ಸೂರಜ್ಕುಂಡ್ 10 ನೇ ಶತಮಾನದ ಪ್ರಾಚೀನ ಜಲಾಶಯವಾಗಿದ್ದು, ಹರಿಯಾಣ ರಾಜ್ಯದ ಫರಿದಾಬಾದ್ ನಗರದ ಅರಾವಳಿ ಶ್ರೇಣಿಯ ದಕ್ಷಿಣ ದೆಹಲಿ ಬೆಟ್ಟ ಸಾಲಿನಲ್ಲಿದೆ.[೧] ಸೂರಜ್ಕುಂಡ್ (ಅಕ್ಷರಶಃ ಇದರ ಅರ್ಥ 'ಸೂರ್ಯನ ಸರೋವರ') ಎಂಬುದು ಕೃತಕ ಕುಂಡವಾಗಿದ್ದು ಇದನ್ನು ಅರಾವಳಿ ಬೆಟ್ಟಗಳ ಹಿನ್ನೆಲೆಯಲ್ಲಿ ಅರ್ಧವೃತ್ತಾಕಾರದ ರೂಪದಲ್ಲಿ ನಿರ್ಮಿಸಲಾದ ರಂಗಸ್ಥಳ ಆಕಾರದ ಒಡ್ಡಿನೊಂದಿಗೆ ಕಟ್ಟಲಾಗಿದೆ. ಇದನ್ನು 10 ನೇ ಶತಮಾನದಲ್ಲಿ ತೋಮರ ರಾಜವಂಶದ ರಾಜ ಸೂರಜ್‌ಪಾಲ್ ನಿರ್ಮಿಸಿದನೆಂದು ಹೇಳಲಾಗುತ್ತದೆ. ದೆಹಲಿಯ ಆಡಳಿತಗಾರ ಅನಂಗ್‌ಪಾಲ್ ತೋಮರ್‌ನ ಕಿರಿಯ ಮಗನಾಗಿದ್ದ ತೋಮರ್ ಸೂರ್ಯನ ಆರಾಧಕನಾಗಿದ್ದು ಹಾಗಾಗಿ ಅವನು ಅದರ ಪಶ್ಚಿಮ ದಂಡೆಯಲ್ಲಿ ಸೂರ್ಯ ದೇವಾಲಯವನ್ನು ನಿರ್ಮಿಸಿದನು.[೨][೩][೪] ಸೂರಜ್ಕುಂಡ್ ತನ್ನ ವಾರ್ಷಿಕ ಜಾತ್ರೆಯಾದ "ಸೂರಜ್‌ಕುಂಡ್ ಅಂತಾರಾಷ್ಟ್ರೀಯ ಕುಶಲಕರ್ಮ ಜಾತ್ರೆ" ಗೆ ಹೆಸರುವಾಸಿಯಾಗಿದೆ.
ಪೂರ್ವ ದಿಕ್ಕಿನ ಚಾಪದೊಂದಿಗೆ ಉದಯೋನ್ಮುಖ ಸೂರ್ಯನ ಆಕಾರದಲ್ಲಿ ಈ ಜಲಾಶಯವನ್ನು ನಿರ್ಮಿಸಲಾಗಿದೆ. ಮೆಟ್ಟಿಲಿನ ರೂಪದ ಕಲ್ಲುಗಳಿಂದ ಮಾಡಿದ ಅರೆ ವೃತ್ತಾಕಾರದ ಆಕಾರದಲ್ಲಿ ಕಟ್ಟಿದ ಕಡಿದಾದ ಒಡ್ಡು ಇದನ್ನು ಸುತ್ತುವರೆದಿದೆ. ದೆಹಲಿಯ ನೀರಿನ ಕೊರತೆಯನ್ನು ಪೂರೈಸುವ ಸಲುವಾಗಿ 130 m (427 ft) ವ್ಯಾಸದ ಜಲಾಶಯವನ್ನು ಸೃಷ್ಟಿಸಲು ಮಳೆ ಪತನವನ್ನು ಇಲ್ಲಿ ತಡೆಹಿಡಿಯಲಾಯಿತು.
ಪೂಜ್ಯವೆಂದು ಕಾಣಲಾಗುವ ಸಿದ್ಧ–ಕುಂಡ್ ಎಂಬ ನೈಸರ್ಗಿಕ ಬುಗ್ಗೆಯು ಸೂರಜ್‌ಕುಂಡ್‌ನ ದಕ್ಷಿಣಕ್ಕೆ ಸುಮಾರು 600 m (1,969 ft) ದೂರದಲ್ಲಿದೆ.
೮ನೇ ಶತಮಾನದ ಪ್ರಾಚೀನ ಅನಂಗ್‌ಪುರ್ ಅಣೆಕಟ್ಟು ಸೂರಜ್‌ಕುಂಡ್‌ನ ನೈಋತ್ಯ ದಿಕ್ಕಿನಲ್ಲಿ ಎರಡು ಕಿಲೋಮೀಟರ್ ದೂರದಲ್ಲಿದೆ.
ಇದು ಸೂರಜ್‌ಕುಂಡ್‍ನ ಸಮೀಪದಲ್ಲಿನ ಅರಾವಳಿ ಬೆಟ್ಟಗಳ ಉತ್ತರ ಸರಹದ್ದಿನ ದಕ್ಷಿಣ ಬೆಟ್ಟದ ಸಾಲಿನಲ್ಲಿದೆ. ಇದು ದೆಹಲಿಗೆ ಹಸಿರು ಶ್ವಾಸಕೋಶ ಮತ್ತು ಕಾರ್ಬನ್ ಗುಂಡಿಯಾಗಿ ಕಾರ್ಯನಿರ್ವಹಿಸುತ್ತದೆ.
ಸರೋವರದ ಹಿನ್ನೆಲೆಯಲ್ಲಿ, ವಸಂತ ಋತುವಿನಲ್ಲಿ, ಪ್ರತಿವರ್ಷ ಫೆಬ್ರವರಿ 1–15 ವರೆಗೆ ಭಾರತದ ವರ್ಣರಂಜಿತ ಸಾಂಪ್ರದಾಯಿಕ ಕರಕುಶಲ ಉತ್ಸವವಾದ ಇದನ್ನು 40 ಎಕರೆ ಭೂಮಿಯಲ್ಲಿ ನಡೆಸಲಾಗುತ್ತದೆ. ಸೂರಜ್‌ಕುಂಡ್‌ನಲ್ಲಿ ಭಾರತದ ಎಲ್ಲಾ ರಾಜ್ಯಗಳು ಮತ್ತು ಹಲವಾರು ಡಜನ್ ಇತರ ರಾಷ್ಟ್ರಗಳು ಮತ್ತು 200,000 ವಿದೇಶಿಯರು ಸೇರಿದಂತೆ 1.2 ಮಿಲಿಯನ್ ಪ್ರವಾಸಿಗರು ಭಾಗವಹಿಸುತ್ತಾರೆ.[೫]
Page 100: Suraj Kund lies about 3 km south-east of Tughlaqabad in district Gurgaon---The reservoir is believed to have been constructed in the tenth century by King Surjapal of Tomar dynasty. Page 101: About 2 km south-west of Surajkund, close to the village of Anagpur (also called Arangpur) is a dam ascribed to Anagpal of the Tomar Dynasty, who is also credited with building the Lal Kot
{{cite book}}
: |work=
ignored (help); More than one of |accessdate=
and |access-date=
specified (help); More than one of |archivedate=
and |archive-date=
specified (help); More than one of |archiveurl=
and |archive-url=
specified (help)
{{cite book}}
: |work=
ignored (help)