ಸಿರ್ಸಿ
ಸಿರಿಸೆ, ಸಿರಸಿ ಕಲ್ಯಾಣ ಪಟ್ಟಣ | |
---|---|
ನಗರ | |
ಸಿರ್ಸಿ | |
Nickname(s): ಮಲೆನಾಡಿನ ಹೆಬ್ಬಾಗಿಲು [೧] | |
Coordinates: 14°37′10″N 74°50′07″E / 14.6195°N 74.8354°E | |
Grid position | MK74 |
ದೇಶ | ಭಾರತ |
ರಾಜ್ಯ | ಕರ್ನಾಟಕ |
ವಿಭಾಗ | ಕಿತ್ತೂರು ಕರ್ನಾಟಕ |
ಪ್ರದೇಶ | ಮಲೆನಾಡು |
ಜಿಲ್ಲೆ | ಉತ್ತರ ಕನ್ನಡ |
ಹೆಸರಿಡಲು ಕಾರಣ | ಸಿರಿಸ ಮರ |
Area | |
• Total | ೧೧.೩೩ km೨ (೪.೩೭ sq mi) |
Elevation | ೫೯೦ m (೧,೯೪೦ ft) |
Population (2018) | |
• Total | ೧,೮೭,೦೦೦ |
• ಸಾಂದ್ರತೆ | ೧೭,೦೦೦/km೨ (೪೩,೦೦೦/sq mi) |
ಭಾಷೆ | |
• ಅಧಿಕೃತ | ಕನ್ನಡ |
ಸಮಯ ವಲಯ | ಯುಟಿಸಿ+5:30 |
PIN | 5814xx |
ದೂರವಾಣಿ ಸಂಖ್ಯೆ | +91-8384 |
ವಾಹನ ನೋಂದಣಿ | KA 31 |
ಜಾಲತಾಣ | www |
ಸಿರ್ಸಿ, ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಒಂದು ನಗರ, ತಾಲ್ಲೂಕು ಮತ್ತು ವಾಣಿಜ್ಯ ಕೇಂದ್ರವಾಗಿದೆ. ಇದನ್ನು "ಸಿರಸಿ" ಹಾಗೂ "ಶಿರಸಿ" ಎಂದೂ ಕರೆಯಲಾಗುತ್ತದೆ. ಸಿರ್ಸಿ ತಾಲ್ಲೂಕು [೨] ಪ್ರದೇಶವು ಅಡಿಕೆ ತೋಟಗಳು, ಕಾಡುಗಳು ಹಾಗೂ ಜಲಪಾತಗಳಿಂದ ಕೂಡಿದ್ದು ಅಡಿಕೆ ಬೆಳೆ ಮತ್ತು ಮಾರಾಟ ಇಲ್ಲಿನ ಆರ್ಥಿಕತೆಯ ಬೆನ್ನೆಲುಬು. ಈ ಊರಿನಲ್ಲಿ ಪ್ರಸಿದ್ಧವಾದ ಸಿರ್ಸಿ ಮಾರಿಕಾಂಬಾ ದೇವಸ್ಥಾನ ಇದೆ. ಎರಡು ವರ್ಷಕೊಮ್ಮೆ ಸಿರ್ಸಿಯಲ್ಲಿ ನಡೆಯುವ ಶ್ರೀ ಮಾರಿಕಾಂಬಾ ದೇವಿ ಜಾತ್ರೆಯು ಭಾರತದ ಅತಿ ದೊಡ್ಡ ಜಾತ್ರೆಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೂ ಕೂಡ ಪಾತ್ರವಾಗಿದೆ.
ಈ ಪ್ರದೇಶದಲ್ಲಿ ಹೆಚ್ಚಾಗಿ ಕಾಣಸಿಗುತ್ತಿದ್ದ ಸಿರಿಸ ಮರಗಳ ಕಾರಣದಿಂದ ಈ ಊರನ್ನು ಸಿರಿಸೆ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ಕಾಲಕ್ರಮೇಣ ಇದು ಸಿರಸಿಯಾಗಿ, ಅನಂತರ 'ಸಿರ್ಸಿ'ಯಾಗಿ ಬಳಕೆಗೆ ಬಂದಿತು. ಸಿರ್ಸಿಯನ್ನ ಸೋಂದಾ ಅರಸರ ಕಾಲದಲ್ಲಿ ಕಲ್ಯಾಣ ಪಟ್ಟಣ ಎಂಬ ಹೆಸರಿನಿಂದ ಸಹ ಕರೆಯುತ್ತಿದ್ದರು.
