ಸಂಪಾಜೆ

ಸಂಪಾಜೆ
ಗ್ರಾಮ
Lua error in ಮಾಡ್ಯೂಲ್:Location_map at line 526: Unable to find the specified location map definition: "Module:Location map/data/ಭಾರತ, ಕರ್ನಾಟಕ" does not exist.
Coordinates: 12°25′57″N 75°35′35″E / 12.4324°N 75.5931°E / 12.4324; 75.5931
Country India
Stateಕರ್ನಾಟಕ
Districtಕೊಡಗು
ತಾಲೂಕುಮಡಿಕೇರಿ
Government
 • Bodyಗ್ರಾಮ ಪಂಚಾಯತ್
Elevation
೧೪೫ m (೪೭೬ ft)
Population
 (೨೦೧೧)
 • Total೫೩೦೪
Languages
 • Officialಕನ್ನಡ
 • Regionalತುಳು, ಅರೆಬಾಷೆ, ಕೊಡವ
Time zoneUTC+5:30 (IST)
PIN
574234
ISO 3166 codeIN-KA
Vehicle registrationKA 12
Nearest cityಮಡಿಕೇರಿ
Websitekarnataka.gov.in

ಸಂಪಾಜೆ ಕರ್ನಾಟಕ ರಾಜ್ಯದ ದಕ್ಷಿಣ ಭಾಗದಲ್ಲಿರುವ ಒಂದು ಹಳ್ಳಿ. ಇದು ಕರ್ನಾಟಕದ ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನಲ್ಲಿದೆ.ಇದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರವನ್ನು ಕೊಡಗು ಜಿಲ್ಲೆಯ ಮಡಿಕೇರಿ ಪಟ್ಟಣದೊಂದಿಗೆ ಸಂಪರ್ಕಿಸುವ ಎನ್ಎಚ್ -೨೭೫ ರಾಷ್ಟ್ರೀಯ ಹೆದ್ದಾರಿಯಲ್ಲಿದೆ. []

ಭೌಗೋಳಿಕ

[ಬದಲಾಯಿಸಿ]

ಸಂಪಾಜೆ ಪ್ರದೇಶವು ಸಮುದ್ರ ಮಟ್ಟದಿಂದ ೧೨೦ಮೀ ಎತ್ತರದಲ್ಲಿದೆ. ಇದು ಮೈಸೂರು ವಿಭಾಗಕ್ಕೆ ಸೇರಿದೆ. ಇದು ಜಿಲ್ಲಾ ಪ್ರಧಾನ ಕಚೇರಿ ಮಡಿಕೇರಿಯಿಂದ ಪಶ್ಚಿಮಕ್ಕೆ ೨೪ ಕಿ.ಮೀ ದೂರದಲ್ಲಿದೆ. ರಾಜ್ಯ ರಾಜಧಾನಿ ಬೆಂಗಳೂರಿನಿಂದ ೨೬೫ ಕಿ.ಮೀ ದೂರದಲ್ಲಿದೆ. ಮಡಿಕೇರಿ, ಪುತ್ತೂರು,ಕಾಂಞಗಾಡ್, ಸಕಲೇಶಪುರ ನಗರಗಳು ಸಂಪಾಜೆಗೆ ಹತ್ತಿರದಲ್ಲಿವೆ.

ಜನಸಂಖ್ಯೆ

[ಬದಲಾಯಿಸಿ]

ಸಂಪಾಜೆ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನಲ್ಲಿರುವ ಒಂದು ದೊಡ್ಡ ಹಳ್ಳಿಯಾಗಿದೆ.ಇಲ್ಲಿ ಒಟ್ಟು ೧೨೬೭ ಕುಟುಂಬಗಳು ವಾಸಿಸುತ್ತಿವೆ.ಜನಗಣತಿ ೨೦೧೧ರ ಪ್ರಕಾರ ಸಂಪಾಜೆ ಗ್ರಾಮದಲ್ಲಿ ೫೪೯೯ ಜನಸಂಖ್ಯೆ ಇದೆ. ಅದರಲ್ಲಿ ೨೬೬೮ ಪುರುಷರು ಮತ್ತು ೨೭೬೧ ಮಹಿಳೆಯರು. ಸಂಪಾಜೆ ಗ್ರಾಮದಲ್ಲಿ ೦-೬ ವಯಸ್ಸಿನ ಮಕ್ಕಳ ಜನಸಂಖ್ಯೆ ೬೦೩ ಆಗಿದ್ದು, ಇದು ಗ್ರಾಮದ ಒಟ್ಟು ಜನಸಂಖ್ಯೆಯ 11.1% ರಷ್ಟಿದೆ. ಸಂಪಾಜೆ ಗ್ರಾಮದ ಸರಾಸರಿ ಲೈಂಗಿಕ ಅನುಪಾತ ೧೦೩೫. ಇದು ಕರ್ನಾಟಕ ರಾಜ್ಯದ ಸರಾಸರಿ ೯೭೩ಕ್ಕಿಂತ ಹೆಚ್ಚಾಗಿದೆ[]

ಜೀವವೈವಿಧ್ಯ

[ಬದಲಾಯಿಸಿ]

