ವೈಯುಕ್ತಿಕ ಮಾಹಿತಿ | |||||||||||||||||||||||
---|---|---|---|---|---|---|---|---|---|---|---|---|---|---|---|---|---|---|---|---|---|---|---|
ಜನನ | ವಲಾ, ಬಾತಲಾ,ಗುರುದಾಸ್ಪುರ್, ಪಂಜಾಬ್, ಭಾರತ | ೧೦ ಅಕ್ಟೋಬರ್ ೧೯೫೧||||||||||||||||||||||
ಮರಣ | ೬ ಜನವರಿ ೧೯೮೪ ಕಾರ್ತಾರ್ ಪುರ್, ಜಲಂಧರ್,ಪಂಜಾಬ್,ಭಾರತ | ||||||||||||||||||||||
ಎತ್ತರ | ೫ ಅಡಿ ೧೧ ಇಂಚುಗಳು | ||||||||||||||||||||||
ಪದಕ ದಾಖಲೆ
|
ಸುರಜಿತ್ ಸಿಂಗ್ ರಾಂಧವ (೧೦ ಅಕ್ಟೋಬರ್ ೧೯೫೧), ಭಾರತದ ಫೀಲ್ಡ್ ಹಾಕಿ ಆಟಗಾರರಾಗಿದ್ದರು ಹಾಗು ಭಾರತದ ರಾಷ್ಟೀಯ ಫೀಲ್ಡ್ ಹಾಕಿ ತಂಡದ ಒಬ್ಬ ಸದಸ್ಯರಾಗಿ ೧೯೭೬ ಮಾಂಟ್ರಿಯಲ್ ಒಲಂಪಿಕ್ಸ್ ನಲ್ಲಿ ಭಾಗವಹಿಸಿದ್ದರು. ಸುರಜಿತ್ ಸಿಂಗ್ ರಾಂಧವ ಅವರು ಭಾರತದ ಪೀಲ್ಡ್ ಹಾಕಿ ತಂಡದ ಫುಲ್ ಬ್ಯಾಕ್ ಮತ್ತು ನಾಯಕರಾಗಿದ್ದರು. [೧]
ಸರದಾರ್ ಸುರಜಿತ್ ಅವರು ಅಕ್ಟೋಬರ್ ೧೦ ೧೯೫೧ ರಂದು ಬಟಾಲ, ಪಂಜಾಬ್ ನಲ್ಲಿ ಜನಿಸಿದರು. ಅವರು ಗುರುನಾನಕ್ ಶಾಲೆಯಲ್ಲಿ ತಮ್ಮ ಅಧ್ಯಯನ ಮುಗಿಸಿಕೊಂಡು ನಂತರ ಜಲಂಧರ್ನಲ್ಲಿರುವ ಲಯಾಲ್ಪುರ್ ಖಲ್ಸಾ ಕಾಲೇಜಿನಲ್ಲಿ ಅವರು ವಿಶ್ವವಿದ್ಯಾಲಯ ಮಟ್ಟದ ಹಾಕಿ ಪಂದ್ಯಾವಳಿಗಳನ್ನು ಆಡಲು ಪ್ರಾರಂಭಿಸಿದರು.
ಕಾಲೇಜು ಮುಗಿಸಿದ ನಂತರ ಅವರು ಪಂಜಾಬ್ ಪೋಲಿಸ್ ಪಡೆಗೆ ಸೇರ್ಪಡೆಗೊಂಡು ಕೆಲವು ಕಾಲ ಕೆಲಸ ಮಾಡಿದರು. ರಾಂಧವ ಅವರು ೧೯೭೩ ರಂದು ಆಂಸ್ಟರ್ಡ್ಯಾಮ್ ನಲ್ಲಿ ನಡೆದ ಎರಡನೇ ಹಾಕಿ ವಿಶ್ವಕಪ್ ಪಂದ್ಯಾವಳೆಯಲ್ಲಿ ಚೊಚ್ಚಲ ಮಾಡಿದರು. ಅವರು ೧೯೭೨ ರಂದು ನಡೆದ ಮ್ಯೂನಿಕ್ ಒಲಂಪಿಕ್ಸ್ ನಲ್ಲಿ, ೧೯೭೪ ಮತ್ತು ೧೯೭೮ ರಲ್ಲಿ ನಡೆದ ಏಶಿಯನ್ ಆಟಗಳು, ೧೯೭೬ ಮಾಂಟ್ರಿಯಲ್ ಒಲಂಪಿಕ್ಸ್, ೧೯೭೮ ರಂದು ಬ್ಯಾಂಕಾಕ್ ನಲ್ಲಿ ನಡೆದ ಏಶಿಯನ್ ಆಟಗಳು ಹಾಗೂ ೧೯೮೨ ರಂದು ಬಾಂಬೆಯಲ್ಲಿ ನಡೆದ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತದ ಪರವಾಗಿ ಆಟವಾಡಿದ್ದರು ಮತ್ತು ೧೯೭೫ ರಂದು ಕೌಲಾಲಂಪುರ್ ನಲ್ಲಿ ನಡೆದ ವಿಶ್ವಕಪ್ ಪಂದ್ಯಾವಳಿಯ ವಿಜೇತ ತಂಡದ ಸದಸ್ಯರಾಗಿದ್ದು. ೧೯೭೩ ರಂದು ವಿಶ್ವ ಹಾಕಿ XIರ ಪಟ್ಟಿಯಲ್ಲಿ ಅವರ ಹೆಸರು ಒಳಗೊಂಡಿತ್ತು ಅದರ ಮುಂದಿನ ವರ್ಷವೇ ಆಲ್-ಸ್ಟಾರ್ ಹಾಕಿ XI ರಲ್ಲಿ ಹೆಸರು ಒಳಗೊಂಡಿತ್ತು. ರಾಂಧವ ಅವರು ಆಟದ ವಿಷಯದಲ್ಲಿ ಎಂದಿಗೂ ಅಂಪೈರ್ ಹಾಗೂ ಅವರ ನಿರ್ಧಾರದ ಮೇಲೆ ಅಸಮಧಾನ ವ್ಯಕ್ತ ಪಡಿಸಿಲ್ಲ. ೧೯೩೬ ರಂದು ಬರ್ಲಿನ್ ಒಲಂಪಿಕ್ಸ್ ಅಂತಿಮದಲ್ಲಿ ರಾಂಧವ ಅವರು ಆಟವನ್ನು ಆಡಿದ ರೀತಿ ಜರ್ಮನ್ನರ ಮೇಲೆ ಅತಿ ದೂಡ್ಡ ಪ್ರಭಾವಭೀರಿತು.