ಕ್ರಿಸ್ತಶಕ ೩೪೫ – ೫೨೫ ವರೆಗೆ ಆಳಿದ ಕದಂಬ ಅರಸರ ರಾಜಧಾನಿಯಾಗಿದ್ದ ಬನವಾಸಿ ಸಿರ್ಸಿಯಿಂದ ೨೪ ಕಿ.ಮಿ. ದೂರದಲ್ಲಿದೆ. ಇಲ್ಲಿ ಕದಂಬರು ಕಟ್ಟಿಸಿದ ಮಧುಕೇಶ್ವರ ದೇವಸ್ಥಾನ ತುಂಬ ಸುಂದರವಾಗಿದೆ.
ಸಿರ್ಸಿಯಿಂದ ೧೭ ಕಿ.ಮಿ. ದೂರದಲ್ಲಿರುವ ಸಹಸ್ರಲಿಂಗದಲ್ಲಿ, ನದಿಯ ಮಧ್ಯದಲ್ಲಿ ಕಲ್ಲುಗಳಲ್ಲಿ ಕೆತ್ತಲಾದ ನೂರಾರು ಶಿವಲಿಂಗಗಳಿವೆ. ಕಾಡಿನ ಮಧ್ಯ ಇರುವ ಸಹಸ್ರಲಿಂಗಕ್ಕೆ ಶಿವರಾತ್ರಿಯಂದು ಬಹಳ ಜನ ಬರುತ್ತಾರೆ.
ಸಿರ್ಸಿಯಿಂದ 20 ಕಿ.ಮಿ. ದೂರದಲ್ಲಿರುವ ಸೋಂದಾದಲ್ಲಿ (ಇತರೆ ಹೆಸರುಗಳು ಸೋದೆ, ಸ್ವಾದಿ) ಪ್ರಸಿದ್ಧ ವಾದಿರಾಜ ಮಠವಿದೆ. ಮತ್ತು ಅಲ್ಲಿ ಕೆಲ ಶತಮಾನಗಳ ಹಿಂದಿನ ಸುಂದರವಾದ ಕೋಟೆಯಿದೆ.
೧೧೬ ಮಿಟರ್ ಎತ್ತರದಿಂದ ಧುಮುಕುವ ಈ ಜಲಪಾತ ರಮಣೀಯವಾಗಿದೆ. ಸಿರ್ಸಿಯಿಂದ ೩೦ ಕಿ.ಮಿ. ದೂರದಲ್ಲಿರುವ ಈ ಜಲಪಾತದಲ್ಲಿ ವರ್ಷದ ಬಹು ಭಾಗದಲ್ಲಿ ನೀರು ಇರುತ್ತದೆ.
ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಲ್ಲೊಂದು. ಪಶ್ಚಿಮ ಘಟ್ಟಗಳ ಸಹ್ಯಾದ್ರಿ ಶ್ರೇಣಿಯಲ್ಲಿದೆ. ಇದು ಶಿರಸಿಯಿಂದ ೪೫ ಕಿ.ಮಿ. ದೂರದಲ್ಲಿದೆ.
ಸಿರ್ಸಿಯಿಂದ ಬನವಾಸಿಗೆ ಹೋಗುವ ರಸ್ತೆಯ ಬಲಭಾಗದಲ್ಲಿ ಸುಮಾರು ೧೬ನೇ ಶತಮಾನದ ಶ್ರೀ ಮಾರಿಕಾಂಬಾ ದೇವಾಲಯವಿದೆ. ೧೯೩೩ರಲ್ಲಿ ಗಾಂಧೀಜಿಯವರು ಸಹ ಇಲ್ಲಿಗೆ ಭೇಟಿ ನೀಡಿದ್ದರು ಎಂಬ ಉಲ್ಲೇಖವಿದೆ.
