ಸಾಗ್

ಸರಸ್ಞೋ ದಾ ಸಾಗ್
ಸಾಗ್ ಪನೀರ್: ಪಾಲಕ್ ಮತ್ತು ಪನೀರ್

ಸಾಗ್ ಭಾರತೀಯ ಉಪಖಂಡದಲ್ಲಿ ರೋಟಿ ಅಥವಾ ನಾನ್‍ನಂತಹ ಬ್ರೆಡ್‍ನೊಂದಿಗೆ[] ಅಥವಾ ಅನ್ನದೊಂದಿಗೆ (ನೇಪಾಳ, ಒಡಿಶಾ, ಕಾಶ್ಮೀರ ಹಾಗೂ ಪಶ್ಚಿಮ ಬಂಗಾಳ) ತಿನ್ನಲಾದ ಎಲೆ ತರಕಾರಿಯ ಒಂದು ಖಾದ್ಯವಾಗಿದೆ. ಸಾಗ್‍ನ್ನು ಸಾಸಿವೆ ಎಲೆಗಳು, ಎಲೆಕೋಸು, ಬಸಳೆ, ಸಣ್ಣದಾಗಿ ಹೆಚ್ಚಿದ ಬ್ರಾಕಲಿ ಅಥವಾ ಇತರ ಸೊಪ್ಪಿನಿಂದ ತಯಾರಿಸಬಹುದು. ಜೊತೆಗೆ ಇತರ ಸಂಬಾರ ಪದಾರ್ಥಗಳು ಮತ್ತು ಕೆಲವೊಮ್ಮೆ ಪನೀರ್‌ನಂತಹ ಇತರ ಘಟಕಾಂಶಗಳನ್ನು ಸೇರಿಸಲಾಗುತ್ತದೆ.

ಸಾಗ್ ಒಡಿಶಾ ರಾಜ್ಯದಲ್ಲಿ ಸಾಮಾನ್ಯವಾಗಿದೆ. ಇಲ್ಲಿ ಇದನ್ನು ಪಖಾಲದೊಂದಿಗೆ ತಿನ್ನಲಾಗುತ್ತದೆ. ಪುರಿಯ ಜಗನ್ನಾಥ ದೇವಾಲಯದಲ್ಲಿ, ಜಗನ್ನಾಥನಿಗೆ ಮಹಾಪ್ರಸಾದದ ಭಾಗವಾಗಿ ನೈವೇದ್ಯ ಮಾಡಲಾದ ಖಾದ್ಯಗಳಲ್ಲಿ ಸಾಗ್ ಕೂಡ ಒಂದಾಗಿದೆ. ಉತ್ತರ ಭಾರತದಲ್ಲಿ ಸರಸ್ಞೋ ದಾ ಸಾಗ್ (ಸಾಸಿವೆ ಎಲೆಗಳ ಸಾಗ್) ಅತ್ಯಂತ ಸಾಮಾನ್ಯ ತಯಾರಿಕೆಯಾಗಿದೆ. ಅಲ್ಲಿ ಇದನ್ನು ಮಕ್ಕಿ ದೀ ರೋಟಿಯೊಂದಿಗೆ ತಿನ್ನಬಹುದು (ಮೆಕ್ಕೆ ಜೋಳದ ಹಿಟ್ಟಿನಿಂದ ತಯಾರಿಸಲಾದ ಹಳದಿ ಬಣ್ಣದ ರೋಟಿ).[]

ಉಲ್ಲೇಖಗಳು

[ಬದಲಾಯಿಸಿ]
  1. "Saag (Indian spiced spinach)". Whats4Eats.com. 2012. Retrieved 6 July 2012. Saag makes a tasty and nourishing meal when paired with chapati or naan.
  2. "served with makki ki roti". Retrieved 29 March 2017.