ಸಿಬುರು (ಸಿಗುರು) ಒಂದು ದೊಡ್ಡದಾದ ವಸ್ತುವಿನ (ಸಾಮಾನ್ಯವಾಗಿ ಕಟ್ಟಿಗೆ) ಚೂರು ಅಥವಾ ದೇಹದೊಳಗೆ ಭೇದಿಸಿಹೋಗುವ ಅಥವಾ ಉದ್ದೇಶಪೂರ್ವಕವಾಗಿ ದೇಹದೊಳಗೆ ಚುಚ್ಚಲಾದ ಬಾಹ್ಯ ಪದಾರ್ಥ. ಸಿಬುರು ಎಂದು ಪರಿಗಣಿಸಲ್ಪಡಲು ಬಾಹ್ಯ ಪದಾರ್ಥವು ಅಂಗಾಂಶದೊಳಗೆ ನಾಟಿಕೊಂಡಿರಬೇಕು. ಸಿಬುರುಗಳು ಮಾಂಸ ಮತ್ತು ಸ್ನಾಯುವನ್ನು ಭೇದಿಸಿದಾಗ ಆರಂಭಿಕ ನೋವನ್ನು ಉಂಟುಮಾಡಬಹುದು ಮತ್ತು ಬಾಹ್ಯ ಪದಾರ್ಥದ ಮೇಲಿನ ಬ್ಯಾಕ್ಟೀರಿಯಾದ ಮೂಲಕ ಸೋಂಕನ್ನು ಉಂಟುಮಾಡಬಹುದು. ಕಾಲಾಂತರದಲ್ಲಿ ಪ್ರಮುಖ ಅಂಗಗಳು ಅಥವಾ ಮೂಳೆಗೆ ಸ್ಥಳಾಂತರವಾಗುವ ಮೂಲಕ ಗಂಭೀರ ಆಂತರಿಕ ಹಾನಿಯನ್ನು ಉಂಟುಮಾಡುತ್ತವೆ.
ಸಿಬುರುಗಳು ಸಾಮಾನ್ಯವಾಗಿ ಕಟ್ಟಿಗೆಯನ್ನು ಹೊಂದಿರುತ್ತವೆ, ಆದರೆ ಅನೇಕ ಇತರ ಬಗೆಗಳಿವೆ. ಅಮೇರಿಕನ್ ಕುಟುಂಬ ವೈದ್ಯರ ಅಕಾಡೆಮಿಯ (ಎಎಎಫ಼್‍ಪಿ) ಪ್ರಕಾರ, ಸಿಬುರುಗಳ ಸಾಮಾನ್ಯ ಬಗೆಗಳೆಂದರೆ ಗಾಜು, ಪ್ಲಾಸ್ಟಿಕ್, ಲೋಹ ಮತ್ತು ಪ್ರಾಣಿಗಳ ಮುಳ್ಳಿನಂಥ ರಚನೆಗಳು.[೧]