ಸಾವರ್ಣಿ ಮನು | |
---|---|
ಸಂಲಗ್ನತೆ | ಮನು |
ಒಡಹುಟ್ಟಿದವರು | ವೈವಸ್ವತ ಮನು (ಮಲಸಹೋದರ) ತಪತಿ (ಸಹೋದರಿ) ಶನಿ (ಸಹೋದರ) |
ಮಕ್ಕಳು | ನಿರ್ಮೋಕ, ವಿರೋಜಾಕ್ಷ |
ಗ್ರಂಥಗಳು | ಪುರಾಣ, ಮಹಾಭಾರತ |
ತಂದೆತಾಯಿಯರು | ಸೂರ್ಯ (ತಂದೆ), ಛಾಯಾ (ತಾಯಿ) |
ಪೂರ್ವಾಧಿಕಾರಿ | ವೈವಸ್ವತ ಮನು |
ಉತ್ತರಾಧಿಕಾರಿ | ದಕ್ಷ ಸಾವರ್ಣಿ |
ಸಾವರ್ಣಿ ಮನು ಎಂಟನೆಯ ಮನು, ಹಿಂದೂ ಪುರಾಣಗಳಲ್ಲಿ ಮನ್ವಂತರ ಎಂದು ಕರೆಯಲ್ಪಡುವ ಯುಗದ ಮೊದಲ ವ್ಯಕ್ತಿ ಈತ.
ಸರಣಿಯ ಭಾಗ |
ಹಿಂದೂ ಪುರಾಣ |
---|
![]() |
ಮೂಲಗಳು |
ಹಿಂದೂ ವಿಶ್ವವಿಜ್ಞಾನ |
ಹಿಂದೂ ದೇವತೆಗಳು |
ಮಹಾಕಾವ್ಯಗಳ ವ್ಯಕ್ತಿಗಳು |
ಹಿಂದೂ ಧರ್ಮ ಪೋರ್ಟಲ್ |
ವಿಷ್ಣು ಪುರಾಣ ಹದಿನಾಲ್ಕು ಮನುಗಳನ್ನು ನಿರ್ದಿಷ್ಟಪಡಿಸುತ್ತದೆ.[೧] ಪ್ರಸ್ತುತ ಯುಗದ ಮನುವನ್ನು ವೈವಸ್ವತ ಎಂದು ಕರೆಯಲಾಗುತ್ತದೆ. ಈತನು ಈ ಬಿರುದನ್ನು ಪಡೆದ ಏಳನೇ ವ್ಯಕ್ತಿ. ಅವನ ನಂತರ ಅವನ ಮಲಸಹೋದರ ಸರ್ವಭುಮನು ಅಧಿಕಾರಕ್ಕೆ ಬರಲಿದ್ದಾನೆ, ಅವನನ್ನು ಸಾವರ್ಣಿ ಮನು ಎಂದು ಕರೆಯಲಾಗುವುದು.[೨] ಎಂಟನೇ ಮನುವು ಸೂರ್ಯ ದೇವರಿಗೆ ಮತ್ತು ಅವನ ಪತ್ನಿಯರಲ್ಲಿ ಒಬ್ಬರಾದ ಛಾಯಾಗೆ ಜನಿಸಿದನು ಎಂದು ವಿವರಿಸಲಾಗಿದೆ.[೩][೪]
ಶ್ರೀಮನ್ ಭಾಗವತದ ಪ್ರಕಾರ, ಸಾವರ್ಣಿಯ ಪುತ್ರರು ನಿರ್ಮೋಕರ, ವಿರೋಕ್ಷ ಮತ್ತು ಹೆಸರಿಸದ ಇತರರು ಎಂದು ಹೇಳಲಾಗಿದೆ. ಅವನ ಆಳ್ವಿಕೆಯ ಅವಧಿಯಲ್ಲಿ, ಸೂರ್ಯ ಮತ್ತು ವಿಷ್ಣು ದೇವತೆಗಳನ್ನು ಪೂಜಿಸಲಾಗುತ್ತಿತ್ತು ಎಂದು ಹೇಳಲಾಗಿದೆ. ವಿರೋಚನ ಮಗನಾದ ಬಾಲಿ ರಾಜನಾಗಿ ಆಳ್ವಿಕೆ ನಡೆಸಿದನೆಂದು ವರ್ಣಿಸಲಾಗಿದೆ. ಗಾಲವ, ದೀಪ್ತಿಮಾನ್, ಅಶ್ವತ್ಥಾಮ, ಕೃಪಾ, ಋಷ್ಯಶ್ರೃಂಗ, ವದ್ರಯಾನ ಮತ್ತು ಪರಶುರಾಮ ಈ ಯುಗದ ಏಳು ಋಷಿಮುನಿಗಳೆಂದು ಹೆಸರಿಸಲಾಗಿದೆ.[೫]