ಇದಾದ ನಂತರ ಜರ್ಮನಿಯ ಒಂದು ರಸ್ತೆಗೆ ಸುರಜಿತ್ ಸಿಂಗ್ ರಾಂಧವ ಅವರ ಹೆಸರಿಡಲಾಗಿದೆ. ಅವರ ಕುಟುಂಬಕ್ಕೆ ಇದು ಬಹಳ ಹೆಮ್ಮೆಕರವಾದ ವಿಶಯವಾಗಿತ್ತು. ಅವರು ಮಹರಾಜ ಸಿಂದಿಯ ಸಶಸ್ತ್ರ ಪಡೆಯಲ್ಲಿ ಇದ್ದುದರಿಂದ ಬಹಳ ಕಷ್ಟ ಕಾಲವನ್ನು ಅನುಭವಿಸಬೇಕಾಯಿತು. ತಮ್ಮ ವೃತ್ತಿಜೀವನದಲ್ಲಿ ಅವರು ಒಲಿಂಪಿಕ್ ಗೋಲುಗಳನ್ನು ಹೊಡೆದಿದ್ದರು. ಮೊದಲಿಗೆ ಅವರು ಭಾರತೀಯ ರೈಲ್ವೇಸ್ ಮತ್ತು ಇಂಡಿಯನ್ ಏರ್ಲೈನ್ಸ್ ಮತ್ತು ಅಂತಿಮವಾಗಿ ಪಂಜಾಬ್ ಪೊಲೀಸರೊಂದಿಗೆ ಸಂಕ್ಷಿಪ್ತವಾಗಿ ಕೆಲಸ ಮಾಡಿದರು.
ಸುರಜಿತ್ ಸಿಂಗ್ ಅವರು ಆಟದಿಂದ ನಿವೃತ್ತಿ ಪಡೆದ ನಂತದ ೧೯೮೪ ರಂರು ಜಲಂದರ್ ನಲ್ಲಿರುವ ಕರ್ತಾಪುರ್ ನಲ್ಲಿ ನಡೆದ ಕಾರು ಅಪಘಾತದಲ್ಲಿ ನಿಧನರಾದರು. ಅವರ ನಿಧನದ ನಂತರ ಸುರಜಿತ್ ಅವರ ಹೆಸರಿನಲ್ಲಿ ಹಾಕಿ ಕ್ರೀಡಾಂಗಣವನ್ನು ಜಲಂದರ್ ನಲ್ಲಿ ನಿರ್ಮಿಸಲಾಗಿದೆ. ಅಲ್ಲಿ ಪ್ರತಿ ವರ್ಷ ಸುರಜಿತ್ ಮೆಮೋರಿಯಲ್ ಹಾಕಿ ಪಂನ್ದಾವಳಿ ನಡೆಸಲಾಗುತ್ತದೆ.[೨] ಭಾರತಕ್ಕೆ ಅವರು ನೀಡಿದ ಕೊಡುಗೆಗಾಗಿ ೧೯೯೮ ರಂದು ಅವರಿಗೆ ಅರ್ಜುನ ಪ್ರಶಸ ನೀಡಿದೆ.[೩]
ರಾಂಧವ ಅವರ ಪತ್ನಿಯೂ ಕೂಡ ಅಂತರಾಷ್ಟ್ರೀಯ ಮಟ್ಟದ ಫೀಲ್ಡ್ ಹಾಕಿ ಆಟಗಾರ್ತಿಯಾಗಿದ್ದರು ಹಾಗೂ ೧೯೭೦ ರಲ್ಲಿ ಮಹಿಳೆಯರ ಫೀಲ್ಡ್ ಹಾಕಿ ತಂಡವನ್ನು ತಮ್ಮ ನೇತೃತ್ವದಲ್ಲಿ ರಾಷ್ಟ್ರೀಯ ಮಟ್ಟಕ್ಕೆ ಕರೆದೂಯ್ದರು. [೪]ರಾಂಧವ ಅವರ ಪುತ್ರ ವಿಶ್ವ ಮಟ್ಟದ ಲಾನ್ ಟೆನ್ನಿಸ್ ಆಟಗಾರರಾಗಿದ್ದರು ಹಾಗೂ ಹಲವಾರು ಅಂತರಾಷ್ಟೀಯ ಪಂದ್ಯಾವಳಿಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.