ಸೆರ್ಛಿಪ್ ಭಾರತದ ಮಿಝೋರಂ ರಾಜ್ಯದಲ್ಲಿನ ಸೆರ್ಛಿಪ್ ಜಿಲ್ಲೆಯ ಕೇಂದ್ರ ಕಾರ್ಯಸ್ಥಾನ ಪಟ್ಟಣವಾಗಿದೆ. ಇದು ಮಿಝೋರಂ ರಾಜ್ಯದ ಮಧ್ಯ ಭಾಗದಲ್ಲಿದೆ. ಇದು ರಾಜ್ಯದ ರಾಜಧಾನಿ ಐಝ್ವಾಲ್‍ನಿಂದ ೧೧೨ ಕಿ.ಮಿ. ದೂರವಿದೆ. ಈ ಜಿಲ್ಲೆಯು ಭಾರತದಾದ್ಯಂತ ಅತಿ ಹೆಚ್ಚಿನ ಸಾಕ್ಷರತೆಯನ್ನು ಹೊಂದಿದೆ. ಸೆರ್-ಛಿಪ್ ಶಬ್ದದ ಅರ್ಥ 'ಮೇಲಿರುವ ನಿಂಬೆಕುಲದ ಗಿಡ'.
ಈ ಜಿಲ್ಲೆಯಲ್ಲಿ ಸೆರ್ಛಿಪ್ ಸುತ್ತಮುತ್ತ ಅನೇಕ ಪಟ್ಟಣಗಳು ಮತ್ತು ಗ್ರಾಮಗಳಿವೆ. ಥೆಂಜ಼ಾಲ್ ಸೆರ್ಛಿಪ್ ನಂತರ ಎರಡನೇ ಅತಿ ದೊಡ್ಡ ಪಟ್ಟಣವಾಗಿದೆ. ಇದು ಸುಂದರ ಹುಲ್ಲಿರುವ ಭೂದೃಶ್ಯವುಳ್ಳ ಕೆಲವು ಚಪ್ಪಟೆ ಪ್ರದೇಶಗಳಲ್ಲಿ ಒಂದಾಗಿದೆ. ಥೆಂಜ಼ಾಲ್ ಹತ್ತಿರ ವಾಂತಾಂಗ್ (ಅಂದರೆ ಸ್ವರ್ಗ ಮುಟ್ಟುವ ಜಲಪಾತ) ಜಲಪಾತವೆಂಬ ಹೆಸರಿನ ನಯನಮನೋಹರ ಜಲಪಾತವಿದೆ.
ಸೆರ್ಛಿಪ್ ಪಟ್ಟಣದ ಜನರಿಗೆ ಪ್ಯಾರಾಗ್ಲೈಡಿಂಗ್ ಹೊಸ ಕ್ರೀಡೆಯಾಗಿದೆ. ೨೦೨೦ರ ವರ್ಷದ ಅಂತರರಾಷ್ಟ್ರೀಯ ಪ್ಯಾರಾಗ್ಲೈಡಿಂಗ್ ಚ್ಯಾಂಪಿಯನ್‍ಶಿಪ್‍ನ್ನು ಸೆರ್ಛಿಪ್‍ನಲ್ಲಿ ಆಯೋಜಿಸಲಾಗಿತ್ತು ಮತ್ತು ಮಿಝೋರಂನಲ್ಲಿ ಪ್ರಮುಖ ಆಕರ್ಷಣೆಯಾಗಿದೆ.[೧]
ಇದು ಮಿಜ಼ೋರಮ್‍ನ ಅತಿ ಪ್ರಸಿದ್ಧ ಜಲಪಾತವಾಗಿದ್ದು ಲೌ ನದಿಯ ಮೇಲಿದೆ. ಇದರ ಎತ್ತರ ಸುಮಾರು ೨೨೦ ಮೀ. ಎಂದು ಹೆಚ್ಚುಕಡಿಮೆ ಅಳೆಯಲಾಗಿದೆ.
ಇದರರ್ಥ ಜ಼ೋಲುಟಿ ನೆನಪಿನ ಶಿಲೆ. ಮಿಜ಼ೊ ಜನರು ಬ್ರಿಟಿಷ್ ಅಧಿಕಾರಿಗಳಿಗೆ ಜ಼ೋಲುಟಿ ಎಂಬ ಬ್ರಿಟಿಷ್ ಮಹಿಳೆಯನ್ನು ಹಸ್ತಾಂತರಿಸಿದ ಸ್ಥಳದಲ್ಲಿ, ಆ ಘಟನೆಯ ನೆನಪಿಗಾಗಿ ಒಂದು ಕಲ್ಲನ್ನು ನೆಡಲಾಗಿದೆ.
ಇದರರ್ಥ ಛಿಂಗ್‍ಪುಯಿಯ ಗೋರಿ. ಇಲ್ಲಿ ಛಿಂಗ್‍ಪುಯಿ ಎಂಬ ಹೆಸರಿನ ಯುವತಿಯ ನೆನಪಿನಲ್ಲಿ ಒಂದು ಕಲ್ಲನ್ನು ನೆಡಲಾಗಿದೆ. ಅವಳನ್ನು ಸೆರೆಹಿಡಿದು ಕೊಲ್ಲಲಾಯಿತು.