ಸರ್ ಜಾನ್ ಕಾಪರ್ತ್ ವೇತ್

ಸರ್ ಜಾನ್ ಕಾಪರ್ತ್ ವೇತ್ (೨೫ ಏಪ್ರಿಲ್ ೧೯೧೫-೨೧ ಜನವರಿ ೨೦೦೬) ಬ್ರಿಟಿಷ್ ನಾಗರೀಕ ಸೇವೆಯ ಅಧಿಕಾರಿಯಾಗಿ ಬಹುಕಾಲ ಹಾಂಗ್ ಕಾಂಗ್ ನ ನೀತಿನಿರೂಪಣೆಯ ಹೊಣೆ ಹೊತ್ತಿದ್ದರು. ಸರ್ ಜಾನ್ ರ ಮುಕ್ತ ಮಾರುಕಟ್ಟೆ ಮತ್ತು ಉದಾರವಾದೀ ಆರ್ಥಿಕ ನೀತಿಯ ಆಡಳಿತದ ಕಾರಣದಿಂದ ಹಾಂಗ್ ಕಾಂಗ್, ಬ್ರಿಟನ್ನಿಗಿಂತಲೂ ಹೆಚ್ಚು ಸಿರಿವಂತ ನಾಡಾಯಿತು.

ಹುಟ್ಟು

[ಬದಲಾಯಿಸಿ]

೨೫ ಏಪ್ರಿಲ್ ೧೯೧೫ರಲ್ಲಿ ಎಡಿನ್ಬರ್ಗ್ ನಲ್ಲಿ ಜನಿಸಿದ ಜಾನ್ ಕಾಪರ್ತ್ ವೇತ್, ಮೆರ್ಚಿಸ್ಟನ್ ಕ್ಯಾಸಲ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಸೇಂಟ್ ಆಂಡ್ರೂಸ್ ಕಾಲೇಜು ಮತ್ತು ಕೇಂಬ್ರಿಜ್ ನ ಕ್ರೈಸ್ಟ್ ಕಾಲೇಜಿನಲ್ಲಿ ಕಲಾ ಪ್ರಾಕಾರದಲ್ಲಿ ವಿದ್ಯಾಭ್ಯಾಸ ಪೂರೈಸಿದರು.

ಕುಟುಂಬ

[ಬದಲಾಯಿಸಿ]

೧೯೪೧ರಲ್ಲಿ ಶೀಲಾ ಥಾಂಸನ್ ರನ್ನು ವರಿಸಿದ ಸರ್ ಜಾನ್ ರಿಗೆ ಒಬ್ಬ ಮಗ.

ಸರ್ಕಾರಿ ಸೇವೆ

[ಬದಲಾಯಿಸಿ]

೧೯೪೧ರಲ್ಲಿ ಬ್ರಿಟಿಷ್ ನಾಗರೀಕ ಸೇವೆ ಸೇರಿದ ಜಾನ್ ಕಾಪರ್ತ್ ವೇತ್, ಬ್ರಿಟಿಷ್ ಆಡಳಿತವಿದ್ದ ಹಾಂಗ್ ಕಾಂಗ್ ನಲ್ಲಿ ನಿಯುಕ್ತಿಗೊಂಡರು.ದ್ವಿತೀಯ ವಿಶ್ವ ಯುದ್ಧದಲ್ಲಿ ಸೇನಾಕಾರ್ಯಕ್ಕಾಗಿ ಸಿಯೆರಾ ಲಿಯೋನ್ ನಲ್ಲಿ ಕಾರ್ಯನಿರ್ವಹಿಸಿದರು.

ಸರ್ ಜಾನ್ ಜೇಮ್ಸ್ ಕಾಪರ್ತ್ ವೇತ್ (೨೫ ಏಪ್ರಿಲ್ ೧೯೧೫-೨೧ ಜನವರಿ ೨೦೦೬) ಬ್ರಿಟಿಷ್ ನಾಗರೀಕ ಸೇವೆಯ ಅಧಿಕಾರಿಯಾಗಿ ಬಹುಕಾಲ ಹಾಂಗ್ ಕಾಂಗ್ ನ ನೀತಿನಿರೂಪಣೆಯ ಹೊಣೆ ಹೊತ್ತಿದ್ದರು. ಸರ್ ಜಾನ್ ರ ಮುಕ್ತ ಮಾರುಕಟ್ಟೆ ಮತ್ತು ಉದಾರವಾದೀ ಆರ್ಥಿಕ ನೀತಿಯ ಆಡಳಿತದ ಕಾರಣದಿಂದ ಹಾಂಗ್ ಕಾಂಗ್, ಬ್ರಿಟನ್ನಿಗಿಂತಲೂ ಹೆಚ್ಚು ಸಿರಿವಂತ ನಾಡಾಯಿತು.

