani Jadhav wins bronze in Asian Cross Country Championship". Hindustan Times (in ಇಂಗ್ಲಿಷ್). 2018-03-15. Retrieved 2020-01-08.