ಹಿಂದೂ ದೇವಾಲಯ ವಾಸ್ತುಶಿಲ್ಪದಲ್ಲಿ, ಸುಕನಾಸಿ (ಶುಕನಾಸ) ಎಂದರೆ ಗರ್ಭಗೃಹದ ಪ್ರವೇಶದ್ವಾರದ ಮೇಲಿನ ಬಾಹ್ಯ ಅಲಂಕೃತ ಭಾಗ. ಇದು ಶಿಖರದ (ದಕ್ಷಿಣ ಭಾರತದಲ್ಲಿ, ವಿಮಾನ) ಮುಖದ ಮೇಲೆ ಒಂದು ಬಗೆಯ ಲಂಬ ತುಂಡಾಗಿ ಕುಳಿತಿರುತ್ತದೆ. ಸುಕನಾಸಿಯ ರೂಪಗಳು ಗಣನೀಯವಾಗಿ ಬದಲಾಗಬಲ್ಲವು, ಆದರೆ ಇದು ಸಾಮಾನ್ಯವಾಗಿ ಲಂಬ ಹೊರಮೈಯನ್ನು, ಬಹಳವೇಳೆ ದೊಡ್ಡ ಗವಾಕ್ಷದ ರೂಪದಲ್ಲಿ ಹೊಂದಿರುತ್ತದೆ. ಮೇಲ ಮತ್ತು ಪಾರ್ಶ್ವಗಳಲ್ಲಿ ಅಲಂಕಾರಿಕ ಚೌಕಟ್ಟನ್ನು ಹೊಂದಿದ್ದು, ಸರಿಸುಮಾರು ತ್ರಿಕೋನ ಆಕಾರವನ್ನು ರೂಪಿಸುತ್ತದೆ. ಕರ್ನಾಟಕದಲ್ಲಿನ ದೇವಸ್ಥಾನಗಳನ್ನು ಚರ್ಚಿಸುವಾಗ ಸ್ಥಳೀಯ ಲೇಖಕರು "ಸುಕನಾಸಿ" ಪದವನ್ನು ನೆಲದಿಂದ ಮೇಲಿನ ಶುಕನಾಸ ಚಾವಣಿಯ ಅಂತ್ಯದವರೆಗೆ ಅಂತರಾಳ ಅಥವಾ ಹೊರಕೋಣೆಯ ಸಂಪೂರ್ಣ ರಚನೆಗೆ ಬಳಸಲು ಇಷ್ಟಪಡುತ್ತಾರೆ.
ಹಲವುವೇಳೆ, ಇದು ಈ ಚೌಕಟ್ಟಿನೊಳಗೆ ದೇವಸ್ಥಾನವು ಯಾವ ದೇವರಿಗಾಗಿ ಸಮರ್ಪಿತವಾಗಿರುತ್ತದೊ ಆ ದೇವರ ವಿಗ್ರಹ ಮತ್ತು ಇತರ ಮಾದರಿ ವಸ್ತುಗಳನ್ನು ಹೊಂದಿರುತ್ತದೆ. ಲಂಬ ಹೊರಭಾಗವು ಅಡ್ಡಡ್ಡವಾಗಿ ಚಾಚಿಕೊಂಡಿರುವ ಅದೇ ಆಕಾರದ ರಚನೆಯ ಅಂತ್ಯಭಾಗವಾಗಿರಬಹುದು, ವಿಶೇಷವಾಗಿ ಮಂಡಪ ಮತ್ತು ಗರ್ಭಗೃಹದ ನಡುವೆ ಅಂತರಾಳ ಅಥವಾ ಹೊರಕೋಣೆಯನ್ನು ಹೊಂದಿರುವ ದೇವಸ್ಥಾನಗಳಲ್ಲಿ.