ಹಾಂಗ್ ಕಾಂಗ್ ನಲ್ಲಿ ಸೇವೆ

[ಬದಲಾಯಿಸಿ]

೧೯೪೫ರಲ್ಲಿ ಹಾಂಗ್ ಕಾಂಗ್ ಗೆ ಮರಳಿದ ಜಾನ್ ರ ಮೊದಲ ಸವಾಲು ಯುದ್ಧದಿಂದ ಕ್ಷುಣ್ಣಗೊಂಡಿದ್ದ ಹಾಂಗ್ ಕಾಂಗ್ ಅನು ಪುನರ್ರುಜ್ಜೀವನಗೊಳಿಸುವುದಾಗಿತ್ತು. ಹೆಚ್ಚಿನ ಸರಕಾರದ ಅನುದಾನವಿಲ್ಲದೆಯೇ, ಆರ್ಥಿಕ ಚಟುವಟಿಕೆಯನ್ನು ಹೆಚ್ಚಿಸ್ಬೇಕೆಂಬುದು ಜಾನ್ ರಿಗೆ ನೀಡಿದ ಆದೇಶವಾಗಿತ್ತು. "ಧನಾತ್ಮಕ ನಕಾರ"ವೆಂಬ ನೀತಿಯನ್ನು ಜಾನ್ ಒರೆಗೆ ಹಚ್ಚಿದರು. ಫ಼್ರೆಡರಿಕ್ ಹಯೆಕ್, ಲುಡ್ವಿಗ್ ವಾನ್ ಮೈಸೆಸ್ ಮತ್ತು ಮಿಲ್ಟನ್ ಫ಼್ರೀಡ್ಮನ್ ಪ್ರಣೀತ ಮುಕ್ತ ಆರ್ಥಿಕ ನೀತಿಯ ಹೂರಣವೇ "ಧನಾತ್ಮಕ ನಕಾರ". ಹಣಕಾಸು ಕಾರ್ಯದರ್ಶಿಯಾಗಿ ಸರ್ ಜಾನ್ ಕಾಪರ್ವೇಥ್ ರ ಮುಕ್ತ ಮಾರುಕಟ್ಟೆ ಮತ್ತು "ಮಿತ-ತೆರಿಗೆ, ಮಿತ-ಕಾನೂನು, ಸರ್ಕಾರದ ಖರ್ಚುಗಳಲ್ಲಿ ಮಿತವ್ಯಯ, ಮುಕ್ತ ಆರ್ಥಿಕ ವ್ಯವಸ್ಥೆ, ಉದಾರವಾದಿ ಮಾರುಕಟ್ಟೆ ನೀತಿಗಳನ್ನು ಹಾಂಗ್ ಕಾಂಗ್ ನ ಅಧಿಕೃತ ನಿಯಮಗಳನ್ನಾಗಿಸಿದರು. ಅರ್ಥ ವ್ಯ್ವವಸ್ಥೆಯ ಅಂಕಿಅಂಶಗಳನ್ನು ಕೂಡಾ ಪಟ್ಟಿ ಮಾಡುವುದು ಸರ್ ಜಾನ್ ರಿಗೆ ಸರಿ ಕಾಣುತ್ತಿರಲಿಲ್ಲ. ಕೆಳಕಂಡವು ಇದರ ಮುಖ್ಯಲಕ್ಷಣಗಳು:

  1. ವ್ಯಾಪಾರ-ವ್ಯವಹಾರಗಳಿಗೆ ಸರ್ಕಾರ ಮುಕ್ತ ಅವಕಾಶ ಈಯುತ್ತದೆ. ಯಾವುದೆ ಬಗೆಯ ತಡೆ ಒಡ್ಡದು. ಆಮದು ಅಥವಾ ನಿರ್ಯಾತಕ್ಕೆ ಮಾತ್ರ ಒತ್ತು ನೀಡುವುದಿಲ್ಲ.
  2. ಹಣಕಾಸನ್ನು ನಿಯಂತ್ರಿಸುವುದಿಲ್ಲ
  3. ಸರ್ಧಾತ್ಮಕವಾದ ಮತ್ತು ಅನಿಯಂತ್ರಿತವಾದ ವ್ಯಾಪಾರನೀತಿಪಾಲನೆ. ಯಾವುದೇ ಬಗೆಯ ಉದ್ಯಮಕ್ಕೆ ಸಬ್ಸಿಡಿ ನೀಡಲಾಗುವುದಿಲ್ಲ.
  4. ಜನರಿಗೆ ಉಳಿತಾಯ ಮಾಡಲು ಅನುವು ಮಾಡುವುದು ಮತ್ತು ಉಳಿತಾಯದ ಹಣವನ್ನು ದೂರಗಾಮಿ ಯೋಜನೆಗಳಿಗೆ ಹೂಡಿಕೆ ಮಾಡುವುದು
  5. ಸರ್ಕಾರದ ವೆಚ್ಚವನ್ನು ಸಾಧ್ಯವಾದ ಮಟ್ಟಿಗೆ ಮಿತವಾಗಿಸುವುದು
  6. ಜನರಿಗೆ ಎಲ್ಲಾ ಬಗೆಯ ಮೂಲಸೌಕರ್ಯಗಳನ್ನು ಒದಗಿಸುವುದು
  7. ವಿದೇಶಿ ವಿನಿಮಯವನ್ನು ಜಗತ್ತಿನ ಎಲ್ಲೆಡೆಯಿಂದಲೂ ಒಳಹರಿವಿಗೆ ಅನುಮತಿ