ಸಿರ್ಸಿ ತಾಲೂಕಿನ ಸುಧಾಪುರ ಕ್ಷೇತ್ರದ ಸೋಂದಾ ಗ್ರಾಮದಲ್ಲಿರುವ ಬಾಡಲಕೊಪ್ಪ ಮಜರೆಯಲ್ಲಿರುವ ಮುಂಡಿಗೆಕೆರೆ ಪಕ್ಷಿಧಾಮಕ್ಕೆ ಪ್ರತಿವರ್ಷ ಸಾವಿರಾರು ಬೆಳ್ಳಕ್ಕಿಗಳು ವಂಶಾಭಿವೃದ್ಧಿಗೆ ಜೂನ್ ತಿಂಗಳಲ್ಲಿ ಬಂದು ನೂರಾರು ಗೂಡುಗಳನ್ನು ಕಟ್ಟಿ ವಾಸಿಸುತ್ತವೆ. [೩] ಅಕ್ಟೋಬರ್ ತಿಂಗಳ ಕೊನೆಯವರೆಗೆ ಸಂತಾನೋತ್ಪತ್ತಿ ಮಾಡಿಕೊಂಡು ಹಾರಿಹೋಗುತ್ತವೆ. ಸುಮಾರು ೪ ಎಕರೆ ವಿಸ್ತಾರದ ಈ ಕೆರೆಯನ್ನು ಸಂಪೂರ್ಣ ಆವರಿಸಿವ ಮುಂಡಿಗೆ ಗಿಡಗಳ ಮೇಲೆಯೇ ಗೂಡು ಕಟ್ಟಿಕೊಳ್ಳುತ್ತವೆ. ಕೆರೆಯ ಪಕ್ಕದಲ್ಲೇ ೪೦ ಅಡಿ ಎತ್ತರದ ವೀಕ್ಷಣಾ ಗೋಪುರ ಸಹ ಇದೆ.[೪]
ಸದ್ಯ ಸಿರ್ಸಿ ನಗರದ ನಾಡಿಗಲ್ಲಿಯ ಕೊನೆಯಲ್ಲಿರುವ ಮುಸುಕಿನ ಬಾವಿಯನ್ನು ೧೭ನೇ ಶತಮಾನದಲ್ಲಿ ಸೋದೆಯ ಅರಸ ಸದಾಶಿವರಾಯ ತನ್ನ ಪ್ರೇಯಸಿ ಸ್ನಾನಕ್ಕೆ ಅನುಕೂಲ ಕಲ್ಪಿಸಲು ಕಟ್ಟಿಸಿದ್ದ.[೫]
ಕ್ರಿ.ಶ. | ಮನೆತನ |
---|---|
ಪೂರ್ವ | ಮೌರ್ಯ |
೧-೨ನೇ ಶತಮಾನ | ಶಾತವಾಹನ |
೨-೩ನೇ ಶತಮಾನ | ಚುಟುವಂಶ (ಶಾತವಾಹನರ ಶಾಖೆ), ಕಂಚಿ ಪಲ್ಲವರು |
೩-೬ನೇ ಶತಮಾನ | ಬನವಾಸಿ ಕದಂಬರು |
೬-೧೦ನೇ ಶತಮಾನ | ಎರಡನೇ ಪುಲಿಕೇಶಿ, ಆಳುಪರು, ರಾಷ್ಟ್ರಕೂಟರು |
೧೦-೧೨ ಶತಮಾನ | ಕದಂಬ, ಕಲ್ಯಾಣ ಚಾಲುಕ್ಯ (ಹಾನಗಲ್ಲಿನ ಶಾಸನಗಳು) |
೧೪೦೦-೧೭೬೪ ಶತಮಾನ | ಸೊಂದಾ ನಾಯಕರು (ವಿಜಯನಗರ ಸಾಮ್ರಾಜ್ಯದ ಮಾಂಡಲಿಕ) |
೧೭೬೩-೧೭೯೯ | ಮೈಸೂರಿನ ಹೈದರಾಲಿ (ಆಂಗ್ಲೋ-ಮೈಸೂರ್ ಯುದ್ಧದವರೆಗೆ) |
೧೮೦೦-೧೯೪೭ | ಆಂಗ್ಲರು |
೧೮೬೨ | ಆಂಗ್ಲರಿಂದ ಮುಂಬೈ ಪ್ರಾಂತ್ಯಕ್ಕೆ ಸೇರ್ಪಡೆ |
೧೯೫೬ | ಸ್ವತಂತ್ರ್ಯ ಭಾರತದ ಮೈಸೂರು ಪ್ರಾಂತ್ಯಕ್ಕೆ ಸೇರ್ಪಡೆ |
೧೮೫೯ | ಸಿರ್ಸಿ ತಾಲೂಕಾ ಕೇಂದ್ರವಾದದ್ದು (ಸೋಂದೆಯಿಂದ) |
೧೯೭೭ | ನಾರ್ತ್ ಕೆನರಾದ ಮರುನಾಮಕರಣ - ಉತ್ತರ ಕನ್ನಡ |
೨೦೧೧ ಜನಗಣತಿಯ ಪ್ರಕಾರ ಈ ಊರಿನ ಜನಸಂಖ್ಯೆ ೧,೧೦,೨೧೫. ಇವರಲ್ಲಿ 81 ಶೇಕಡಾ ಜನರು ಸಾಕ್ಷರರು. ಸಿರ್ಸಿಯಲ್ಲಿ ಕನ್ನಡ, (ಹವ್ಯಕ ಕನ್ನಡ), ಕೊಂಕಣಿ, ಮರಾಠಿ ಭಾಷೆಗಳನ್ನು ಮಾತಾಡುವ ಜನರಿದ್ದು ಮುಖ್ಯ ವ್ಯಾವಹಾರಿಕ ಭಾಷೆ ಕನ್ನಡವಾಗಿದೆ.