ಸಂಪಾಜೆ ಭಾರತದ ಪಶ್ಚಿಮ ಘಟ್ಟ ಪ್ರದೇಶದಲ್ಲಿದೆ. ಸಂಪಾಜೆ ವಿವಿಧ ಜಾತಿಯ ಪ್ರಾಣಿಗಳು ಮತ್ತು ಪಕ್ಷಿಗಳಿಂದ ತುಂಬಿದ ಸ್ಥಳವಾಗಿದೆ. ಕೋತಿಗಳು, ನವಿಲುಗಳು, ಮರಕುಟಿಗ ಮತ್ತು ವಿವಿಧ ಬಗೆಯ ಮರಗಳು ಈ ಪ್ರದೇಶದ ಜೈವಿಕ ವೈವಿಧ್ಯತೆಯನ್ನು ರೂಪಿಸುತ್ತವೆ.

ಇಲ್ಲಿ "ಅರೆಭಾಷೆ" ಕನ್ನಡವು ಜನರ ಆಡು ಭಾಷೆಯಾಗಿದ್ದು, ಕೊಡುವ, ತುಳು, ಕನ್ನಡ, ಮಲಯಾಳಂ ಬಲ್ಲವರಾಗಿದ್ದಾರೆ.

ಇಲ್ಲಿ ಹಸಿರು ಗೊಬ್ಬರ, ಉರುವಲು, ಗೋಡಂಬಿ ಮತ್ತು ರಬ್ಬರ್ ಪ್ರಮುಖ ಅರಣ್ಯ ಉತ್ಪನ್ನಗಳು. ಕೃಷಿಯು ಜನರ ಮುಖ್ಯ ಉದ್ಯೋಗವಾಗಿದೆ. ರಬ್ಬರ್, ವೀಳ್ಯದೆಲೆ, ತೆಂಗಿನಕಾಯಿ, ಗೋಡಂಬಿ, ಅಡಿಕೆ ತೋಟಗಳು ಉತ್ಪಾದನೆಯ ಮೂಲಗಳಾಗಿವೆ. ಜೇನುನೊಣ ಸಾಕಾಣಿಕೆಯು ಇಲ್ಲಿನ ಪ್ರಮುಖ ವ್ಯವಸಾಯ.

ಶಿಕ್ಷಣ

[ಬದಲಾಯಿಸಿ]

ಅರುಣ ಪದವಿ ಪೂರ್ವ ಕಾಲೇಜು, ಭಾರತಿ ಪದವಿ ಪೂರ್ವ ಕಾಲೇಜು, ಸರಕಾರಿ ಪದವಿ ಪೂರ್ವ ಕಾಲೇಜು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಸಂಪಾಜೆ,[]

ಆಸ್ಪತ್ರೆಗಳು

[ಬದಲಾಯಿಸಿ]
  • ಸರಕಾರಿ ಆಸ್ಪತ್ರೆ,ನಾಪೋಕ್ಲು
  • ಜನನಿ ಹೆಲ್ತ್ ಕೇರ್ ಸೆಂಟರ್
  • ಆಯುರ್ಧಾಮ ಆಯುರ್ವೇದ ಆಸ್ಪತ್ರೆ ಮತ್ತು ಯೋಗ ಕೇಂದ್ರ

ಧಾರ್ಮಿಕ ಸ್ಥಳಗಳು

[ಬದಲಾಯಿಸಿ]

ಸಂಪಾಜೆಯ ಶಿವನ ದೇವಸ್ಥಾನ, ದೇವರಕೊಲ್ಲಿಯ ಚಾಮುಂಡೇಶ್ವರಿ ದೇವಸ್ಥಾನ, ಸಂಪಾಜೆಯ ಬದ್ರಿಯಾ ಜುಮಾ ಮಸೀದಿ, ಕುಂಡಚೇರಿ ತಾವೂರು ಜುಮಾ ಮಸೀದಿ, ಕಲ್ಲುಗುಂಡಿಯಲ್ಲಿನ ಹನುಮಂತ ದೇವಸ್ಥಾನ, ವಿಷ್ಣಮೂರ್ತಿ ದೇವಸ್ಥಾನ, ಪಂಚಲಿಂಗೇಶ್ವರ ದೇವಸ್ಥಾನ, ಶ್ರೀರಾಮ ದೇವಸ್ಥಾನ ಚೊಕ್ಕಾಡಿ ಇಲ್ಲಿನ ಪ್ರಮುಖ ಧಾರ್ಮಿಕ ಕೇಂದ್ರಗಳಾಗಿವೆ.[][]

ಸಾರಿಗೆ

[ಬದಲಾಯಿಸಿ]

ಸಂಪಾಜೆಗೆ ಹತ್ತಿರದ ಪಟ್ಟಣ ಸುಳ್ಯ. ಸುಳ್ಯ ಸಂಪಾಜೆಯಿಂದ ೨೩ ಕಿ.ಮೀ ದೂರದಲ್ಲಿದೆ. ಸುಳ್ಯದಿಂದ ಸಂಪಾಜೆಗೆ ರಸ್ತೆ ಸಂಪರ್ಕವಿದೆ. ಈ ಪ್ರದೇಶಕ್ಕೆ ರೈಲು ಸಂಪರ್ಕವಿಲ್ಲ.

ಉಲ್ಲೇಖಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]