ಈ ಎಲ್ಲಾ ನೀತಿಗಳ ಕಾರಣ ಹಾಂಗ್ ಕಾಂಗ್ ನಾಗರೀಕರು ಯಾವುದೇ ಬಗೆಯ ಉದ್ಯೋಗವಾಗಲಿ, ಕೆಲಸ ಬದಲಿಸಲು ಅಥವಾ ಕಲಿಯಲು ಮುಂದಾಗುತ್ತಾರೆ ಎಂಬುದು ಜಾನ್ ರ ಬಲವಾದ ನಂಬಿಕೆಯಾಗಿತ್ತು. ಹಾಂಗ್ ಕಾಂಗ್ ಬಂದರು ಪಟ್ಟಣ ಮಾತ್ರ ಉಳಿಯದೆ, ರಿಫ಼ೈನರಿ, ಮಿಲ್, ಹಣಕಾಸು ಸೇವೆ ಇವೇ ಮುಂತಾದ ಉದ್ಯಮಗಳಿಗೆ ಮೆಟ್ಟಿಲಾಯಿತು.

ಆರ್ಥಿಕ ಸ್ವಾತಂತ್ರ್ಯದಲ್ಲಿ ೧೯೭೫ರಿಂದ ಸತತವಾಗಿ ಹಾಂಗ್ ಕಾಂಗ್ ನಂಬರ್ ೧ರ ಸ್ಥಾನದಲ್ಲಿದೆ.

ಶಿಕ್ಷಣ, ರಸ್ತೆ, ರೈಲು ಇವು ಯಾವುದನ್ನೂ ಸರ್ಕಾರ ಮಾಡದು. ಖಾಸಗಿ ಸಂಸ್ಥೆಗಳಿಗೆ ಈ ಕೆಲಸ ಒಪ್ಪಿಸಿ, ಸರ್ಧಾತ್ಮಕವಾಗಿ ಕಡಿಮೆ ವೆಚ್ಚ -ಅತ್ಯುತ್ತಮ ಗುಣಮಟ್ಟವನ್ನು ಪಡೆಯುವುದು ಜಾನ್ ರ ಗುರಿಯಾಗಿತ್ತು. ಈ ಎಲ್ಲಾ ಕ್ರಮಗಳಿಂದ ಹಾಂಗ್ ಕಾಂಗ್ ನಾಗರೀಕರ ಸರಾಸರಿ ಆದಾಯ ೫೪೨೭೦ ಅಮೇರಿಚನ್ ಡಾಲರ್ ಗಳಷ್ಟು ಇತ್ತು. ಇದು ಬ್ರಿಟನ್ನಿನ ಸರಾಸರಿ ೩೮೧೬೦ ಅಮೇರಿಚನ್ ಡಾಲರ್ ಗಳಿಗಿಂತ ಹೆಚ್ಚು.

೧೯೬೦ರಲ್ಲಿ ಬ್ರಿಟಿಷ್ ಅತ್ಯುಚ್ಚ ನಾಗರೀಕ ಅಧಿಕಾರಿ (OBE), ೧೯೬೮ರಲ್ಲಿ ಬ್ರಿಟಿಷ್ ಅತ್ಯುಚ್ಚ ನೈಟ್ ಕಮಾಂಡರ್ (KBE) ಗೌರವಗಳಿಗೆ ಪಾತ್ರರಾದರು. ೧೯೭೧ರಲ್ಲಿ ನಿವೃತ್ತಿಯ ಬಳಿಕ ೧೯೮೧ರವರೆಗೆ ಜಾರ್ಡಿನ್ ಫ಼್ಲೆಮಿಂಗ್ ಬ್ಯಾಂಕಿಗೆ ಸಲಹೆಗಾರರಾದ ಸರ್ ಜಾನ್, ಹುಟ್ಟೂರು ಸ್ಕಾಟ್ಲೆಂಡಿಗೆ ಮರಳಿದರು.

೨೧ ಜನವರಿ ೨೦೦೬್ ರಂದು ತಮ್ಮ ೯೦ನೆ ವಯಸ್ಸಿನಲ್ಲಿ ನಿಧನರಾದರು.