೧೮೭೦ರಲ್ಲಿ ಕಂದಾಯ ಇಲಾಖೆಯ ಸಿಬ್ಬಂದಿಗಳು ಸಂಗ್ರಹಿಸಿದ ೩೦೦ ಪುಸ್ತಕಗಳೊಂದಿಗೆ ಕಂದಾಯ ಕಛೇರಿಯಲ್ಲಿ ಪ್ರಾರಂಭವಾಗಿತ್ತು. ನಂತರ ಪುರಸಭಾ ಕಟ್ಟಡಕ್ಕೆ ಸ್ಥಳಾಂತರಗೊಂಡು ೧೯೦೦ರ ಸುಮಾರಿಗೆ ದಿ. ರಾವಬಹದ್ದೂರ್ ಪುಂಡಲೀಕರಾವ್ ಪಂಡಿತರು (ಪುರಸಭಾಧ್ಯಕ್ಷ) ೨೦೦೮ ಚಮೀ ಜಾಗವನ್ನು ೯೯ವರ್ಷಗಳ ಲೀಸಿಗೆ ನೀಡಿದರು. ೧೯೦೪ರಲ್ಲಿ ಕಟ್ಟಡ ನಿರ್ಮಾಣ ಆರಂಭಗೊಂಡು, ೧೯೦೭ರಲ್ಲಿ ಶ್ರೀಮತಿ ಸಿ. ಸಿ. ಬೋಯ್ಡ್‌ರವರಿಂದ ಉದ್ಘಾಟನೆಯಾಯಿತು. [೮]
೧೯೭೦ರಲ್ಲಿ ಪದ್ಮಶ್ರೀ ಟಾಕೀಸಿನಲ್ಲಿ ನೃತ್ಯ ಪ್ರದರ್ಶನದಿಂದ ೨೧,೦೦೦ ರೂಪಾಯಿಗಳನ್ನು ಸಂಗ್ರಹಿಸಿ ವಾಚನಾಲಯದ ಶತಮಾನೋತ್ಸವ ಆಚರಿಸಲಾಯಿತು. ರಾಜ್ಯಪಾಲರ ಆಡಳಿತವಿದ್ದ ಕಾಲದಲ್ಲಿ ಅಂದಿನ ರಾಜ್ಯಪಾಲರಾಗಿದ್ದ ಧರ್ಮವೀರರು ಉದ್ಘಾಟಿಸಿ ೧೫,೦೦೦ ರೂಪಾಯಿಗಳ ಅನುದಾನವನ್ನು ಕಟ್ಟಡನಿಧಿಗೆ ನೀಡಿದರು. ೮-೫-೧೯೭೧ರಂದು ಲಕ್ಷ್ಮೀ ಟಾಕೀಸನಲ್ಲಿ ಶತಮಾನೋತ್ಸವ ಕಾರ್ಯಕ್ರಮ ಕಾರ್ಯಕ್ರಮ ನಡೆಯಿತು.[೮]
೧೯೭೧ರಲ್ಲಿ ೭೦೦೦ ಪುಸ್ತಕಗಳಿದ್ದ ವಾಚನಾಲಯ ಇಂದು ೨೫೦೦೦ದಷ್ಟು ಬೆಳೆದಿದೆ. ಆ ಸಂಗ್ರಹದಲ್ಲಿ ೨೭-೧೨-೧೯೩೧ರಂದು ರವೀಂದ್ರನಾಥ ಠಾಗೋರ್ರು ಶರಾ ಬರೆದು ಸಹಿಮಾಡಿರುವ 'ಗೋಲ್ಡನ್ ಬುಕ್ ಆಫ಼್ ಟಾಗೋರ್' ಪ್ರಮುಖ ಆಕರ್ಷಣೆಯಾಗಿದೆ. ಮತ್ತೂರು ಕೃಷ್ಣಮೂರ್ತಿ, ಯಂಡಮೂರಿ ವೀರೇಂದ್ರನಾಥ್, ಎಂ. ಕೆ. ಇಂದಿರ, ಸಾಯಿಸುತೆ, ಎಸ್.