Personal information | |||||||||||||||||||||||||||||||||||||
---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|
ಜನನ |
ದುರ್ಗ, ಛತ್ತೀಸ್ಗಢ | ೧೨ ಜೂನ್ ೧೯೮೫||||||||||||||||||||||||||||||||||||
Playing position | Forward | ||||||||||||||||||||||||||||||||||||
ರಾಷ್ಟ್ರೀಯ ತಂಡ | |||||||||||||||||||||||||||||||||||||
2000–present | India | 200 | (92) | ||||||||||||||||||||||||||||||||||
Medal record
|
ಸಬಾ ಅಂಜುಮ್ (ಜನನ ೧೨ ಜೂನ್ ೧೯೮೫)ಅವರು ಭಾರತೀಯ ಮಹಿಳಾ ಹಾಕಿ ತಂಡದ ಮಾಜಿ ಆಟಗಾರ್ತಿಯಾಗಿದ್ದಾರೆ. ೨೦೦೨ ರಲ್ಲಿ ಮ್ಯಾಂಚೆಸ್ಟರ್‌ನಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಹಾಕಿ ಸ್ಪರ್ಧೆಯಲ್ಲಿ ಭಾಗವಹಿಸಿದವರಲ್ಲಿ ಇವರು ಅತ್ಯಂತ ಕಿರಿಯ ಸ್ಪರ್ಧಿಯಾಗಿದ್ದರು. ಇವರು ದುರ್ಗದ ಕೆಲಬಾಡಿ ಮೂಲದವರು. [೧]
ಅವರು ೨೦೦೦ ನೇ ಇಸವಿಯಲ್ಲಿ ಮೊದಲ ಬಾರಿ ಭಾರತಕ್ಕಾಗಿ ೧೮ ವರ್ಷದೊಳಗಿನವರ AHF ಕಪ್‌ನಲ್ಲಿ ಆಡಿದ್ದರು. ೨೦೦೧ ಮೇ ನಲ್ಲಿ ಜೂನಿಯರ್ ವಿಶ್ವಕಪ್, ಅಕ್ಟೋಬರ್ ೨೦೦೨ ರಲ್ಲಿ [ಏಷ್ಯನ್ ಕ್ರೀಡಾಕೂಟ|ಏಷ್ಯನ್ ಗೇಮ್ಸ್]] ,೨೦೦೪ರ ಫೆಬ್ರುವರಿಯಲ್ಲಿ ಏಷ್ಯಾ ಕಪ್ ದೆಹಲಿ, ಕಾಮನ್‌ವೆಲ್ತ್ ಗೇಮ್ಸ್ ೨೦೦೨ ಮತ್ತು ೨೦೦೬ ರಲ್ಲಿ ಮ್ಯಾಂಚೆಸ್ಟರ್, ಬ್ಯೂನಸ್ ಐರಿಸ್ ಮತ್ತು ಆಸ್ಟ್ರೇಲಿಯನ್ ಟೆಸ್ಟ್ ಸರಣಿ ಮತ್ತು ನ್ಯೂಜಿಲೆಂಡ್ ಪ್ರವಾಸದಂತಹ ಅನೇಕ ಅಂತರರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.
ನವೆಂಬರ್ ೧ ರಂದು ಅವರಿಗೆ ಛತ್ತೀಸ್‌ಗಢದ ಉನ್ನತ ಗುಂಡಧೂರ್ ಕ್ರೀಡಾ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಈ ಪ್ರಶಸ್ತಿಯನ್ನು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ರಾಜ್ಯಕ್ಕೆ ಗೌರವ ತಂದ ವ್ಯಕ್ತಿಗೆ ಈ ವಾರ್ಷಿಕ ಪ್ರಶಸ್ತಿ ನೀಡಲಾಗುತ್ತದೆ. ಪ್ರಶಸ್ತಿಯು ರೂ ೧ ಲಕ್ಷ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರವನ್ನು ನೀಡಲಾಗುತ್ತದೆ. ಛತ್ತೀಸ್‌ಗಢ ಸರ್ಕಾರವು ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್‌ಪಿ) ಹುದ್ದೆಯಲ್ಲಿ ಪೋಲಿಸ್ ಇಲಾಖೆಯಲ್ಲಿ ಪೋಸ್ಟಿಂಗ್ ನೀಡಿ ಗೌರವಿಸಿದೆ. @ ಛತ್ತೀಸ್‌ಗಢ ದುರ್ಗ್ ೨೦೧೩ ರಲ್ಲಿ, ಅವರು ಭಾರತದ ರಾಷ್ಟ್ರಪತಿಗಳು ನೀಡುವ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದಾರೆ. [೨]
ಅವರು ೨೦೧೫ ರಲ್ಲಿ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದರು [೩] .