ಎಲ್. ಭೈರಪ್ಪ, ಎಲ್. ಎಸ್. ಶೇಷಗಿರಿ ರಾವ್, ಮುಂತಾರವರು ಭೇಟಿ ನೀಡಿ ಶರಾ ಬರೆದಿದ್ದಾರೆ. [೮]
ರಾಯರಪೇಟೆಯ ವಿಷ್ಣು ಮಠದ ಎದುರಿಗಿರುವ ರಸ್ತೆಗೆ ನಾಗೂಬಾಯಿ ಓಣಿ ಎಂದು ಕರೆಯುತ್ತಾರೆ. ೧೯೨೦ರಲ್ಲಿ ಸಿರ್ಸಿಗೆ ಬಂದ ಶ್ರೀಮತಿ ನಾಗೂಬಾಯಿ ಭಟ್ಕಳ್ಕರ್ (೧೮೯೭-೧೯೬೯) ಎಂಬ ಶುಶ್ರೂಕಿಯ ನೆನಪಿಗಾಗಿ ಹೆಸರಿಟ್ಟಿದ್ದಾರೆ. ಇವರು ದಶಕಗಳ ಕಾಲ ಸಿರ್ಸಿ ಭಾಗದ ಬಾಣಂತಿ ಮತ್ತು ನವಜಾತ ಶಿಶುಗಳ ಆರೈಕೆಮಾಡುತ್ತಿದ್ದಲ್ಲದೇ ೧೯೫೪-೫೬ರ ಕಾಲದಲ್ಲಿ ರಾಯರಪೇಟೆ ವಾರ್ಡಿನಿಂದ ಪುರಸಭೆಗೆ ನಾಮಕರಣ ಸದಸ್ಯರಾಗಿಯೂ ಸೇವೆಸಲ್ಲಿಸಿದ್ದಾರೆ. ಇವರ ಹೆಸರಿನ ದತ್ತಿನಿಧಿಯಿಂದ ಪ್ರತಿವರ್ಷ ಎಂ. ಇ. ಎಸ್. ನರ್ಸಿಂಗ್ ಶಾಲೆಯಲ್ಲಿ ಪ್ರಥಮ ಸ್ಥಾನ ಪಡೆಯುವ ಶುಶ್ರೂಕಿಗೆ ವಿಶೇಷ ಪುರಸ್ಕಾರವನ್ನು ನೀಡಲಾಗುತ್ತದೆ.[೯]
ಶ್ರೀಮಾರಿಕಾಂಬಾ ಮೆಟರ್ನಿಟಿ ವಾರ್ಡ: ೧೯೩೦ರಲ್ಲಿ ಮಾರಿಕಾಂಬಾ ದೇವಸ್ಥಾನದ ಧನಸಹಾಯದಿಂದ ನಿರ್ಮಾಣಗೊಂಡು, ೧೯೩೨ರಲ್ಲಿ ಮುಂಬೈ ಪ್ರೆಸಿಡೆನ್ಸಿಯ ಗವರ್ನರ್ ಕೌನ್ಸಿಲ್‌ನ ಆರೋಗ್ಯ ಇಲಾಖಾ ಸದಸ್ಯರಾಗಿದ್ದ ಶಾನ್‌ವಾಜ್‌ಖಾನ್‌ರಿಂದ ಉದ್ಘಾಟನೆಗೊಂಡಿತು. [೯]